ಫೈನಲ್ ನಲ್ಲಿ ಆಗಿದ್ದ ಅವಮಾನ ಫೈನಲ್ ನಲ್ಲೇ ಮೆಟ್ಟಿ ನಿಂತ ಧೀರ
ಕೀರ್ತನ್ ಶೆಟ್ಟಿ ಬೋಳ, Dec 30, 2019, 5:17 PM IST
ಆತ ಹುಟ್ಟಿದ್ದು ಒಂದು ದೇಶದಲ್ಲಿ . ಬೆಳೆದು ಸೇವೆ ಮಾಡಿದ್ದು ಮತ್ತೊಂದು ದೇಶದಲ್ಲಿ . ಅನಿವಾರ್ಯ ಪರಿಸ್ಥಿತಿಯಲ್ಲಿ ಹುಟ್ಟಿದ ದೇಶಕ್ಕೆ ಎದುರಾಗಿ ನಿಂತು ಹೋರಾಡಿ ಇಡೀ ವಿಶ್ವದ ಮನಗೆದ್ದರು. ಅವರೇ ವಿಶ್ವಕಪ್ ವೀರ,ಆಶಸ್ ನಲ್ಲಿ ಹೋರಾಡಿದ ಛಲಗಾರ, 2019ರಲ್ಲಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ ಪ್ರತಿಭಾವಂತ ಬೆನ್ ಸ್ಟೋಕ್ಸ್.
ಪೂರ್ಣ ಹೆಸರು ಬೆಂಜಮಿನ್ ಆಂಡ್ರ್ಯೂ ಸ್ಟೋಕ್ಸ್. ಜನಿಸಿದ್ದು 4 ಜೂನ್ 1991ರಂದು. ಜನ್ಮ ಸ್ಥಳ ನ್ಯೂಜಿಲೆಂಡ್ ದೇಶದ ಕ್ರೈಸ್ಟ್ ಚರ್ಚ್ . ತಂದೆ ಗೆರಾರ್ಡ್ ಸ್ಟೋಕ್ಸ್ ಓರ್ವ ರಗ್ಬಿ ಆಟಗಾರರ. ಬಾಲ್ಯವನ್ನು ಕಿವೀಸ್ ನಾಡಿನಲ್ಲಿ ಕಳೆದಿದ್ದ ಸ್ಟೋಕ್ಸ್ ಗೆ 12 ವರ್ಷವಿದ್ದಾಗ ತಂದೆ ಗೆರಾರ್ಡ್ ಇಂಗ್ಲೆಂಡ್ ನ ಕ್ಲಬ್ ಒಂದಕ್ಕೆ ಕೋಚ್ ಆಗೆ ಬರುತ್ತಾರೆ. ಹೀಗೆ ಆಂಗ್ಲರ ನೆಲಕ್ಕೆ ಕಾಲಿಟ್ಟ ಬೆನ್ ಮುಂದೆ ಇಡೀ ಇಂಗ್ಲೆಂಡ್ ಹೆಮ್ಮೆ ಪಡುವಂತಹ ಆಟಗಾರರನಾಗುತ್ತಾನೆ.
ಹೀಗೆ ಇಂಗ್ಲೆಂಡ್ ಸೇರಿದ ಬೆನ್ ಅಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. 2011ರಲ್ಲಿ ಮೊದಲ ಬಾರಿಗೆ ಬೆನ್ ಗೆ ರಾಷ್ಟ್ರೀಯ ತಂಡದ ಕರೆ ಬಂತು. ಐರ್ಲೆಂಡ್ ವಿರುದ್ಧ ಏಕದಿನ ಪದಾರ್ಪಣೆ ಮಾಡಿದ ಅವರು ಮುಂದಿನ ಎರಡು ಸರಣಿಯಲ್ಲೂ ಹೇಳಿಕೊಳ್ಳುವ ಬ್ಯಾಟಿಂಗ್ ಮಾಡಲಿಲ್ಲ. ( ಗಾಯದ ಸಮಸ್ಯೆಯಿಂದ ಬೌಲಿಂಗ್ ಮಾಡುತ್ತಿರಲಿಲ್ಲ ) 2013-14ರ ಆಶಸ್ ಸರಣಿಗೆ ಮೊದಲ ಬಾರಿ ಆಯ್ಕೆಯಾದ ಸ್ಟೋಕ್ಸ್ ಆಡಿದ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ನಂತರ ಸತತ ಉತ್ತಮ ಪ್ರದರ್ಶನ ತೋರಿದ ಸ್ಟೋಕ್ಸ್ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಿದರು. ಟೆಸ್ಟ್ ತಂಡದ ಉಪನಾಯಕನೂ ಆದರು.
ತಲೆ ತಗ್ಗಿಸುವಂತೆ ಮಾಡಿತ್ತು ಆ ಎರಡು ಘಟನೆಗಳು
ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದ ಬಿಸಿರಕ್ತದ ಯುವಕ ಸ್ಟೋಕ್ಸ್ ಮೈದಾನದ ಹೊರಗೆ ತಪ್ಪು ಮಾಡಿದ್ದ. ಸಹ ಆಟಗಾರ ಅಲೆಕ್ಸ್ ಹೇಲ್ಸ್ ಜೊತೆಗೆ ನೈಟ್ ಕ್ಲಬ್ ಗೆ ಹೋಗಿದ್ದ ಬೆನ್ ಕುಡಿದ ಮತ್ತಿನಲ್ಲಿ ಅಲ್ಲಿ ಓರ್ವನಿಗೆ ಸರಿಯಾಗಿ ಸ್ಟ್ರೋಕ್ ಕೊಟ್ಟಿದ್ದ. ಜಗಳದಲ್ಲಿ ಬೆನ್ ಕೈಗೂ ಗಾಯಗಳಾಗಿತ್ತು. ಇದರಿಂದಾಗಿ ಉಭಯ ಆಟಗಾರರು ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಯಿತು.
ಅದು 2016ರ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 155 ರನ್ ಗಳಿಸಿತ್ತು. ಉತ್ತಮ ಬೌಲಿಂಗ್ ನಿಂದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಅನ್ನು ನಿಯಂತ್ರಿಸಿತ್ತು ಮಾರ್ಗನ್ ಪಡೆ. ಆದರೆ ಕೊನೆಯ ಓವರ್ ನಲ್ಲಿ ಬೇಕಾಗಿತ್ತು 19 ರನ್. ಚೆಂಡು ಮತ್ತದೇ ಬೆನ್ ಸ್ಟೋಕ್ಸ್ ಕೈಯಲ್ಲಿ. ಕ್ರೀಸ್ ನಲ್ಲಿ ಬ್ರಾಥ್ ವೇಟ್. ಇಂಗ್ಲೆಂಡ್ ಚುಟುಕು ವಿಶ್ವಕಪ್ ಎತ್ತುವ ಕನಸು ಕಾಣುವಂತೆ ಬ್ರಾಥ್ ವೇಟ್ ಮೊದಲ ನಾಲ್ಕು ಎಸೆತಕ್ಕೆ ನಾಲ್ಕನ್ನೂ ಸಿಕ್ಸರ್ ಗೆ ಅಟ್ಟಿ ಇಂಗ್ಲೆಂಡ್ ಕೈಯಿಂದ ವಿಶ್ವಕಪ್ ಕಸಿದಿದ್ದ. ಅದು ನಿಜಕ್ಕೂ ಬೆನ್ ಕ್ರಿಕೆಟ್ ಜೀವನದ ಕರಾಳ ದಿನವಾಗಿತ್ತು.
ವಿಶ್ವ ವೀರ
ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ 2019ರ ವಿಶ್ವಕಪ್. ಟ್ರೋಫಿ ಗೆಲ್ಲುವ ಫೇವರೇಟ್ ಗಳಾಗಿದ್ದ ಮಾರ್ಗನ್ ಪಡೆಗೆ ಫೈನಲ್ ನಲ್ಲಿ ಎದುರಾಗಿದ್ದು ನ್ಯೂಜಿಲ್ಯಾಂಡ್. ಕಿವೀಸ್ ನೀಡಿದ 242 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ಸಂಪೂರ್ಣ ಕೂಟದಲ್ಲಿ ಉತ್ತಮವಾಗಿ ಆಡಿದ್ದವರೆಲ್ಲಾ ಅಂದು ಭಾರವಾದ ಹೆಜ್ಜೆಯೊಂದಿಗೆ ಪೆವಿಲಿಯನ್ ಕಡೆಗೆ ನಡೆದಿದ್ದರು. ಒಂದು ಹಂತದಲ್ಲಿ 19.3 ಓವರ್ ನಲ್ಲಿ 71 ರನ್ ಗೆ 3 ವಿಕೆಟ್ ಕಳೆದುಕೊಂಡಾಗ ಮೈದಾನಕ್ಕೆ ಆಗಮಿಸಿದ್ದು ಬೆಂಜಿಮಿನ್ ಆಂಡ್ರೂ ಸ್ಟೋಕ್ಸ್. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಧೃತಿಗೆಡದೆ ಅಂತಿಮ ಎಸೆತದವರೆಗೆ ಆಡಿದರು. ಕೊನೆಯ ಓವರದ ನಲ್ಲಿ ಬೇಕಿತ್ತು 15 ರನ್. ಕೆಲವು ಅನಪೇಕ್ಷಿತ ಘಟನೆಗಳ ಹೊರತಾಗಿಯೂ ಸ್ಟೋಕ್ಸ್ 14 ರನ್ ಗಳಿಸಿಬಿಟ್ಟರು. ಅಂದರೆ ಮ್ಯಾಚ್ ಟೈ. ನಂತರ ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ ಗಳಿಸಿದ್ದ 15 ರನ್ ನಲ್ಲಿ 8 ರನ್ ಸ್ಟೋಕ್ಸ್ ಗಳಿಸಿದ್ದರು.
ಫೈನಲ್ ಪಂದ್ಯದ ಫೈನಲ್ ಓವರ್ ನಲ್ಲಿ ನಡೆದ ಅನಪೇಕ್ಷಿತ ಘಟನೆಗೆ ( ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್ ತಾಗಿ ಬೌಂಡರಿಗೆ ಹೋಗಿತ್ತು) ಸ್ಟೋಕ್ಸ್ ಮೈದಾನದಲ್ಲಿಯೇ ಕ್ಷಮೆ ಕೇಳಿದ್ದರು. ಪಂದ್ಯದ ನಂತರವೂ ಈ ಘಟನೆಗಾಗಿ ನಾನು ಕ್ಷಮೆ ಕೇಳುತ್ತಲೇ ಇರುತ್ತೇನೆ ಎಂದಿದ್ದರು. ಅಂದು ಕಪ್ ನೊಂದಿಗೆ ವಿಶ್ವದ ಮನಸ್ಸನ್ನು ಗೆದ್ದಿದ್ದರು ಬೆನ್.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.