ಯಕ್ಷಲೋಕದಿಂದ ಮರೆಯಾದ ಅಗರಿ ರಘುರಾಮ ಭಾಗವತರು
Team Udayavani, Feb 3, 2019, 12:50 AM IST
ಯಕ್ಷರಂಗ ಇತ್ತೀಚೆಗೆ ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ತನ್ನದೆ ಆದ ಕೊಡುಗೆಗಳನ್ನು ಯಕ್ಷರಂಗಕ್ಕೆ ನೀಡಿದ ಹಿರಿಯ ಚೇತನ,ತೆಂಕಿನ ಧೀಮಂತ ಭಾಗವತ ಅಗರಿ ರಘುರಾಮ ಭಾಗವತರು ಇನ್ನು ನೆನಪು ಮಾತ್ರ.
ತೆಂಕು ತಿಟ್ಟಿನ ದಿಗ್ಗಜ ಭಾಗವತರಾಗಿದ್ದ ಅಗರಿ ಶೈಲಿಯ ಖ್ಯಾತಿಯ ಶ್ರೀನಿವಾಸ ಭಾಗವತ ಮತ್ತು ರುಕ್ಮಿಣಿ ಅಮ್ಮನವರ ಪುತ್ರರಾಗಿ 1935 ರಲ್ಲಿ ಜನನ. ರಘುರಾಮ ಭಾಗವತರು ಉನ್ನತ ವ್ಯಾಸಂಗ ಮಾಡಿ ಸರ್ಕಾರಿ ಉದ್ಯೋಗವನ್ನು ಪಡೆದಿದ್ದರು. ಆದರೂ ವೃತ್ತಿ ಭಾಗವತನಾಗಿ ಕಾಣಿಸಿಕೊಂಡದ್ದು ಆ ಕಾಲಕ್ಕೂ ಈ ಕಾಲಕ್ಕೂ ವಿಶೇಷವೇ.
ಮನೆಯಲ್ಲೇ ಯಕ್ಷಗಾನ ವಾತಾವರಣದ ಪ್ರೇರಣೆಯಿಂದ ಕಲಾವಿದ ನಾಗಿ ಬೆಳೆದ ರಘುರಾಮ ಭಾಗವತರು, ಸರ್ಕಾರಿ ಉದ್ಯೋಗದ ನಡುವೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ತುಳು ಪ್ರಸಂಗಗಳ ಪ್ರದರ್ಶನಗಳು ಜನಪ್ರಿಯವಾಗಿದ್ದ ಕಾಲದಲ್ಲಿ ವೃತ್ತಿ ಮೇಳಕ್ಕೆ ಅಗರಿ ರಘುರಾಮ ಭಾಗವತರು ಅನಿವಾರ್ಯವಾಗಿದ್ದರು.
ತಂದೆ ಶ್ರೀನಿವಾಸ ಭಾಗವತರು ತುಳು ಹಾಡುಗಳನ್ನು ಹಾಡಲು ಒಲ್ಲೆ ಎಂದಾಗ ಅಂದಿನ ಸುರತ್ಕಲ್ ಮೇಳದಲ್ಲಿ ಅಗರಿ ರಘುರಾಮ ಭಾಗವತರು ಭಾಗವತಿಕೆ ಮಾಡುತ್ತಿದ್ದರು ಎನ್ನುವುದನ್ನು ಹಿರಿಯ ವಿಮರ್ಶಕರು ನೆನೆಸಿಕೊಳ್ಳುತ್ತಾರೆ.
ತಂದೆ ಸುರತ್ಕಲ್ ಮೇಳ ತೊರೆದಾಗ ಅನಿವಾರ್ಯತೆಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ಪ್ರಧಾನ ಭಾಗವತರಾಗಿ ಸುರತ್ಕಲ್ ಮೇಳ ಸೇರಿದ ರಘುರಾಮ ಭಾಗವತರು ಹಲವು ವರ್ಷ ಸೇವೆ ಸಲ್ಲಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.
ಡೇರೆ ಮೇಳಕ್ಕೆ ಅನಿವಾರ್ಯವಾಗಿದ್ದ ಹೊಸ ಪ್ರಸಂಗಗಳೂ ಮತ್ತು ಪೌರಾಣಿಕ ಪ್ರಸಂಗಗಳಿಗೆ ತನ್ನ ಕಂಠಸಿರಿಯಿಂದ ಜೀವ ತುಂಬುವ ಶಕ್ತಿ ಅಗರಿ ರಘುರಾಮ ಭಾಗವತರದ್ದು ಎಂದು ಹಿರಿಯ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
ಮಲ್ಪೆ ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ್ ರಾವ್ , ಕೊಳ್ಯೂರು ರಾಮಚಂದ್ರ ರಾವ್ , ಗೋವಿಂದ ಭಟ್ ಸೂರಿಕುಮೇರು , ಜಲವಳ್ಳಿ ವೆಂಕಟೇಶ್ ರಾವ್ , ಎಂ. ವಾಸುದೇವ ಸಾಮಗ , ಶಿವರಾಮ ಜೋಗಿ , ಪಾತಾಳ ವೆಂಕಟರಮಣ , ವಿಟ್ಲ ಜೋಷಿ , ಎಂ.ಕೆ.ರಮೇಶಾಚಾರ್ಯ , ವೇಣೂರು ಸುಂದರಾಚಾರ್ಯ , ಕೊಕ್ಕಡ ಈಶ್ವರ ಭಟ್ ಮೊದಲಾದ ದಿಗ್ಗಜರಿಗೆ ಭಾಗವತಿಕೆ ಮಾಡಿ ಸೈ ಎನಿಸಿಕೊಂಡವರು ಅಗರಿ ರಘುರಾಮ ಭಾಗವತರು.
ಶ್ರೀನಿವಾಸ ಭಾಗವತರ ನಂತರ ರಘುರಾಮ ಭಾಗವತರು ಜನಪ್ರಿಯಗೊಳಿಸಿದ ಅಗರಿ ಶೈಲಿ ಯಕ್ಷರಂಗದಲ್ಲಿ ಸ್ಥಾಯಿಯಾಗಿ ಉಳಿಯಲಿ. ಅವರು ನೀಡಿದ ಕಲಾ ಮೌಲ್ಯಗಳು ಇಂದಿನ ಭಾಗವತರಿಗೆ ಆದರ್ಶವಾಗಲಿ ಎನ್ನುವುದು ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.