ಹತ್ಯೆಯಾದ ವಿಶ್ವರೂಪನ 3 ತಲೆಗಳು 3 ಜಾತಿಯ ಪಕ್ಷಿಗಳಾಗಿ ರೂಪ ತಳೆದವು!
Team Udayavani, Dec 4, 2018, 3:52 PM IST
ಒಂದಾನೊಂದು ಕಾಲದಲ್ಲಿ ಇಂದ್ರನು ಐಶ್ವರ್ಯದ ಮದದಿಂದ ಗರ್ವಿತನಾಗಿ ಅಹಂಕಾರದಿಂದ ಧರ್ಮ,ಮರ್ಯಾದೆ, ಸದಾಚಾರಗಳನ್ನು ಮೀರಿ ನಡೆಯತೊಡಗಿದನು. ಒಂದು ದಿನ ತುಂಬಿದ ಸಭೆಯಲ್ಲಿ ಶಚೀಸಹಿತನಾದ ದೇವೇಂದ್ರನು ನಲವತ್ತೊಂಭತ್ತು ಮರುದ್ದೇವತೆಗಳು, ಅಷ್ಟವಸುಗಳು, ಏಕಾದಶರುದ್ರರು, ದ್ವಾದಶಾದಿತ್ಯರು, ಋಭು ಸಾಧ್ಯ ಗಣಗಳು, ವಿಶ್ವೇದೇವತೆಗಳು, ಅಶ್ವಿನೀದೇವತೆಗಳು, ಸಿದ್ಧ, ಚಾರಣ, ಗಂಧರ್ವ, ಕಿನ್ನರ, ಅಪ್ಸರೆಯರೊಡಗೂಡಿ ಉನ್ನತವಾದ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದನು. ಅದೇ ಸಮಯಕ್ಕೆ ದೇವಗುರುಗಳಾದ ಬೃಹಸ್ಪತಿಗಳ ಆಗಮನವಾಯಿತು. ಎಲ್ಲರೂ ಗುರುಗಳಿಗೆ ಗೌರವವನ್ನು ಸೂಚಿಸಿದರೂ ಶ್ರೀಮದಾಂಧನಾದ ಮಹೇಂದ್ರನು ಗುರುಗಳಿಗೆ ಗೌರವವನ್ನು ಕೊಡದೆ ಅವಮಾನಿಸಿದನು. ಐಶ್ವರ್ಯಮದವೇ ಈ ಅಸಭ್ಯತೆಗೆ ಕಾರಣವೆಂದು ತಿಳಿದ ಬೃಹಸ್ಪತಿಗಳು ಸಭಾತ್ಯಾಗ ಮಾಡಿ ಮನೆಗೆ ಹೋದರು.
ಆ ಕ್ಷಣದಲ್ಲೇ ಗುರುನಿಂದನೆಯನ್ನು ಮಾಡಿದ ತಪ್ಪಿನ ಅರಿವಾದ ಇಂದ್ರನು ಸಭೆಯಲ್ಲೇ ತನ್ನನ್ನು ತಾನು ಹಲುಬಿಕೊಂಡನು. ಅಯ್ಯೋ ನಾನು ಎಂತಹ ಅನ್ಯಾಯ ಮಾಡಿಬಿಟ್ಟೆ….! ತುಂಬಿದ ಸಭೆಯಲ್ಲಿ ಗುರುವರ್ಯರಿಗೆ ಅವಹೇಳನವನ್ನು ಮಾಡಿ, ರಜೋಗುಣಾದಿ ಆಸುರೀಪ್ರವೃತ್ತಿಯನ್ನು ತೋರಿಸಿ ಗುರುಶಾಪಕ್ಕೆ ಒಳಗಾದೆನೆಂದು ಚಿಂತಿತನಾದನು.
ಇಂದ್ರನು ಹೀಗೆ ಯೋಚಿಸುತ್ತಿರುವಾಗಲೇ ದೇವಗುರುಗಳು ತಮ್ಮ ಮನೆಯಿಂದ ಹೊರಬಿದ್ದು ಯೋಗಬಲದಿಂದ ಅಂತರ್ಧಾನರಾದರು. ದೇವೇಂದ್ರನು ಗುರುಗಳನ್ನು ಬಹಳ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ. ಆಗ ಅವನು ಗುರುಗಳಿಲ್ಲದ ತಾನು ಸುರಕ್ಷಿತನಲ್ಲವೆಂದು ತಿಳಿದು ದೇವತೆಗಳೊಂದಿಗೆ ಸೇರಿ ಸ್ವರ್ಗದ ರಕ್ಷಣೆಯ ಉಪಾಯವನ್ನು ಯೋಚಿಸತೊಡಗಿದನು. ಈ ವಿಷಯವನ್ನು ತಿಳಿದ ದೈತ್ಯರು, ಇದೇ ಸೂಕ್ತ ಸಮಯವೆಂದು ತಿಳಿದು ಶುಕ್ರಾಚಾರ್ಯರ ಆದೇಶದಂತೆ ಸ್ವರ್ಗದ ಮೇಲೆ ದಾಳಿ ಮಾಡಲು ಸನ್ನದ್ಧರಾಗಿ ಯುದ್ಧವನ್ನು ಸಾರಿ ಮೂರುಲೋಕದ ಐಶ್ವರ್ಯವನ್ನು ದೋಚಿಕೊಂಡು ಹೋದರು. ಇದರಿಂದ ವಿಚಲಿತರಾದ ದೇವತೆಗಳು ಬ್ರಹ್ಮದೇವರ ಬಳಿಗೆ ಸಾರಿ ನತಮಸ್ತಕರಾಗಿ ಶರಣಾದರು.
ಅವರು ದೇವತೆಗಳಿಗೆ ಧೈರ್ಯವನ್ನು ತುಂಬಿ “ಶ್ರೇಷ್ಠರೇ ನೀವು ಎಂತಹ ಕೆಲಸವನ್ನು ಮಾಡಿದಿರಿ… ಇಂದು ನೀವು ಸಮೃದ್ಧಶಾಲಿಗಳಾದರೂ ಕೂಡ ಶತ್ರುಗಳ ಮುಂದೆ ತಲೆತಗ್ಗಿಸುವಂತಾಗಿದೆ. ಇದು ನಿಮ್ಮ ಅನೀತಿಯ ಫಲವೇ ಆಗಿದೆ. ನಿಮ್ಮ ಶತ್ರುಗಳೂ ಕೂಡ ಹಿಂದೆ ಇದೇ ತಪ್ಪನ್ನು ಮಾಡಿ ನಿರ್ಬಲರಾಗಿದ್ದರು. ನಂತರ ಗುರುಗಳನ್ನು ಆರಾಧಿಸಿ ಪುನಃ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಯಾರು ಗೋವಿಂದ, ಗೋವು ಹಾಗೂ ಗುರುಗಳನ್ನು ಸರ್ವಸ್ವವೆಂದು ಭಾವಿಸುತ್ತಾರೋ ಅವರಿಗೆ ಎಂದಿಗೂ ಅಮಂಗಲವಾಗುವುದಿಲ್ಲ. ಅದಕ್ಕಾಗಿ ನೀವು ಈಗಲೇ ದ್ವಾದಶಾದಿತ್ಯರಲ್ಲಿ ಒಬ್ಬನಾದ ತ್ವಷ್ಟ್ರುವಿನ ಮಗನಾದ ವಿಶ್ವರೂಪನ ಬಳಿಗೆ ಹೋಗಿ ಅವರನ್ನು ಸೇವಿಸಿದರೆ ಅವರು ನಿಮ್ಮ ಕೆಲಸವನ್ನು ಮಾಡಿಕೊಡುವರು” ಎಂದು ಹೇಳಿದರು.
ದೇವತೆಗಳು ವಿಶ್ವರೂಪನಲ್ಲಿಗೆ ಹೋಗಿ, ತಮಗೆ ಬಂದ ಸಮಸ್ಯೆಯನ್ನು ತಿಳಿಸಿ, ನೀನು ಬ್ರಹ್ಮನಿಷ್ಠ ಬ್ರಾಹ್ಮಣನಾಗಿರುವುದರಿಂದ ನಾವು ನಿನ್ನನ್ನು ಆಚಾರ್ಯನನ್ನಾಗಿ ವರಣೆ ಮಾಡಿ ನಿನ್ನ ಬೆಂಬಲದಿಂದ ಅನಾಯಾಸವಾಗಿ ಜಯಗಳಿಸುವೆವು. ಅವಶ್ಯಕತೆ ಬಂದಾಗ ವಯಸ್ಸಿನಲ್ಲಿ ಕಿರಿಯರಿಗೆ ನಮಸ್ಕರಿಸುವುದು ತಪ್ಪಲ್ಲ, ಹಿರಿತನಕ್ಕೆ ವೇದಜ್ಞಾನವೇ ಹೊರತು ವಯಸ್ಸಲ್ಲ” ಎಂದು ಹೇಳಿದರು. ಇದಕ್ಕೆ ಒಪ್ಪಿದ ವಿಶ್ವರೂಪನು ದೇವತೆಗಳ ಪೌರೋಹಿತ್ಯವನ್ನು ವಹಿಸಿಕೊಂಡು ಶ್ರದ್ಧೆಯಿಂದ ಆ ಕಾರ್ಯವನ್ನು ನಡೆಸತೊಡಗಿದನು.
ದೇವತೆಗಳಿಂದ ಕಸಿದುಕೊಂಡ ಸಂಪತ್ತನ್ನು ಶುಕ್ರಾಚಾರ್ಯರು ತಮ್ಮ ವಿದ್ಯಾಬಲದಿಂದ ಸುರಕ್ಷಿತಗೊಳಿಸಿದ್ದರು. ಸಮರ್ಥನಾದ ವಿಶ್ವರೂಪನು ವೈಷ್ಣವೀ ವಿದ್ಯೆ(ನಾರಾಯಣ ಕವಚ)ಯ ಬಲದಿಂದ ಅದನ್ನು ಕಿತ್ತುಕೊಂಡು ಪುನಃ ದೇವೇಂದ್ರನಿಗೆ ಕೊಡಿಸಿದನು. ಅದೇ ವೈಷ್ಣವೀ ವಿದ್ಯೆಯನ್ನು ಉದಾರಬುದ್ಧಿಯುಳ್ಳ ವಿಶ್ವರೂಪನು ದೇವೇಂದ್ರನಿಗೆ ಉಪದೇಶಮಾಡಿದನು. ಇದರಿಂದ ಸಂರಕ್ಷಿತನಾದ ಮಹೇಂದ್ರನು ಶತ್ರುಗಳ ಚತುರಂಗಸೈನ್ಯವನ್ನು ಅನಾಯಾಸವಾಗಿ ಸೋಲಿಸಿ ಮೂರುಲೋಕಗಳ ಆಧಿಪತ್ಯವನ್ನು ಪುನಃಸ್ಥಾಪಿಸಿದನು.
ದೇವೇಂದ್ರನಿಗೆ ನಾರಾಯಣ ಕವಚವನ್ನು ಉಪದೇಶಮಾಡಿದ ವಿಶ್ವರೂಪನಿಗೆ ಮೂರುತಲೆಗಳಿದ್ದವು. ಅವನು ಒಂದು ಮುಖದಿಂದ ಸೋಮರಸವನ್ನೂ , ಮತ್ತೊಂದು ಮುಖದಿಂದ ಸುರೆಯನ್ನೂ, ಮೂರನೇ ಮುಖದಿಂದ ಅನ್ನವನ್ನು ಸೇವಿಸುತಿದ್ದನು. ಅವನು ಯಜ್ಞವನ್ನು ಮಾಡುವಾಗ ಪ್ರತ್ಯಕ್ಷವಾಗಿ ಉಚ್ಛಸ್ವರದಲ್ಲಿ ಮಂತ್ರವನ್ನು ಪಠಿಸಿ ಅತ್ಯಂತ ವಿನಯದಿಂದ ದೇವತೆಗಳಿಗೆ ಆಹುತಿಯನ್ನು ಸಮರ್ಪಿಸುತ್ತಿದ್ದನು. ವಿಶ್ವರೂಪನ ತಂದೆಯು ದ್ವಾದಶಾದಿತ್ಯರಲ್ಲಿ ಒಬ್ಬನಾಗಿದ್ದರೂ, ತಾಯಿಯು ಅಸುರ ಕುಲದವಳಾದ್ದರಿಂದ, ಮಾತೃಸ್ನೇಹಕ್ಕೇ ಬದ್ಧನಾಗಿ, ಯಜ್ಞಯಾಗಾದಿಗಳಲ್ಲಿ ದೇವತೆಗಳ ಜೊತೆಜೊತೆಗೆ ಯಾರಿಗೂ ತಿಳಿಯದಂತೆ ಅಸುರರಿಗೂ ಆಹುತಿಗಳನ್ನು ಕೊಡುತ್ತಿದ್ದನು.
ಅವನು ಹೀಗೆ ದೇವತೆಗಳಿಗೆ ಹಾಗೂ ಧರ್ಮಕ್ಕೆ ಕಪಟಮಾಡುವುದನ್ನು ತಿಳಿದ ದೇವೇಂದ್ರನು ಕೋಪಗೊಂಡು ಅವನ ಮೂರೂ ತಲೆಗಳನ್ನು ಕತ್ತರಿಸಿಹಾಕಿದನು. ಇಂದ್ರನಿಂದ ಕತ್ತರಿಸಲ್ಪಟ್ಟ ತಲೆಗಳಲ್ಲಿ, ಸೋಮರಸಪಾನ ಮಾಡುತಿದ್ದ ತಲೆಯು ಕಪಿಂಜಲ ಪಕ್ಷಿಯಾಗಿ, ಸುರಾಪಾನ ಮಾಡುತಿದ್ದ ತಲೆಯು ಕಲವಿಂಕ (ಗುಬ್ಬಚ್ಚಿ) ಪಕ್ಷಿಯಾಗಿಯೂ, ಅನ್ನವನ್ನು ಉಣ್ಣುತ್ತಿದ್ದ ತಲೆಯು ತಿತ್ತಿರಿ ಪಕ್ಷಿಯಾಗಿಯೂ ರೂಪ ತಾಳಿದವು.
ದೇವತೆಗಳು ಆಚಾರ್ಯನನ್ನಾಗಿ ಸ್ವೀಕರಿಸಿದ ಬ್ರಹ್ಮನಿಷ್ಠನಾದ ವೃತ್ರಾಸುರನ ಸಂಹಾರದಿಂದ ದೇವೇಂದ್ರನಿಗೆ ಬ್ರಹ್ಮಹತ್ಯಾದೋಷ ಬಂದೊದಗಿತು.
ಪಲ್ಲವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.