ಸಿಂಪಲ್ ಆಗಿ ರುಚಿ, ರುಚಿ ಕುಂದಾಪುರ ಚಿಕನ್ ಸುಕ್ಕ ಮಾಡೋದು ಹೇಗೆ?
ಶ್ರೀರಾಮ್ ನಾಯಕ್, Oct 31, 2019, 7:46 PM IST
ಚಿಕನ್ ಎಂದಾಗ ಎಲ್ಲರ ಬಾಯಿಯಲ್ಲಿ ನೀರು ಬಂದೆ ಬರುತ್ತದೆ. ಚಿಕನ್ ನಿಂದ ಅನೇಕ ರೀತಿಯಲ್ಲಿ ಅಡುಗೆಯನ್ನು ಮಾಡಬಹುದಾಗಿದೆ. ಅದರಲ್ಲೂ ಕುಂದಾಪುರ ಚಿಕನ್ ಸುಕ್ಕ ತುಂಬಾ ಸ್ವಾದಿಷ್ಟವಾಗಿ ಇರುತ್ತದೆ. ಇದನ್ನು ನೀರ್ ದೋಸೆ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕುಂದಾಪುರ ಚಿಕನ್ ಸುಕ್ಕ ತಯಾರಿಸಿ ನೋಡಿ ತುಂಬಾ ಸಿಂಪಲ್. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಕುಂದಾಪುರ ಚಿಕನ್ ಸುಕ್ಕ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…
ಬೇಕಾಗುವ ಸಾಮಾಗ್ರಿಗಳು:
ಚಿಕನ್ 1ಕೆ.ಜಿ, ಒಣಮೆಣಸು 13 ರಿಂದ 15 , ಗರಂ ಮಸಾಲ 1 ಚಮಚ, ಈರುಳ್ಳಿ4 ,ತೆಂಗಿನಎಣ್ಣೆ 1/2ಕಪ್, ಬೆಳ್ಳುಳ್ಳಿ 5 ಎಸಳು, ಚಕ್ಕೆ, ಲವಂಗ, ಏಲಕ್ಕಿ, ಸಾಸಿವೆ, ಕಾಳುಮೆಣಸು, ಅರಿಶಿನಪುಡಿ 1 ಚಮಚ, ಜೀರಿಗೆ 1ಚಮಚ, ಕೊತ್ತಂಬರಿ 2 ಚಮಚ, ಕರಿಬೇವು, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಕೊತ್ತಂಬರಿ, ಜೀರಿಗೆ, ಗರಂಮಸಾಲೆ, ಕರಿಬೇವು, ಒಣಮೆಣಸು. ಅರಿಶಿನ ಪುಡಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಎರಡು ಮೂರು ನಿಮಿಷಗಳ ತನಕ ಹುರಿದಿಟ್ಟುಕೊಳ್ಳಿ.ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಹುರಿಯಿರಿ ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ತುಂಡು ಮಾಡಿಟ್ಟ ಚಿಕನ್ ಹಾಕಿ ಅದಕ್ಕೆ ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ, ನಂತರ ಸ್ವಲ್ಪ ನೀರನ್ನು ಹಾಕಿ ಬೇಯಿಸಿರಿ. ಮೊದಲು ಹುರಿದಿಟ್ಟ ಮಸಾಲೆ(ಕುಂದಾಪುರ ಚಿಕನ್ ಮಸಾಲ ಪೌಡರ್ ಸಿಗುತ್ತದೆ)ಯ ಜೊತೆಗೆ ತೆಂಗಿನಕಾಯಿ ತುರಿ ಜೊತೆಗೆ ಹುಳಿ ಹಾಕಿ ರುಬ್ಬಿರಿ. ನಂತರ ಬೇಯಿಸಿಟ್ಟ ಚಿಕನ್ಗೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿರಿ. ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಸಾಸಿವೆ, ಬೆಳ್ಳುಳ್ಳಿ,ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ಕುಂದಾಪುರ ಚಿಕನ್ ಸುಕ್ಕ ರೆಡಿ.
ನೀರ್ ದೋಸೆ ಜೊತೆ ಸವಿಯಲು ಕುಂದಾಪುರ ಚಿಕನ್ ಸುಕ್ಕ ತುಂಬಾ ಸ್ವಾದಿಷ್ಟವಾಗಿ ಇರುತ್ತದೆ. ಒಂದು ಸಲ ಈ ರೆಸಿಪಿ ಮಾಡಿ ನೋಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.