ಪುಕ್ಕಲುತನ ಮೈಗೂಡಿಸಿಕೊಳ್ಳಬಾರದು


Team Udayavani, Nov 25, 2017, 1:27 PM IST

25-28.jpg

ಒಂದು ಪೀಠದ ಆಚಾರ್ಯನಾಗಿಯೂ ನಾನು ಕಲ್ಯಾಣಕಾರಿ ಅಭಿಯಾನದೊಂದಿಗೆ ಕೈಜೋಡಿಸಿದ್ದೇನೆ. ಧರ್ಮ ಮತ್ತು ರಾಜನೀತಿ ಪರಸ್ಪರ ಪೂರಕವೇ ಹೊರತು, ವಿರೋಧಿಯಲ್ಲ. ಧರ್ಮವೆನ್ನುವುದು “ದೀರ್ಘ‌ಕಾಲೀನ ರಾಜನೀತಿ’ ಮತ್ತು ರಾಜನೀತಿಯೆಂದರೆ “ಅಲ್ಪಕಾಲೀನ ಧರ್ಮ’ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ.

ಧರ್ಮವು ನಮ್ಮನ್ನು ಸದಾಚಾರ ಮತ್ತು ನೈತಿಕ ಮೌಲ್ಯಗಳೆಡೆಗೆ ಜಾಗೃತರನ್ನಾಗಿಸುತ್ತದೆ. ವ್ಯಕ್ತಿ ಮತ್ತು ಸಮಾಜದ ಜೀವನ ನಿಂತಿರುವುದೇ ಧರ್ಮದ ಮೇಲೆ. ಧರ್ಮವನ್ನು ನೀವು ಉಪಾಸನೆಯ ಪದ್ಧತಿ, ಸಿದ್ಧಾಂತದೊಂದಿಗೆ ಜೋಡಿಸಲಾರಿರಿ. ಧರ್ಮವೆನ್ನುವುದು ಯಾವಾಗಲೂ ಒಂದೇ. ಅದು ಮಾನವ ಧರ್ಮ. ಒಂದು ವೇಳೆ ಅದಕ್ಕೆ ಸಾರ್ವತ್ರಿಕ ರೂಪ ಕೊಡಲು ಬಯಸುತ್ತೀರಿ ಎಂದಾದರೆ ಅದು ಸನಾತನ ಧರ್ಮವಾಗುತ್ತದೆ. ಉಳಿದವು ಧರ್ಮವಲ್ಲ, ಒಂದು ಸಿದ್ಧಾಂತ ಅಥವಾ ಸಂಪ್ರದಾಯವಾಗಿರುತ್ತವೆ. ಅವು ಧರ್ಮದ ಶ್ರೇಣಿಯಲ್ಲಿ ಬರುವುದಿಲ್ಲ. 

ಜಾತ್ಯತೀತ ಎನ್ನುವ ಪದವು ಈ ದೇಶಕ್ಕೆ ಗುಣಪಡಿಸಲಾಗದಷ್ಟು ಹಾನಿ ಮಾಡಿದೆ. ಧರ್ಮನಿರಪೇಕ್ಷ ಎನ್ನುವುದು ಸ್ವಾತಂತ್ರ್ಯ ನಂತರದ ಅತಿದೊಡ್ಡ ಸುಳ್ಳು. ಯಾವಾಗ ವ್ಯವಸ್ಥೆಯೊಂದು ಸರ್ವಪಂಥ ಸಮಭಾವನೆಯೊಂದಿಗೆ ಮುನ್ನಡೆಯುತ್ತದೋ ಆಗ ಮಾತ್ರ ಅದು ಆದರ್ಶಮಯವಾಗಬಲ್ಲದು. ಧರ್ಮವೆನ್ನುವುದು ಕರ್ತವ್ಯ, ಸದಾಚಾರ ಮತ್ತು ನೈತಿಕ ಮೌಲ್ಯಗಳಿಗೆ ಪರ್ಯಾಯವೆನಿಸುವಂಥದ್ದು. ಒಂದು ವೇಳೆ ಯಾವುದೇ ವ್ಯವಸ್ಥೆಯನ್ನು ನೀವು ಇದರಿಂದ ವಿಮುಖಗೊಳಿಸಿದರೆ ಅದು ಅಕರ್ಮಣ್ಯವಾಗುತ್ತದೆ. ಸದಾಚಾರದಿಂದ ವಿಮುಖವಾದ ವ್ಯವಸ್ಥೆ ಏನಾಗುತ್ತದೆ ಹೇಳಿ? ದುರಾಚಾರವಾಗುತ್ತದೆ. ನೈತಿಕ ಮೌಲ್ಯಗಳಿಂದ ನಿರಪೇಕ್ಷವಾದ ವ್ಯವಸ್ಥೆ ಏನಾಗುತ್ತದೆ? ಪಾಪದ ಹಾದಿಹಿಡಿಯುತ್ತದೆ. 

ಬ್ರಹ್ಮಾಂಡದಲ್ಲಿ ನಾವು ಯಾವುದನ್ನು ಚರ ಮತ್ತು ಅಚರ ಎಂದು ಕರೆಯುತ್ತೀವೋ ಅವಕ್ಕೂ ಅವುಗಳದ್ದೇ ಆದಂಥ ಧರ್ಮವಿರುತ್ತದೆ. ಗಾಳಿಯು ತನ್ನ ಧರ್ಮವನ್ನು, ನೀರು ತನ್ನ ಧರ್ಮವನ್ನು ಪರಿಪಾಲಿಸದಿದ್ದರೆ ಭೂಮಂಡಲದ ವ್ಯವಸ್ಥೆ ಚಲನೆಯಲ್ಲಿರುವುದಾದರೂ ಹೇಗೆ? 

ಕೂಪಮಂಡೂಕವಲ್ಲ 
ಎಲ್ಲರಿಗೂ ತಮ್ಮದೇ ಆದ ಆಚರಣೆಗಳಿವೆ. ಯಾರೂ ತಮ್ಮ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದು. ನಾನು ಹಣೆಗೆ ತಿಲಕ ಇಟ್ಟುಕೊಳ್ಳುತ್ತೇನೆ. ಬಹಳಷ್ಟು ಜನರಿಗೆ ಇದು ಇಷ್ಟವಾಗದೇ ಇರಬಹುದು ಅಥವಾ ಬಹಳ ಮಂದಿಗೆ ಇದು ಇಷ್ಟವಾಗಲೂಬಹುದು. ಆದರೆ ನಾನನ್ನುತ್ತೇನೆ, ಹಣೆಗೆ ಕುಂಕುಮವಿಟ್ಟುಕೊಳ್ಳುವ ಪದ್ಧತಿಯ ಹಿಂದೆ ವೈಜ್ಞಾನಿಕ ಆಧಾರವಿದೆ. ಈ ಕಾರಣಕ್ಕಾಗಿಯೇ ನಾನು ತಿಲಕ ಧಾರಣೆ ಮಾಡುತ್ತೇನೆ. ನಮ್ಮ ಶರೀರವನ್ನು ಸಮತೋಲನದಲ್ಲಿಡುವ ಮುಖ್ಯ ನಾಡಿಗಳೆಂದರೆ “ಇಂಡಾ’, “ಪಿಂಗಲಾ’ ಮತ್ತು “ಸುಷುಮ್ನಾ’. ಈ ಮೂರು ನಾಡಿಗಳು ನಾವು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತೇವಲ್ಲ, ಅಲ್ಲಿ ಸಂಧಿಸುತ್ತವೆ. ವಿರುದ್ಧ ಗುಣದ ಅಂಶಗಳು ಒಂದೆಡೆ ಸೇರಿದರೆ ಅಲ್ಲಿ ಶಕ್ತಿಯ ಉತ್ಪಾದನೆಯಾಗುತ್ತದೆ. ಆ ಶಕ್ತಿಯ ಉಪಯೋಗವನ್ನು ಸರಿಯಾದ ಮಾರ್ಗದಲ್ಲಿ ಮಾಡಬಹುದು. ಅದನ್ನು ಅಂತಃಕರಣ ರೂಪದಲ್ಲಿ ಹರಿಸಬಹುದು, ಅದರ ಉಪಯೋಗವನ್ನು ಲೋಕಕಲ್ಯಾಣಕ್ಕಾಗಿ ಮಾಡಬಹುದು. ಈ ಕಾರಣಕ್ಕಾಗಿಯೇ ತಿಲಕ ಇಟ್ಟುಕೊಳ್ಳಲಾಗುತ್ತದೆ. ಕುಂಕುಮವು ನಮ್ಮ ಸೌಂದರ್ಯದ ಪ್ರತೀಕವಲ್ಲ. ಅದು ನಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಆಚರಣೆಗಳೊಂದಿಗೆ ಬೆಸೆದುಕೊಂಡಿರುವಂಥದ್ದು. ಇದನ್ನು ಮೌಡ್ಯ ಅಥವಾ ಕೂಪಮಂಡೂಕತೆ ಎಂದು ಅನ್ನುವಂತಿಲ್ಲ. ಹಾಂ, ಒಂದಂತೂ ಸತ್ಯ. ಇವುಗಳ ಹೆಸರಲ್ಲಿ ಇಂದು ನಡೆಯುತ್ತಿರುವ ಬೂಟಾಟಿಕೆಗಳನ್ನಂತೂ ನಿಲ್ಲಿಸುವ ಅಗತ್ಯವಿದೆ. 

ನಾವು ಮನೆಯಲ್ಲಿ ತುಳಸಿಯ ಸಸಿ ಬೆಳೆಸುತ್ತೇವೆ. ತುಳಸಿಯನ್ನು ಬೆಳೆಸುವುದು ಬೂಟಾಟಿಕೆಯಂತೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಡೆಂ à ಪ್ರಕೋಪ ಹೆಚ್ಚಾಗಿದೆ. ಆದರೆ ಯಾರೂ ನಿತ್ಯವೂ ತುಳಸಿಯ ಕಷಾಯವನ್ನು ಕುಡಿಯುತ್ತಾರೋ ಅವರು ಡೆಂ àಯಂದ ಬಚಾವಾಗುತ್ತಾರೆ. ಬಹಳಷ್ಟು ಜನರಿಗೆ ಇದರ ಬಗ್ಗೆ ತಕರಾರಿರಬಹುದು. ಆದರೆ ಇವ್ಯಾವುದೂ ಬೂಟಾಟಿಕೆಯಲ್ಲ. ಇದು ಸನಾತನ ಧರ್ಮಪರಂಪರೆಯ ವೈಜ್ಞಾನಿಕ ಆಧಾರಗಳು. ನಾವು ಕೈಗಳಿಗೆ ರûಾಸೂತ್ರಗಳನ್ನೇಕೆ ಕಟ್ಟಿಕೊಳ್ಳುತ್ತೇವೆ? ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫ‌ ಪ್ರಮುಖವಾದುವು. ಈ ಮೂರೂ ಅಂಶಗಳು ಸಮತೋಲನದಲ್ಲಿವೆಯೇ ಎನ್ನುವುದನ್ನು ವೈದ್ಯರು ಮೊದಲು ಗಮನಿಸುತ್ತಾರೆ. ಈ ಮೂರೂ ಅಂಶಗಳನ್ನು ಸಂತುಲನದಲ್ಲಿಡುತ್ತದೆ ರಕ್ಷಾ ಸೂತ್ರ. 

ಸನಾತನ ಧರ್ಮ
ನಮ್ಮದು ಸನಾತನ ಧರ್ಮ. ಇದು ಆದ್ಯ ಧರ್ಮ. ಸೃಷ್ಟಿಯ ಜೊತೆಗೇ ಹೆಜ್ಜೆಯಿಡುತ್ತಾ ಬಂದ ಧರ್ಮ ನಮ್ಮದು. ಇದರಲ್ಲಿ ಕಟ್ಟರ್‌ತನಕ್ಕೆ ಜಾಗವಿಲ್ಲ. ಆದರೆ ಒಂದು ವಿಷಯ ನನಗೆ ವಿಚಿತ್ರವೆನಿಸುತ್ತದೆ. ಯಾರಾದರೂ ಬಂದು ನನ್ನ ಕೆನ್ನೆಗೆ ಹೊಡೆದರು ಎಂದರೆ, ನಾನು ಅವರಿಗೆ ಇನ್ನೊಂದು ಕೆನ್ನೆ ತೋರಿಸಬೇಕೇ? ಹಾಗೆ ತೋರಿಸುವುದಿದೆಯಲ್ಲ, ಅದು ಪುಕ್ಕಲುತನವಷ್ಟೆ. ಯಾರಾದರೂ ಕಪಾಳಕ್ಕೆ ಹೊಡೆದರೆ ಅದಕ್ಕೆ ಪ್ರತಿಕ್ರಿಯೆಯು ಅದೇ ರೂಪದಲ್ಲಿರಬೇಕು. ಸಮಾಜವು ಪುರುಷಾರ್ಥಿಯಾಗಬೇಕೇ ಹೊರತು, ಪುಕ್ಕಲಾಗಬಾರದು! ಯುದ್ಧ ನಡೆಯುವುದು ಶ್ರೀರಾಮಚಂದ್ರನಿಗೂ ಇಷ್ಟವಿರಲಿಲ್ಲ. ಆದರೂ ಅವರು ಶಸ್ತ್ರ ಕೈಗೆತ್ತಿಕೊಳ್ಳಲೇಬೇಕಾಯಿತು. ಮಹಾಭಾರತ ನಡೆಯುವುದು ಶ್ರೀಕೃಷ್ಣನಿಗೂ ಇಷ್ಟವಿರಲಿಲ್ಲ. ದುರ್ಯೋಧನನ ಅಟ್ಟಹಾಸದ ನಡುವೆಯೂ ಶ್ರೀಕೃಷ್ಣ ಒಪ್ಪಂದದ ಮಾರ್ಗಗಳನ್ನು ಮುಚ್ಚಲಿಲ್ಲ. ಆದರೂ ಮಹಾಭಾರತ ನಡೆಯಿತು. ಇಷ್ಟವಿಲ್ಲದಿದ್ದರೂ ಕೃಷ್ಣ ಅಸ್ತ್ರಗಳನ್ನು ಹಿಡಿಯಲೇಬೇಕಾಯಿತು. ಅಂತೆಯೇ ಆತಂಕವಾದಕ್ಕೆ ಶಾಂತಿಯೇ ಉತ್ತರವಾಗಬೇಕು ಎಂದು ನಾವು ಎಷ್ಟೇ ಬಯಸಲಿ, ಆದರೆ ಅಂತಿಮವಾಗಿ ನಮ್ಮ ಭದ್ರತಾಪಡೆಗಳನ್ನು ಶಸ್ತ್ರ ಎತ್ತಿಕೊಳ್ಳಲು ಪ್ರೇರೇಪಿಸಲೇಬೇಕಾಗುತ್ತದೆ. ಇದನ್ನು ಸನಾತನ ಧರ್ಮದ ಉದಾರತೆಯೊಂದಿಗೆ ಜೋಡಿಸಿ ವಿಶ್ಲೇಷಣೆ ಮಾಡಬಾರದು. ಉದಾರತೆ, ಸಹಿಷ್ಣುತೆಯೆನ್ನುವುದು ಸಜ್ಜನರ ಜೊತೆಗೆ ನಡೆಯುತ್ತದೆ, ದುರ್ಜನರೊಂದಿಗಲ್ಲ. ಯಾರು ದುರ್ಜನರೋ, ಲೋಕಕಲ್ಯಾಣದ ಮಾರ್ಗಕ್ಕೆ ಅಪಾಯವೊಡ್ಡುತ್ತಾರೋ, ರಾಷ್ಟ್ರೀಯ ಹಿತದ ಮೇಲೆ ಕುಠಾರಾಘಾತ ಮಾಡುತ್ತಾರೋ, ಏಕತೆ ಮತ್ತು ಅಖಂಡತೆಗೆ ಸವಾಲೆಸೆಯುತ್ತಾರೋ ಅವರು “ಶಾಂತಿ’ ಮಂತ್ರವನ್ನು ಕೇಳಿಸಿಕೊಳ್ಳುವುದಿಲ್ಲ. ಅವರಿಗೆಲ್ಲ ಹೇಗೆ ಪಾಠ ಕಲಿಸಬೇಕೋ ಹಾಗೆಯೇ ಕಲಿಸಬೇಕು.

ಧರ್ಮ ಮತ್ತು ರಾಜನೀತಿ
ಧರ್ಮ ಮತ್ತು ರಾಜನೀತಿಯ ಉದ್ದೇಶ ಸಮಾನವಾದದ್ದು. ಯಾವಾಗ ಇವುಗಳ ಉದ್ದೇಶದಲ್ಲಿ ವಿರೋಧಾಭಾಸ ಸೃಷ್ಟಿಯಾಗುತ್ತದೋ… ಅಂದರೆ, ಒಂದು ಉತ್ತರ ಧ್ರುವಕ್ಕೆ ನಿಂತರೆ, ಇನ್ನೊಂದು ದಕ್ಷಿಣ ಧ್ರುವದಲ್ಲಿ ನಿಲ್ಲುತ್ತದೋ ಆಗ ಕಷ್ಟಗಳು ಎದುರಾಗುತ್ತವೆ. ಎರಡರ ಉದ್ದೇಶವೂ ಲೋಕಕಲ್ಯಾಣದ ಪಥದಲ್ಲಿ ಮುನ್ನಡೆಯುವುದಾಗಿರಬೇಕು. ಅಧಿಕಾರವೆನ್ನುವುದು ಭೋಗದ ವಸ್ತುವಲ್ಲ. ಅದು ಲೋಕ ಕಲ್ಯಾಣದ ಮಾಧ್ಯಮ. ಒಂದು ಪೀಠದ ಆಚಾ ರ್ಯನಾಗಿಯೂ ನಾನು ಅದೇ ಕಲ್ಯಾಣಕಾರಿ ಅಭಿಯಾನದೊಂದಿಗೆ ಕೈಜೋಡಿಸಿದ್ದೇನೆ. ಆ ಪೀಠದಲ್ಲಿ ಧರ್ಮವೆನ್ನುವುದು ಒಂದು ಮಾಧ್ಯಮವಾದರೆ, ಇಲ್ಲಿ ರಾಜಕಾರಣವು ಒಂದು ಮಾಧ್ಯಮ. ಧರ್ಮ ಮತ್ತು ರಾಜನೀತಿ ಪರಸ್ಪರ ಪೂರಕವೇ ಹೊರತು, ವಿರೋಧಿಯಲ್ಲ. ಧರ್ಮವೆನ್ನುವುದು ಧೀರ್ಘ‌ಕಾಲೀನ ರಾಜನೀತಿ ಮತ್ತು ರಾಜನೀತಿಯೆಂದರೆ ಅಲ್ಪಕಾಲೀನ ಧರ್ಮ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಆವಶ್ಯಕತೆಯಿದೆ. ಇವೆರಡನ್ನೂ ಪ್ರತ್ಯೇಕ ಮಾಡಲು ಆಗದು. 

ಅಸಹಿಷ್ಣುತೆಯ ಆರೋಪ
ಯಾರು ಭಾರತದ ಮೇಲೆ ಅಸಹಿಷ್ಣುತೆಯ ಆರೋಪ ಮಾಡುತ್ತಾರೋ ಅವರು ತಮ್ಮ ಬುದ್ಧಿಯನ್ನು ಮಾರಿ ಅದನ್ನು ಮಾರುಕಟ್ಟೆಯ ವಸ್ತುವಾಗಿಸಿಕೊಂಡವರು. ಭಾರತ ಆಶ್ರಯ ಕೊಡದ ಜಾತಿ-ಧರ್ಮ- ಸಿದ್ಧಾಂತಗಳೇ ಇಲ್ಲ. ಪೈಗಂಬರ್‌ ಮುಹಮ್ಮದರು ಎಂದಿಗೂ ಭಾರತಕ್ಕೆ ಬರಲಿಲ್ಲ. ಆದರೆ ಅವರ ಕಾಲದಲ್ಲೇ ಮೊದಲ ಮಸೀದಿ ಭಾರತದಲ್ಲಿ ನಿರ್ಮಾಣವಾಯಿತು. ಭಾರತದಲ್ಲಿನ ಮೊದಲ ಚರ್ಚ್‌ ಅನ್ನು ನಿರ್ಮಿಸಿ ದವರು ಹಿಂದೂ ರಾಜರು. ಪಾರಸಿ ಸಮುದಾಯ ಭಾರತಕ್ಕೆ ಬಂದು ಬಚಾವಾಯಿತು. ಈಗಲೂ ಇಸ್ರೇಲ್‌ ಭಾರತದೊಂದಿಗೆ ಭಾವನಾತ್ಮಕ ನಂಟು ಹೊಂದಿದೆ. 

ಏಕ ಭಾರತದ ಬುನಾದಿ
“ಭಾರತವನ್ನು ಏಕ ರಾಷ್ಟ್ರ ಎಂದು ಒಪ್ಪಿಕೊಳ್ಳದೇ ಹೋದದ್ದು ಕಮ್ಯುನಿಸ್ಟ್‌ ಆಂದೋಲನದ ಅತಿದೊಡ್ಡ ವೈಫ‌ಲ್ಯ’ ಎಂದು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರು (ಕಮ್ಯುನಿಸ್ಟ್‌) ಮಲಯಾಳಂ ಪತ್ರಿಕೆಗೆ ಬರೆದಿದ್ದರು. ಭಾರತದಲ್ಲಿ ಕಮ್ಯುನಿಸ್ಟ್‌ ಆಂದೋಲನ ಶುರುವಾದಾಗ ಭಾರತವೆಂದರೆ ಒಂದು ರಾಷ್ಟ್ರವಲ್ಲ ಅದು ಬಹುರಾಷ್ಟ್ರಗಳ ಸಮುದಾಯ ಎನ್ನಲಾಯಿತು. 1946-47ರಲ್ಲಿ ಸ್ವಾತಂತ್ರ್ಯದ ಮಾತುಕತೆ ನಡೆದಿದ್ದಾಗ ಆ ಸಮಯದಲ್ಲೂ ಕಮ್ಯುನಿಸ್ಟರು “ಒಂದು ಭಾರತಕ್ಕೆ ಸ್ವಾತಂತ್ರ್ಯ ಹೇಗೆ ಸಿಗಬ ಲ್ಲದು? ಏಕೆಂದರೆ ಭಾರತೀಯರಿಗೆ ಬೇರೆ ಬೇರೆ ರಾಷ್ಟ್ರೀಯತೆ ಇದೆಯಲ್ಲ’ ಎಂದಿದ್ದರು. ಇದನ್ನೇ ಈ ಮುಖ್ಯಮಂತ್ರಿಗಳು ನಂಬಿಕೊಂಡು ಬಂದಿದ್ದರು. 

ಆದರೆ ಯಾವಾಗ ಅವರು ಇಡೀ ಭಾರತದ ಹಿಂದೂ ಧಾರ್ಮಿಕ ಸ್ಥಳಗಳಿಗೆ ಮತ್ತು ಪೀಠಗಳಿಗೆ ಭೇಟಿಕೊಟ್ಟರೋ ಆಗ ಅವರಿಗೆ “ದೇಶಾದ್ಯಂತ ನಾಲ್ಕು ಮೂಲೆಗಳಲ್ಲಿ ಪೀಠಗಳನ್ನು ಸ್ಥಾಪಿಸಿರುವ ಸನ್ಯಾಸಿ ತಮ್ಮದೇ ಕೇರಳದವನು’ ಎನ್ನುವುದು ಅರ್ಥವಾಯಿತು. ಹೀಗಾಗಿ, ಅವರು “ಕಮ್ಯುನಿಸ್ಟರು ಭಾರತವನ್ನು ಏಕ ರಾಷ್ಟ್ರ ಎಂದು ಒಪ್ಪಿಕೊಳ್ಳದೇ ಇದ್ದದ್ದು  ಕಮ್ಯುನಿಸ್ಟ್‌ ಆಂದೋಲನದ ಅತಿದೊಡ್ಡ ವೈಫ‌ಲ್ಯ’ ಎಂದು ಕೊನೆಗೂ ಒಪ್ಪಿಕೊಂಡರು.

ಯಾರು ಭಾರತೀಯ ಪರಂಪರೆಯ ಬಗ್ಗೆ ತಿಳಿದುಕೊಂಡಿಲ್ಲವೋ, ಯಾರು ವಿದೇಶಿ ಎಂಜಲು ತಿಂದು ತಮ್ಮ ಜೀವನ ನಡೆಸುತ್ತಾರೋ 
ಅವರೆಲ್ಲ ಅಸಹಿಷ್ಣುತೆಯ ಆರೋಪ ಮಾಡಿದರು. ಆದರೆ ಅವರ ಪ್ರಯತ್ನ ಫೇಲ್‌ ಆಯಿತು. ಇಂದು ಕೇರಳದ ಹಿಂದೂಗಳು ಹೆದರಿದ್ದಾರೆ, ಅಲ್ಲಿ ಕಮ್ಯುನಿಸ್ಟರ ಗೂಂಡಾಗಿರಿಯಿದೆ. ಈ ಗೂಂಡಾಗಳ ಬರ್ಬರತೆಯ ದೃಶ್ಯ ಮೈಗೂದಲು ಎದ್ದುನಿಲ್ಲುವಷ್ಟು ಬೆಚ್ಚಿಬೀಳಿಸುವಂತಿದೆ. ಅಲ್ಲಿ ಪಾದಯಾತ್ರೆ ಮಾಡುತ್ತಿದ್ದಾಗ ನನಗೆ ಒಂದೂವರೆ ಡಜನ್‌ಗಿಂತಲೂ ಹೆಚ್ಚು ಜನಕೈಕಾಲುಕಳೆದುಕೊಂಡವರು ಸಿಕ್ಕರು. ಒಬ್ಬರಿಗೆ ಕಾಲಿರುತ್ತಿರಲಿಲ್ಲ, ಇನ್ನೊಬ್ಬರ ಕೈ ತುಂಡಾಗಿರುತ್ತಿತ್ತು. ಅಲ್ಲ, ಇಷ್ಟೆಲ್ಲ ಆದರೂ ಅದ್ಹೇಗೆ ಇವರೆಲ್ಲ ಅಸಹಿಷ್ಣುತೆಯ ಮಾತನಾಡುತ್ತಾರೆ? ಮುಖ್ಯಮಂತ್ರಿ ಕಾರ್ಯಾಲಯವನ್ನು ಸ್ವತ್ಛಗೊಳಿಸಿದರೆ ಇವರಿಗೆ ಕಿರಿಕಿರಿಯಾಗುತ್ತದೆ. ಇವರಿಗೆ ಎಲ್ಲೆಡೆಯೂ ಭಗವಾ ಧ್ವಜ ಕಾಣಿಸುತ್ತಿದೆ. ಸತ್ಯವೇನೆಂದರೆ ಸೂರ್ಯನಿಂದ ಹೊರಹೊಮ್ಮುವ ಕಿರಣಗಳಿವೆಯಲ್ಲ ಅವೂ ಕೂಡ “ಭಗವಾ’ ಆಗಿವೆ. ಅದಿರಲಿ, ಇವರೆಲ್ಲ ಯಾವ ಅಗ್ನಿಯ ಮೇಲೆ ಅಡುಗೆ ಮಾಡುತ್ತಾರೋ ಆ ಅಗ್ನಿಯ ಬಣ್ಣವನ್ನು ಬದಲಿಸಬಲ್ಲರಾ?
(ಹಿಂದಿಯ ದೈನಿಕ್‌ ಜಾಗರಣ್‌ನಲ್ಲಿ ಪ್ರಕಟಿತ ಲೇಖನ)

ಯೋಗಿ ಆದಿತ್ಯನಾಥ್‌; ಉತ್ತರ ಪ್ರದೇಶ ಮುಖ್ಯಮಂತ್ರಿ

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.