ಈ ಸ್ಟಾರ್ ನಟಿನಾ CIA, CBI ಕೊಲ್ಲಲು ಸಂಚು ಹೂಡಿತ್ತಾ? ನಿಗೂಢ ಸಾವು
Team Udayavani, Oct 25, 2018, 2:50 PM IST
ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ನಟ, ನಟಿಯರು ವಿವಿಧ ರೀತಿಯಲ್ಲಿ ಮಿಂಚಿ ಮರೆಯಾಗಿದ್ದಾರೆ. ಅದರಲ್ಲಿ ಕೆಲವರ ಜೀವನಗಾಥೆ ಅಂದಿನಿಂದ ಇಂದಿನವರೆಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹೌದು ಟೈಮ್ಸ್ ಮ್ಯಾಗಜೀನ್ ಕವರ್ ಪೇಜ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ನಟಿ 1970 ಹಾಗೂ 80ರ ದಶಕದಲ್ಲಿ ಅತ್ಯಂತ ಗ್ಲ್ಯಾಮರಸ್ ಮತ್ತು ಜನಪ್ರಿಯ ನಟಿಯಾಗಿದ್ದರು.
ರೂಪದರ್ಶಿಯಾಗಿದ್ದ ಪರ್ವಿನ್ 1972ರಲ್ಲಿ ಚರಿತ್ರಾ ಹಿಂದಿ ಸಿನಿಮಾದ ಮೂಲಕ ಸಿನಿ ಜೀವನ ಆರಂಭಿಸಿದ್ದರು. ದೀವಾರ್, ನಮಕ್ ಹಲಾಲ್, ಸುಹಾಗ್, ಶಾನ್ ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದ ಈಕೆ ಬಾಲಿವುಡ್ ನ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಬಾಬಿ ಕೂಡಾ ಒಬ್ಬರಾಗಿದ್ದರು.
ಹಿಂದಿ ಸಿನಿಮಾರಂಗದಲ್ಲಿ ನಾಯಕಿಯರ ಪಾತ್ರ ಅಪ್ಪಟ ಭಾರತೀಯ ಉಡುಗೆ ತೊಡುಗೆಯಲ್ಲಿಯೇ ಇದ್ದಿತ್ತು. ಆದರೆ ಪರ್ವಿನ್ ಬಾಬಿ ಎಂಬ ಮಾದಕ ನಟಿ ಕಾಲಿಟ್ಟ ಬಳಿಕ ಪಾತ್ರ ಹಾಗೂ ಡ್ರೆಸ್ ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದ್ದಳು. ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ನಟಿಸುತ್ತಿದ್ದ ಬಾಬಿ ಗ್ಲ್ಯಾಮರಸ್ ಪಟ್ಟ ಗಿಟ್ಟಿಸಿಕೊಂಡಿದ್ದಳು. ಅಷ್ಟೇ ಅಲ್ಲ ಈಕೆ ಗಣ್ಯಾತೀಗಣ್ಯರ ಪ್ರೇಮಪಾಶದಲ್ಲಿ ಬಿದ್ದು ಬಿಟ್ಟಿದ್ದಳು. ಒಂದು ವೇಳೆ ಈಗ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ, ಸಾಮಾಜಿಕ ಜಾಲತಾಣಗಳು ಪರ್ವಿನ್ ಬಾಬಿ ಕಾಲದಲ್ಲಿ ಇದ್ದಿದ್ದರೆ ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ನಟರ, ನಿರ್ದೇಶಕರ ಬಣ್ಣಗಳು ಅಂದೇ ಬಟಾಬಯಲಾಗುತ್ತಿತ್ತು!
ಪರ್ವಿನ್ ಬಾಬಿ ಮೊದಲ ಬಾರಿಗೆ ಬಾಲಿವುಡ್ ನ ಪ್ರಸಿದ್ಧ ಖಳನಟ ಡ್ಯಾನಿ ಡೆನ್ ಝೋಂಗಪಾ ಜೊತೆ ಅಫೇರ್ ಶುರುವಾಗುತ್ತದೆ. ಇಬ್ಬರು ಪ್ರೇಮಿಗಳು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಕೆಲ ವರ್ಷಗಳಲ್ಲಿ ಇಬ್ಬರ ಪ್ರೀತಿ ಮುರಿದು ಬಿದ್ದು ನಾನೊಂದು ತೀರ, ನೀನೊಂದು ತೀರ ಆಗಿಬಿಟ್ಟಿದ್ದರು. ಇದಾದ ಬಳಿಕ ಸ್ಫುರದ್ರೂಪಿ ಕಬೀರ್ ಬೇಡಿಯನ್ನು ಬಾಬಿ ಪ್ರೀತಿಸತೊಡಗುತ್ತಾಳೆ. ಆ ಹೊತ್ತಿಗೆ ಕಬೀರ್ ಪ್ರೊತಿಮಾ ಬೇಡಿಯನ್ನು ಮದುವೆಯಾಗಿದ್ದ.
ಈ ಕಾಲಘಟ್ಟದಲ್ಲಿ ಕಬೀರ್ ಬೇಡಿ ಕೂಡಾ ಹೆಚ್ಚು ಕ್ಲಿಕ್ ಆಗಿರಲಿಲ್ಲವಾಗಿತ್ತು. ಪರ್ವಿನ್ ಬಾಬಿ ಬಾಲಿವುಡ್ ನಲ್ಲಿ ಉತ್ತುಂಗಕ್ಕೆ ಏರತೊಡಗಿದ್ದಳು. ಕಬೀರ್ ಅದೃಷ್ಟವನ್ನರಸಿ ಇಟಲಿಗೆ ಹೊರಟು ಬಿಟ್ಟಿದ್ದರು. ಒಬ್ಬಂಟಿಯಾದ ಪರ್ವಿನ್ ಶೂಟಿಂಗ್ ಮುಗಿಸಿ ಇಟಲಿಗೆ ಹೋಗುತ್ತಿದ್ದಳು. ವಿಧಿ ವಿಪರ್ಯಾಸ ಎಂಬಂತೆ ಅಲ್ಲಿ ಕಬೀರ್ ಹೆಚ್ಚು ಜನಪ್ರಿಯನಾಗತೊಡಗಿದ್ದ, ಅಷ್ಟೇ ಅಲ್ಲ ಆರ್ಥಿಕವಾಗಿಯೂ ಹಿಡಿತ ಸಾಧಿಸಿದ್ದ. ಇದರಿಂದಾಗಿ ಕಬೀರ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಆತನ ಜೊತೆಗಿನ ಮದುವೆ ಕನಸನ್ನು ಕೈಬಿಟ್ಟು ಮತ್ತೆ ಮುಂಬೈಗೆ ವಾಪಸ್ಸಾಗಿದ್ದಳು.
ಟೈಮ್ ಮ್ಯಾಗಜೀನ್ ನಲ್ಲಿ ಪರ್ವಿನ್ ಬಾಬಿಯ ಫೋಟೋ ಪ್ರಕಟವಾದ ಮೇಲೆ ಆಕೆ ಸ್ಟಾರ್ ಗಿರಿ ಮೇಲಕ್ಕೇರತೊಡಗಿತ್ತು. 1977ರ ಹೊತ್ತಿಗೆ ಮಹೇಶ್ ಭಟ್ ಪರ್ವಿನ್ ಬಾಬಿಯ ಜೀವನದಲ್ಲಿ ಪ್ರವೇಶಿಸಿಬಿಟ್ಟಿದ್ದರು. ಅಂದ ಹಾಗೆ ಮಹೇಶ್ ಭಟ್ ಗೆ ಕೂಡಾ ಅದಾಗಲೇ ಮದುವೆಯಾಗಿತ್ತು. ಇವರಿಬ್ಬರ ಲವ್ ಸ್ಟೋರಿ ಬಾಲಿವುಡ್ ನಲ್ಲಿ ದಂತಕಥೆಯಾಗಿದೆ. ವಿಪರ್ಯಾಸ ಎಂದರೆ ಆಗ ಮಹೇಶ್ ಭಟ್ ಅಪರಿಚಿತ ವ್ಯಕ್ತಿಯಷ್ಟೇ! ಎಲ್ಲಕ್ಕಿಂತ ಹೆಚ್ಚಾಗಿ ಪರ್ವಿನ್ ಬಾಬಿಯ ಬಾಯ್ ಫ್ರೆಂಡ್ ಅಂತ ಗುರುತಿಸಲ್ಪಟ್ಟಿದ್ದರು!
ಅಮರ್ ಅಕ್ಬರ್ ಅಂತೋನಿ ಮತ್ತು ಕಾಲಾ ಪತ್ಥರ್ ಸಿನಿಮಾದಲ್ಲಿ ಪರ್ವಿನ್ ಬ್ಯೂಸಿಯಾಗಿದ್ದಳು. ಆಗ ಬಾಬಿ ಜೀವನದಲ್ಲಿ ಸೋಲು ಎಂಬುದಕ್ಕೆ ಸ್ಥಳವೇ ಇಲ್ಲವಾಗಿತ್ತು. ಅದಾಗಲೇ ಸ್ಟಾರ್ ಪಟ್ಟ ಏರಿದ್ದಳು. ಸಾದಾ ಸೀದಾ ಬದುಕು ಸಾಗಿಸುತ್ತಿದ್ದ ಪರ್ವಿನ್ ಮಹೇಶ್ ಭಟ್ ಅವರನ್ನು ಇನ್ನಿಲ್ಲದಂತೆ ಪ್ರೀತಿಸತೊಡಗಿದ್ದಳು. 1979ರ ಒಂದು ಸಂಜೆ ಮಹೇಶ್ ಭಟ್ ಗೆ ಆಕೆಯ ಜೀವನದ ಅತೀ ದೊಡ್ಡ ಸತ್ಯವೊಂದು ತಿಳಿದು ಬಿಟ್ಟಿತ್ತು.!
ಅಂದು ಪರ್ವಿನ್ ಮಾಡಿದ್ದೇನು?
ಮಹೇಶ್ ಭಟ್ ಮನೆಗೆ ಬಂದಾಗ ಮನೆಯ ಮೂಲೆಯಲ್ಲಿ ಪರ್ವಿನ್ ಸಿನಿಮಾ ಡ್ರೆಸ್ ಹಾಕಿಕೊಂಡು ಕುಳಿತುಕೊಂಡಿದ್ದಳು. ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದಳು. ಮಹೇಶ್ ಭಟ್ ಅವರನ್ನು ನೋಡುತ್ತಿದ್ದಂತೆಯೇ ಆಕ್ರೋಶಿತಳಾದ ಪರ್ವಿನ್ ಬಾಬಿ, ಮಾತನಾಡಬೇಡ. ಕೋಣೆಯ ಬಾಗಿಲು ಮುಚ್ಚು..ಅವರೆಲ್ಲ ನನ್ನ ಕೊಲ್ಲಲು ಯತ್ನಿಸುತ್ತಿದ್ದಾರೆ..ಎಂಬಂತೆ ಬಡಬಡಿಸತೊಡಗಿದ್ದಳು. ಈ ಸ್ಥಿತಿಯಲ್ಲಿ ಪರ್ವಿನ್ ಬಾಬಿಯನ್ನು ಮಹೇಶ್ ಭಟ್ ಮೊದಲ ಬಾರಿ ಕಂಡಿದ್ದರು. ಹೌದು..ಪರ್ವಿನ್ ಬಾಬಿ ಮಾರಕ ಮಾನಸಿಕ(ಭ್ರಮೆ) ಖಾಯಿಲೆಗೆ ತುತ್ತಾಗಿದ್ದಳು.
ಸಂಶಯಗ್ರಸ್ತ ಮಾನಸಿಕ ಖಾಯಿಲೆಗೆ ಒಳಗಾದ ಪರ್ವಿನ್ ಬಾಬಿಯನ್ನು ಎಲೆಕ್ಟ್ರಿಕ್ ಶಾಕ್ ಟ್ರೀಟ್ ಮೆಂಟ್ ಕೊಡಿಸುವುದೇ ಸೂಕ್ತ ಎಂದು ನಿರ್ಮಾಪಕರು, ವೈದ್ಯರು ಸೂಚಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಹೇಶ್ ಭಟ್ ಗೆ ಮಾಜಿ ಪ್ರೇಮಿಗಳಾದ ಕಬೀರ್ ಬೇಡಿ, ಡ್ಯಾನಿ, ಅಮಿತಾಬ್ ಕೂಡಾ ನೆರವಿಗೆ ಧಾವಿಸಿದ್ದರು.
ಮಹೇಶ್ ಭಟ್ ಪರ್ವಿನ್ ಬಾಬಿಗೆ ಇಲೆಕ್ಟ್ರಿಕ್ ಶಾಕ್ ಟ್ರೀಟ್ ಮೆಂಟ್ ಕೊಡುವುದನ್ನು ವಿರೋಧಿಸುತ್ತಾರೆ. ಅಮೆರಿಕ, ಬೆಂಗಳೂರು ಮುಂತಾದ ಕಡೆ ಚಿಕಿತ್ಸೆ ಕೊಡಿಸುತ್ತಾರೆ. ಆದರೆ ಆ ಹೊತ್ತಿಗೆ ಆಕೆಯ ಮಾನಸಿಕ ಖಾಯಿಲೆ ಮಿತಿಮೀರಿರುತ್ತೆ. ಹೀಗೆ ಭಟ್ ನಿಧಾನಕ್ಕೆ ಆಕೆಯಿಂದ ದೂರ ಸರಿಯುವಂತೆ ಆಕೆಯ ಫಿಲೋಸಫರ್ ಯುಜಿ ಕೃಷ್ಣಮೂರ್ತಿ ಸಲಹೆ ನೀಡಿದ್ದರು!
ಸಿಐಎ, ಸಿಬಿಐ, ಕೆಜಿಬಿಯಿಂದ ಕೊಲ್ಲಲು ಯತ್ನ!
1983ರಲ್ಲಿ ಯಾರಿಗೂ ಯಾವ ಮಾಹಿತಿಯನ್ನು ನೀಡದೆ ಪರ್ವಿನ್ ಬೇಬಿ ನಿಗೂಢವಾಗಿ ನಾಪತ್ತೆಯಾಗಿದ್ದರಂತೆ. ವಿವಿಧ ವರದಿಗಳ ಪ್ರಕಾರ ಆಧ್ಯಾತ್ಮಿಕ ತಿರುಗಾಟದ ಹಿನ್ನೆಲೆಯಲ್ಲಿ ಅಮೆರಿಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಪರ್ವಿನ್ ಸಂಚರಿಸುತ್ತಿದ್ದರಂತೆ. 1984ರಲ್ಲಿ ಆಕೆಯನ್ನು ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ದಾಖಲೆ ತೋರಿಸುವಲ್ಲಿ ವಿಫಲವಾಗಿದ್ದರಿಂದ ಬಂಧಿಸಿಬಿಟ್ಟಿದ್ದರು. ಅನುಚಿತವಾಗಿ ವರ್ತಿಸಿದ್ದ ಬಾಬಿಯ ಕೈಗೆ ಕೋಳ ತೊಡಿಸಿ ಕರೆದೊಯ್ದು, ಬಳಿಕ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು. ಭಾರತೀಯ ರಾಯಭಾರಿ ಮತ್ತು ಯುಜಿಕೆ ಆಸ್ಪತ್ರೆಗೆ ಭೇಟಿ ನೀಡಿದಾಗ ಸಹಜವಾಗಿ ನಕ್ಕು ಏನೂ ಆಗಲೇ ಇಲ್ಲ ಎಂಬಂತೆ ಆಕೆ ವರ್ತಿಸಿದ್ದಳಂತೆ!
ಭ್ರಮೆಯ ಖಾಯಿಲೆಯಿಂದ ಬಳಲುತ್ತಿದ್ದ ಆಕೆ ಬಿಲ್ ಕ್ಲಿಂಟನ್, ರೋಬರ್ಟ್ ರೆಡ್ ಫೋರ್ಡ್, ಪ್ರಿನ್ಸ್ ಚಾರ್ಲ್ಸ್, ಅಲ್ ಗೋರೆ, ರೋಮನ್ ಕ್ಯಾಥೋಲಿಕ್ ಚರ್ಚ್, ಸಿಐಎ, ಸಿಬಿಐ, ಕೆಜಿಬಿ, ಮೊಸ್ಸಾದ್ ತನ್ನ ಕೊಲ್ಲಲು ಯತ್ನಿಸುತ್ತಿರುವುದಾಗಿ ಪರ್ವಿನ್ ಆರೋಪಿಸಿದ್ದಳು. ಅಲ್ಲದೇ ಕೋರ್ಟ್ ಮೆಟ್ಟಿಲೇರಿದ್ದಳು. ಆದರೆ ಸಾಕ್ಷ್ಯಾಧಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. 1989ರಲ್ಲಿ ಸಿನಿಮಾ ಮ್ಯಾಗಜೀನ್ ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಮಿತಾಬ್ ಬಚ್ಚ್ ಒಬ್ಬ ಅಂತಾರಾಷ್ಟ್ರೀಯ ಗ್ಯಾಂಗ್ ಸ್ಟರ್, ನನ್ನಿಂದ ದೂರವಾದ ಬಳಿಕ ಆತನ ಗೂಂಡಾಗಳು ನನ್ನ(ಬಾಬಿ) ಕಿಡ್ನಾಪ್ ಮಾಡಿ ದ್ವೀಪಪ್ರದೇಶವೊಂದರಲ್ಲಿ ಕೂಡಿ ಹಾಕಿ ಸರ್ಜರಿ ಮಾಡಿ ನನ್ನ ಕಿವಿಯ ಕೆಳಗೆ ಎಲೆಕ್ಟ್ರಾನಿಕ್ ಚಿಪ್ ವೊಂದನ್ನು ಇಟ್ಟಿದ್ದರು ಎಂದು ಆರೋಪಿಸಿದ್ದಳು.
ಹೀಗೆ ಹಲವಾರು ಏಳು ಬೀಳುಗಳನ್ನು ಕಂಡು ಭ್ರಮಾಲೋಕದ ಭೀತಿಯಲ್ಲಿಯೇ ಕಾಲ ಕಳೆದ ಪರ್ವಿನ್ ಬಾಬಿ 2005ರಲ್ಲಿ ಅಪಾರ್ಟ್ ಮೆಂಟ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ನಿಜವಾದ ಕಾರಣ ಇಂದಿಗೂ ಬಹಿರಂಗವಾಗಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.