ಬಿಸಿಲ ಬೇಗೆ…ಇವು ಆರೋಗ್ಯ ರಕ್ಷಣೆಗೆ ಉತ್ತಮವಾದ ಹಣ್ಣುಗಳು
Team Udayavani, Apr 15, 2018, 4:00 AM IST
ಬಿಸಿಲ ಧಗೆಯಂತೂ ದಿನ ದಿನೇ ಹೆಚ್ಚುತ್ತಲೇ ಇದೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಕುರಿತು ಎಷ್ಟೇ ಕಾಳಜಿ ತೆಗೆದುಕೊಂಡರು ಕಡಿಮೆಯೇ. ಒಮ್ಮೆ ಮಳೆ ಬಂದು ಭೂಮಿ ತಂಪಾದರೆ ಸಾಕಪ್ಪಾ ಎನ್ನುವಂತಾಗಿದೆ.
ಬೇಸಿಗೆಯ ಧಗೆ ವಿಪರೀತವಾದಾಗ ಆರೋಗ್ಯಕ್ಕೂ ಅಪಾಯ ಸಹಜ. ಬಿಸಿ ಗಾಳಿ ಸೇರಿದಂತೆ ಅನೇಕ ರೀತಿಯ ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹಾಗಾಗಿ ಬೇಸಿಗೆ ಮುಗಿಯುವವರೆಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸೋದು ಮುಖ್ಯ.
ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಯಲು ಹಣ್ಣಿನ ರಸವನ್ನುಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಅತ್ಯಗತ್ಯವಾಗಿದೆ. ಆದಷ್ಟೂ ನೈಸರ್ಗಿಕವಾಗಿ ದೊರೆಯುವ ಪಾನೀಯಗಳ ಸೇವನೆಯಿಂದ ಆರೋಗ್ಯವನ್ನು ಮತ್ತಷ್ಟು ಉತ್ತಮವಾಗಿರಿಸಬಹುದು. ದಿನಕ್ಕೆ 3ರಿಂದ 4ಲೀ ನೀರನ್ನು ಕುಡಿಯುವುದರಿಂದ ಬಿಸಿಲ ದಾಹವನ್ನು ಕಡಿಮೆ ಮಾಡಿಕೊಳ್ಳಬಹುದು.
ದೇಹವನ್ನು ತಂಪಾಗಿಡಲು ಹಣ್ಣು, ತರಕಾರಿ, ಸೊಪ್ಪು ಸೇವನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಇವುಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದಾಹವನ್ನು ಕಡಿಮೆ ಮಾಡಿ ದೇಹದ ಉಷ್ಣವನ್ನು ಕಾಪಾಡುತ್ತದೆ. ಕಲ್ಲಂಗಡಿ, ನಿಂಬೆ, ಮುಸಂಬಿ, ಮುರುಗಲು(ಪುನರ್ಪುಳಿ) ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳಿಗೆ ಆದ್ಯತೆ ನೀಡಬೇಕು.
ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಮಾಡಬಹುದಾದ ಹಣ್ಣುಗಳು:
ಎಳನೀರು: ಸುಡುವ ಬಿಸಿಲಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಉಷ್ಣತೆ ಏರುತ್ತದೆ ಇಂತಹ ಸಂದರ್ಭದಲ್ಲಿ ಎಳನೀರು ಬಹಳ ಉಪಯೋಗಿ.
ಹಲಸಿನ ಹಣ್ಣು: ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಕಲ್ಲಂಗಡಿ ಹಣ್ಣು: ಈ ಹಣ್ಣಿನಲ್ಲಿ 92%ದಷ್ಟು ನೀರಿನಂಶ ತುಂಬಿದೆ. ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ.
ಪಪ್ಪಾಯಿ ಹಣ್ಣು: ಇದರ ಸೇವನೆಯಿಂದ ದೇಹವನ್ನು ತಂಪಾಗಿಟ್ಟು, ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.
ಕರಬೂಜ ಹಣ್ಣು: ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ನೀರಿನಂಶ ಧಾರಾಳವಾಗಿರುವ , ದೇಹವನ್ನು ಸದಾ ತಂಪಾಗಿ ಇಡುವ ಕರಬೂಜ ಹಣ್ಣಿನ ಜ್ಯೂಸ್ ಬಾಯಾರಿಕೆ ನೀಗಿಸುವುದಷ್ಟೇ ಅಲ್ಲದೇ ಹೊಟ್ಟೆ ಉರಿಗೂ ರಾಮಾಬಾಣವಾಗಿದೆ.
ಅನಾನಸು ಹಣ್ಣು: ಇದರಲ್ಲಿ ವಿಟಮಿನ್ “ಎ” ಮತ್ತು ಬೆಟಾ ಕ್ಯಾರೋಟಿನ್ ಅಂಶಗಳಿವೆ. ಅನಾನಸು ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು. ಇದರಲ್ಲಿರುವ ನಾರಿನಾಂಶದಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವುದು.
ಮಾವಿನಹಣ್ಣು: ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ಕಬ್ಬಿಣದಂಶ ಹಾಗೂ ಸೆಲೆನಿಯಮ್ ಅಧಿಕ ಪ್ರಮಾಣದಲ್ಲಿದೆ. ಈ ಹಣ್ಣಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ನಿಂಬೆ ಹುಣ್ಣು: ಬಾಯಾರಿಕೆಯಾದಾಗ ನಿಂಬು ಪಾನೀಯ ಮಾಡಿ ಕುಡಿದರೆ ಬಾಯಾರಿಕೆ ಕಡಿಮೆಯಾಗುವುದು ಹಾಗೂ ದೇಹವನ್ನು ತಂಪಾಗಿಡುತ್ತದೆ.
ನೆಲ್ಲಿಕಾಯಿ: ಇದರಲ್ಲಿ ವಿಟಮಿನ್ ಸಿ, ಕಬ್ಬಿಣದಂಶ ಹಾಗೂ ರಂಜಕದಂಶ ಅಧಿಕವಾಗಿದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಾಂಶ ಕರಗುತ್ತದೆ.
ಇಷ್ಟೇ ಅಲ್ಲದೇ ಕೀವಿ ಹಣ್ಣು, ಅಂಜೂರ, ದ್ರಾಕ್ಷಿ, ಬಾಳೆಹಣ್ಣು, ನೇರಳೆ ಹಣ್ಣು ವಿವಿಧ ಹಣ್ಣು ಹಾಗೂ ಅದರ ಪಾನೀಯ ಸೇವನೆಯಿಂದ ಬೇಸಿಗೆಯಲ್ಲಿ ಆರೋಗ್ಯದ ಮೇಲಾಗಬಹುದಾದ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.