ಕಾಮನ್ ವೆಲ್ತ್ ಗೇಮ್ಸ್ ನ ‘ಚಿನ್ನದ ಬಾಲೆ’ ಮಣಿಕಾ ಬಾತ್ರಾ


Team Udayavani, Apr 18, 2018, 4:15 PM IST

Manika Batra 1.jpg

ಆಕೆ ಟೇಬಲ್ ಟೆನ್ನಿಸ್ ಆಟವನ್ನು ತನ್ನ ನಾಲ್ಕನೇ ವಯಸ್ಸಿನಿಂದಲೇ ಆಡಲು ಪ್ರಾರಂಭಿಸಿದ್ದಳು, ಆಕೆಗೀಗ 22ರ ಹರೆಯ, ಈ 17-18 ವರ್ಷಗಳ ಅವಧಿಯುದ್ದಕ್ಕೂ ಆಕೆ ಕನಸು ಕಂಡಿದ್ದು ಬರೀ ಟಿ.ಟಿ. ಕುರಿತಾಗಿ. ಅದರಲ್ಲಿ ತಾನು ಯಾವ ರೀತಿಯಾಗಿ ನೈಪುಣ್ಯತೆಯನ್ನು ಸಾಧಿಸಬಹುದು ಎಂಬುದರ ಕುರಿತಾಗಿ. ಆಕೆಯ ತಪಸ್ಸಿಗೆ ತಕ್ಕ ಫಲವೆಂಬುದು ಸಿಕ್ಕಿದ್ದು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಅಂಗಳದಲ್ಲಿ!

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ತಂಡದ ಓರ್ವ ಸದಸ್ಯೆಯಾಗಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಗೆ ತೆರಳುವ ಮುನ್ನ ಮಣಿಕಾ ಬಾತ್ರ ಎಂಬ 22 ವರ್ಷದ ತರುಣಿ ತನ್ನ ಖಾಸಗಿ ತರಬೇತುದಾರ ಸಂದೀಪ್ ಗುಪ್ತಾ  ಅವರಿಗೆ ಕೊಟ್ಟ ಮಾತು ಹೇಗಿತ್ತು ಗೊತ್ತೇ…? “ಪಿಚ್ಲೀ ಬಾರ್ ಮೈ ಗ್ಲಾಸ್ಗೋ ಮೇ ಕ್ವಾರ್ಟರ್ ಫೈನಲ್ ಮೆ ಹಾರ್ ಗಯೀ ಥೀ ಪರ್ ಸರ್, ಇಸ್ ಬಾರ್ ಮೈ ಆಪ್ಕೋ ಮೆಡಲ್ ಜರೂರ್ ಲೇಕೆ ದೂಂಗಿ,” (ಗ್ಲಾಸ್ಗೋದಲ್ಲಿ ಈ ಹಿಂದೆ ನಾನು (ಮಹಿಳಾ ಸಿಂಗಲ್ಸ್) ಕ್ವಾರ್ಟರ್ ಫೈನಲ್ ನಲ್ಲಿ ಸೋತು ನಿಮಗೆ ನಿರಾಸೆ ಮೂಡಿಸಿದ್ದೆ, ಆದರೆ ಈ ಸಲ ಖಂಡಿತಾ ಪದಕ ಗೆದ್ದು ಬರುತ್ತೇನೆ,”. ಹೀಗೆ ಪದಕದ ಭರವಸೆ ನೀಡಿ ಗೋಲ್ಡ್ ಕೋಸ್ಟ್ ಗೆ ಹಾರಿಬಂದಿದ್ದ ಬಾತ್ರಾ ಕ್ರೀಡಾಕೂಟದ ಅಂತ್ಯದಲ್ಲಿ ತನ್ನ ಕೊರಳಿಗೆ ಏರಿಸಿಕೊಂಡಿದ್ದು 4 ಪದಕಗಳನ್ನು! ಮತ್ತು ಈ ಸಾಧನೆಯ ನಡುವೆ ಆಕೆ ಬರೋಬ್ಬರಿ ಎರಡು ಬಾರಿ ಇತಿಹಾಸವನ್ನೂ ಸೃಷ್ಟಿಸಿಬಿಟ್ಟಿದ್ದಳು!

ಮಹಿಳೆಯರ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯಳೆಂಬ ಹೆಗ್ಗಳಿಕೆ ಈಕೆಯದಾಯಿತು. ಒಟ್ಟಿನಲ್ಲಿ ಬಾತ್ರ ತಾನು ಸ್ಪರ್ಧಿಸಿದ್ದ ಒಟ್ಟು 4 ವಿಭಾಗಗಳಲ್ಲಿ ನಾಲ್ಕರಲ್ಲಿಯೂ ಪದಕವನ್ನು ಗೆಲ್ಲುವ ಮೂಲಕ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾದರು. ಇವುಗಳಲ್ಲಿ 2 ಚಿನ್ನ 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದೆ. ಮಾತ್ರವಲ್ಲದೆ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಸಿಂಗಾಪೂರ ಆಟಗಾರ್ತಿಯರ ಪಾರಮ್ಯವನ್ನು ಮುರಿಯುವಲ್ಲಿಯೂ ಬಾತ್ರಾ ನೇತೃತ್ವದ ಮಹಿಳಾ ತಂಡದ ಚಿನ್ನದ ಸಾಧನೆ ಗಮನಾರ್ಹವೇ ಸರಿ. ಈ ಯುವತಿಯ ಇನ್ನೊಂದು ಸಾಧನೆಯೆಂದರೆ ವಿಶ್ವದ 4ನೇ ಶ್ರೇಯಾಂಕಿತ ಫೆಂಗ್ ತೈನ್ವಾಯ್ ಅವರನ್ನು ಮಹಿಳೆಯರ ಡಬಲ್ಸ್ ನಲ್ಲಿ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಮಣಿಸುವ ಮೂಲಕ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಸಾಧನೆಯನ್ನೂ ಮೆರೆದರು.

ಬಾತ್ರಾ ಅವರ ಈ ಸಾಧನೆಯ ಹಿಂದೆ ಆಕೆಯ ತರಬೇತುದಾರ ಗುಪ್ತಾ ಅವರ ಅಪಾರ ಶ್ರಮವಿದೆ. ಟಿ.ಟಿ. ಆಟವೆನ್ನುವುದು ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಬಲವನ್ನು ಬಯಸುವ ಆಟವಾಗಿದ್ದು, ಬಾತ್ರ ಗೋಲ್ಡ್ ಕೋಸ್ಟ್ ಗೆ ತೆರಳುವುದಕ್ಕೂ ಮುಂಚಿತವಾಗಿ ಗುಪ್ತಾ ಆಕೆಯನ್ನು ಮಾನಸಿಕವಾಗಿ ಸಾಕಷ್ಟು ಗಟ್ಟಿಗೊಳಿಸಿದ್ದರು. ‘ಇಲ್ಲಿ ನೀನು ಕಳೆದುಕೊಳ್ಳುವುದು ಏನೂ ಇಲ್ಲ, ನೀನು ಕಲಿತಿರುವ ಆಟವನ್ನು ಆತ್ಮವಿಶ್ವಾಸದಿಂದ ಆಡು ; ನಿನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಬೇಕಾದರೆ ಮುಂದಿನ ಪಾಯಿಂಟ್ ಕುರಿತಷ್ಟೇ ಯೋಚಿಸು…’ ಎಂಬ ಮಾತುಗಳನ್ನಾಡಿ ಬಾತ್ರ ಅವರನ್ನು ಗುಪ್ತಾ ಮಾನಸಿಕವಾಗಿ ಗಟ್ಟಿಗೊಳಿಸಿದ್ದರು. ಇದೆಲ್ಲದರ ಫಲಿತಾಂಶ ಇವತ್ತು ದೇಶದ ಮುಂದಿದೆ.

ಕಳೆದ ಬಾರಿಯ ಒಲಂಪಿಕ್ಸ್ ಕೂಟದ ಸಂದರ್ಭದಲ್ಲಿ ಪಿ.ವಿ.ಸಿಂಧು ಅವರ ಕೋಚ್ ಗೋಪಿಚಂದ್ ಅವರು ಫೈನಲ್ ಮ್ಯಾಚ್ ಮುಗಿಯುವವರೆಗೆ ಸಿಂಧು ಅವರನ್ನು ಬಾಹ್ಯ ಜಗತ್ತಿನ ಸಂಪರ್ಕದಿಂದ ಪ್ರತ್ಯೇಕವಾಗಿರಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ. ಅದೇ ತಂತ್ರವನ್ನು ಬಾತ್ರಾ ಅವರ ಕೋಚ್ ಸಹ ಈ ಬಾರಿ ಅನುಸರಿಸಿದ್ದರು. ಮತ್ತು ಬಾತ್ರಾ ಅವರನ್ನು ಕೂಟದುದ್ದಕ್ಕೂ ಉತ್ತೇಜಿಸಲು ತನ್ನ ಸಲಹೆ, ಸಂದೇಶಗಳನ್ನು (ಗುಪ್ತಾ ಆಸ್ಟ್ರೇಲಿಯಾಗೆ ತೆರಳಿರಲಿಲ್ಲ) ಆಕೆಯ ಸಹ ಆಟಗಾರ ಆಂಥೋಣಿ ಅಮಲ್ ರಾಜ್ ಮತ್ತು ಭಾರತೀಯ ಟಿ.ಟಿ. ಫೆಡರೇಶನ್ ಕಾರ್ಯದರ್ಶಿ ಎಂ.ಪಿ.ಸಿಂಗ್ ಅವರ ಮೂಲಕ ಆಗಾಗ ರವಾನಿಸುತ್ತಿದ್ದರು!

ಕ್ರಿಕೆಟ್ ಸರ್ವವ್ಯಾಪಿಯಾಗಿರುವ ಈ ದೇಶದಲ್ಲಿ ಟಿ.ಟಿ.ಯಂತಹ ಅಷ್ಟೇನೂ ಜನಪ್ರಿಯವಲ್ಲದ ಆಟದಲ್ಲಿ ಮಹೋನ್ನತ ಸಾಧನೆ ಮೆರೆಯುತ್ತಿರುವ ಮಣಿಕಾ ಬಾತ್ರಾ ಶಾಂತ ಸ್ವಭಾವ, ಸಹನಾ ಶಕ್ತಿಯ ಮೂಲಕ ನಿಜವಾದ ಸ್ತ್ರೀ ಶಕ್ತಿಯ ತಾಕತ್ತನ್ನು ದೂರದ ಗೋಲ್ಡ್ ಕೋಸ್ಟ್ ಅಂಗಳದಲ್ಲಿ ಪ್ರಕಟಗೊಳಿಸಿದ್ದಾರೆ. ಆ ಮೂಲಕ ಸಮಸ್ತ ಭಾರತೀಯ ಸ್ತ್ರೀ ಸಮೂಹಕ್ಕೆ ನೀಡಿರುವುದು ಒಂದೇ ಸಂದೇಶವನ್ನು, ಅದೇನೆಂದರೆ – “ಮಣಿಕಾಳಿಗೆ ಇದು ಸಾಧ್ಯವಾಗುತ್ತದೆಂದರೆ ; ನನಗೂ ಸಾಧ್ಯ..!!” ಈ ಸ್ಪೂರ್ತಿಗಾಥೆಯಿಂದ ಮುಂಬರುವ ದಿನಗಳಲ್ಲಿ ಒಲಂಪಿಕ್ಸ್ ಸಹಿತ ವಿಶ್ವಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾರತೀಯ ಮಹಿಳಾ ಮಣಿಗಳು ಇನ್ನಷ್ಟು ಪದಕಗಳನ್ನು ಗೆಲ್ಲುವಂತಾಗಲಿ…

– ಹರಿಪ್ರಸಾದ್ ನೆಲ್ಯಾಡಿ

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.