ಮುಂಜಾನೆ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಎಷ್ಟು?
ಮಹೇಶ್ ಹೆಬ್ರಿ, Sep 20, 2019, 7:30 PM IST
ಆರೋಗ್ಯಕ್ಕೆ ನೀರು ಎಷ್ಟು ಮುಖ್ಯವೆಂದು ನಮಗೆಲ್ಲಾ ಗೊತ್ತೆ ಇದೆ. ದಿನಕ್ಕೆ ಕನಿಷ್ಠ ಎಂದರೆ 11 ರಿಂದ 12 ಲೋಟ ನೀರು ಕುಡಿಯಿರಿ ಎಂಬುದು ವೈದ್ಯರ ಅಭಿಪ್ರಾಯ. ನೀರಿನ ಅವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀರಿನ ಅವಶ್ಯಕತೆ ಎನ್ನವುದು ಆನೇಕ ಅಂಶಗಳನ್ನು ಅವಲಂಬಿಸಿಕೊಂಡು, ಒಬ್ಬ ವ್ಯಕ್ತಿಯಿಂದ ಇನೊಬ್ಬ ವ್ಯಕ್ತಿಗೆ ಬೇರೆ ಬೇರ ಆಗಿರುತ್ತದೆ. ನೀರಿನ ಅವಶ್ಯಕತೆಯು ಅವಲಂಬಿಸಿರುವ ಅಂಶಗಳು ಅಂದರೆ, ವ್ಯಕ್ತಿಯ ದೈಹಿಕ ಚಟುವಟಿಕೆ, ಸುತ್ತಲಿನ ತಾಪಮಾನ, ಆರೋಗ್ಯ ಪರಿಸ್ಥಿತಿ, ದೈಹಿಕ ಪರಿಸ್ಥಿತಿ ವಯಸ್ಸು ಲಿಂಗ ಹಾಗೂ ಇನ್ನಿತರ ಅಂಶಗಳು.
ಎಷ್ಟು ಪ್ರಮಾಣದ ನೀರು ಅವಶ್ಯಕ?
ಪ್ರತಿ ದಿನವೂ ನಾವು ಉಸಿರಾಟ, ಬೆವರು, ಮೂತ್ರ ಮತ್ತು ಮಲ ವಿಸರ್ಜನೆಯ ಮೂಲಕ ನೀರನ್ನು ಕಳೆದುಕೊಳ್ಳುತ್ತಿರುತ್ತೆವೆ. ಹಾಗಾಗಿ ನಮ್ಮ ಶರೀರವು ಸರಿಯಾಗಿ ಕಾರ್ಯನಿರ್ವಹಿಸಬೇಗಿದ್ದಲ್ಲಿ ನಾವು ಸಾಕಷ್ಟು ಪ್ರಮಾಣದಲ್ಲಿ ಪಾನೀಯಗಳು ಮತ್ತು ನೀರನ್ನು ಹೊಂದಿರುವ ಆಹಾರಗಳನ್ನು ಸೇವಿಸಿ ದೇಹದ ನೀರಿನ ಅವಶ್ಯಕತೆಯನ್ನು ಪೂರೈಸಬೇಕು. ಅಂದಾಜು ಒಂದ ದಿನಕ್ಕೆ 12ರಿಂದ 13 ಕಪ್ ನೀರಿನ ಅವಶ್ಯಕತೆ ಇರುತ್ತದೆ. ಬಿಸಿ ಅಥವಾ ತೇವಭರಿತ ವಾತಾವರಣವು ನಮ್ಮನ್ನು ಬೆವರುವಂತೆ ಮಾಡುತ್ತದೆಇಂಥ ಸಂದರ್ಭಗಳಲ್ಲಿ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ.
ನೀರಿನ ಆರೋಗ್ಯಕಾರಿ ಪ್ರಯೋಜನಗಳು:
ನೀರು ನಮ್ಮ ಶರೀರದ ಜೀವಕೋಶಗಳಲ್ಲಿ ಇರುವ ತ್ಯಾಜ್ಯಗಳನ್ನು ತೊಡೆದು ಹಾಕುತ್ತದೆ ಮತ್ತು ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ತಾಪಮಾನವನ್ನು ಕಾಪಾಡುತ್ತದೆ. ನೀರು ಮೂತ್ರಪಿಂಡದಲ್ಲಿ ಕಲ್ಲಾಗದಂತೆ ಮತ್ತು ಮಲಬದ್ಧತೆ ಆಗದಂತೆ ತಡೆಯುತ್ತದೆ. ತ್ವಚೆಯ ಕಾಂತಿ ಹೆಚ್ಚುವಂತೆ ಮಾಡುವುದು ಮೊದಲಾದವುಗಳಿಗೂ ನೀರು ಅಗತ್ತವಾಗಿದೆ. ನರವ್ಯವಸ್ಥೆಯಲ್ಲಿಯೂ ನೀರು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಪರಿಚಲನಾ ವ್ಯವಸ್ಥೆ ಉಸಿರಾಟದ ವ್ಯವಸೆ, ಎಲ್ಲದರಲ್ಲೂ ನೀರು ಪ್ರಮುಖವಾಗಿ ಬೇಕಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿಲ್ಲವಾದಲ್ಲಿ ಈ ಕಾರಣಗಳಿಂದ ಗಂಭೀರ ಸಮಸ್ಯೆಗಳು ಎದುರಾಗಬಹುದು.
ನೀರಿನ ಮೂಲಗಳು
ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಅದು ಕೇವಲ ದ್ರವ ರೂಪದ ನೀರು ಎಂದುಕೊಂಡರೆ ತಪ್ಪು, ಏಕೆಂದರೆ ನಾವು ದಿನನಿತ್ಯ ಸೇವಿಸುವ ಆಹಾರಗಳಲ್ಲೂ ಸಾಕಷ್ಟು ಪ್ರಮಾಣದ ನೀರಿನ ಅಂಶ ಇರುತ್ತದೆ. ಒಟ್ಟು ಸೇವಿಸುವ ನೀರಿನ ಪ್ರಮಾಣದಲ್ಲಿ 20% ರಷ್ಟು ನೀರನ್ನು ಆಹಾರವು ಪೂರೈಸುತ್ತದೆ. ಅನೇಕ ರೀತಿಯ ಹಣ್ಣು ಮತ್ತು ತರಕಾರಿಗಳು, ಅಂದರೆ ಕಲ್ಲಂಗಡಿ ಮತ್ತು ಸೊಪ್ಪು ತರಕಾರಿಗಳು ಇವುಗಳಲ್ಲಿ 90%ರಷ್ಟು ನೀರಿನ ಆಂಶವನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಹಾಲು ಮತ್ತು ಜ್ಯೂಸ್‌ನಂತಹ ಪಾನೀಯಗಳಲ್ಲಿ ನೀರಿನ ಆಂಶವೇ ಹೆಚ್ಚಾಗಿರುತ್ತದೆ.
ಮುಂಜಾನೆ ನೀರನ್ನು ಕುಡಿಯುವುದರಿಂದ ಪ್ರಯೋಜನಗಳು:
ಆರೋಗ್ಯಕ್ಕೆ ಸಂಬಂಧಿಸಿ ಕೆಲವು ವಿಚಾರಗಳಲ್ಲಿ ನಾವು ಗೊಂದಲ ಮಾಡಿಕೊಳ್ಳುತ್ತೇವೆ. ನಮ್ಮ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಕೆಲವು ಸರಳ ಸೂತ್ರಗಳು, ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳಷ್ಟು ಉತ್ತಮ ಪರಿಣಾಮವನ್ನು ಬೀರಬಲ್ಲವು. ಇವುಗಳಲ್ಲಿ ಒಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಸಾಕಷ್ಟು ನೀರನ್ನು ಸೇವಿಸುವುದು. ಇದರಿಂದ ಹೊಟ್ಟೆಯು ಬಹಳ ಚೆನ್ನಾಗಿ ಖಾಲಿ ಆಗುವುದಷ್ಟೇ ಅಲ್ಲದೇ, ಅನೇಕ ರೀತಿಯ ಅಪಯಕಾರಿ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಬಹಳಷ್ಟು ಪ್ರಯೋಜನಕಾರಿ.
* ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಕುಡಿಯುವುದರಿಂದ ದೊಡ್ಡಕರುಳು ಚೆನ್ನಾಗಿ ಸ್ವಚ್ಚವಾಗುತ್ತದೆ ಮತ್ತು ಇದರಿಂದ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯಕವಾಗುತ್ತದೆ.
* ಹೊಸ ರಕ್ತ ಮತ್ತು ಸ್ನಾಯು ಕೋಶಗಳ ಸಂರಚನೆ ಸಾಧ್ಯವಾಗುತ್ತದೆ.
* ದೇಹದ ತೂಕ ಇಳಿಸಿಕೊಳ್ಳಲು ಅವಶ್ಯಕ.
* ಚಯಾಪಚಯ ಕ್ರಿಯೆಯು ಉತ್ತಮಗೊಳ್ಳುತ್ತದೆ.
* ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರೋಗಾಣುಗಳ ವಿರುದ್ಧ ಹೋರಾಡುತ್ತದೆ.
ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಭೂತಗಳಲ್ಲಿ ಒಂದು. ಭೂಮಿಯ ಮತ್ತು ನಮ್ಮ ಶರೀರದ ಶೇ.70% ರಷ್ಟು ನೀರಿನಿಂದ ಆವೃತವಾಗಿದೆ. ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದ್ದಲ್ಲಿ ಎಲ್ಲರೂ ಆರೋಗ್ಯದಿಂದಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.