ಬಾಯಲ್ಲಿ ನೀರೂರಿಸುವ ಆಲೂ ಪರೋಟ ಮಾಡೋ ಸುಲಭ ವಿಧಾನ!
ಶ್ರೀರಾಮ್ ನಾಯಕ್, Mar 29, 2019, 4:49 PM IST
ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ಅಲೂ ಪರೋಟ. ಚುಮು-ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಬಿಸಿ-ಬಿಸಿ ಆಲೂ ಪರೋಟ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಅತೀ ಸರಳ ವಿಧಾನದಲ್ಲಿ ಆಲೂ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು:
6 ಬಟಾಟೆ, 8 ಹಸಿಮೆಣಸಿನ ಕಾಯಿ, 1 ದೊಡ್ಡ ಚಮಚ ತೆಂಗಿನ ತುರಿ, 1/4 ಕಂತೆ ಕೊತ್ತಂಬರಿ ಸೊಪ್ಪು, 1 ಚಮಚ ಹಿಂಗಿನ ನೀರು, 2 ಕಪ್ ಗೋದಿ ಹಿಟ್ಟು, ರುಚಿಗೆ ಉಪ್ಪು.
ಮಾಡುವ ವಿಧಾನ:
ಬಟಾಟೆಯನ್ನು ನೀರಲ್ಲಿ ಬೇಯಿಸಿ ಅದರ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನ ಕಾಯಿಯ ಕೊಚ್ಚಲು ಮಾಡಿರಿ. ತೆಂಗಿನ ತುರಿಯನ್ನು ಪಾತ್ರೆಗೆ ಹಾಕಿ ಅದರೊಟ್ಟಿಗೆ ಪುಡಿಯುಪ್ಪು ಮತ್ತು ಮೆಣಸಿನಕಾಯಿ , ಕೊತ್ತಂಬರಿ ಸೊಪ್ಪಿನ ಕೊಚ್ಚಲು ಬೆರಸಿ, ಹಿಂಗಿನ ನೀರು ಸೇರಿಸಿ ಹೊರಣ ತಯಾರಿಸಿ. ಅದರೊಟ್ಟಗೆ ಬೇಯಿಸಿಟ್ಟ ಬಟಾಟೆಯನ್ನು ಹಿಸುಕಿ, ಹಿಟ್ಟಿನ ಸಣ್ಣ-ಸಣ್ಣ ಉಂಡೆ ಕಟ್ಟಿರಿ.
1/2 ಕಪ್ ನೀರಿಗೆ 1 ಚಮಚ ಪುಡಿಯುಪ್ಪು ಹಾಕಿ 2 ಕಪ್ ಗೋದಿ ಹಿಟ್ಟು ಬೆರಸಿ ಗಟ್ಟಿ ಹಿಟ್ಟು ಕಲಿಸಿ ಬೇಕಾದಷ್ಟೇ ದೊಡ್ಡ ಉಂಡೆ ಪೂರಿ ತಯಾರಿಸಿರಿ. ಪ್ರತಿಯೊಂದು ಪೂರಿಯ ಮೇಲೆ ಬಟಾಟೆ ಹಿಟ್ಟಿನ ಉಂಡೆ ಇಟ್ಟು ಅದನ್ನು ಪೂರ್ತಿ ಮುಚ್ಚಿ. ಉಂಡೆ ಮಾಡಿ ಗೋದಿ ಹಿಟ್ಟಿನಲ್ಲಿ ಆ ಉಂಡೆಯನ್ನು ಹೊರಳಿಸಿ ತೆಗೆದು ಲಟ್ಟಿಸಿ ದೊಡ್ಡ ಗಾತ್ರದ ಚಪಾತಿ ಮಾಡಿರಿ. ಚಪಾತಿ ತವಗೆ ತುಪ್ಪ ಹಚ್ಚಿ ಒಲೆಯ ಮೇಲಿಟ್ಟು ಅದರ ಎರಡೂ ಬದಿಗಳನ್ನು ಕಾಯಿಸಿ ತೆಗೆಯಿರಿ. ಬಿಸಿ-ಬಿಸಿ ಆಲೂ ಪರೋಟ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.