ತಕ್ಷಣದ ಚಿಕಿತ್ಸೆ; ಸುಟ್ಟಗಾಯಕ್ಕೆ ಹಸಿಮಣ್ಣು, ಜೇನುತುಪ್ಪ ಸೇರಿದಂತೆ ಹಲವು ಮನೆಮದ್ದುಗಳಿವೆ


Team Udayavani, Feb 17, 2020, 6:08 PM IST

ben-2

ಸಾಂದರ್ಭಿಕ ಚಿತ್ರ

ಸುಟ್ಟಗಾಯ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಸುಟ್ಟಗಾಯವಾದ ತಕ್ಷಣ ನಾವು ಪರಿಹಾರವಾಗಿ ಮಂಜುಗೆಡ್ಡೆ ಅಥವಾ ತಂಪಾದ ನೀರನ್ನು ಗಾಯಗಳಿಗಾಗಿ ಬಳಸುತ್ತೇವೆ. ಒಂದು ಕ್ಷಣ ಈ ವಿಧಾನ ಆರಾಮ ನೀಡಿದರೂ ಮಂಜುಗೆಡ್ಡೆಯನ್ನು ತೆಗೆದ ತತ್‌ಕ್ಷಣವೇ ಪುನಃ ನೋವು ಶುರುವಾಗುತ್ತದೆ. ಇಂತಹ ಸಣ್ಣಪುಟ್ಟ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳು ಕೆಳಗಿನಂತಿವೆ.

ಟೂತ್ ಪೇಸ್ಟ್
ಟೂತ್ ಪೇಸ್ಟ್ ಹಚ್ಚಿಕೊಂಡಲ್ಲಿ ಸುಟ್ಟ ಗಾಯದಿಂದಾಗುವ ಉರಿ ಶಮನವಾಗುತ್ತದೆ.

ಹಸಿ ಮಣ್ಣು
ಶರೀರದ ಭಾಗ ಸುಟ್ಟ ತಕ್ಷಣವೇ ಹಸಿ ಮಣ್ಣನ್ನು ಆ ಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಏಳುವುದಿಲ್ಲ.

ನೀರಿನ ಸಿಂಚನ
ಯಾವುದೇ ರೀತಿಯ ಗಾಯಗಳಾದರು ತಕ್ಷಣ ನೀರನ್ನು ಹರಿಯ ಬಿಟ್ಟು ಅದರಲ್ಲಿ ಸುಟ್ಟುಹೋದ ಭಾಗವನ್ನು ಹಿಡಿಯಬೇಕು. ಈ ರೀತಿಯಾಗಿ 5 ರಿಂದ 10 ನಿಮಿಷ ಹಿಡಿಯಬೇಕು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು.

ಅರಿಸಿನ
ಗಾಯಗಳ ಮೇಲೆ ತಣ್ಣೀರಿನಲ್ಲಿ ಅರಿಶಿನ ಮಿಶ್ರಣ ಮಾಡಿ ಹಚ್ಚುವ ಮೂಲಕವೂ ತಕ್ಷಣದ ಉರಿ ಪರಿಹಾರವಾಗುತ್ತದೆ ಹಾಗೂ ಶೀಘ್ರ ಗುಣವಾಗಲು ನೆರವಾಗುತ್ತದೆ. ಈ ವಿಧಾನದ ಇನ್ನೊಂದು ಗುಣವೆಂದರೆ ಗಾಯದ ಗುಣವಾದ ಬಳಿಕ ಸುಟ್ಟ ಗಾಯದ ಕಲೆಗಳು ಇಲ್ಲದೇ ಇರುವುದು.

ಲ್ಯಾವೆಂಡರ್‌ ತೈಲ
ಲ್ಯಾವೆಂಡರ್‌ ತೈಲವು ಸೋಂಕು ಪ್ರತಿಬಂಧಕ ಗುಣವನ್ನು ಹೊಂದಿದೆ. ಇದರ ಜತೆ ಇದು ಸುಟ್ಟಗಾಯದ ಉರಿಯನ್ನು ಶಮನಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರ ಬಳಕೆಯಿಂದ ತ್ವಚೆಯ ಮೇಲೆ ಉಂಟಾದ ಕಲೆಗಳನ್ನು ಕೂಡ ಕಡಿಮೆಗೊಳಿಸುತ್ತದೆ. ಸ್ವಚ್ಛ ಬಟ್ಟೆ ಅಥವಾ ಹತ್ತಿಯನ್ನು ತೈಲದಲ್ಲಿ ಅದ್ದಿ ಗಾಯದ ಮೇಲೆ ಲೇಪಿಸಿಕೊಳ್ಳಬಹುದು.

ಉಪ್ಪು ನೀರು
ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಿದರೆ ಗಾಯ ವಾಸಿಯಾಗುವುದು.

ವಿನೆಗರ್‌
ತಕ್ಷಣಕ್ಕೆ ಸಣ್ಣಪುಟ್ಟ ಸುಟ್ಟಗಾಯಗಳ ಆರೈಕೆಗೆ ಮತ್ತು ಸಂಭಾವ್ಯ ಸೋಂಕನ್ನು ತಡೆಗಟ್ಟಲು ವಿನೆಗರ್‌ ಸಹಾಯ ಮಾಡುತ್ತದೆ. ವಿನೆಗರ್‌ ನೋವಿನ ಉಪಶಮನ ಮಾಡುವ ಜತೆಗೆ ತ್ವಚೆಯನ್ನು ತಂಪಾಗಿರಿಸಲು ಸಹಕಾರಿಯಾಗಿದೆ. ವಿನೆಗರ್‌, ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ, ಹತ್ತಿ ಅಥವಾ ಬಟ್ಟೆಯಿಂದ ದ್ರಾವಣದಲ್ಲಿ ಅದ್ದಿ ಸುಟ್ಟಗಾಯದ ಮೇಲಿರಿಸಿಕೊಳ್ಳುವುದರ ಮೂಲಕ ಉರಿ ಕಡಿಮೆಯಾಗುತ್ತದೆ.

ಪುದೀನಾ
ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಬೇಕು. ಸುಟ್ಟುಕೊಂಡ ತಕ್ಷಣವೇ ಇದನ್ನು ಉಪಯೋಗಿಸಿದರೆ ಉರಿಯೂ ಕಡಿಮೆಯಾಗುದಲ್ಲದೆ ಬೊಬ್ಬೆ(ಗುಳ್ಳೆ) ಏಳುವುದು ಕಡಿಮೆಯಾಗುತ್ತದೆ.

ವೆನಿಲ್ಲಾದ ಸಾರ
ಸಣ್ಣಪುಟ್ಟ ಸುಟ್ಟಗಾಯಗಳ ಆರೈಕೆಗೆ ವೆನಿಲ್ಲಾವನ್ನೂ ಕೂಡ ಬಳಸಿಕೊಳ್ಳಬಹುದು. ಹತ್ತಿಯನ್ನು ವೆನಿಲ್ಲಾದ ಸಾರದಲ್ಲದ್ದಿ ಅದನ್ನು ಸುಟ್ಟಗಾಯದ ಮೇಲೆ ಲೇಪಿಸಬಹುದು. ವೆನಿಲ್ಲಾ ಸಾರದಲ್ಲಿರುವ ಆಲ್ಕೋಹಾಲ್‌ ಆವಿಯಾಗುವಾಗ ತಂಪಾದ ಅನುಭವವನ್ನು ನೀಡುತ್ತದೆ. ಇದರಿಂದ ಉರಿಯನ್ನು ಉಪಶಮನಗೊಳಿಸುತ್ತದೆ.

ಈರುಳ್ಳಿ ರಸ
ಈರುಳ್ಳಿಯ ಗಂಧಕದ ಅಂಶಗಳು ಸುಟ್ಟಗಾಯ ಉಪಶಮನಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತವೆ. ಈರುಳ್ಳಿ ರಸವನ್ನು ಹತ್ತಿಯಿಂದ ಗಾಯದ ಮೇಲೆ ಲೇಪಿಸಿಕೊಳ್ಳಬಹುದು.

ಜೇನುತುಪ್ಪ
ಜೇನುತುಪ್ಪ ಸುಟ್ಟಗಾಯದ ನೋವಿನಿಂದ ಮುಕ್ತರಾಗಲು ಅತ್ಯುತ್ತಮ ಮನೆಮದ್ದು ಗಳಲ್ಲೊಂದಾಗಿದೆ. ಇದನ್ನು ಲೇಪಿಸುವುದರಿಂದ ತತ್‌ಕ್ಷಣ ಉರಿಯಿಂದ ಆರಾಮ ನೀಡುತ್ತದೆ. ಜೇನುತುಪ್ಪವನ್ನು ಲೇಪಿಸುವುದರಿಂದ ಇದು ಸುಟ್ಟಗಾಯದಲ್ಲಿರಬಹುದಾದ ದ್ರವಾಂಶಗಳನ್ನು ಹೀರಿ ಗಾಯವು ಬೇಗನೇ ಗುಣವಾಗಲು ಸಹಾಯ ಮಾಡುತ್ತದೆ.

ಟಾಪ್ ನ್ಯೂಸ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.