ಮೊಟ್ಟೆ ಸೇವನೆಯಿಂದ ಆರೋಗ್ಯಕರ ಪ್ರಯೋಜನೆಗಳು ಯಾವುದು ಗೊತ್ತಾ?
ಶ್ರೀರಾಮ್ ನಾಯಕ್, Sep 26, 2019, 6:18 PM IST
ಮೊಟ್ಟೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೈಗೆಟಕುವ ಬೆಲೆಯಲ್ಲಿ ಮೊಟ್ಟೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ದುಬಾರಿ ಆಹಾರ ಪದಾರ್ಥಗಳಿಗಿಂತ ಅಗ್ಗದ ದರದ ಮೊಟ್ಟೆ ನಮ್ಮ ದೇಹದ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿಟಮಿನ್‌ಎ, ವಿಟಮಿನ್ ಬಿ5,ವಿಟಮಿನ್ ಬಿ12, ವಿಟಮಿನ್ ಇ, ಒಮೆಗಾ ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿದೆ.
ಮೊಟ್ಟೆಯಲ್ಲಿ ಪೌಷ್ಠಿಕಾಂಶಗಳಿರುವುದರಿಂದ ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಬರೀ ಮೊಟ್ಟೆಯನ್ನೇ ತಿನ್ನುವ ಬದಲು ಮೊಟ್ಟೆಯನ್ನು ಬಳಸಿ ತಯಾರಿಸುವ ವಿವಿಧ ಆಹಾರಗಳ ಸೇವನೆ ನಮ್ಮ ನಾಲಿಗೆಗೂ ರುಚಿ ಮತ್ತು ಆರೋಗ್ಯಕ್ಕೂ . ಬೇಯಿಸಿದ ಮೊಟ್ಟೆ, ಮೊಟ್ಟೆ ಆಮ್ಲೆಟ್, ಮೊಟ್ಟೆ ಬುರ್ಜಿ ಇವೆಲ್ಲಾ ಸಾಮಾನ್ಯವಾಗಿ ಜನಪ್ರಿಯವಾಗಿರುವ ಮೊಟ್ಟೆಯ ಆಹಾರ ರೂಪಗಳಾಗಿವೆ. ಇದೀಗ ಮೊಟ್ಟೆ ಚಿಲ್ಲಿ ಸೇವನೆಯು ಊಟಕ್ಕೆ ಮತ್ತು ಚಪಾತಿಯಂತಹ ತಿಂಡಿಗಳ ಜೊತೆಗೆ ಉತ್ತಮ ಕಾಂಬಿನೇಷನ್ ಆಗಿ ಜನಪ್ರಿಯಗೊಳ್ಳುತ್ತಿದೆ.
ಮೊಟ್ಟೆ ಸೇವನೆಯಿಂದ ಆರೋಗ್ಯಕರ ಪ್ರಯೋಜನೆಗಳು:
ಮೊಟ್ಟೆ ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗಲಿದೆ.ದೇಹದ ಬೊಜ್ಜು ಕರಗಿಸಲು ಸಹಕಾರಿಯಾಗಿರುವುದು .ಅಲ್ಲದೇ ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ.ಬೇಯಿಸಿದ ಮೊಟ್ಟೆ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ.ಗರ್ಭಿಣಿಯರು ಮೊಟ್ಟೆಯನ್ನು ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ. ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪು ಗಟ್ಟುವುದನ್ನು ತಡೆಯಬಹುದು.
ಎಗ್ ಚಿಲ್ಲಿ
ಬೇಕಾಗುವ ಪದಾರ್ಥಗಳು:
ಮೊಟ್ಟೆ 4 ರಿಂದ 6,ಹಸಿಮೆಣಸು 5 ,ಈರುಳ್ಳಿ 3,ಶುಂಠಿ ಸ್ವಲ್ಪ,ಕ್ಯಾಪ್ಸಿಕಮ್ (ದೊಣ್ಣೆ ಮೆಣಸು)1,ಬೆಳ್ಳುಳ್ಳಿ 1,ಚಿಲ್ಲಿ ಸಾಸ್ 2ಚಮಚ, ಸೋಯಾ ಸಾಸ್ 2ಚಮಚ,ಟೊಮೇಟೊ 1,ಕಾನ್‌ಫ್ಲೋರ್ 2 ಚಮಚ ,ಎಣ್ಣೆ,ಕೊತ್ತಂಬರಿ ಸೊಪ್ಪು,ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಮೊಟ್ಟೆ ಬೇಯಿಸಿಕೊಂಡು ನಂತರ ಮೇಲಿನ ಸಿಪ್ಪೆ ಬಿಡಿಸಿ ನಾಲ್ಕು ಭಾಗ ಮಾಡಿಕೊಂಡು ಇಟ್ಟುಕೊಳ್ಳಿ.ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ಶುಂಠಿ ,ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ.ಕ್ಯಾಪ್ಸಿಕಮ್ ಉದ್ದಕ್ಕೆ ಹೆಚ್ಚಿಕೊಳ್ಳಿ.ಒಂದು ಪಾತ್ರೆಯಲ್ಲಿ ಕಾನ್‌ಫ್ಲೋರ್ ಉಪ್ಪು,ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಕಾಯಲು ಇಡಿ. ತುಂಡು ಮಾಡಿಟ್ಟ ಮೊಟ್ಟೆಯನ್ನು ಕಾನ್‌ಫ್ಲೋರ್ ಹಿಟ್ಟಿನಲ್ಲಿ ಮುಳುಗಿಸಿ ಬಿಸಿಯಾಗಿರುವ ಎಣ್ಣೆಗೆ ಹಾಕಿ. ಕೆಂಪಗೆ ಕರಿದು ತೆಗೆದು ಇಟ್ಟುಕೊಳ್ಳಿ.ನಂತರ ಬೇರೆ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.ತದನಂತರ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ,ಹಸಿ ಮೆಣಸಿನ ಕಾಯಿ,ಕ್ಯಾಪ್ಸಿಕಮ್,ಟೊಮೇಟೊ ಸೇರಿಸಿ.ಫ್ರೈ ಮಾಡಿರುವ ಮೊಟ್ಟೆಯನ್ನು ಸೇರಿಸಿ,ಸೋಯಾ ಸಾಸ್,ಚಿಲ್ಲಿ ಸಾಸ್ ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು,ಈರುಳ್ಳಿ ಹೂ ಸಣ್ಣಗೆ ಹೆಚ್ಚಿ ಹಾಕಿ.ಸ್ವಲ್ಪ ನೀರು ಹಾಕಿ ಕುದಿಸಿರಿ.ಬಿಸಿ-ಬಿಸಿ ಎಗ್ ಚಿಲ್ಲಿ ಸವಿಯಲು ಸಿದ್ಧ.( ಚಪಾತಿ,ಅನ್ನ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ.)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.