ಬೆಲ್ಲ ಆರೋಗ್ಯಕ್ಕೆ ಎಷ್ಟು ಮುಖ್ಯ? ಬೆಲ್ಲದಲ್ಲಿದೆ ಹಲವು ಆರೋಗ್ಯಕರ ಗುಣ!
Team Udayavani, Jan 17, 2020, 6:52 PM IST
ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದ್ದು ನಮ್ಮ ಹಲವಾರು ತಿನಿಸುಗಳಿಗೆ ಸಿಹಿಯನ್ನು ನೀಡುವ ಮೂಲವಸ್ತುವಾಗಿದೆ. ನೋಡಲಿಕ್ಕೆ ಸಕ್ಕರೆಯಂತೆ ಬೆಳ್ಳಗಿರದೇ ನುಣ್ಣಗೂ ಇರದೇ ಇರುವ ಕಾರಣಕ್ಕೆ ಹಿಂದಿದ್ದ ಮನ್ನಣೆ ಈಗ ಸಿಗುತ್ತಿಲ್ಲವಾದರೂ ಬೆಲ್ಲದಲ್ಲಿ ಅಡಕಗೊಂಡಿರುವ ಆರೋಗ್ಯಕರ ಪ್ರಯೋಜನಗಳೇನೂ ಕಡಿಮೆಯಾಗಿಲ್ಲ. ಸಾವಯವ ವಿಧಾನದಲ್ಲಿ ತಯಾರಿಸಲಾದ ಬೆಲ್ಲದಲ್ಲಿ ಯಾವುದೇ ರಾಸಾಯನಿಕಗಳಿರದ ಕಾರಣ ಸಕ್ಕರೆ ಅಥವಾ ಸಿಹಿಯ ಅಗತ್ಯವಿರುವಲ್ಲೆಲ್ಲಾ ಬೆಲ್ಲವನ್ನೇ ಬಳಸುವುದು ಆರೋಗ್ಯಕರವಾಗಿದೆ.
ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ
ಬೆಲ್ಲದಲ್ಲಿ ವಿಟಮಿನ್ ಗಳು ಹಾಗೂ ಖನಿಜಗಳು ಅಧಿಕ ಪ್ರಮಾಣದಲ್ಲಿದ್ದು ದೇಹದಲ್ಲಿರುವ ಎಲೆಕ್ಟ್ರೋಲೈಟುಗಳ ಸಮತೋಲನ ಸಾಧಿಸಲು ಹಾಗೂ ತನ್ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ.
ತೂಕ ಇಳಿಕೆಗೆ
ತೂಕ ಇಳಿಸಬೇಕೆಂದರೆ ಸಕ್ಕರೆಯನ್ನೇ ತಿನ್ನಬಾರದು ಎಂದು ಹೇಳುತ್ತಾರೆ, ಹಾಗಾದರೆ ಬೆಲ್ಲ ತಿನ್ನಬಹುದೇ? ವಾಸ್ತವವಾಗಿ ಬೆಲ್ಲದಲ್ಲಿರುವ ಸಕ್ಕರೆಯ ಅಂಶಕ್ಕಿಂತಲೂ ಇತರ ಪೋಷಕಾಂಶಗಳು ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ರಕ್ತ ಮತ್ತು ಜೀರ್ಣಾಂಗಗಳನ್ನು ಶುದ್ದೀಕರಿಸಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ.
ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳುತ್ತದೆ
ಬೆಲ್ಲದಲ್ಲಿ ಪೊಟ್ಯಾಶಿಯಂ ಸಹಿತ ಹಲವಾರು ಪ್ರಮುಖ ಖನಿಜಗಳಿವೆ. ಇವು ದೇಹದಲ್ಲಿ ನೀರಿನಂಶವನ್ನು ಉಳಿಸಿಕೊಳ್ಳಲು ನೆರವಾಗುತ್ತವೆ. ದೇಹದ ಯಾವುದೇ ಕ್ರಿಯೆ ಜರುಗಲು ನೀರು ಅಗತ್ಯವಾಗಿದ್ದು ತೂಕ ಇಳಿಕೆಗೂ ಅಂದರೆ, ಕೊಬ್ಬಿನಾಂಶವನ್ನು ಬಳಸಿಕೊಳ್ಳಲೂ ನೀರು ಅಗತ್ಯವಾಗಿದ್ದು ಈ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವು ನೀಡುತ್ತದೆ. ಹಾಗಾಗಿ ಬೆಲ್ಲವನ್ನು ನಿತ್ಯವೂ ಮಿತಪ್ರಮಾಣದಲ್ಲಿ ಸೇವಿಸುವುದು ಉತ್ತಮವಾಗಿದೆ
ಬೆಲ್ಲದ ಕಂಬರಕಟ್ಟು (ಚಿಕ್ಕಿ) ನೆಲಗಡಲೆ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ತಯಾರಿಸಿದ ಚಿಕ್ಕಿ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಎಲ್ಲೆಡೆಯೂ ಅಗ್ಗದ ದರದಲ್ಲಿ ಲಭಿಸುತ್ತದೆ. ನಿತ್ಯವೂ ಕೊಂಚ ಪ್ರಮಾಣದಲ್ಲಿ ಚಿಕ್ಕಿಯನ್ನು ಸೇವಿಸಬಹುದು. ವಿಶೇಷವಾಗಿ ಚಳಿಗಾಲದಲ್ಲಿ ದೇಹಕ್ಕೆ ಈ ಬೆಲ್ಲದಿಂದ ಹೆಚ್ಚಿನ ಪ್ರಯೋಜನವಿದೆ.
ಬೆಲ್ಲವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಆದ್ದರಿಂದ ಇದು ರಕ್ತದೊತ್ತಡ ಇರುವವರಿಗೆ ಉತ್ತಮ ಮನೆ ಮದ್ದು ಹೌದು.
ಊಟದ ನಂತರ ಸಣ್ಣ ಬೆಲ್ಲದ ತುಣುಕನ್ನು ತಿಂದರೆ ಜೀರ್ಣಶಕ್ತಿಗೆ ಇದು ಸಹಾಯ ಮಾಡುತ್ತದೆ. ಜೀರ್ಣಶಕ್ತಿ ಪ್ರಕ್ರಿಯೆ ಸುಗಮವಾಗುವುದರಿಂದ ಅಸಿಡಿಟಿ, ತೇಗು, ಗ್ಯಾಸ್ ಟ್ರಬಲ್ನಿಂದ ಮುಕ್ತಿ ಸಾಧ್ಯ.
ಮಲಬದ್ಧತೆಗೆ ಬೆಲ್ಲ ಉತ್ತಮ ಪರಿಹಾರ. ಇದಕ್ಕೆ ಬೆಲ್ಲದಲ್ಲಿರುವ ಫೈಬರ್ ಅಂಶವೇ ಕಾರಣ.
ಬೆಲ್ಲದ ಉಪಯೋಗದಿಂದ ಯಕೃತ್ಗೂ ಉತ್ತಮ ಫಲಕಾರಿ. ಇದರೋಲಗಿನ ಜಿಂಕ್ ಅಂಶ ಯಕೃತ್ನ್ನು ಸ್ವಚ್ಛಗೊಳಿಸುತ್ತದೆ. ಆಯುರ್ವೇದದಲ್ಲಿ ಬೆಲ್ಲವನ್ನು ರಕ್ತ ಶುದ್ಧಿಗೆ ಮತ್ತು ಯಕೃತ್ ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾದ ಕೆಮ್ಮು, ಶೀತ, ಜ್ವರದಿಂದ ರಕ್ಷಣೆ ಸಾಧ್ಯ. ಒಂದು ಲೋಟ ನೀರಿಗೆ ಒಂದು ಟೀ ಚಮಚದಷ್ಟು ಬೆಲ್ಲದ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಶೀತ, ನೆಗಡಿ, ಬರುವುದನ್ನು ತಪ್ಪಿಸಬಹುದು.
ಬೆಲ್ಲವು ಶ್ವಾಸಕೋಶಗಳ ಸ್ವಚ್ಛತೆಗೊಳಿಸುತ್ತದೆ. ಇದರಿಂದ ಅಸ್ತಮಾ, ನ್ಯುಮೋನಿಯಾಗಳನ್ನು ಉಪಶಮನಗೊಳಿಸಬಹುದು.
ದೇಹದೊಳಗಿನ ಉಷ್ಣಾಂಶದ ಸಮತೋಲಕ್ಕೆ ಚಳಿಗಾಲದಲ್ಲಿ ಬೆಲ್ಲ ಸಹಕಾರಿ. ಕಬ್ಬಿಣಾಂಶ, ಜಿಂಕ್, ಮ್ಯಾಗ್ನೇಸಿಯಂ ಮತ್ತು ಪ್ರಾಸ್ಪರಸ್ನಂತಹ ಅಂಶಗಳು ಉಷ್ಣವನ್ನು ನಿಯಂತ್ರಿಸುತ್ತವೆ.
ಬೆಲ್ಲದೊಳಗಿನ ಕಬ್ಬಿಣಾಂಶವು ಗರ್ಭಿಣಿಯರಿಗೆ, ಅನಿಮಿಯಾದಿಂದ ಬಳಲುತ್ತಿರುವವರಿಗೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಉಪಯುಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.