ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ…
Team Udayavani, Jun 16, 2018, 3:00 PM IST
ಸಮಾಜದಲ್ಲಿ ತಂದೆಯವರಿಗೆ ವಿಶೇಷ ಗೌರವ ಕೊಡುವಂತಹ ದಿನವೇ ಫಾದರ್ ಡೇ ಭಾರತದಲ್ಲಿ ಫಾದರ್ ಡೇಯನ್ನು ಪ್ರತಿ ವರ್ಷದ ಜೂನ್ ತಿಂಗಳಿನ ಮೂರನೆ ಭಾನುವಾರದಂದೂ ಹಾಗೂ ಇತರ ಕಡೆಗಳಲ್ಲಿ ಇನ್ನಿತರ ದಿನಗಳಿಂದೂ ಅಪ್ಪಂದಿರ ದಿನಾಚರಣೆ ಆಚರಿಸಲಾಗುತ್ತದೆ.
ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು .ತಾಯಿಯನ್ನು ಗೌರವಿಸಲು ಆಚರಿಸಲು ಮಾತೃ ದಿನಕ್ಕೆ ಇದು ಪೂರಕವಾಗಿದೆ. ಒಂದು ಮಗು ಹುಟ್ಟಿದಾಗ ಅದಕ್ಕೆ ಅಮ್ಮ-ಅಪ್ಪನ ಪ್ರೀತಿ ಜಾಸ್ತಿ ಸಿಗುತ್ತದೆ. ಕೆಲವೊಂದು ಕಡೆ ಮಕ್ಕಳಿಗೆ ತಾಯಿಗಿಂತ ಸಲಿಗೆ ಜಾಸ್ತಿ ತಂದೆ ಮೇಲೆ ಇರುತ್ತದೆ. ತಂದೆಗೆ ಮಕ್ಕಳ ಮೇಲೆ ಕೂಡ ಅಷ್ಟೇನೆ ಪ್ರೀತಿ ಇರುತ್ತದೆ.ಎಲ್ಲೋ ಒಂದು -ಎರಡು ಕಡೆ ನತದೃಷ್ಟ ಮಕ್ಕಳಿಗೆ ತಂದೆ ಪ್ರೀತಿಯಿಂದ ವಂಚಿತರಾಗುತ್ತಾರೆ.ವಂಚಿತವಾದ ಮಕ್ಕಳಿಗೆ ಮಾತ್ರ ಗೊತ್ತಿರುತ್ತದೆ ಜೀವನದಲ್ಲಿ ತಾಯಿ-ತಂದೆಯರ ಪಾತ್ರ ಎಷ್ಟು ಮುಖ್ಯ ಅಂತ.
ಅಪ್ಪ ಎಂದರೆ ರಕ್ಷಣೆ ಅಮ್ಮ ಎಂದರೆ ಪ್ರೀತಿ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಿಸಿಯೇ ಬೆಳೆಯಬೇಕು ಅದು ಮಕ್ಕಳ ಏಳಿಗೆಗೆ ಪ್ರತಿಫಲನವಾಗದೇ ಇರದು. ತಾಯಿಯೊಂದಿಗೆ ನಕ್ಕು ನಲಿಯುವ ಮಕ್ಕಳು ತಂದೆಯಿಂದ ಆನತಿ ದೂರದಲ್ಲೇ ನಿಂತು ಆಜ್ಞೆಗಳನ್ನು ಪಾಲಿಸುತ್ತಾ ಅವಶ್ಯಕತೆಗಳು ಬಂದಾಗ ಹಿಂಜರಿಯುತ್ತಲೇ ಅಪ್ಪನಿಗೆ ಹೇಳುತ್ತಿದ್ದ ಮಕ್ಕಳು ಅಪ್ಪನ ಮಾತುಗಳನ್ನು ಮೀರದೆ ಆ ಸಂಬಂಧಕ್ಕೆ ಒಂದು ಗೌರವ ತಂದುಕೊಟ್ಟಿರುತ್ತಾರೆ. ಬಾಳಿನ ಮುಸ್ಸಂಜೆಯಲ್ಲಿರುವ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ.
– ಶ್ರೀರಾಮ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.