ಬೇಬಿಸ್ ಡೇ ಔಟ್…ಮುದ್ದು ಮುಖದ “ಸ್ಟಾರ್ ಬೇಬಿ’ ಜೀವನ ಈಗ ನಿಗೂಢ!
Team Udayavani, Feb 14, 2019, 6:57 AM IST
1990ರ ದಶಕದಲ್ಲಿ ತೆರೆಕಂಡಿದ್ದ ಈ ಸಿನಿಮಾವನ್ನು ನೋಡದವರ ಸಂಖ್ಯೆ ವಿರಳವಾಗಿರಬಹುದು. ಮಕ್ಕಳ ಜೊತೆಗೆ ಪೋಷಕರು ಕೂಡಾ ಸಿನಿಮಾ ವೀಕ್ಷಿಸಿ ನಕ್ಕು ಹಗುರಾಗಿದ್ದಂತು ಸುಳ್ಳಲ್ಲ. ಪ್ಯಾಟ್ರಿಕ್ ರೀಡ್ ಜಾನ್ಸನ್ ನಿರ್ದೇಶನದ 99 ನಿಮಿಷಗಳ “ಬೇಬಿಸ್ ಡೇ ಔಟ್” ಸಿನಿಮಾ ಎಷ್ಟು ಬಾರಿ ನೋಡಿದರೂ ಬೋರ್ ಹೊಡೆಸಲ್ಲ..ಹಾಲಿವುಡ್ ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೇಳಿಕೊಳ್ಳುವಷ್ಟರ ಮಟ್ಟಿಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲವಾಗಿತ್ತು!.ಆದರೆ ದಕ್ಷಿಣ ಏಷ್ಯಾದಲ್ಲಿ ಸಿನಿಮಾ ಜನಪ್ರಿಯವಾಗಿತ್ತು. ಒಂದು ವೇಳೆ ನೀವು ಆ ಸಿನಿಮಾ ನೋಡಿಲ್ಲವೆಂದಾದರೆ..ಯೂಟ್ಯೂಬ್ ನಲ್ಲಿ ಮರೆಯದೆ ವೀಕ್ಷಿಸಿ!
ಈ ಸಿನಿಮಾದಲ್ಲಿ ಪುಟ್ಟ ಮಗುವೊಂದು ಮೂವರು ಕಳ್ಳರಿಂದ ಅಪಹರಣಕ್ಕೀಡಾಗುತ್ತೆ. ಬಳಿಕ ಆ ಮಗು ಕಳ್ಳರನ್ನು ಹೇಗೆಲ್ಲಾ ಸತಾಯಿಸಿ ಮತ್ತೆ ತಾಯಿಯ ಮಡಿಲನ್ನು ಸೇರುತ್ತೆ ಎಂಬುದು ಬೇಬಿಸ್ ಡೇ ಔಟ್ ಸಿನಿಮಾದ ಕಥಾ ಹಂದರ. ನಮಗೆ ಇಡೀ ಸಿನಿಮಾದಲ್ಲಿ ಆವರಿಸಿಕೊಳ್ಳುವುದು ಆ ಪುಟ್ಟ ಮಗು! ಸಿನಿಮಾ ನೋಡುತ್ತಾ, ನೋಡುತ್ತ ಮಗುವಿನ ನಟನೆ ಕಂಡು ಅಬ್ಬಾ ಅಂತ ಹುಬ್ಬೇರಿಸಲೇಬೇಕು…ಜತೆಗೆ ಎದೆ ಝಲ್ಲೆನ್ನಿಸುವ ಸನ್ನಿವೇಶಗಳು !
1994ರ ಜುಲೈ ತಿಂಗಳಿನಲ್ಲಿ ಬೇಬಿಸ್ ಡೇ ಔಟ್ ಸಿನಿಮಾ ಬಿಡುಗಡೆಯಾಗಿತ್ತು..ಅಂದ ಹಾಗೆ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳಾಗಿವೆ. ಆದರೂ ನಮಗೆ ಬೇಬಿಸ್ ಡೇ ಔಟ್ ಸಿನಿಮಾದ ಹೆಸರು ಕೇಳಿದಾಗಲೆಲ್ಲಾ ನಮ್ಮ ಕಣ್ಣ ಮುಂದೆ ಹಾದು ಹೋಗುವ ದೃಶ್ಯ ಅದೇ ಪುಟಾಣಿ ಮಗುವಿನ…ಮುದ್ದು ಮುಖ ಮತ್ತು ತುಂಟಾಟ! ಹಾಗಾದರೆ ಈಗ ಆಗ ಮಗು (ನಟ) ಹೇಗಿದೆ ಎಂಬ ಕುತೂಹಲ ಸಹಜವೇ..ಆದರೆ ಆ ಯುವಕ ಈಗ ಎಲ್ಲಿ, ಏನು ಮಾಡುತ್ತಿದ್ದಾರೆ ಎಂಬುದೇ ಸದ್ಯದ ಪ್ರಶ್ನೆ!
ನಿಜಕ್ಕೂ ಬೇಬಿಸ್ ಡೇ ಔಟ್ ನಲ್ಲಿ ನಟಿಸಿದ್ದು ಒಂದೇ ಮಗುವಲ್ಲ…ಅವಳಿ ಮಕ್ಕಳು!
ಬೇಬಿಸ್ ಡೇ ಔಟ್ ಸಿನಿಮಾದ ಬೇಬಿ ಬಿಂಕ್ ಪಾತ್ರದಲ್ಲಿ ನಟಿಸಿದ್ದು ಕೇವಲ ಒಂದೇ ಮಗುವಲ್ಲ, ಅವರಿಬ್ಬರೂ ಅವಳಿ ಜವಳಿ! ಹೌದು ಆ ಸಿನಿಮಾದ ಸ್ಟಾರ್ ಬೇಬಿಸ್ ಗಳ ಹೆಸರು ಆಡಂ ರೋಬರ್ಟ್ ವಾರ್ಟೊನ್ ಮತ್ತು ಜಾಕೋಬ್ ಜೋಸೆಫ್ ವಾರ್ಟೊನ್. ಆ ಸಿನಿಮಾದಲ್ಲಿ ನಟಿಸುವ ವೇಳೆ ಇಬ್ಬರಿಗೂ 2 ವರ್ಷ ಆಗಿತ್ತು. 1992 ನವೆಂಬರ್ 16ರಂದು ಅಮೆರಿಕದಲ್ಲಿ ಈ ಅವಳಿ ಜವಳಿ ಜನಿಸಿದ್ದರು.
ಬೇಬಿಸ್ ಡೇ ಔಟ್ ಸಿನಿಮಾದಲ್ಲಿ ಮಗುವಿನ ನಟನೆಗಾಗಿ ಪೋಷಕರು ಇಷ್ಟೇ ಸಮಯ ನಟಿಸಬೇಕು ಎಂದು ಷರತ್ತು ಹಾಕಿದ್ದರಂತೆ. ಅದಕ್ಕಾಗಿ ಮಗುವಿಗೆ ಹೆಚ್ಚು ಶ್ರಮ, ಆಯಾಸವಾಗಬಾರದು ಎಂಬ ನಿಟ್ಟಿನಲ್ಲಿ ಅವಳಿ, ಜವಳಿಯನ್ನು ಬಳಸಿಕೊಂಡು ಸಿನಿಮಾ ನಿರ್ಮಿಸಲಾಗಿತ್ತಂತೆ. ಆದರೆ ಸಿನಿಮಾ ವೀಕ್ಷಿಸುವಾಗ ಪ್ರೇಕ್ಷಕರಿಗೆ ಅವಳಿ, ಜವಳಿ ಎಂಬ ಸಣ್ಣ ಕುರುಹೂ ಕೂಡಾ ಸಿಗಲ್ಲ!
ಬೇಬಿಸ್ ಡೇ ಔಟ್ ಫಸ್ಟ್ ಅಂಡ್ ಲಾಸ್ಟ್ ಸಿನಿಮಾ!
ದುರದೃಷ್ಟವಶಾತ್ ಬೇಬಿಸ್ ಡೇ ಔಟ್ ಸಿನಿಮಾದಲ್ಲಿ ಸ್ಟಾರ್ ಆಗಿ ಮಿಂಚಿದ್ದ ಈ ನಟರು ಮತ್ತೆ ಹಾಲಿವುಡ್ ನ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇಬ್ಬರೂ ಬೇರೆ, ಬೇರೆ ಹಾದಿಯಲ್ಲಿ ಸಾಗುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದಾರಂತೆ. ಅದರಲ್ಲಿ ಜಾಕೋಬ್ ಜೋಸೆಫ್ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಇದೆ. ಆಡಂ ಬಗ್ಗೆ ಮಾಹಿತಿಯೇ ಇಲ್ಲ!
ಚಿಕ್ಕ ವಯಸ್ಸಿನಲ್ಲಿ ಸ್ಟಾರ್ ಆದ ಮಕ್ಕಳು ಮುಂದೆ ಬೆಳೆದಂತೆ ಅವರಲ್ಲಿದ್ದ ಪ್ರತಿಭೆ ಕಳೆದುಹೋಗುತ್ತೆ ಎಂಬುದಕ್ಕೆ ಬೇಬಿಸ್ ಡೇ ಔಟ್ ನ ಪುಟಾಣಿ ಹೀರೋಗಳೇ ಸಾಕ್ಷಿ. (ಕನ್ನಡ ಚಿತ್ರರಂಗದಲ್ಲಿ ಅರಳು ಹುರಿದಂತೆ ಮಾತನಾಡಿ, ಅದ್ಭುತವಾಗಿ ನಟಿಸುತ್ತಿದ್ದ ಬಾಲ ನಟ ಮಾಸ್ಟರ್ ಮಂಜುನಾಥ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಿ).
ಜಾಕೋಬ್ ಜೋಸೆಫ್ ವಾರ್ಟೊನ್ 2015ರಲ್ಲಿ ಡೆಲಾವೇರ್ ಲೆರ್ನೆರ್ ಯೂನಿರ್ವಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ ಹೋಟೆಲ್, ರೆಸ್ಟೋರೆಂಟ್ ಮತ್ತು ಇನ್ಸ್ ಟಿಟ್ಯೂಷನಲ್ ಮ್ಯಾನೇಜ್ ಮೆಂಟ್ ಪದವಿ ಕೂಡಾ ಗಳಿಸಿದ್ದಾರೆ. ಜಾಕೋಬ್ ಜಗತ್ತಿನ ಪುರಾತನ ಮತ್ತು ಸ್ನೇಹ ಸೌಹಾರ್ದ ಸಂಗೀತ ಸೊಸೈಟಿಯ ಸದಸ್ಯರಾಗಿದ್ದಾರೆ.
2014ರಲ್ಲಿ ಅರೆಕಾಲಿಕ ಸೇಲ್ಸ್ ಅಸೋಸಿಯೇಷನ್ ನಲ್ಲಿ ಜಾಕೋಬ್ ಕೆಲಸ ಮಾಡುತ್ತಿದ್ದರು. 2015ರಲ್ಲಿ ಬಿಂಗ್ಸ್ ಬೇಕರಿಯಲ್ಲಿ ಉದ್ಯೋಗ. 2017ರಲ್ಲಿ ಮೂರು ತಿಂಗಳ ಕಾಲ ಜೋಸೆಫ್ ಪೆನ್ಸಿಲ್ವೇನಿಯಾದಲ್ಲಿನ ಮದ್ಯ ತಯಾರಿಸುವ ಕಂಪನಿಯೊಂದರಲ್ಲಿ ಕುಕ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಸದ್ಯ ಜೋಸೆಫ್ ಈಗ ಸಬ್ ಅರ್ಬನ್ ರೆಸ್ಟೋರೆಂಟ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಅವೆಲ್ಲ ಕಹಾನಿಯ ನಡುವೆ ಜೋಸೆಫ್ ಗೆ ಮದುವೆಯಾಗಿದೆಯಾ? ಎಂಬ ಬಗ್ಗೆಯೂ ವಿವರಗಳಿಲ್ಲ. ಅವರ ವೈಯಕ್ತಿಕ ಜೀವನದ ಮಾಹಿತಿ ಲಭ್ಯವಿಲ್ಲ.
ಜಾಕೋಬ್ ಜೋಸೆಫ್ ಬಗ್ಗೆ ಇರುವ ಮಾಹಿತಿ ಇದಾಗಿದ್ದರೆ, ಅಣ್ಣ ಆ್ಯಡಂ ರೋಬರ್ಟ್ ವಾರ್ಟೊನ್ ಒಂಟಾರಿಯೊದಲ್ಲಿ ನೌಕರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ಇದೆ. ಇನ್ನುಳಿದಂತೆ ಎಲ್ಲಾ ವಿವರಗಳೂ ನಿಗೂಢ!
*ನಾಗೇಂದ್ರ ತ್ರಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.