‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್ ಸ್ಟಾರ್ ಆದ 60 ವರ್ಷದ ಗಂಗವ್ವ..!
ಈಕೆಯದು ಆರವತ್ತರಲ್ಲಿ ಇಪ್ಪತ್ತರ ಎನರ್ಜಿ
ಸುಹಾನ್ ಶೇಕ್, Aug 21, 2019, 4:30 PM IST
ಏನಾದರೂ ಸಾಧಿಸಬೇಕು ಅನ್ನುವವನಿಗೆ ಪ್ರೋತ್ಸಾಹ ಅನ್ನುವುದು ಅವಕಾಶದ ವೇದಿಕೆ ಹತ್ತಲು ಸಿಗುವ ಮೊದಲ ಮೆಟ್ಟಿಲು.ಒಬ್ಬ ಸರ್ವ ಸಾಮಾನ್ಯನಿಗೂ ಇವತ್ತು ಎರಡು ಕೈ ಚಪ್ಪಾಳೆ ಸದ್ದು ಪ್ರೋತ್ಸಾಹವಾಗಿ ಸಿಕ್ಕರೆ ಅದೇ ಎರಡು ಕೈಯ ಜಾಗದಲ್ಲಿ ನಾಳೆ ಎರಡು ಸಾವಿರ ಕೈಗಳ ಪ್ರೋತ್ಸಾಹದ ಸದ್ದು ಕೇಳಬಹುದು.ಜಗತ್ತಿನಾದ್ಯಂತ ಯೂಟ್ಯೂಬ್ ಸೆನ್ಸೆಷನಲ್ ಮೂಲಕ ಇಂದು ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಪಡೆದ 60 ವರ್ಷದ ಸಾಮಾನ್ಯ ರೈತ ಕುಟುಂಬದಿಂದ ಬಂದ ಮಹಿಳೆಯೊರ್ವಳ ಕಥೆಯಿದು.
ಹೈದರಾಬಾದ್ ನಿಂದ ಸುಮಾರು 200 ಕೀ.ಮಿ.ದೂರದಲ್ಲಿರುವ ಲಂಬಾಡಪಲ್ಲಿ ಎನ್ನುವ ಹಳ್ಳಿಯ ವಾಸಿ ಮಿಲ್ಕುರಿ ಗಂಗವ್ವ. ಕೃಷಿಯನ್ನೇ ಬದುಕಾಗಿಸಿಕೊಳ್ಳುವ ಇವರು ಮುಂದೊಂದು ದಿನ ತಾನು ಜನಪ್ರಿಯ ಆಗುತ್ತೇನೆ ಅನ್ನುವುದನ್ನು ಯಾವ ಕನಸಲೂ ಅಂದುಕೊಂಡು ಇರಲಿಲ್ಲ.
ಕುಡುಕ ಗಂಡ ಮತ್ತು ಹಿಂಸೆ: ಗಂಗವ್ವ ಸಂಸಾರದಲ್ಲಿ ಖುಷಿ ಆಗಿ ಇರುವುದು ಕೆಲವೇ ವರ್ಷ. ಪ್ರತಿನಿತ್ಯ ಕುಡಿದು ಬರುವ ಗಂಡನಿಂದ ಹಿಂಸೆಯನ್ನು ಅನುಭವಿಸುತ್ತಾರೆ.ಹೀಗೆಯೇ ಕುಡಿಯುವ ಗಂಡ ಮುಂದೊಂದು ದಿನ ಸಾಯುತ್ತಾನೆ.ಅಲ್ಲಿಂದ ತನ್ನ ಮೂವರು ಮಕ್ಕಳನ್ನು ಸಾಕುವ ಜವಾಬ್ದಾರಿ ಗಂಗವ್ವನ ಹೆಗಲ ಮೇಲೆ ಹೊರೆ ಆಗಿ ಬೀಳುತ್ತದೆ.ಮೂವರು ಮಕ್ಕಳನ್ನು ಕೃಷಿ ಕಾಯಕದಲ್ಲಿ ಪಳಗಿಸುತ್ತಾಳೆ. ಕಷ್ಟಪಟ್ಟು ಕೂಲಿ ಕೆಲಸವನ್ನು ಮಾಡುತ್ತಾ,ಬೀಡಿಯ ರೋಲ್ ಕಟ್ಟುವ ಕಾಯಕವನ್ನು ಮಾಡಿ ಮಕ್ಕಳನ್ನು ಸಾಕಿ ಸಲಹಿ,ತಿದ್ದಿ ತೀಡಿ ಬೆಳೆಸುತ್ತಾಳೆ.
‘ಮೈ ವಿಲೇಜ್ ಶೋ‘ ಹಿಂದಿನ ರೂವಾರಿಗಳು :
2012 ರಲ್ಲಿ ಶ್ರೀಕಾಂತ್ ಎನ್ನುವ ಹುಡುಗ ಬಿಟೆಕ್ ಕಲಿತು ತನ್ನ ಊರು ಲಂಬಾಡಪಲ್ಲಿ ಸಮೀಪದ ಜಗ್ಗಿಟೈಲ್ ನಲ್ಲಿ ಇದ್ದಾಗ ‘ಮೆಲ್ ಕುಲುಪು’ ಎನ್ನುವ ಯೂಟ್ಯೂಬ್ ಚಾನೆಲ್ ವೊಂದನ್ನು ಪ್ರಾರಂಭಿಸುತ್ತಾನೆ.ಹಳ್ಳಿಯ ಸಾಮಾನ್ಯ ಸೊಗಡನ್ನು ಹೇಳುವ ಸಣ್ಣ ಸಣ್ಣ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾನೆ.ಕ್ರಮೇಣ ಅನಿಲ್ ಗೀಲಾ ಎನ್ನುವ ಗಣಿತ ಪ್ರಾಧ್ಯಾಪಕ ಜೊತೆಯಾಗುತ್ತಾನೆ. ಒಂದು ದಿನ ಹೀಗೆಯೇ ಯೋಚನೆ ಮಾಡುತ್ತಾ ತನ್ನ ತಂಡಕ್ಕೆ ವಯಸ್ಸಾದ ಹೆಂಗಸೊಂದು ಬೇಕು ಆ ಮೂಲಕ ತಾವು ಹೇಳುವುದನ್ನು ವಿಭಿನ್ನವಾಗಿ ಹೇಳಬಹುದು ಅನ್ನುವ ಆಲೋಚನೆಯ ಹುಡುಕಾಟಕ್ಕೆ ಸಿಕ್ಕವರೇ ಮಿಲ್ಕುರಿ ಗಂಗವ್ವ.
2016 ರಲ್ಲಿ ಶ್ರೀಕಾಂತ್ ತನ್ನ ಚಾನೆಲ್ ಅನ್ನು ಮೈ ವಿಲೇಜ್ ಶೋ ಎನ್ನುವ ಹೆಸರಿಡುತ್ತಾರೆ.ಕೀ ಕೀ ಚಾಲೆಂಜ್ ಅನ್ನು ಗದ್ದೆಯಲ್ಲಿ ಕೋಣಗಳನ್ನು ಓಡಿಸುತ್ತಾ ಮಾಡುವ ನೃತ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾನೆಲ್ ನ ಹೆಸರು ಬರುವಂತೆ ಮಾಡುತ್ತದೆ.ಇಲ್ಲಿಂದ ತನ್ನ ಯೂಟ್ಯೂಬ್ ಕಾಯಕವನ್ನು ಗಂಭೀರವಾಗಿ ಪರಿಗಣಿಸಿ ಜನ ಮೆಚ್ಚುಗೆಗಳಿಸುತ್ತಾರೆ.
ಅಕ್ಷರ ಬರದೆ ಇದ್ರು,ಡೈಲಾಗ್ಸ್ ಮರೆಯಲಿಲ್ಲ : ಗಂಗವ್ವ ಮೈ ವಿಲೇಜ್ ಶೋ ತಂಡಕ್ಕೆ ಪರಿಚಯವಾದಾಗ 57 ವರ್ಷ ಅಲ್ಲಿಯ ವರೆಗೆ ಸಿನಿಮಾ ಅಂದರೆ ದೊಡ್ಡ ಪರದೆಯಲ್ಲಿ ತಾನು ಸಣ್ಣ ವಯಸ್ಸಿನಲ್ಲಿ ಕೂತು ನೋಡಿದ ಕಪ್ಪು-ಬಿಳುಪಿನ ನೆನಪು ಅಷ್ಟೇ. ವಿದ್ಯೆಯಿಲ್ಲದ ಗಂಗವ್ವನಿಗೆ ಡೈಲಾಗ್ಸ್ ಓದದೇ ನೆನಪು ಇಟ್ಟಕೊಳ್ಳುವ ಕಲೆ ಸಿದ್ಧಿ ಆಗಿತ್ತು. ದಿನ ಕಳೆದಂತೆ ತೆಲಂಗಾಣ ಮಾತ್ರವಲ್ಲದೆ ಎಲ್ಲೆಡೆಯೂ ಗಂಗವ್ವ ಮೈ ವಿಲೇಜ್ ಶೋ ಮೂಲಕ ಪರಿಚಯವಾಗುತ್ತಾರೆ.
ಆರವತ್ತರಲ್ಲಿ ಇಪ್ಪತ್ತರ ಎನರ್ಜಿ : ಗ್ರಾಮೀಣ ಭಾಗದ ಜನರ ಬದುಕಿನ ಸೊಗಡನ್ನು ಗಂಗವ್ವ ಯಾವುದೇ ರೀಟೇಕ್ ಗಳಿಲ್ಲದೆ ಸುಲಭವಾಗಿ ನಿಭಾಯಿಸುತ್ತಾರೆ. ಸರಳ ಹಾಗೂ ನೈಜ ಅಭಿನಯದ ಮೂಲಕ ಗ್ರಾಮೀಣ ಭಾಗದಲ್ಲಿ ಅತಿ ಬೇಗ ಗಂಗವ್ವ ಪ್ರಸಿದ್ಧಿಗಳಿಸುತ್ತಾರೆ. ತೆಲಂಗಾಣದಲ್ಲಿ ಯೂಟ್ಯೂಬ್ ಮೂಲಕ ಜನಮೆಚ್ಚುಗಳಿಸಿ ಸಾವಿರಾರು ಲೈಕ್ಸ್,ಕಾಮೆಂಟ್ಸ್ ಗಳ ಮಹಾಪೂರವೇ ಹರಿದು ಬರುತ್ತದೆ. ಯಾವುದೇ ಪಾತ್ರ ಇದ್ರು ಅದರಲ್ಲಿ ಒಬ್ಬ ಸಾಮಾನ್ಯ ಹಳ್ಳಿ ಶೈಲಿಯ ಭಾಷೆಯ ಉಚ್ಚಾರಣೆ ಹಾಗೂ ಮುಖ್ಯವಾಗಿ ಕ್ಯಾಮರಾವೇ ಇಲ್ಲದಂತೆ ನೈಜ ಅಭಿನಯ ಮಾಡುವುದರಲ್ಲಿ ಗಂಗವ್ವ ಪಳಗಿ ಬಿಡುತ್ತಾರೆ. ಮೈ ವಿಲೇಜ್ ಶೂ ಯೂಟ್ಯೂಬ್ ಚಾನೆಲ್ ನ ಜನಪ್ರಿಯತೆ ತೆಲಂಗಾಣದ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿವರೆಗೆ ಹಬ್ಬುತ್ತದೆ. ಗಂಗವ್ವನ ಸ್ಥಳೀಯ ಭಾಷಾ ಸೊಗಡಿನ ನಟನೆಯಲ್ಲಿರುವ ಹಾಸ್ಯ ಎಲ್ಲೆಡೆಯೂ ಎಲ್ಲರ ಮನ ಮನಮೆಚ್ಚುಗೆಗಳಿಸುತ್ತದೆ.
ಮನೋರಂಜನೆಯೊಟ್ಟಿಗೆ ಮಾನವೀಯ ಮೌಲ್ಯ ಸಾರುವ ವೀಡಿಯೋಗಳು : ಮೈ ವಿಲೇಜ್ ಶೋ ತಂಡದ ಮುಖ್ಯ ಉದ್ದೇಶ ಮನೋರಂಜನೆಯ ಜೊತೆಗೆ ಮಾನವೀಯ ಸಂದೇಶವನ್ನು ಸಾರುವ ಪ್ರಯತ್ನ. ಗಂಗವ್ವನ ಮೂಲಕ ಸ್ಥಳೀಯ ಭಾಷೆಯಲ್ಲಿ ಪ್ರಸಕ್ತ ಸಮಾಜದ ಅಂಕು ಡೊಂಕುಗಳನ್ನು, ರಾಜಕೀಯ ವಿದ್ಯಾಮಾನವನ್ನು,ಟಿಕ್ನಾಲಜಿಯ ಕುರಿತೆಲ್ಲಾ ವ್ಯಂಗ್ಯ ಹಾಗೂ ಹಾಸ್ಯದ ಸ್ಕ್ರಿಪ್ಟ್ ಬರೆದು ಹಳ್ಳಿಯ ಸುತ್ತಮುತ್ತ ಚಿತ್ರೀಕರಿಸಿ ಯೂಟ್ಯೂಬ್ ಹರಿಯ ಬಿಡುತ್ತಾರೆ. ಜನರಿಗೆ ಇದು ಎಲ್ಲಿಯವರೆಗೆ ಇಷ್ಟವಾಗುತ್ತದೆ ಅಂದರೆ ಆಪ್ಲೋಡ್ ಮಾಡಿದ ಕೆಲವೆ ದಿನದಲ್ಲಿ ಮಿಲಿಯನ್ ವೀಕ್ಷಣೆ ಪಡೆದ ಪಡೆಯುತ್ತವೆ. ಇತ್ತೀಚಿಗೆಗಷ್ಟೆ ಪಬ್ ಜಿ ಗೇಮ್ ಕುರಿತು ಮಾಡಿದ ವಿಡೀಯೂ ಗ್ರಾಮೀಣ ಭಾಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳಿ ಕೊನೆಗೊಂದು ಸಂದೇಶ ಸಾರುತ್ತದೆ.
ಮೈ ವಿಲೇಜ್ ಶೋ ತಂಡ ಇವತ್ತು ಗುರುತಿಸಿಕೊಳ್ಳುವುದು ಗಂಗವ್ವ ನಿಂದ. ಹೇಳಬೇಕಾದ ವಿಷಯವನ್ನು ಯಾವುದೇ ಅತಿರೇಖವಿಲ್ಲದೆ ಸರಳವಾಗಿ ಜನರಿಗೆ ತಲುಪಿಸುವುದು. ಇತ್ತೀಚಿನ ಯುವ ಸಮೂಹ ಹೆಚ್ಚು ಕಾಲ ಹರಣ ಮಾಡುವ ಟಿಕ್ ಟಾಕ್ ಆ್ಯಪ್ ಕುರಿತು ಮಾಡಿರುವ ವೀಡಿಯೋ ಹಳ್ಳಿ ಜನರ ಮುಗ್ಧತೆಯನ್ನು ಸಾರಿ ಹೇಳುವುದರ ಜೊತೆಗೆ ಸಂದೇಶವನ್ನು ರವಾನಿಸುತ್ತದೆ. ಗಂಗವ್ವನ ಇನ್ನೊಂದು ವಿಡೀಯೋ ಇತ್ತೀಚಿಗೆ ಬಹಳ ಸದ್ದು ಮಾಡಿತ್ತು. ವಿಲೇಜ್ ಲೋ ಡ್ರೀಕ್ ಆ್ಯಂಡ್ ಡ್ರೈವ್ ಅನ್ನುವ ವೀಡಿಯೋ ಟ್ರಾಫಿಕ್ ರೂಲ್ಸ್ ಬ್ರೇಕ್ ಹಾಗೂ ಹಣ ಬೇಡಿಕೆಯಿಡುವವರ ಬಗ್ಗೆ ವ್ಯಂಗ್ಯವಾಗಿಯೇ ಚಾಟಿ ಬೀಸುತ್ತದೆ. ಗ್ರಾಮೀಣ ಭಾಗದಲ್ಲಿ ಯುವ ಜನತೆಯ ಕೈಗೆ ಸಿಗುವ ಮಾದಕ ದ್ರವ್ಯಗಳ ಮೂಲವನ್ನು ಪತ್ತೆ ಹಚ್ಚುವ ಗಂಗವ್ವನ ಇತ್ತೀಚಿನ ವೀಡಿಯೋ ಐಸ್ಮಾರ್ಟ್ ಗಂಗವ್ವ ಎಂಬ ವೀಡಿಯೋ ಸದ್ದು ಮಾಡಿದೆ.
ಎಲ್ಲರ ಮನೆ ಮನಕ್ಕೆ ಹತ್ತಿರವಾದ ಗಂಗವ್ವ : ಗಂಗವ್ವ ತನ್ನ ಐವತ್ತೇಳನೇ ವಯಸ್ಸಿನಲ್ಲಿ ಯೂಟ್ಯೂಬ್ ಸ್ಟಾರ್ ಆಗುತ್ತಾಳೆ. ಮೈ ವಿಲೇಜ್ ಶೋ ಹಳ್ಳಿಯ ಸಾಮಾನ್ಯ ರೈತ ಮಹಿಳೆಯೊರ್ವಳನ್ನು ಜಗತ್ತು ತಿರುಗಿ ನೋಡುವಂತೆ ಮಾಡುತ್ತದೆ. ಗಂಗವ್ವ ಎಲ್ಲಿಯವರೆಗೆ ಖ್ಯಾತಿ ಪಡೆಯುತ್ತಾಳೆ ಅಂದ್ರೆ ಟಾಲಿವುಡ್ ನ ಸ್ಟಾರ್ ಗಳಿಗೂ ಗಂಗವ್ವನ ವಿಡೀಯೂಗಳ ಗುಂಗು ಹರಡುತ್ತದೆ. ಗಂಗ್ವವ ಬರುವ ಮೊದಲು ಮೈ ವಿಲೇಜ್ ಶೋ ಚಾನೆಲಿಗೆ ಕೇವಲ ಒಂದು ಸಾವಿರ ಚಂದದಾರರುಗಳಿದ್ದರು. ಆದರೆ ಈಗ ಒಂದು ಮಿಲಿಯನ್ ಹತ್ತಿರಕ್ಕೆ ತಲುಪಿದೆ.ಗಂಗವ್ವನ ಜನಪ್ರಿಯತೆ ಎಷ್ಟೇ ಇರಲಿ ಇವತ್ತಿಗೂ ತನ್ನ ಮಕ್ಕಳ ಜೊತೆ ಸೇರಿ ಕೃಷಿ ಕಾಯಕವನ್ನು ಮಾಡುವುದನ್ನು ಮರೆತಿಲ್ಲ.ಸ್ಥಳೀಯ ಪತ್ರಿಕೆಯಿಂದ ಹಿಡಿದು ರಾಷ್ಟ್ರೀಯ ಪತ್ರಿಕೆಯಗಳು ಸಹ ಗಂಗವ್ವನ ಸಾಧನೆಯ ಕುರಿತು ಸುದ್ದಿ ಮಾಡಿವೆ.
ಟಾಲಿವುಡ್ ಕಂಡ ಗಂಗವ್ವ : ಗಂಗವ್ವನ ಜನಪ್ರಿಯತೆ ಟಾಲಿವುಡ್ ವರೆಗೂ ತಲುಪಿದೆ.ತಮಿಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಪುರಿ ಜಗನಾದ್ ಗಂಗವ್ವನಿಗೆ ಇತ್ತೀಚಿಗೆಗಷ್ಟೆ ಬಿಡುಗೆಡಯಾದ ರಾಮ್ ಪೊತಿನೆನಿ ಅಭಿನಯಯಾದ ಐಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು.ಇಷ್ಟು ಮಾತ್ರವಲ್ಲದೆ ಗಂಗವ್ವ ತೆಲುಗು ಚಿತ್ರಗಳಿಗೆ ಪ್ರಮೋಟ್ ಮಾಡಲು ಬೇರೆ ಬೇರೆ ಚಿತ್ರ ತಂಡಗಳ ಜೊತೆ ಹೋಗಿ ಅಲ್ಲಿ ಆ ಚಿತ್ರಕ್ಕಾಗಿ ಪ್ರಮೋಷನ್ ಕೆಲಸವನ್ನು ಮಾಡುತ್ತಾರೆ.ಇದೇ ವರ್ಷ ಕಾಜೂಲ್ ಅಗರ್ ವಾಲ್ ಸಾಯಿ ಶ್ರೀನಿವಾಸ್ ಬೆಲ್ಲಂಕೊಂಡ ಅಭಿನಯದ ಸೀತಾ ಚಿತ್ರಕ್ಕಾಗಿ ಪ್ರಮೋಷನ್ ಮಾಡಿದ್ದರು.ಶಮಂತಾ ಅಕ್ಕಿನೆನಿಯ ಓ ಬೇಬಿ ಚಿತ್ರದ ಪ್ರಮೋಷನ್ ನಲ್ಲೂ ಕಾಣಸಿಕೊಂಡಿದ್ದಾರೆ.ಶಮಂತಾ ಮಾಡಿರುವ ಗಂಗವ್ವನ ಇಂಟರ್ ವ್ಯೂವ್ ಎರಡು ಮಿಲಿಯಾನ್ ಗೂ ಅಧಿಕ ವೀಕ್ಷಣೆ ಪಡೆದಿದೆ.ಇನ್ನೂ ಯೂಟ್ಯೂಬ್ ಸ್ಟಾರ್ ಆದ ಗಂಗವ್ವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಂತಕಿಂಡಿ ಮಲ್ಲೇಶಂ ಅವರ ಜೀವನಾಧಾರಿತ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಸ್ಯದ ಮೂಲಕ ಸಮಾಜದ ಅಡ್ಡಕೋರೆಗಳನ್ನು ಜನರಿಗೆ ತಿಳಿಸುವ ಇವರ ಪ್ರಯತಕ್ಕೆ ಯೂಟ್ಯೂಬ್ ಜನರಿಂದ ಪ್ರೀತಿ ಹಾಗೂ ಬೆಂಬಲಿಸುವ ಮಹಾಪೂರವೇ ಜೊತೆಯಾಗಿದ್ದು ಹೈದಾರಬಾದ್ ನಲ್ಲಿ ನಡೆದ ಯೂಟ್ಯೂಬ್ ಫೆಸ್ಟ್ ನಲ್ಲಿ ತಂಡಕ್ಕೆ ಸಿಲ್ವರ್ ಪ್ಲೇ ಸಹ ದೊರಕಿದೆ.ತನ್ನ ಆರವತ್ತನೇ ವಯಸ್ಸಿನಲ್ಲಿ ಇಷ್ಟೆಲ್ಲಾ ಪ್ರೀತಿ ಸಂಪಾದಿಸಿರುವ ಗಂಗವ್ವನಿಗೆ ಸಾಧನೆಗೆ ವಯಸ್ಸು ಮುಖ್ಯವಾಗಿಲ್ಲ ಮಾಡಬೇಕಿನ್ನುವ ಛಲವೇ ಬಲವಾಯಿತು.
–ಸುಹಾನ್ ಶೇಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.