ಧರ್ಮ-ರಾಜಕೀಯದ ಮಧ್ಯವರ್ತಿಗಳು


Team Udayavani, Oct 13, 2017, 8:00 AM IST

madyavarti.jpg

ಯಾರು ಭಗವಂತನ ಬಗ್ಗೆ ಬಹಳಷ್ಟು ಮಾತನಾಡುತ್ತಾರೋ, ಕಥೆಗಳನ್ನು ಹೇಳುತ್ತಾರೋ, ಅಂಥವರನ್ನು “ದೇವರಿಗೆ ಸಮೀಪವಿರುವ ವ್ಯಕ್ತಿ’ ಎಂದು ನಾವು ಭಾವಿಸಿಬಿಡುತ್ತೇವೆ. ಅದಾದ ನಂತರ ಅವರು ಏನೇ ಹೇಳಿದರೂ ಅದು ಭಗವಂತನ ವಾಣಿಯೆಂದೂ ಅಥವಾ ಅವರ ಮಾತಿಗೆ ದೇವರ ಸಹಮತಿಯಿದೆಯೆಂದೂ ನಾವು ಅಂದುಕೊಳ್ಳುತ್ತೇವೆ.

ಈ ಕಾಲದಲ್ಲಂತೂ ನಾವೆಲ್ಲ “ಮಹತ್ವಪೂರ್ಣ’ ಎನ್ನುವ ಪದವನ್ನು “ಶಕ್ತಿಸಂಪನ್ನ’ ಪದದ ಪರ್ಯಾಯವೆಂದು ಭಾವಿಸಿಬಿಟ್ಟಿದ್ದೇವೆ. ಆದರೆ ಮಹತ್ವಪೂರ್ಣ ವ್ಯಕ್ತಿಯಾಗುವುದಕ್ಕೂ ಮತ್ತು ಶಕ್ತಿಸಂಪನ್ನ ವ್ಯಕ್ತಿಯಾ ಗುವುದಕ್ಕೂ ಅಂತರವಿದೆ. ಮಹತ್ವಪೂರ್ಣ ವ್ಯಕ್ತಿಯೊಬ್ಬ ಶಕ್ತಿಸಂಪನ್ನನೂ ಆಗಿರುತ್ತಾನೆ ಎಂದೇನೂ ಅಲ್ಲ. ಆದರೆ ಯಾರು ಶಕ್ತಿ ಸಂಪನ್ನರಾಗಿರು ತ್ತಾರೋ ಅವರು ಖಂಡಿತನಾಗಿಯೂ ಮಹತ್ವಪೂರ್ಣ ವ್ಯಕ್ತಿಯಾಗಿರು ತ್ತಾರೆ. ಆದರೆ ಇವೆರಡೂ ಗುಣಗಳ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸಲು ವಿಫ‌ಲವಾಗಿದ್ದೇಕೆ? 

ಇದಕ್ಕೆ ಕಾರಣವಿದೆ. ಶಕ್ತಿ ಗಳಿಸುವುದಕ್ಕೆ ಶ್ರಮ ಮತ್ತು ಸಾಧನೆಯ ಅಗತ್ಯವಿರುತ್ತದೆ. ಇದು ಸುಲಭ ಮಾರ್ಗವಲ್ಲ. ಇನ್ನೊಂದೆಡೆ ನಾವು “ಮಹತ್ವ’ವನ್ನು ಸುಲಭವಾಗಿ ಪಡೆಯಬಹುದು. ಭ್ರಮೆ ಮತ್ತು ಸಾಧನಗಳ ಮೂಲಕ. ಅಂದರೆ ಶಕ್ತಿ ಗಳಿಕೆಗೆ ಬೇಕಾಗುವ ಪರಿಶ್ರಮ “ಮಹತ್ವ’ದ ಗಳಿಕೆಗೆ ಅಗತ್ಯವಿರುವುದಿಲ್ಲ. ಈ ಕಾರಣಕ್ಕಾಗಿಯೇ ಶಕ್ತಿಸಂಪನ್ನರಾಗಲು ಸಾಧ್ಯವಾಗದ ವ್ಯಕ್ತಿಗಳು “ಮಹತ್ವಪೂರ್ಣತೆ’ ಎಂಬ ಪದವನ್ನು “ಶಕ್ತಿಸಂಪನ್ನತೆಗೆ’ ಸಮೀಕರಿಸಿಬಿಟ್ಟಿದ್ದಾರೆ. 
ಶಕ್ತಿಗೆ ಎರಡು ಕೇಂದ್ರಗಳಿರುತ್ತವೆ. ಒಂದು ಲೌಕಿಕ, ಮತ್ತೂಂದು ಅಲೌಕಿಕ(ಪಾರಲೌಕಿಕ). 

ಪಾರಲೌಕಿಕದ ಸಂಬಂಧ ಪರಮಾತ್ಮನೊಂದಿಗೆ ಇದೆ. ಈ ಮಾರ್ಗವು ಧರ್ಮ, ಕರ್ಮ, ಜಪ-ತಪದಿಂದ ಪ್ರಾಪ್ತವಾಗುತ್ತದೆ. ಅರ್ಥಾತ್‌ ಧರ್ಮ ನೀತಿಯ ಮಾರ್ಗದಿಂದ. ಇನ್ನು ಲೌಕಿಕದ ಸಂಬಂಧ ರಾಜನೀತಿಯದ್ದು. ಇದನ್ನು ಪಡೆಯುವುದಕ್ಕೂ ತ್ಯಾಗ, ಕಠಿಣ ಪರಿಶ್ರಮದ ಮಾರ್ಗವನ್ನು ಆರಿಸಿಕೊಳ್ಳಬೇಕಾಗುತ್ತದೆ. ರಾಜಕಾರಣಿಗಳು ಇದರ ಪ್ರತೀಕ. ಆದರೆ ಮಹತ್ವಪೂರ್ಣ ಎನಿಸಿಕೊಳ್ಳಲು ಬಯಸುವ ವ್ಯಕ್ತಿಯೊಬ್ಬನಿಗೆ ಈ ಎರಡೂ ಮಾರ್ಗಗಳ ಜಂಜಾಟದಲ್ಲಿ ಸಿಲುಕುವ ಅಗತ್ಯವಿಲ್ಲ. ಬದಲಾಗಿ ಆತ ಶಕ್ತಿ ಕೇಂದ್ರದ ಭಜನೆ-ಕೀರ್ತನೆ ಮಾಡಿದರೆ ಸಾಕು! ಅಂದರೆ ತಾನು ಏನಕೇನ ಪ್ರಕಾರೇಣ ಆ ಶಕ್ತಿಯ ಭಕ್ತ(ಮಧ್ಯವರ್ತಿ) ಎಂದು ಸಾಬೀತು ಮಾಡಬೇಕಾಗುತ್ತದೆ. ಯಾವಾಗ ಒಬ್ಬ ವ್ಯಕ್ತಿ ಶಕ್ತಿಯ ಪರಮಭಕ್ತನೆಂದು ವಿಖ್ಯಾತನಾಗುತ್ತಾನೋ ಆಗ ಆತನ “ಮಹತ್ವ’ ಬೆಳೆಯಲಾರಂಭಿಸುತ್ತದೆ. ಆಗ ಸಮಾಜವೂ ಈ ಮಹತ್ವವನ್ನೇ “ಶಕ್ತಿ ಸಂಪನ್ನತೆ’ ಎಂದು ತಪ್ಪಾಗಿ ಭಾವಿಸಿಬಿಡುತ್ತದೆ. 

ಇದನ್ನು ಹೀಗೆ ಅರ್ಥಮಾಡಿಕೊಳ್ಳಿ
ಯಾರು ಭಗವಂತನ ಬಗ್ಗೆ ಬಹಳಷ್ಟು ಮಾತನಾಡುತ್ತಾರೋ, ಕಥೆಗಳನ್ನು ಹೇಳುತ್ತಾರೋ, ಅಂಥವರನ್ನು “ದೇವರಿಗೆ ಸಮೀಪವಿರುವ ವ್ಯಕ್ತಿ’ ಎಂದು ನಾವು ಭಾವಿಸಿಬಿಡುತ್ತೇವೆ. ಅದಾದ ನಂತರ ಅವರು ಏನೇ ಹೇಳಿದರೂ ಅದು ಭಗವಂತನ ವಾಣಿಯೆಂದೂ ಅಥವಾ ಅವರ ಮಾತಿಗೆ ದೇವರ ಸಹಮತಿಯಿದೆಯೆಂದೂ ನಾವು ಅಂದುಕೊಳ್ಳುತ್ತೇವೆ. ಇಲ್ಲದಿದ್ದರೆ ದೇವರ ಬಗ್ಗೆ ಹೆಚ್ಚು ಮಾತನಾಡುವವರನ್ನೇ ದೇವರೆಂದು ಭಾವಿಸಿಬಿಡುತ್ತೇವೆ. ಆದರೆ ಈ ಸಜ್ಜನನ ಬಗ್ಗೆ ಆ ಭಗವಂತನಿಗೆ ಗೊತ್ತಿದೆಯೋ ಇಲ್ಲವೋ ಎನ್ನುವ ಚಿಕ್ಕ ಪ್ರಶ್ನೆಯೂ ನಮ್ಮ ತಲೆಯಲ್ಲಿ ಸುಳಿಯುವುದಿಲ್ಲ.  “ಈ ವ್ಯಕ್ತಿ ದೇವರ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಾನೆ, ಆತನ ಒಳಹೊರಗನ್ನು ಅರಿತಿದ್ದಾನೆ ಎಂದಮೇಲೆ ಸ್ವಾಭಾವಿಕವಾಗಿ ದೇವರೂ ಈತನನ್ನು ಅರಿತಿರುತ್ತಾನೆ’ ಎಂಬ ಭ್ರಮೆಯಲ್ಲಿರುತ್ತೇವೆ. 

ಈ ಭಕ್ತರು(ಮಧ್ಯವರ್ತಿಗಳು) ಯಾವ ರೀತಿ ಭಗವಂತನ ಲೀಲೆ ಗಳನ್ನು ವರ್ಣಿಸುತ್ತಾರೆಂದರೆ, ದೇವರು ಇವರ ಜೊತೆಗೇ ಇದ್ದಾನೆ ಎಂದೆನಿಸಿಬಿಡುತ್ತದೆ. “”ಹೇ ಭಗವಂತಾ ನಿನ್ನ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಿ ರುವ ಈ ವ್ಯಕ್ತಿಯ ಬಗ್ಗೆ ನಿನಗೆ ಗೊತ್ತಿದೆಯಾ?” ಎಂಬ ಚಿಕ್ಕ ಪ್ರಶ್ನೆಯೂ ನಮ್ಮ ತಲೆಯಲ್ಲಿ ಸುಳಿಯುವುದಿಲ್ಲ. ಭಗವಂತನೊಂದಿಗಿನ ಈ ವ್ಯಕ್ತಿಗಳ ಸಂಬಂಧದ ಸತ್ಯವನ್ನು ಅರಿಯುವ ಪ್ರಯಾಸವನ್ನೂ ನಾವು ಮಾಡುವು ದಿಲ್ಲ. ಬದಲಾಗಿ ಇವರನ್ನು ನಾವು ದೇವರು ಮತ್ತು ನಮ್ಮ ನಡುವಿನ ಆಥರೈಸ್‌Õ$x ಲಾಯjನಿಂಗ್‌ ಆಫೀಸರ್‌ ಎಂಬಂತೆ ನೋಡುತ್ತೇವೆ. 

ಭಗವಂತನಿಗೆ ಅನ್ವಯಿಸಿದ ಈ ಸೂತ್ರವನ್ನು ನಮ್ಮ ರಾಜಕಾರಣಿಗಳಿಗೂ ಅಪ್ಲೆ„ ಮಾಡಲಾಗುತ್ತಿದೆ. ಈ  ಮಧ್ಯವರ್ತಿಗಳು ಯಾವ ನೇತಾರನ ಬಗ್ಗೆ ಪ್ರಭಾವಿತರಾಗುತ್ತಾರೋ (ಆ ರಾಜಕಾರಣಿ ಶಕ್ತಿಸಂಪನ್ನನಾಗಿರಬೇಕು, ಲಾಭದಾಯಕನಾಗಿರಬೇಕು) ಆತನ ಬಗ್ಗೆ ಉತ್ಪ್ರೇಕ್ಷೆ ಮಾಡಿ ಮಾತನಾಡ ಲಾರಂಭಿಸುತ್ತಾರೆ. ಆ ನಾಯಕನ ವ್ಯಕ್ತಿತ್ವವನ್ನು ತಮ್ಮದೇ ರೀತಿಯಲ್ಲಿ ನಿಷ್ಕರ್ಷೆ ಮಾಡಲಾರಂಭಿಸುತ್ತಾರೆ. ತಮ್ಮ ನಾಯಕನ ಮಾತುಗಳ ಅರ್ಥ ಬೇರೆಯೇ ಇರುತ್ತದೆ, ಆದರೆ ಇವರೆಲ್ಲ ಆ ಮಾತುಗಳಿಗೆ ತಮಗೆ ಸೆಟ್‌ ಆಗುವಂಥ ಅರ್ಥವನ್ನು ಕೊಡುತ್ತಾರೆ. ತಮ್ಮ ಮಾತನ್ನೇ ನಾಯಕನ ಮಾತು ಎಂದೂ ಬಿಂಬಿಸಲು ಆರಂಭಿಸುತ್ತಾರೆ. ತಮ್ಮ ನಾಯಕನ ದಿನಚರಿ ಯನ್ನು ಬೇರೆಯವರೊಂದಿಗೆ ಹೋಲಿಸಲಾರಂಭಿಸುತ್ತಾರೆ. ಆತನ ಚಲನ ವಲನದಿಂದ ಹಿಡಿದು ಆತನ ಉಡುಗೆ ತೊಡುಗೆಯ ಮೇಲೆಯೂ ವಿಶೇಷ ಪ್ರತಿಕ್ರಿಯೆ ನೀಡಲಾರಂಭಿಸುತ್ತಾರೆ. ಇವರ ಈ ವರ್ತನೆಯನ್ನು ನೋಡಿ ನಾವೆಲ್ಲ “”ಓಹ್‌ ಆ ನಾಯಕನಿಗೆ ಇವರು ಬಹಳ ಕ್ಲೋಸ್‌” ಎಂದು ಭಾವಿಸಲಾರಂಭಿಸುತ್ತೇವೆ. ಆಗೇನಾಗುತ್ತದೆ ಗೊತ್ತೇ? ಆ ನೇತಾರನೊಂದಿಗೆ ನೇರವಾಗಿ ಮಾತನಾಡುವ ಹಕ್ಕು ನಮಗಿದ್ದರೂ ಕೂಡ, ಇವರ ಮೂಲಕವೇ ಮಾತನಾಡಲಾರಂಭಿಸುತ್ತೇವೆ. 

ಕೆಲ ಸಮಯದ ನಂತರ ನೇತಾರ(ರಾಜಕಾರಣಿ) ಈ ವ್ಯಕ್ತಿಗಳಂತೆಯೇ ಕಾಣಿಸಲಾರಂಭಿಸುತ್ತಾನೆ. ಈ ಜನರೆಲ್ಲ ತಮ್ಮ ನಡೆನುಡಿಗಳ ಮೂಲಕ ತಾವು ಮತ್ತು ತಮ್ಮ ನಾಯಕ ಒಂದೇ ನಾಣ್ಯದ ಎರಡು ಮುಖ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಇದರ ಪರಿಣಾಮ ವೇನಾಗುತ್ತದೆಂದರೆ, ಈ ಸ್ವಾರ್ಥಿ ಬೆಂಬಲಿಗರ ಮೇಲೆ ನಮಗೆ ಕಿರಿಕಿರಿ ಆರಂಭವಾಗುತ್ತದೆ, ಆದರೆ ಆ ಕಿರಿಕಿರಿಯನ್ನು ನೇತಾರನ ಮೇಲೆ ತೋರಿಸಲಾರಂಭಿಸುತ್ತೇವೆ. ಸಮಸ್ಯೆಯಿರುವುದು ಈ ವ್ಯಕ್ತಿಗಳಲ್ಲಿ ಅನ್ನುವುದು ನಮಗೆ ತಿಳಿಯುವುದಿಲ್ಲ, ನೇತಾರನಲ್ಲೇ ಸಮಸ್ಯೆಯಿರಬೇಕು ಎಂದು ಅನಿಸಿಬಿಡುತ್ತದೆ. 

ಇಲ್ಲೂ ಭಗವಂತನ ವಿಷಯದಲ್ಲಿ ಮಾಡಿದಂಥ ತಪ್ಪನ್ನೇ ನಾವು ಮಾಡುತ್ತೇವೆ. “ನಿಮ್ಮ ಬೆಂಬಲಿಗರಿದ್ದಾರಲ್ಲ ಇವರನ್ನು ನೀವು ಬೆಂಬಲಿ ಸುತ್ತೀರಾ?’ ಎಂದು ಆ ನಾಯಕನಿಂದ ಸತ್ಯ ತಿಳಿದುಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ. ಇವರೆಲ್ಲ ತಮ್ಮ ನಾಯಕನೊಂದಿಗೆ ತೆಗೆಸಿಕೊಂಡ ಸೆಲ್ಫಿ ನೋಡುತ್ತಿದ್ದಂತೆಯೇ ನಮ್ಮ ತಲೆಯಲ್ಲಿರುವ ಚಿಕ್ಕ ಅನುಮಾನವೂ ಮಾಯವಾಗಿಬಿಡುತ್ತದೆ. ನಾಯಕ ಮತ್ತು ಆತನ ಬೆಂಬಲಿಗರ ಸೆಲ್ಫಿ ನೋಡಿದ್ದೇ, ಆತನೂ ಥೇಟ್‌ ಬೆಂಬಲಿರಂತೆಯೇ ಇದ್ದಾನೆ ಎಂಬ ನಿಷ್ಕರ್ಷೆಗೆ ಬಂದುಬಿಡುತ್ತೇವೆ.   

ಲಾಭ-ಹಾನಿ
ಇದರಿಂದಾಗಿ ಭಕ್ತ ಮತ್ತು ಬೆಂಬಲಿಗನ ಕೆಲಸವಂತೂ ಆಗಿಬಿಡುತ್ತದೆ. ಆದರೆ ಭಗವಂತ ಮತ್ತು ರಾಜಕಾರಣಿಯ ಕೆಲಸ ಕೆಡುತ್ತದೆ. ಇವರಿಬ್ಬರ ವಿಶ್ವಾಸಾರ್ಹತೆಯೇ ಮಣ್ಣಲ್ಲಿ ಸೇರಿಹೋಗುತ್ತದೆ. ಧರ್ಮವಿರಲಿ ಅಥವಾ ರಾಜಕಾರಣವಿರಲಿ ಇದರ ವರ್ಚಸ್ಸು ಕುಸಿಯುವುದಕ್ಕೆ ಬೇರೆ ಯಾರೂ ಅಲ್ಲ, ಈ ಭಕ್ತ ಮತ್ತು ಬೆಂಬಲಿಗರೇ ಕಾರಣ. ಅರ್ಥಾತ್‌ ಮಧ್ಯವರ್ತಿಗಳು.

ಈ ಕಾರಣಕ್ಕಾಗಿಯೇ ಧರ್ಮ ಮತ್ತು ಅಧಿಕಾರದ ಪೀಠದಲ್ಲಿ ಕುಳಿತಿರುವ ವ್ಯಕ್ತಿಗಳು ಒಂದು ವಿಷಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರಶಂಸೆ ಮತ್ತು ಸ್ತುತಿಗಳ ಮಳೆಹರಿಸುತ್ತಾ ತಮ್ಮ ಪ್ರತಿನಿಧಿಗಳಾಗಿರುವವರು ಸ್ವಾರ್ಥಮಯ ಮಧ್ಯವರ್ತಿಗಳಾ ಎಂದು ಅವರು ಪರೀಕ್ಷಿಸಿಕೊಳ್ಳಬೇಕು. 

ಏಕೆಂದರೆ ಧರ್ಮಸತ್ತೆ ಮತ್ತು ರಾಜಸತ್ತೆಯಲ್ಲಿ ನಮ್ಮ ಸಮಾಧಾನದ ಕೇಂದ್ರವಿರುತ್ತದೆ. ಆದರೆ ಸ್ವಹಿತಾಸಕ್ತಿಯ ಭಜನಕಾರರು ಅಥವಾ ಕೀರ್ತನಕಾರರು ಈ ಸಮಾಧಾನದ ಕೇಂದ್ರವನ್ನು ಅಸಮಾಧಾನದ ಕೂಪವಾಗಿ ಬದಲಿಸಿಬಿಡುತ್ತಾರೆ. 

ನಾವು ಈ ಕೀರ್ತನಕಾರರನ್ನೇ ಶಕ್ತಿ  ಕೇಂದ್ರದ ಪ್ರತಿನಿಧಿ-ಪ್ರತಿರೂಪ ಎಂದು ಒಪ್ಪಿಕೊಂಡುಬಿಡುತ್ತೇವಾದ್ದರಿಂದ ಕಾಲಾಂತರದಲ್ಲಿ ಎಲ್ಲಾ ಸಮಸ್ಯೆ ಗಳಿಗೂ ಭಗವಂತ, ಧರ್ಮ, ರಾಜಕೀಯ ಮತ್ತು ರಾಜಕಾರಣಿಯೇ ಕಾರಣ ಎಂದು ಭಾವಿಸಿ ಧರ್ಮ ಮತ್ತು ರಾಜನೀತಿಯಿಂದ ವಿಮುಖ ವಾಗಿಬಿಡುತ್ತೇವೆ. ಅದರೆಡೆಗೆ ಹೇಸಿಗೆ ಬೆಳೆಸಿಕೊಂಡುಬಿಡುತ್ತೇವೆ.
ಈ ಕಾರಣಕ್ಕಾಗಿಯೇ ನಮ್ಮ ಜವಾಬ್ದಾರಿಯನ್ನೂ ಎಚ್ಚರಿಕೆಯಿಂದ ನಿಭಾಯಿಸಬೇಕಿದೆ. ಯಾವುದೇ ವ್ಯಕ್ತಿ, ವಿಚಾರ, ಧರ್ಮ ಮತ್ತು ಸಿದ್ಧಾಂತದ ಮೌಲ್ಯಮಾಪನವನ್ನು “ಮಹತ್ವಪೂರ್ಣ ವ್ಯಕ್ತಿ'(ಮಧ್ಯವರ್ತಿ)ಯ ದೃಷ್ಟಿಕೋನದ ಬದಲಾಗಿ ಸ್ವಯಂ ದೃಷ್ಟಿ ಮತ್ತು ಸ್ವಯಂ ಅನುಭವದ ಮೂಲಕ ಮಾಡಬೇಕು.

– ಅಶುತೋಶ್‌ ರಾಣಾ, ಹಿಂದಿ ನಟ

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.