ಟಿಕ್‌ ಟಾಕ್ ನಲ್ಲಿ ಸುಂದರ ಯುವಕ,ಯುವತಿಯರಿಗೆ ಬರವಿಲ್ಲ..ಆದ್ರೆ ಬಳಸುವ ಮುನ್ನ ಎಚ್ಚರ!


Team Udayavani, Aug 20, 2019, 7:32 PM IST

titok

ಟಿಕ್ ಟಾಕ್ ತನ್ನ ಹಲವು ಅವಾಂತರಗಳಿಂದ ಪ್ರತಿನಿತ್ಯ ಸದ್ದು ಮಾಡುತ್ತಲೆ ಇರುತ್ತದೆ. ಈಗ ಅದಕ್ಕೆ ಪೂರಕ ಎಂಬಂತೆ ಹೊಸ ಸುದ್ದಿಯೊಂದು ಹೊರಬಂದಿದ್ದು ಟಿಕ್‌ ಟಾಕ್‌ ನಿಂದ ನಿಮ್ಮ ಖಾಸಗಿ ಡೇಟಾಗಳು ಕೂಡ ಸೋರಿಕೆಯಾಗಬಹುದು.

ಚೀನಾದ ಬೈಟೆಡ್ಯಾನ್ಸ್ ಒಡೆತನದ ಈ ಆ್ಯಪ್ ಭಾರತದಲ್ಲೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. 2018ರಲ್ಲಿ ಐಓಎಸ್ ಆ್ಯಪ್ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್‌ ಲೋಡ್ ಮಾಡಲ್ಪಟ್ಟ ಆ್ಯಪ್ ಇದು. ತನ್ನ ಆಕರ್ಷಕ ಫೀಚರ್‌ ಗಳಿಂದಲೆ ಜನರನ್ನು ಸುಲಭವಾಗಿ ಮೋಸದ ಕೂಪಕ್ಕೆ ತಳ್ಳುತ್ತಿದೆ. ವರ್ಣರಂಜಿತ ಜಾಹೀರಾತಿನ ಮೂಲಕ ಜನರನ್ನು ಆಕರ್ಷಿಸಿ ಅದರ ಮೂಲಕವೇ ಬಳಕೆದಾರರನ್ನು ದೋಚುವ ವ್ಯವಸ್ಥಿತ ಜಾಲವೊಂದು ಪತ್ತೆಯಾಗಿದೆ. ಹೀಗಾಗಿ ಟಿಕ್ ಟಾಕ್ ಬಳಸುವ ಜನರು ಎಚ್ಚರ ವಹಿಸುವುದು ಸೂಕ್ತ.

ಟಿಕ್‌ ಟಾಕ್‌ ನಲ್ಲಿ ಕೆಲವು ಬಳಕೆದಾರರ ಪ್ರೊಪೈಲ್ ಗಮನಿಸಿದರೆ ಅಲ್ಲಿ ಅರೆಬೆತ್ತಲೆ ಮತ್ತು ನಗ್ನತೆ ದೃಶ್ಯಗಳನ್ನು ಹೊಂದಿರುವ ಅನೇಕ ಖಾತೆಗಳು ಕಾಣಸಿಗುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಅಶ್ಲೀಲ ವೆಬ್‌ ಸೈಟ್‌ ಗೆ ಕರೆದೊಯ್ಯುತ್ತದೆ. ಅದರ ಜೊತೆಗೆ ಡೇಟಿಂಗ್ ಸೈಟ್‌ ಗಳಿಗೂ ಪ್ರವೇಶ ನೀಡುತ್ತದೆ. ಅಲ್ಲಿ ಆಫರ್ ಹೆಸರಿನಲ್ಲಿ ಸೈನ್‌ ಅಪ್ ಮಾಡಿಸಿಕೊಂಡು ಪ್ಯಾಕೇಜ್ ರೂಪದಲ್ಲಿ ಬಳಕೆದಾರರಿಂದ ಹಣವನ್ನು ಪೀಕಲಾಗುತ್ತಿದೆ,

ಟಿಕ್‌ ಟಾಕ್‌ ನಲ್ಲಿ ಹಲವಾರು ನಕಲಿ ಖಾತೆಗಳಿದ್ದು ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ ಚಾಟ್‌ ನಿಂದ ಕದ್ದಿರುವ ಪೋಟೋ ಬಳಸಿ, ಹೊಸ ಖಾತೆ ತೆರೆದು ಅದರ ಮೂಲಕ ಬಳಕೆದಾರರನ್ನು ಸೆಳೆಯಲಾಗುತ್ತದೆ. ಟಿಕ್‌ ಟಾಕ್‌ ನಲ್ಲಿ ಸುಂದರ ಯುವಕ-ಯುವತಿಯರಿಗೇನೂ ಬರವಿಲ್ಲ. ಅವರ ಚಿತ್ರಗಳಿಗೆ ಅಥವಾ ವಿಡಿಯೋಗಳಿಗೆ ಸಾವಿರಾರು ಮಂದಿ ಲೈಕ್ ಒತ್ತಿರುತ್ತಾರೆ. ಅದರಲ್ಲಿ ಅತ್ಯಾಕರ್ಷರಾಗಿ ಕಾಣುವ ಯುವತಿಯರ ಪ್ರೊಪೈಲ್‌ ಗೆ ಭೇಟಿ ನೀಡಿದರೆ ಅದು ಬಳಕೆದಾರರನ್ನು ಬೇರೆಯದೆ ಆದ ಅಶ್ಲೀಲ ವಿಡಿಯೋ ಸೈಟ್‌ ಗಳಿಗೆ ಕರೆದೊಯ್ಯುತ್ತದೆ. ಅಲ್ಲಿ ಬಳಕೆದಾರರು ಜಾಹೀರಾತು ಮತ್ತು ವೆಬ್‌ ಸೈಟ್‌ ನಲ್ಲಿರುವ ಪೋಟೋ, ವಿಡಿಯೋ ನೋಡಬೇಕಾದರೆ ಅದಕ್ಕೆ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಸದಸ್ಯತ್ವ ಶುಲ್ಕ ಎಂಬ ಹೆಸರಿನಲ್ಲಿ ನೋಂದಣಿ ಎಂದೆಲ್ಲ ಬಳಕೆದಾರರು ಕನಿಷ್ಠ 70 ರೂ. ಆದರೂ ಪಾವತಿಸಬೇಕಾಗಿದೆ.

ಆ ವೆಬ್‌ ಸೈಟ್‌ ಗೆ ಆಕರ್ಷಿತರಾಗಿ ಶುಲ್ಕ ಪಾವತಿಸುವ ಬಳಕೆದಾರರನ್ನು ಸುಲಭದಲ್ಲಿ ದೋಚಲಾಗುತ್ತದೆ. ಗ್ರಾಹಕರ ಮಾಹಿತಿ ಸೋರಿಕೆಯಾಗುವುದು ಮಾತ್ರವಲ್ಲದೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯೂ ಸುಲಭದಲ್ಲಿ ಹ್ಯಾಕರ್‌ ಗಳ ಪಾಲಾಗುತ್ತದೆ.

ಟಿಕ್‌ ಟಾಕ್ ಮೂಲಕ ಸ್ನೇಹಿತರನ್ನು ಸಂಪಾದಿಸುವ ಮುನ್ನ ಎಚ್ಚರಿಕೆ ವಹಿಸಿ. ಕೆಲವರು ತಮ್ಮ ಚಾಕಚಕ್ಯತೆಯನ್ನು ಬಳಸಿ ಸುಲಭದಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಅದಕ್ಕಾಗಿ ಅಪರಿಚಿತರೊಡನೆ ಸ್ನೇಹ ಸಂಪಾದಿಸುವುದು, ಖಾಸಗಿ ವಿವರ ಹಂಚಿಕೊಳ್ಳುವುದು ಇವೆಲ್ಲಾ ಅಪಾಯಕ್ಕೀಡು ಮಾಡಬಹುದು.

ಕೆಲವೊಮ್ಮೆ ಟಿಕ್‌ ಟಾಕ್ ಮಾಡಿದ ವಿಡಿಯೋಗಳನ್ನು ಟ್ರೋಲ್ ಕೂಡ ಮಾಡುತ್ತಾರೆ. ತುಂಬಾ ಲೈಕ್ಸ್ ಬಂದ ವಿಡಿಯೋಗಳಿಗೆ ಅಶ್ಲೀಲ ಆಡಿಯೋ ಸೇರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ವ್ಯವಸ್ಥಿತ ಜಾಲವು ಕೂಡ ಪತ್ತೆಯಾಗಿದೆ. ಇತ್ತೀಚೆಗೆ ತಮಿಳು ಸಂಸ್ಕೃತಿಯನ್ನು ಕೀಳಾಗಿ ಕಾಣುವುದರ ಜೊತೆಗೆ ಪೋರ್ನೊಗ್ರಫಿಯನ್ನು ಉತ್ತೇಜಿಸುತ್ತಿದೆ ಎಂಬ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಈ ಆ್ಯಪನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಈ ಆ್ಯಪ್ ಅನ್ನು ನಿಷೇಧ ಮಾಡಬೇಕೆಂಬ ಪ್ರಸ್ತಾಪವೂ ಚಾಲ್ತಿಯಲ್ಲಿತ್ತು. ನಂತರದಲ್ಲಿ ಟಿಕ್‌ ಟಾಕ್ ತನ್ನ ಫೀಚರ್‌ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ ನಂತರ ಬಳಕೆದಾರರಿಗೆ ಆ್ಯಪ್ ಸ್ಟೋರ್‌ ಗಳಲ್ಲಿ ಸುಲಭವಾಗಿ ದೊರಕುತ್ತಿದೆ.

ಈ ಅಪ್ಲಿಕೇಶನ್‌ ನ ವ್ಯಾಮೋಹಕ್ಕೆ ಸಿಲುಕಿ ಹಲವು ಯುವಕ-ಯುವತಿಯರು ತಮ್ಮ ಪ್ರಾಣಕ್ಕೂ ಕುತ್ತು ತಂದುಕೊಂಡಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳಬೇಕು, ತಾನು ಕೂಡ ಸೆಲೆಬ್ರಿಟಿಯಾಗಬೇಕು, ರಾತ್ರಿ – ಬೆಳಗಾಗುವುದರೊಳಗೆ ಫೇಮಸ್ ಆಗಿಬಿಡುತ್ತೇವೆ ಎಂಬ ಮನೋಭಾವನೆ ಹಲವರನ್ನು ವಿಷಕೂಪಕ್ಕೆ ತಳ್ಳುತ್ತಿದೆ. ಅತೀಯಾದ ಬಳಕೆಯೇ ಹ್ಯಾಕರ್‌ ಗಳ  ಪಾಲಿಗೆ ಪಂಚಾಮೃತವಾಗುತ್ತಿದೆ. ಆದ್ದರಿಂದ ಟಿಕ್‌ ಟಾಕ್‌ ನಲ್ಲಿ ಖಾಸಗಿ ಮಾಹಿತಿಗಳನ್ನು ಅಪ್ಲೋಡ್ ಮಾಡುವುರ ಮೊದಲು ಸ್ವಲ್ಪ ಯೋಚಿಸಿ.

– ಮಿಥುನ್ ಮೊಗೇರ  

ಟಾಪ್ ನ್ಯೂಸ್

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.