ಭೂಸ್ವರ್ಗದ ರಮಣೀಯ ತಾಣಗಳು


Team Udayavani, Sep 22, 2019, 9:18 PM IST

web

ಭಾರತದಲ್ಲಿ ಸೌಂದರ್ಯಕ್ಕೇನೂ ಕೊರತೆ ಇಲ್ಲ. ವಾಯು ಮಾರ್ಗ, ಜಲ ಮಾರ್ಗ ಮತ್ತು ಭೂ ಮಾರ್ಗಗಳಲ್ಲಿ ಪ್ರಯಾಣಿಸುವಾಗ ನಯನ ಮನೋಹರವಾದ ಸಸ್ಯ ಸಂಪತ್ತು, ಜಲ ಸಂಪತ್ತುಗಳ ದರ್ಶನವಾಗುತ್ತದೆ. ಪಶ್ವಿ‌ಮ ಘಟ್ಟಗಳ ಸಾಲುಗಳ ಮಧ್ಯೆ ಇರುವ ಹಲವು ಪ್ರವಾಸಿ ಕೇಂದ್ರಗಳು, ಬೆಟ್ಟಗಳನ್ನು ಸೀಳಿ ಒಳಹೊಕ್ಕ ರಸ್ತೆಗಳು, ರೈಲು ಮಾರ್ಗಗಳು, ವಾಯು ಮಾರ್ಗದ ಮೂಲ ದಕ್ಷಿಣ ಭಾರತದಲ್ಲಿ ಪ್ರಯಾಣಿಸುವಾಗ ಭೂಮಿಗೆ ಹಸಿರ ಲೇಪನವನ್ನು ಹಚ್ಚಿದ್ದಂತೆ ತೋರುವ ಸಸ್ಯಗಳು ಪ್ರವಾಸ/ಪ್ರಯಾಣದ ಅನುಭವವನ್ನು ಮತ್ತಷ್ಟು ಹಸಿರಾಗಿಸುತ್ತದೆ.

ಬ್ರಿಟಿಷರ ಕೊಡುಗೇ ಎಂದೇ ಕರೆಯಲಾಗುತ್ತಿರುವ ರೈಲು ಸೇವೆಗಳು ಇಂದು ಇಡೀ ದೇಶವನ್ನು ಒಗ್ಗೂಡಿಸಿದೆ. ಉತ್ತರದ ಮನಾಲಿಯಿಂದ ದಕ್ಷಿಣ ಕನ್ಯಾಕುಮಾರಿವರೆಗೆ, ಪಶ್ಚಿಮದಲ್ಲಿನ ಗುಜರಾತ್‌ನ ಕಚ್‌ನಿಂದ ಪೂರ್ವದ ಕಲ್ಕತ್ತಾದ ವರೆಗೆ ರೈಲು ಸಂಪರ್ಕಗಳ ಕೊಂಡಿಯನ್ನು ನಾವು ನೋಡಬಹುದಾಗಿದೆ. ಹಲವು ರೈಲು ವಲಯಗಳನ್ನು ಸಂಧಿಸಿಕೊಂಡು ದಕ್ಷಿಣ ಭಾರತದಿಂದ ತೆರಳುವ ಉತ್ತರಕ್ಕೆ ತೆರಳುವ ಹಿಮಸಾಗರ್‌, ವಿವೇಕ್‌ ಎಕ್ಸ್‌ಪ್ರೆಸ್‌ ರೈಲು ಹಲವು ರಮಣೀಯ ದೃಶ್ಯಗಳ ನಡುವೆ ಪ್ರಯಾಣವನ್ನು ಮುಂದುವರೆಸುತ್ತದೆ. ಇಲ್ಲಿ ಸುಮದುರವಾಗಿರುವ, ಸದಾ ನೆನಪಿನಂಗಳದಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ/ ಉಳಿದುಕೊಳ್ಳಬಹುದಾದ ಒಂದಷ್ಟು ರೈಲು ಪ್ರಯಾಣಗಳನ್ನು ಇಲ್ಲಿ ನೀಡಲಾಗಿದೆ. ಅವಕಾಶ ದೊರೆತರೆ, ಅಥವಾ ಈ ಪ್ರದೇಶಗಳ ಆಸುಪಾಸಿನಲ್ಲಿ ನೀವು ಓಡಾಡುವ ಅವಕಾಶ ಲಭಿಸಿದರೆ ಈ ರೈಲು ಪ್ರಯಾಣದ ಅನುಭವನ್ನು ಪಡೆಯಲು ಮರೆಯದಿರಿ.

  1. ಹಿಮಾಲಯನ್‌ ಕ್ವೀನ್‌

ಇದು ಕಲ್ಕತ್ತಾ ಮತ್ತು ಶಿಮ್ಲಾ ಸಂಪರ್ಕಿಸುವ ರೈಲು ಸೇವೆಯಾಗಿದೆ. ಇದರ ಒಂದು ಹೆಚ್ಚುಗಾರಿಕೆ ಎಂದರೆ ಇದನ್ನು ‘ಟಾಯ್‌ ಟ್ರೈನ್‌’ ಎಂದೂ ಕರೆಯಲಾಗುತ್ತದೆ. ಇದರಲ್ಲಿನ ಪ್ರಯಾಣ ಒಂಥರ ಖುಷಿಯನ್ನು ಕೊಡುತ್ತದೆ. 1903ರಲ್ಲಿ ಪ್ರಾರಂಭವಾದ ಈ ರೈಲು ಇಂದೂ ಸೇವೆಯಲ್ಲಿದೆ. ಒಟ್ಟು 96 ಕಿ.ಮೀ. ಸಂಚರಿಸುವ ಈ ರೈಲು 102 ಸುರಂಗ ಮಾರ್ಗ, 82 ಸೇತುವೆಗಳನ್ನು ದಾಟಿ ಹೋಗುತ್ತದೆ. ಈ ರೈಲು ಸೇವೆ ಗಿನ್ನೀಸ್‌ ದಾಖಲೆಗಳ ಪುಟ ಸೇರಿದ್ದು, ಅತ್ಯಂತ ಇಳಿಜಾರಿನಿಂದ ಇದು ಕೂಡಿದ್ದು, 96 ಕಿ.ಮೀ. ಪ್ರಯಾಣಿಸಲು 5 ತಾಸುಗಳು ಅವಶ್ಯಕತೆ ಇದೆ.

  1. ಡಾರ್ಜೆಲಿಂಗ್‌ ಹಿಮಾಲಯನ್‌ ರೈಲ್ವೇ

ಇದು ಜಲ್‌ಪೈಗುರಿ ಮತ್ತು ಡಾರ್ಜಿಲಿಂಗ್‌ ನಡುವೆ ಪ್ರಯಾಣಿಸುವ ರೈಲು. ಇದು ಹಿಮಾಲಯಗಳ ತಪ್ಪಲಿನಲ್ಲಿ ಪ್ರಯಾಣಿಸುತ್ತಿದ್ದು, ಕೆಲವು ಶಿಖರಗಳು, ಚಹಾ ತೋಟಗಳನ್ನು ಈ ಪ್ರಯಾಣದಲ್ಲಿ ನಾವು ನೋಡಬಹುದಾಗಿದೆ. ಇದು ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

  1. ವಾಸ್ಕೋ ಡ ಗಾಮಾ ಟು ಲೋಂಡಾ

ಇದು ದೂದ್‌ ಸಾಗರ್‌ ಫಾಲ್ಸ್‌ ಮೂಲಕ ಪ್ರಯಾಣಿಸುವ ರೈಲಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಸಿರ ನಡುವೆ ಈ ರೈಲು ತೆರಳುತ್ತದೆ. ಮುಂಗಾರು ಬಳಿಕ ಈ ಮಾರ್ಗದಲ್ಲಿ ಪ್ರಯಾಣಿಸಿದರೆ ಹಿತವಾಗಿರುತ್ತದೆ.

  1. ಮುಂಬೈ ಟು ಗೋವಾ

ಮುಂಬೈ ಮತ್ತು ಗೋವಾ ಅತ್ಯಂತ ಹೆಚ್ಚಾಗಿ ನಾವು ಕೇಳಲ್ಪಡುವ ಪದವಾಗಿದೆ. ಈ ಎರಡು ಅಕ್ಕ ಪಕ್ಕದ ರಾಜ್ಯಗಳನ್ನು ಬೆಸೆಯುವ ರೈಲು ಪ್ರಯಾಣ ಸಹ್ಯಾದ್ರಿ ಬೆಟ್ಟಗಳು ಮತ್ತು ಅರಬ್ಬಿ ಸಮುದ್ರಗಳ ಬದಿಯಲ್ಲೆ ಸಾಗುತ್ತದೆ. ಒಟ್ಟು 92 ಸುರಂಗ ಮಾರ್ಗಗಳು ಮತ್ತು 2000 ಸೇತುವೆಗಳನ್ನು ದಾಟಿ ಪ್ರಯಾಣಿಸುತ್ತದೆ. ನದಿಗಳು, ಭತ್ತದ ಗದ್ದೆಗಳು, ತೆಂಗಿನ ತೋಟಗಳು ಕಾಣಸಿಗುತ್ತದೆ.

  1. ಕನ್ಯಾಕುಮಾರಿ ಟು ತಿರುವನಂತಪುರಂ

ಇದು ಪುಟ್ಟ ರೈಲು ಸೇವೆಯಾಗಿದೆ.ವಿಸ್ತಾರವಾದ ತೆಂಗಿನ ತೋಟಗಳ ನಡುವೆ ಸಾಗುತ್ತಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಕೆಲವು ಪ್ರದೇಶಗಳು ಕಾಣಸಿಗುತ್ತದೆ. ಇದು ದಕ್ಷಿಣ ಭಾರತದ ಅತ್ಯಂತ ರಮಣೀಯ ಬಯಲು ಪ್ರದೇಶಗಳ ಮೂಲಕ ಹಾದು ಹೋಗುತ್ತದೆ.

  1. ಮಾಥೆರನ್‌ ಹಿಲ್‌ ರೈಲು

ಇದು ರಾಜ್ಯದ ಏಕೈಕ ಪಾರಂಪರಿಕವಾಗಿರುವ ರೈಲು ಸೇವೆಯಾಗಿದೆ. ಕೇವಲ 20 ಕಿ.ಮೀ. ಪ್ರಯಾಣಿಸುವ ಈ ರೈಲು ಗುಡ್ಡಗಳ ಮೆಲೆ ಸಾಗುತ್ತದೆ. ಕಾಡುಗಳು ಇಲ್ಲದ ಬೆಟ್ಟಗಳ ನಡುವಿನ ಪ್ರಯಾಣ ಇದಾಗಿದೆ.

  1. ಮಂಡಾಪಂ-ಪಂಬನ್‌-ರಾಮೇಶ್ವರಂ

ಇದು ರೋಮಾಂಚನಗೊಳಿಸುವ ಮತ್ತು ಅತೀ ಅಪಾಯದ ರೈಲು ಹಾದಿಯಾಗಿದೆ. ಈ ರೈಲು ಸೇತುವೆ 2ನೇ ಅತೀ ದೊಡ್ಡ ರೈಲು ಮಾರ್ಗವಾಗಿದೆ. ಇದು ತಮಿಳುನಾಡಿನ ರಾಮೇಶ್ವರಂ ಮತ್ತು ಮಂಡಾಪಂ ಅನ್ನು ಸಂಪರ್ಕಿಸುತ್ತದೆ.

  1. ಚಿಲ್ಕಾ ರೂಟ್‌

ಇದು ಬುಬನೇಶ್ವರ್‌ ಮತ್ತು ಬ್ರಹ್ಮಾಪುರವನ್ನು ಸಂಪರ್ಕಿಸುವ ರೈಲು ಸೇವೆಯಾಗಿದೆ. ಚಿಲ್ಕ ಲೇಕ್‌ನ ಮೂಲಕ ಇದು ಹಾದು ಹೋಗುತ್ತದೆ. ಈ ಚಿಲ್ಕ ನದಿ ವಲಸೆ ಹಕ್ಕಿಗಳಿಗೆ ಹೆಸರಾಂತ ತಾಣವಾಗಿದೆ. ಇದು ನೂರಾರು ಜಾತಿಯ ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ.

– ಕಾರ್ತಿಕ್ ಅಮೈ

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.