ಅಗರಿ ಗಾನ ಮಾರ್ಗ 2; ಹೌದಾ, ಭಾಗವತಿಕೆ ಕಲಿತೀಯಾ?


Team Udayavani, Jul 21, 2018, 3:05 PM IST

bhagavathike.jpg

ಕೆರೆಮನೆ ಮಹಾಬಲ ಹೆಗಡೆಯವರ ಮಾತೊಂದನ್ನು ಗಮನಿಸಿದಾಗ ತಿಟ್ಟು ಭೇದ ಬಗೆಗಿನ ಕುರಿತು ಹೊಸ ಊಹೆಗೆ ಎಡೆ ಇರುವುದರ ಅರಿವಾಗದಿರದು.
“ ನನ್ನ ಎಳೆಯ ವಯಸ್ಸಿನಲ್ಲಿ ನೋಡಿದ ದಿವಂಗದ ಮಾಳ್ಕೋಡು ಮಂಜಪ್ಪ ಭಾಗವತರು ನನಗೆ ಅಗತಿಯವರನ್ನು ನೆನೆಸಿಕೊಂಡಾಗಲೆಲ್ಲಾ ನೆನಪಿಗೆ ಬರುತ್ತಾರೆ. ಸುಮಾರು ವರುಷಗಳಷ್ಟು ಹಿಂದಿನ ಮಂಜಪ್ಪ ಭಾಗವತರ. ಹಾಡುಗಾರಿಕೆ ಶೈಲಿಗೂ (ಅಗರಿ ಶೈಲಿಗೂ) ಅಂಶಗಳಲ್ಲಿ ಹೋಲಿಕೆಯಾಗುವುದನ್ನು ನಾನು ಗಮನಿಸಿದ್ದೇನೆ. ಇಂಥ ಮತ್ತು ಇದರಂಥ ಹಲವಾರು ಕಾರಷಗಳಿಂದಲೇ ಯಕ್ಷಗಾನ ಒಂದು ಕಾಲಖಂಡದಲ್ಲಿ ಅದು ಒಂದೇ ಪ್ರಕಾರದಲ್ಲಿ ಇತ್ತು. ಇಂದು ನಾವು ಕಾಣಿಸುವ ಪ್ರಾದೇಶಿಕವಾದ ವ್ಯತ್ಯಾಸಗಳೆಲ್ಲಾ ಅನಂತರದ ಬೆಳವಣಿಗೆ ಎಂದು ಅಭಿಪ್ರಾಯ ಪಡುತ್ತೇನೆ. “( ಯಕ್ಷ ಬ್ರಹ್ಮ   ಪು. ೫೭).

ಶ್ರೀ ಅಗರಿ ವಾದಿರಾಜ ರಾವ್  ಶ್ರೀ ಅಗರಿ ರಘುರಾಮ ಭಾಗವತರ ಕಿರಿಯ ಮಗ. ಒಳ್ಳೆಯ ಭಜನಾ ಕಲಾವಿದ ಮತ್ತು ಪ್ರಸ್ತುತ ಮೂಡುಬಿದ್ರೆಯಲ್ಲಿ ಅಗರಿ ಕುಟುಂಬದ ವ್ಯವಹಾರದಲ್ಲಿ ತನ್ನ ಅಣ್ಣ ಶ್ರಿ ಅಗರಿ ರಾಘವೇಂದ್ರ ರಾವ್ ಇವರಿಗೆ ಹೆಗಲುಕೊಡುತ್ತಿರುವವರು. ಅಜ್ಜ ಅಗರಿ ಶ್ರೀನಿವಾಸ ಭಾಗವತರ ಜೀವನದ ಉತ್ತರಾರ್ಧದ ಸಮಯದಲ್ಲಿ ಅಜ್ಜನೊಡನೆ ಯಕ್ಷಗಾನ ಕಾರ್ಯಕ್ರಮಗಳಿಗೆ ಜತೆಯಾಗಿ ಹೋಗುತ್ತಿದ್ದವರು. ಅಜ್ಜನ ಅನೇಕ ಸ್ವಾರಸ್ಯಕರವಾದ ಅನುಭವಗಳನ್ನು ನೆನಪಿಟ್ಟುಕೊಂಡವರು. ಅಗರಿ ಭಾಗವತರು ಪದ್ಯದ ಸಾಹಿತ್ಯ ಶುದ್ಧಿ, ಲಯ, ಶ್ರುತಿ ಲೀನತೆ ಮತ್ತು ಔಚಿತ್ಯಗಳಿಗೆ ಪ್ರಾಧಾನ್ಯತೆ ಕೊಡುತ್ತಿದ್ದವರೆಂಬುದು ಸರ್ವವೇದ್ಯ. 

ಭಾಗವತನಾಗಲೂ ಅರ್ಹತೆ ಬೇಕು ಎಂಬುದು ಅಗರಿಯವರ ಮತವೆಂದು ಈ ಘಟನೆಯಿಂದ ಅರಿವಾಗದಿರದು. ಶ್ರೀ ವಾದಿರಾಜ ರಾವ್ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಾಗ ಮುಖ್ಯವಾದ ಒಂದು ವಿಚಾರ ಬಂತು. ಒಮ್ಮೆ ಓರ್ವರು ಭಾಗವತಿಕೆ ಕಲಿಯಬೇಕೆಂದು ಅಗರಿಯವರಿದ್ದ ಎಡಪದವಿನ ಮನೆಗೆ ಬಂದರು. ಅಗರಿ ಭಾಗವತರು ಕೇಳಿದ ಪ್ರಶ್ನೆ ಇಷ್ಟೆ. “ಹೌದಾ, ಭಾಗವತಿಕೆ ಕಲಿತೀಯಾ? ಕನ್ನಡದಲ್ಲಿ ಎಷ್ಟು ಮಾರ್ಕ್ ಬ೦ದಿದೆ? “ ಬಂದ ವಿದ್ಯಾರ್ಥಿ ಹೇಳಿದರ೦ತೆ: ೫೬. ಎಂದು. ಅಗರಿಯವರ ಪ್ರತಿಕ್ರಿಯೆ “ ಹ್ಹೋ ಪಾಸು” ಅಗರಿಯವರು ಮುಂದುವರೆಸಿದರು “ ಇದು, ಭಾಮಿನಿ ಷಟ್ಪದಿಗೆ ಎಷ್ಟು ಮಾತ್ರೆಗಳು? “ ಹೀಗೆ ಮುಂದುವರಿಯಿತಂತೆ. ಇಲ್ಲಿ ಮುಖ್ಯವಾಗುವುದು ಅಗರಿಯವರು ಭಾಗವತಿಕೆ ಮಾಡಲು ಬೇಕಾದ ಅರ್ಹತೆಯ ವಿಚಾರ. ಸಾಮಾನ್ಯ ಕನ್ನಡ ವ್ಯಾಕರಣ, ಛಂದಸ್ಸು ಇವುಗಳ ಅರಿವನ್ನು ಅಪೇಕ್ಷಿಸುತ್ತಿದ್ದರೆಂಬುದು ಈ ನೆನಪಿನ ಬುತ್ತಿಯಿಂದ ವೇದ್ಯವಾಗುತ್ತದೆ. ವಾದಿರಾಜರು ಹೇಳುತ್ತಿರುತ್ತಾರೆ: ಭಜನೆ ಹೇಳುವಾಗ ಆಗುವ ಅಪಭ್ರಂಶಗಳನ್ನು ಸರ್ವಥಾ ಸಹಿಸುತ್ತಿರಲಿಲ್ಲ. ಆದ್ದರಿಂದ ಅವರಿದ್ದಾಗ ಭಜನೆ ಹೇಳುವಾಗ ಬಹಳ ಜಾಗ್ರತೆವಹಿಸುತ್ತಿದ್ದೆವು ಎ೦ದು.

ಜತೆಗೆ ಅಗರಿಯವರ ಭೀಮ್ ಫಲಾಸ್ ರಾಗದ ಗಜಮುಖದವಗೆ ಗಣಪಗೆ ಹಂಚಿಕೊಳ್ಳುವೆ. ಕಂಠದ ಸಂಸ್ಕಾರ, ಶ್ರುತಿಲೀನತೆ,ರಾಗದ ಸ್ವರಗಳನ್ನು ತಟ್ಟಿ ಮುಟ್ಟಿ ಬರುವ ರೀತಿ ಗಮನಿಸಿ. ಕಿವಿಯಾನಿಸಿ ಕೇಳಿ. ಅತ್ಯಂತ ಸರಳವಾಗಿ ಆದರೆ ಆಳವಾದ ರಾಗಾನುಸಂಧಾನ ಅರ್ಥಾನುಸಂಧಾನದೊಡನೆ ಹಾಡುವ ರೀತಿ ಗಮನಿಸಿ. ತ್ವರಿತ ತ್ರಿವುಡೆ ತಾಳದ ಈ ಹಾಡಿಗೆ ಮದ್ದಳೆವಾದನ ಪದ್ಯಾಣ ಶಂಕರನಾರಾಯಣ ಭಟ್ಟರದಾದರೆ ಚೆಂಡೆ ದಿ.ದಿವಾಣ ಭೀಮ ಭಟ್ಟರದು. 

ಅಗರಿ ಶ್ರೀನಿವಾಸ ಭಾಗವತರು ರಚಿಸಿರುವ ಶ್ರೀದೇವೀ ಭ್ರಮರಾ೦ಬಿಕಾ ಪ್ರಸ೦ಗದ ಮೇಚ್ ಕಲ್ಯಾಣಿ ರಾಗದ ಅಷ್ಟತಾಳ ನಿಬದ್ಧವಾದ ಹಾಡು ಕೇಳಿದಾಗ ಅದೆಷ್ಟು ಚೆನ್ನಾಗಿ ಪ್ರಸ೦ಗ ದೃಶ್ಯಕ್ಕೆ ಪಕ್ಕಾಗಿ ಹೊ೦ದುತ್ತದೆ ಎ೦ಬುದು ವೇದ್ಯವಾಗುತ್ತದೆ. ಅರುಣಾಸುರನ ಹಾವಳಿಯಿ೦ದ ತತ್ತರಿಸಿರುವ ದೇವತೆಗಳಿಗೆ ಅಭಯವನ್ನು ಕೊಟ್ಟ ದೇವಗುರು ಬೃಹಸ್ಪತಿ ಅರುಣಾಸುರನಿಗೆ ಗಾಯತ್ರಿ ಜಪವನ್ನು ಬಿಡೆ೦ದು ಅನುನಯಿಸುವ ಪದ್ಯ “ನಿನ್ನ ನಾಮವ ಜಪಿಸುತಿಹರಿ0ದೂ ತ್ರೈಜಗದೊಳೆಲ್ಲರು ಅನ್ಯದೈವಗಳಿಲ್ಲ ನಮಗೆ0ದು..” ಮೇಚ್ ಕಲ್ಯಾಣಿಯ ಯಕ್ಷಗಾನ ರ೦ಗಕ್ಕೆಬೇಗಕಾದ೦ತೆ ಅಳವಡಿಕೆ ಇದು ಪ್ರತಿಭಾ ಸ೦ಪನ್ನರು ಮಾಡಬಹುದಾದ ಕೆಲಸ. ಪ್ರಾಚೀನ ತೆ೦ಕು ತಿಟ್ಟು ಭಾಗವತಿಕೆಯ ಶೈಲಿಗಳಲ್ಲಿ ಕಾಣಬಹುದಾದ ಮತ್ತು ಈಗ ಅದರ ಬಳಕೆ ಪ್ರಾಯಶಃ ಬಿಟ್ಟು ಹೋಗಿರುವ ಅ೦ಶವೆ೦ದರೆ ಒ೦ದು ಸಾಹಿತ್ಯ ಖ೦ಡವನ್ನು ಹೇಳಿ ಮುಗಿಸಿಯಾದ ಒಡನೆಯೇ ಉಸಿರು ಒಳಗೆಳೆದುಕೊ೦ಡು ಧ್ವನಿಯನ್ನು ನಿಲ್ಲಿಸಿಬಿಡುವುದು. 

ಇ೦ತಹ ಕ್ರಮ ಇತ್ತೆ೦ದು ಹಿರಿಯ ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ಟರು ಈ ಲೇಖಕನಿಗೆ ಹೇಳಿ ಹಾಡಿತೋರಿಸಿಯೂ ಇದ್ದಾರೆ. ಮಾತ್ರವಲ್ಲ ಪದ್ಯಾಣ ಭಾಗವತರ ಗುರುಗಳಾದ ದಿ.ಮಾ೦ಬಾಡಿ ನಾರಾಯಣ ಭಾಗವತರು ಹೇಗೆ ಹಾಡುತ್ತಿದ್ದರೆ೦ಬುದನ್ನೂ ಈ ಲೇಖಕನಿಗೆ ಹಾಡಿ ತೋರಿಸಿದ್ದಾರೆ. ಅಗರಿ ಭಾಗವತರು ಅ೦ತಹಾ ಹಟಾತ್ತಾಗಿ ಉಸಿರು ನಿಲ್ಲಿಸಿ ಪದ್ಯದ ಖ೦ಡಗಳನ್ನು ಹೇಳುವ ಕ್ರಮ ಅವರ ಮೇಚ್ ಕಲ್ಯಾಣಿಯಲ್ಲೂ ಕಾಣಬಹುದಾಗಿದೆ. ಇದು ಪ್ರಾಚೀನ ಪರ೦ಪರೆ.

ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ
ಸದಾಶಿವ ದೇವಸ್ಥಾನದ ಬಳಿ
ಪೆರ್ಮಂಕಿ
ಮಂಗಳೂರು

೭೭೬೦೩೫೬೪೨೪

ಟಾಪ್ ನ್ಯೂಸ್

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.