ಹಣ್ಣುಗಳಿಂದ ಸೌಂದರ್ಯವರ್ಧಕ; ಮನೆಯಲ್ಲೇ ತಯಾರಿಸಿ


Team Udayavani, Aug 18, 2018, 1:30 PM IST

fruits-beauty.jpg

ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ ಅದಕ್ಕಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಬ್ಯೂಟಿಪಾರ್ಲರ್‌ಗಳಿಗೆ ಹೋಗುವುದು ಸಾಮಾನ್ಯವಾದ ವಿಷಯ.

ಹಿಂದಿನ ಕಾಲದಲ್ಲಿ ಜನರು ಮನೆಯಲ್ಲಿ ಸುಲಭವಾಗಿ ಸಿಗಬಹುದಾದ ವಸ್ತುಗಳನ್ನು ಉಪಯೋಗಿಸಿ ಚರ್ಮವನ್ನು ಕಾಪಾಡಿಕೊಳ್ಳುತ್ತಿದ್ದರು.  ಆದರೆ ಈಗ ಇಂತಹ ಪದಾರ್ಥಗಳ ಉಪಯೋಗ ಹೇಗೆ ಮಾಡಬಹುದೆಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಾವು ದಿನನಿತ್ಯ ಉಪಯೋಗಿಸುವ ತರಕಾರಿ ಹಾಗೂ ಹಣ್ಣುಗಳ ಬಳಕೆಯಿಂದ ಯಾವುದೇ ರೀತಿಯ ದುಷ್ಟರಿಣಾಮ ಬೀರುವುದಿಲ್ಲ.

ಮನೆಯಲ್ಲಿ ಸಿಗುವ ವಸ್ತುಗಳಿಂದ ತಯಾರಿಸುವ ಸೌಂದರ್ಯದ ಟಿಪ್ಸ್‌ ನಿಮಗಾಗಿ…

ಬಾಳೇ ಹಣ್ಣು: ಬಾಳೇ ಹಣ್ಣುನ್ನು ಚೆನ್ನಾಗಿ ಹಿಸುಕಿ, ಮೊಸರಿನ ಜೊತೆ ಬೆರೆಸಿ ಅದನ್ನು ಮುಖಕ್ಕೆ ಪೇಸ್ಟ್‌ ತರ ಮಸಾಜ್‌ ಮಾಡಿ ಎರಡು ನಿಮಿಷ ಹಾಗೇ ಬಿಡಿ. 10 ನಿಮಿಷದ ಆದನಂತರ ಮುಖ ತೊಳೆಯಿರಿ ಇದನ್ನು ವಾರಕ್ಕೆ ಒಮ್ಮೆಯಂತೆ ಮಾಡುವುದರಿಂದ ಮುಖದಲ್ಲಿನ ಕಲೆಯನ್ನು ಹೋಗಲಾಡಿಸಿ ನುಣುಪನ್ನು ನೀಡುತ್ತದೆ.

– ಬಾಳೇ ಹಣ್ಣಿನ ಸಿಪ್ಪೆ ಬಿಸಿಲಲ್ಲಿ ಒಣಗಿಸಿ ಹುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಬೇಕು. ಈ ತೈಲ ನಿತ್ಯ ಹಚ್ಚಿದರೆ ಕೂದಲು ಉದುರುವುದಿಲ್ಲ.

ಪಪ್ಪಾಯಿ: ಪಪ್ಪಾಯಿಯ ತಿರುಳನ್ನು ಜೇನಿನೊಂದಿಗೆ ಬೆರಸಿ, ಫೇಸ್‌ ಪ್ಯಾಕ್‌ ಮಾಡಿ 15 ನಿಮಷದ ಬಳಿಕ ಮುಖ ತೊಳೆದರೆ ಚರ್ಮ ಮೃದು ಮತ್ತು ಹೊಳಪು ಪಡೆಯುತ್ತದೆ.

– ಪಪ್ಪಾಯಿ ರಸಕ್ಕೆ ನಿಂಬೆರಸ ಹಾಗೂ ಜೇನು ಬೆರಸಿ ಲೇಪಿಸಿದರೆ ಮುಖದ ಕಾಂತಿ ಹೆಚ್ಚುತ್ತದೆ ಅಲ್ಲದೇ ಮೊಡವೆಯೂ ನಿವಾರಣೆಯಾಗುತ್ತದೆ.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಮೊಡವೆ ಕಲೆ ನಿವಾರಣೆ.

– ನಿತ್ಯ ಕಿತ್ತಳೆ ರಸಕ್ಕೆ ಜೇನು ಬೆರಸಿ ಹಚ್ಚಿದರೆ ಚರ್ಮ ಬೆಳ್ಳಗಾಗುತ್ತದೆ.

– ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಅದನ್ನು ಸೀಗೆ ಪುಡಿಯೊಂದಿಗೆ ಬೆರೆಸಿ ಕೂದಲು ತೊಳೆಯಲು ಬಳಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಸೇಬು ಹಣ್ಣು: ಸೇಬು ಹಣ್ಣು ಹಾಲು ಮತ್ತು ಜೇನು ಬೆರಸಿ, ಸೇವಿಸಿದರೆ ನಿಯಮಿತ ಸೇವನೆಯಿಂದ ಕಣ್ಣು, ಕೂದಲು ಹಾಗೂ ಚರ್ಮದ ಸೌಂದರ್ಯ ವರ್ಧಿಸುತ್ತದೆ.

ಅನಾನಸ್‌: ಅನಾನಸ್‌ ತುಂಡಿನಿಂದ ಹಿಮ್ಮಡಿಯನ್ನು ತಿಕ್ಕಿದರೆ ಒಡಕು ನಿವಾರಣೆಯಾಗಿ ಚರ್ಮ ಮೃದುವಾಗುತ್ತದೆ.

ಮಾವಿನ ಹಣ್ಣು: ಮಾವಿನ ಸಿಪ್ಪೆಯನ್ನು ಮುಖಕ್ಕೆ 5 ನಿಮಿಷ ಮಸಾಜ್‌ ಮಾಡಿ ಆದ ಮೇಲೆ ಮುಖ ತೊಳೆಯಿರಿ.ಇದರಿಂದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚುತ್ತದೆ.

ಹಲಸಿನ ಹಣ್ಣು: ಹಲಸಿನ ಹಣ್ಣನ್ನು ಹಾಲಿನಲ್ಲಿ ಅರೆದು,ಹಾಲಿನ ತೆನೆ ಬೆರಸಿ ಲೇಪಿಸಿದ ಪರಿಣಾಮ ಚರ್ಮ ಮೃದುವಾಗುವುದು.

ಕಲ್ಲಂಗಡಿ ಹಣ್ಣು:ಕಲ್ಲಂಗಡಿ ಹಣ್ಣಿನ ರಸದಿಂದ ಮೊಡವೆಯ ಕಲೆಗಳನ್ನು ತಿಕ್ಕಿದರೆ ಕಲೆಗಳು ನಿವಾರಣೆಯಾಗುವುದು.

ಕಲ್ಲಂಗಡಿ ಹಣ್ಣಿನ ಬೀಜವನ್ನು ಅರೆದು ಹಾಲಿನೊಂದಿಗೆ ಬೆರಸಿ ಮುಖಕ್ಕೆ ಲೇಪಿಸಿದರೆ ಗೌರವರ್ಣ ಹೆಚ್ಚುತ್ತದೆ.

ದ್ರಾಕ್ಷಿ ಹಣ್ಣು: ಒಂದು ಕಪ್‌ ದ್ರಾಕ್ಷಿ ಹಣ್ಣುಗಳನ್ನು ಚೆನ್ನಾಗಿ ರುಬ್ಬಿ ರಸ ತೆಗೆಯಿರಿ.ಇದಕ್ಕೆ ಗೋಧಿ ಹಿಟ್ಟು ಅಥವಾ ಕಡ್ಲೆಹಿಟ್ಟನ್ನು ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ.15 ನಿಮಿಷದ ನಂತರ ಮುಖ ತೊಳೆಯಿರಿ ಇದರಿಂದ ಮುಖದಲ್ಲಿರುವ ಜಿಡ್ಡಿನಂಶ ಕಡಿಮೆಯಾಗುತ್ತದೆ.

ಲಿಂಬೆ ಹಣ್ಣು: ಕೂದಲಿನ ಬುಡಕ್ಕೆ ನಿಂಬೆರಸ ಹಚ್ಚಿದರೆ ತಲೆ ಹೊಟ್ಟು ನಿವಾರಣೆ.

-ನಿಂಬೆ ರಸ, ಜೇನು, ಅರಸಿನ ಪುಡಿ ಬೆರಸಿ ಹಚ್ಚಿದರೆ ಮೊಡವೆ, ಕಲೆ ನಿವಾರಣೆಯಾಗುತ್ತದೆ.

-ಕೊಬ್ಬರಿ ಎಣ್ಣೆಯಲ್ಲಿ ನಿಂಬೆರಸ ಹಾಕಿ ಕುದಿಸಿ ಆ ತೈಲ ನಿತ್ಯ ಕೂದಲಿಗೆ ಲೇಪಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

-ಒಡೆದ ಪಾದಗಳಿಗೆ ನಿಂಬೆ ಸಿಪ್ಪೆ ತಿಕ್ಕಿ 15 ನಿಮಿಷಗಳ ಬಳಿಕ ಕಾಲು ತೊಳೆದರೆ ಒಡಕು ನಿವಾರಣೆಯಾಗುತ್ತದೆ.

– ನಿಂಬೆ ಸಿಪ್ಪೆಯಿಂದ ಮುಖ ತಿಕ್ಕಿ ತೊಳೆದರೆ ಜಿಡ್ಡು ನಿವಾರಣೆಯಾಗಿ ಮುಖ ಮೃದುವಾಗಿ ಹೊಳೆಯುತ್ತದೆ.

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.