ಉಳುಮೆ ನಿಂತರೆ ಉಣ್ಣುವುದೇನು?
Team Udayavani, Apr 7, 2017, 11:46 AM IST
ನಮ್ಮದು ಮಳೆಯಾಧಾರಿತ ಕೃಷಿ ಎಂಬ ಸುಳ್ಳು ಪ್ರತಿಪಾದನೆಯೇ ಚಾಲ್ತಿಯಲ್ಲಿದೆ. ಪಂಜಾಬ್ ಶೇ.98 ನೀರಾವರಿ ಭೂಮಿ ಹೊಂದಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಗೋಧಿ ಮತ್ತು ಅಕ್ಕಿ ಬೆಳೆಯುವ ರಾಜ್ಯ ಅದು. ಆದರೆ ಅಲ್ಲಿ ಪ್ರತಿದಿನ 2-3 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಉತ್ಪಾದನೆ ಹೆಚ್ಚದೆ, ನೀರಾವರಿ ಬಲಗೊಳ್ಳದೆ ರೈತನ ಸ್ಥಿತಿ ಉತ್ತಮವಾಗದು ಎಂದು ನಾವೆಲ್ಲ ನಂಬಿದ್ದೇವೆ. ಅವನ ಸಮಸ್ಯೆ ಉತ್ಪಾದನೆಯಲ್ಲ, ಆದಾಯ. ರೈತನ ಆದಾಯ ಹೆಚ್ಚದೆ, ಬಡತನ ಖಾಯಂ ಆಗಿ ಇರುವಂತೆ ನಾವೆಲ್ಲ ನೋಡಿಕೊಂಡಿದ್ದೇವೆ.
ತಮಿಳುನಾಡಿನಲ್ಲಿ ರೈತರು ತಮ್ಮ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆ ಮೊತ್ತ 40 ಸಾವಿರ ಕೋಟಿ ರೂ.ಗಳಷ್ಟಿದೆ. ಉತ್ತಪ್ರದೇಶದಲ್ಲಿ ಸರಕಾರ 36 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಘೋಷಿಸಿದೆ. ಆರ್ಥಿಕತೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂಬ ವಾದ ಕೇಳಿಬರುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಕೂಡ ಇದೇ ಮಾತನ್ನು ಹೇಳಿದ್ದಾರೆ. ಕಳೆದ ಎರಡು- ಮೂರು ದಶಕಗಳಿಂದ ರೈತರು ಸಾಲ ಮನ್ನಾಕ್ಕೆ ಆಗ್ರಹಿಸುತ್ತಿದ್ದಾರೆ. ಸಾಲದ ಮೊತ್ತ ಹಂತಹಂತವಾಗಿ ಬೆಳೆಯುತ್ತಾ ಬಂದು ಈಗ ಇಷ್ಟು ದೊಡ್ಡದಾಗಿದೆ. ತಪ್ಪು ವಿತ್ತ ನೀತಿಧಿಯಿಂದ ಆಗಿರುವ ಪ್ರಮಾದ ಇದು. ಈ ಬಿಕ್ಕಟ್ಟಿಗೆ ಕಾರಣ ರೈತ ಅಥವಾ ಅವನ ಕೃಷಿ ಚಟುವಟಿಕೆ ಅಲ್ಲ; ಹೊಲದಿಂದ ಹೊರಗಿನ ಪರಿಸ್ಥಿತಿಯಿಂದಾಗಿ ಈ ಸನ್ನಿವೇಶ ಉದ್ಭವಿಸಿದೆ. ಇದನ್ನು ಮೊಟ್ಟ ಮೊದಲು ಅರ್ಥ ಮಾಡಿಕೊಳ್ಳಬೇಕು.
ರೈತರ ಕಣ್ಣಿಗೆ ಸುಣ್ಣ
2016ರ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದ 17 ರಾಜ್ಯಗಳಲ್ಲಿ ಕೃಷಿಕ ಕುಟುಂಬಗಳ ತಲಾ ವಾರ್ಷಿಕ ಆದಾಯ ಸರಾಸರಿ ಕೇವಲ 20 ಸಾವಿರ ರೂ.ಗಳು. ಸಾಲಮನ್ನಾ ಮಾಡುವುದು ಅರ್ಥವ್ಯವಸ್ಥೆಗೆ ಹಾನಿಕರ ಎಂದು ದೂರುವ ಅರುಂಧತಿ ಭಟ್ಟಾಚಾರ್ಯ ಅವರು ನಮ್ಮ ರೈತರು ಬೆಳೆದ ಬೆಳೆಗೆ ಸರಿಯಾದ ಪ್ರತಿಫಲ ಸಿಗದ್ದರಿಂದಲೇ ಅವರು ಸಾಲ ಬಾಕಿ ಉಳಿಸಿಕೊಂಡರು ಎಂಬುಧಿದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ರೈತರನ್ನು ಉದ್ದೇಶಪೂರ್ವಕವಾಗಿ ಸದಾಕಾಲ ಬಡತನದಲ್ಲಿಯೇ ಇರಿಸಲಾಗಿದೆ. ಹೀಗಾಗಿಯೇ ಅವರು “ನಮ್ಮ ಸಾಲ ಮನ್ನಾ ಮಾಡಿ, ನಾವು ಹೊಸ ಬದುಕು ಆರಂಭಿಸುತ್ತೇವೆ’ ಎಂದು ಆಗ್ರಹಿಧಿಸುವಂತಾಗಿದೆ. ಭಟ್ಟಾಚಾರ್ಯ ಅವರು
ಕಾರ್ಪೊರೇಟ್ ಸಾಲಗಳನ್ನು ಮನ್ನಾ
ಮಾಡಧಿಬಹುದಾದರೆ, ಸಿರಿವಂತ ಕುಳಗಳ ಸಾಲಗಳನ್ನು ಅನುತ್ಪಾದಕ ಆಸ್ತಿ ಎಂದು ಬದಿಗೆ ಸರಿಸಿ ಸುಮ್ಮನಿರಬಹುದಾದರೆ ರೈತರ ಸಾಲಮನ್ನಾ ಬೇಡಿಕೆ ಹೇಗೆ ತಪ್ಪಾಗುತ್ತದೆ?
ಈ ವರ್ಷ ಕೇಂದ್ರ ಬಜೆಟ್‌ನಲ್ಲಿ ಕೃಷಿ ಸಾಲಕ್ಕಾಗಿ ಎತ್ತಿಡಲಾದ ಹಣ 10 ಲಕ್ಷ ಕೋಟಿ ರೂ.ಗಳು. ಕಳೆದ ವರ್ಷ ಇದು 9 ಲಕ್ಷ ಕೋಟಿ. ರೂ. ಈ ವರ್ಷದ ಬಜೆಟನ್ನು ಎಲ್ಲರೂ ರೈತಪರ, ಕೃಷಿ ಸ್ನೇಹಿ ಎಂದು ಕೊಂಡಾಡಿದ್ದಾರೆ. ಆದರೆ ವಾಸ್ತವ ಭಿನ್ನವಾಗಿದೆ. ಕೃಷಿ ಸಾಲಕ್ಕಾಗಿ ಮೀಸಲಾದ ಈ 10 ಲಕ್ಷ ಕೋಟಿಯಲ್ಲಿ ಶೇ.75 ಉದ್ದಿಮೆಗಳಿಗೆ ಹೋಗುತ್ತದೆ, ರೈತರಿಗೆ ಸಿಗುವುದು ಕೇವಲ ಶೇ.8 ಮಾತ್ರ. ಹಣದುಬ್ಬರವನ್ನು ಇಳಿಸಲು ಸರಕಾರ ಬಯಸುತ್ತದೆ, ಅದಕ್ಕೆ ಯಾರಾದರೂ ಬಲಿಪಶುವಾಗಬೇಕಲ್ಲ? ಆಗ ಕಣ್ಣಿಗೆ ಬೀಳುವುದು ರೈತರು. ಕೃಷಿಕ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಸಾಯುತ್ತಿದ್ದಾನೆ, ದೇಶಕ್ಕೆ ದೇಶವೇ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಸಂಭ್ರಮಿಸುತ್ತದೆ! ಇದೆಲ್ಲ ನಡೆಯುವುದು ಕಾರ್ಪೊರೇಟ್ ರಂಗದ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ. ಪಂಜಾಬ್‌ನ ಒಂದು ಉದಾಹರಣೆ ಕೊಡುತ್ತೇನೆ, ಅಲ್ಲಿನ ಭೂಷಣ್ ಇಂಡಸ್ಟ್ರೀಸ್ 44 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿದೆ ಮತ್ತವರು ಅದನ್ನು ಕೆಟ್ಟ ಸಾಲಗಳ ಸಾಲಿಗೆ ಸೇರಿಸಿ ಮನ್ನಾ ಮಾಡಬೇಕೆಂದು ಬಯಸಿದ್ದಾರೆ. ಪಂಜಾಬ್‌ನ ರೈತರೂ ಸಾಲಮನ್ನಾಕ್ಕೆ ಬೇಡಿಕೆ ಇರಿಸಿದ್ದಾರೆ. ಅವರ ಸಾಲಬಾಕಿ ಇರುವುದು 36 ಸಾವಿರ ಕೋಟಿ, ಭೂಷಣ್ ಇಂಡಸ್ಟ್ರೀಸ್‌ಗಿಂತ ಕಡಿಮೆ! ಈಗ ರೈತರು ಸಾಲ ಬಾಕಿಯುಳಿಸಿಕೊಂಡಿದ್ದರೆ, ಅದು ಮಾತ್ರ ಅಶಿಸ್ತು ಆಗುವುದು ಹೇಗೆ?
ಕೃಷಿಯಿಂದ ಅರ್ಥಶಕ್ತಿಗೆ ಚೈತನ್ಯ
ಹಾಗೆಂದು ಸಾಲ ಮನ್ನಾ ಮಾಡಿಬಿಟ್ಟರೆ ರೈತರ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಸತತ ಬರಗಾಧಿಲದ ನಡುವೆ ಇದೊಂದು ತಾತ್ಕಾಲಿಕ ಪರಿಹಾರ ಎಂಬುದಂತೂ ಸತ್ಯ. ನಾವು ನಮ್ಮ ರೈತರಿಗಾಗಿ, ಅವರ ಉಳಿವಿಗಾಗಿ ಏನನ್ನೂ ಮಾಡಿಲ್ಲ. 2008-2009ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಔದ್ಯಮಿಕ ರಂಗಕ್ಕೆ 3 ಲಕ್ಷ ಕೋಟಿ ರೂ.ಗಳ ನೆರವು ನೀಡಲಾಯಿತು. ಆ ನೆರವು ಪ್ಯಾಕೇಜ್ ಈಗಲೂ ಜಾರಿಯಲ್ಲಿದೆ. ಅದನ್ನು ಯಾರಾದರೂ ಪ್ರಶ್ನಿಸಿದ್ದಾರೆಯೇ?
ಮಾಧ್ಯಮಗಳಿಗೆ ರೈತರ ಸಮಸ್ಯೆಗಳು, ಅವರ ಸುಖದುಃಖ ಬೇಡ, ಅದು ಟಿಆರ್‌ಪಿ ಅಥವಾ ಓದುಗರನ್ನು ಹೆಚ್ಚಿಸುವುದಿಲ್ಲ. ಆರ್ಥಿಕ ನೀತಿರೂಪಕರು ಕಾರ್ಪೊರೇಟ್ ಕ್ಷೇತ್ರದ ಋಣಭಾರದಲ್ಲಿದ್ದಾರೆ. ರೈತರು ಹಳ್ಳಿಗಳನ್ನು ತ್ಯಜಿಸಿ ನಗರಗಳಿಗೆ ವಲಸೆ ಬಂದರೆ ಆರ್ಥಿಕ ಬೆಳವಣಿಗೆಯಾಗುತ್ತದೆ ಎಂಬುದು ಅವರ ಭ್ರಮೆ. ವಿಶ್ವಬ್ಯಾಂಕ್ ನಮ್ಮಲ್ಲಿ ಮೂಡಿಸಿರುವ ಸುಳ್ಳು ತರ್ಕ ಇದು. ರೈತರು ಉಳುವುದನ್ನು ನಿಲ್ಲಿಸಿದರೆ ಉಣ್ಣಲು ಅನ್ನ ಎಲ್ಲಿಂದ ತರುತ್ತೀರಿ ಅನ್ನುವುದು ನಾನು ಕೇಳುವ ಪ್ರಶ್ನೆ.
ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಬದುಕಬೇಕಾದರೆ ಅವರು ಉದ್ದಿಮೆಧಿಗಳಲ್ಲಿ ಕಾರ್ಮಿಕರಾಗಬೇಕು. ಆದರೆ ನಮ್ಮ ದೇಶದಲ್ಲಿ ಅಷ್ಟು ಉದ್ಯೋಗಾವಕಾಶಗಳು ಇವೆಯೇ? ದಿನಕ್ಕೆ 100 ಕಿ.ಮೀ. ರಸ್ತೆ ನಿರ್ಮಾಣಧಿವಾಗುತ್ತದೆ, ಹಾಗಾಗಿ ಬೇಕಾದಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಸಚಿವ ನಿತಿನ್ ಗಡ್ಕರಿ ಹೇಳುತ್ತಾರೆ. ಅವು ಉದ್ಯೋಗಗಳೇ? ಅಲ್ಲ, ಅಲ್ಲಿ ರೈತರು ಹಳ್ಳಿಯಿಂದ ಬಂದ ಕೂಲಿ ಕಾರ್ಮಿಕರಾಗುತ್ತಾರೆ ಅಷ್ಟೇ. 2022ರ ಹೊತ್ತಿಗೆ 30 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕಾರ್ಪೊರೇಟ್ ರಂಗ ಹೇಳುತ್ತದೆ. ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ್ದು ಇನ್ನು 5 ವರ್ಷಗಳಲ್ಲಿ ಆಗಲಿಧಿದೆಯೇ?! ಇಂಥ ಅರ್ಥವಿಲ್ಲದ ತರ್ಕವನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂಬುದೇ ನಮ್ಮ ದುರಂತ.
ನಮ್ಮ ಅರ್ಥವ್ಯವಸ್ಥೆಗೆ ಚೈತನ್ಯ ನೀಡುವ ಸಾಮರ್ಥ್ಯವಿರುವುದು ಕೃಷಿ ಕ್ಷೇತ್ರಕ್ಕೆ ಮಾತ್ರ. ಆದರೆ ಯಾರೂ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮಧ್ಯಪ್ರದೇಶದಲ್ಲಿ ರೈತರು ತಾವು ಬೆಳೆದ ಕಿತ್ತಳೆಯನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ. ಪ.ಬಂಗಾಲದಲ್ಲಿ ಬಟಾಟೆಗೆ ಇದೇ ಗತಿ ಒದಗಿದೆ. ರೈತರು ಬೆಳೆದದ್ದಕ್ಕೆ ಕೊಳ್ಳುಗರಿಲ್ಲ, ಬೆಲೆ ಇಲ್ಲ. ಇದಕ್ಕೆ ಕಾರಣ ಆಹಾರದ ಅಪನಿರ್ವಹಣೆ. ಇದು ರೈತರ ತಪ್ಪಲ್ಲ. ಸರಕಾರ ರೈತರು ಹೆಚ್ಚು ಹೆಚ್ಚು ಬೆಳೆಯಬೇಕೆಂದು ಹೇಳಿದೆ, ಅವರು ಬೆಳೆದಿದ್ದಾರೆ. ಬೇಳೆಕಾಳುಗಳನ್ನೇ ತೆಗೆದುಕೊಳ್ಳಿ. ರೈತರಿಗೆ ಸರಿಯಾದ ಬೆಲೆ ಲಭಿಸುವಂತೆ ಮಾಡುಧಿವುದು ಸರಕಾರದ ಹೊಣೆಯಲ್ಲವೆ? ಬೆಲೆ ನಿರ್ಧಾರದ ಜವಾಬ್ದಾರಿಯನ್ನು ಶೋಷಕ ಗುಣ ಹೊಂದಿರುವ ಮಾರುಕಟ್ಟೆ ಶಕ್ತಿಗಳಿಗೆ ಬಿಟ್ಟುಧಿಕೊಡುವಂತಿಲ್ಲ. ಸರಕಾರ ಹೆಚ್ಚು ಬೆಳೆಯಿರಿ ಅನ್ನುತ್ತದೆ, ಆದರೆ ಬೆಲೆ ಸಿಗುವಂತೆ ಮಾಡುತ್ತಿಲ್ಲ; ಇದೇ ವೇಳೆ ಬೇಳೆಕಾಳು ಆಮದು ಮಾಡಿಕೊಳ್ಳುತ್ತದೆ. ಚಾಲ್ತಿಯಲ್ಲಿರುವ ಆರ್ಥಿಕ ಸೂತ್ರದ ವ್ಯಂಗ್ಯ ಇದು!
ಸೋತದ್ದಲ್ಲ, ಸೋಲಿಸಿದ್ದು
ಭಾರತದಲ್ಲಿ ನಡೆಯಬೇಕಾಗಿರುವುದು ಜನರಿಂದ ಕೃಷಿ ಉತ್ಪಾದನೆ, ಜನರಿಗಾಗಿ ಉತ್ಪಾದನೆಯಲ್ಲ. ರೈತರು ಆಹಾರ ಬೆಳೆದು ಅದಕ್ಕೆ ಸರಿಯಾದ ಪ್ರತಿಫಲ ಪಡೆದುಕೊಂಡರೆ ಆಗ ಬೇಡಿಕೆ ಸೃಷ್ಟಿಯಾಗುತ್ತದೆ. ಅರ್ಥಶಕ್ತಿ ತಂತಾನೇ ಬೆಳೆಯುತ್ತದೆ. ಇದರ ಬದಲಾಗಿ ನಾವು ಕೃಷಿ ಮತ್ತು ಕೃಷಿಕರನ್ನು ಮರೆಯುತ್ತೇವೆ, 7ನೇ ವೇತನ ಆಯೋಗ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.1.3ರಷ್ಟಿರುವ ವೇತನ ಪಡೆಯುವ ವರ್ಗಕ್ಕೆ ಇನ್ನಷ್ಟು ಮತ್ತಷ್ಟು ಕೊಡುಗೆ ನೀಡುತ್ತದೆ. ಕಾರ್ಪೊರೇಟ್ ವಲಯ ಇದನ್ನು “ಬೂಸ್ಟರ್ ಡೋಸ್’ ಎಂದು ಹೊಗಳುತ್ತದೆ. ಯಾಕೆ? ಅದರಿಂದ ಬೇಡಿಕೆ ಸೃಷ್ಟಿಯಾಗುತ್ತದೆ ಎಂದು ಎಲ್ಲರೂ ನಂಬಿದ್ದಾರೆ. ಆದರೆ, ರೈತರಿಗೆ ಹಣ ಸಿಕ್ಕರೆ ಅದರಿಂದ ಇನ್ನಷ್ಟು ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತದಲ್ಲವೆ? ಅರ್ಥ ವ್ಯವಸ್ಥೆ ಹೆಚ್ಚು ಬಲಗೊಳ್ಳುತ್ತದಲ್ಲವೆ? ಭಾರತದಲ್ಲಿ ರೈತರು ಸೋತದ್ದಲ್ಲ, ಅರ್ಥಧಿಶಾಸ್ತ್ರಜ್ಞರು, ವಿತ್ತೀಯ ನೀತಿ ರೂಪಕರು ಅವರನ್ನು ಸೋಲಿಸಿದ್ದಾರೆ.
ಭಾರತದ ಯಾವುದೇ ಜನವರ್ಗವನ್ನು ಗಮನಿಸಿ, ಕಳೆದ ಕೆಲವು ದಶಕಗಳಲ್ಲಿ ಅವರ ಆದಾಯ ಮಟ್ಟ ಸಾಕಷ್ಟು ಏರಿಕೆ ಕಂಡಿದೆ. ಆದರೆ ರೈತನಿಗೆ ಆ ಭಾಗ್ಯ ಇನ್ನೂ ಒದಗಿಬಂದಿಲ್ಲ. ರೈತರ ಆದಾಯ ಮಟ್ಟ 1970ರಿಂದ 2015ರ ನಡುವೆ ಕನಿಷ್ಟ 100 ಪಟ್ಟು ಏರಬೇಕಿತ್ತು. ಆದರೆ ಹಾಗಾಗಿಲ್ಲ. ಹಾಗೆ ಆಗಿರುತ್ತಿದ್ದರೆ ಗೋಧಿಯ ಬೆಲೆ ಕ್ವಿಂಟಾಲಿಗೆ 7,600 ರೂ. ಇರಬೇಕಿತ್ತು. ಅದರ ಬೆಲೆ ಈಗ 1,450 ರೂ. ಮಾತ್ರ. ನಾವು ರೈತರ ಮೇಲೆ ಸವಾರಿ ನಡೆಸುತ್ತಿರುವ ರೀತಿ ಇದು. ರೈತರು ಬೆಳೆದದ್ದಕ್ಕೆ ನಾವು ಹೆಚ್ಚು ಬೆಲೆ ಕೊಟ್ಟರೆ, ಅವರಿಗೆ ಅಧಿಕ ಆದಾಯ ಸಿಕ್ಕರೆ ಆಗ ಜನವಲಸೆ ನಗರಗಳಿಂದ ಹಳ್ಳಿಗಳತ್ತ ತಿರುಗುತ್ತದೆ. “ರೈತ ಆದಾಯ ಆಯೋಗ’ ರಚಿಸಿದರೆ ಮಾತ್ರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಅದರಿಂದ ಪ್ರತೀ ರೈತನಿಗೂ ಕನಿಷ್ಠ ಆದಾಯ ಸಿಗುವಂತೆ ಮಾಡುವುದು ಸಾಧ್ಯ. ಭಾರತದ ರೈತರು ತಮಗೆ ಪ್ರತಿ ವರ್ಷ ನ್ಯಾಯೋಚಿತವಾಗಿ ಸಿಗಬೇಕಾದ 12 ಲಕ್ಷ ಕೋಟಿ. ರೂ. ಆದಾಯದಿಂದ ವಂಚಿತರಾಗುತ್ತಿದ್ದಾರೆ.
ದೇವೀಂದರ್ ಶರ್ಮಾ
ಕೃಷಿ, ಆಹಾರ ನೀತಿ ವಿಶ್ಲೇಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.