ಗಳಿಸಿದ ಹಣವನ್ನ ಉಳಿಸೋದು ಹೇಗೆ, ಇಲ್ಲಿದೆ… ಮಾರ್ಗೋಪಾಯ !


Team Udayavani, Apr 9, 2018, 3:29 PM IST

Savings-700.jpg

ಸಂಸ್ಕೃತದಲ್ಲಿ ಒಂದು ಮಾತಿದೆ: ಧರ್ಮೋ ರಕ್ಷತಿ ರಕ್ಷಿತಃ. ಎಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ನಾವು ಕಷ್ಟಪಟ್ಟು ಸಂಪಾದಿಸುವ ಹಣದ ಬಗ್ಗೆಯೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಯಾರು ತಮ್ಮ ಕಷ್ಟದ ಸಂಪಾದನೆಯ ಹಣವನ್ನು ಉಳಿಸುತ್ತಾರೋ ಅವರನ್ನು ಆ ಹಣ ಆಪತ್ಕಾಲದಲ್ಲಿ ಉಳಿಸುತ್ತದೆ. ಈ ಮಾತಿನ ಒಳಾರ್ಥ ಸ್ಪಷ್ಟವಿದೆ. ನಾವು ಸಂಪಾದಿಸಿದ ಹಣವನ್ನು ನಾವು ಉಳಿಸಬೇಕು !

ಇವತ್ತಿನ ಕಾಲದಲ್ಲಿ ತಿಂಗಳ ಸಂಬಳ ಪಡೆದು ಬದುಕವವರಿಗೆ ಆ ಹಣ ತಿಂಗಳು ಪೂರ್ತಿ ಕೈಯಲ್ಲಿ ಉಳಿಯುವುದಿಲ್ಲ; ಎಲ್ಲವೂ ಖರ್ಚಾಗಿ ಹೋಗುತ್ತಿದೆ. ಏಕೆಂದರೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನ ಮುಖೀಯಾಗಿವೆ. ಜೀವನ ವೆಚ್ಚವು ತಿಂಗಳ ಸಂಬಳದಿಂದ ಭರಿಸಲಾಗದಷ್ಟು ಜಾಸ್ತಿಯಾಗಿದೆ. ಮೇಲಾಗಿ ಜೀವನ ಶೈಲಿ ವೆಚ್ಚವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವವರೇ ಅಧಿಕ. ಹಾಗಿರುವಾಗ ಉಳಿತಾಯ ಹೇಗೆ ಸಾಧ್ಯ ?

ಆಧುನಿಕ ಮಣಿಪಾಲದ ರೂವಾರಿ ಡಾ. ಟಿ ಎಂ ಎ ಪೈ ಅವರು ತಮ್ಮ ಸಹೋದರ ಉಪೇಂದ್ರ ಪೈ ಅವರೊಂದಿಗೆ ಸಿಂಡಿಕೇಟ್ ಬ್ಯಾಂಕನ್ನು ಕಟ್ಟಿ ಬೆಳೆಸಿದವರು. ಪಿಗ್ಮಿ ಉಳಿತಾಯದ ಪರಿಕಲ್ಪನೆಯ ರೂವಾರಿ ಅವರು. ಡಾ. ಪೈಗಳು ಜನಸಾಮಾನ್ಯರಿಗೆ ಉಳಿತಾಯದ ಬೋಧನೆ ಮಾಡುತ್ತಿದ್ದುದು ಹೀಗೆ : ತಿಂಗಳ ಆದಾಯದಲ್ಲಿ ಉಳಿತಾಯ ಮೊತ್ತವನ್ನು ಕಳೆದು ಉಳಿಯುವ ಹಣವನ್ನಷ್ಟೇ ನೀವು ಖರ್ಚು ಮಾಡಬೇಕು; ಹಾಗೆ ಮಾಡಿದರೆ ಮಾತ್ರವೇ ಉಳಿತಾಯ ಸಾಧ್ಯ !

ಡಾ. ಪೈಗಳ ಮಾತು ಇಂದಿಗೂ ಪ್ರಸ್ತುತ ಮತ್ತು ಅಕ್ಷರಶಃ ನಿಜ. ಮಧ್ಯಮ ಹಾಗೂ ಬಡ ವರ್ಗದವರು ತಿಂಗಳ ಉಳಿತಾಯದ ಮೊತ್ತವನ್ನು ಮೊದಲೇ ತೆಗೆದಿರಿಸದಿದ್ದರೆ ಗಳಿಸಿದ್ದೆಲ್ಲ ಖರ್ಚಾಗುತ್ತದೆ. ನಾವು ಹಣ ಉಳಿಸದಿದ್ದರೆ ಆಪತ್ಕಾಲದಲ್ಲಿ ಹಣ ನಮ್ಮನ್ನು ಉಳಿಸುವುದಿಲ್ಲ. 

ಉಳಿತಾಯ ಮಾಡಬೇಕೆಂಬುದೇನೋ ಸರಿ. ಆದರೆ ಉಳಿತಾಯ ಮಾಡಿದ ಹಣ ಮರಿ ಇಡುವುದು ಬೇಡವೇ ? ಅದು ಆಕರ್ಷಕ ಬಡ್ಡಿಯ ರೂಪದಲ್ಲಿ  ಬೆಳೆದರೆ ಮಾತ್ರವೇ ಉಳಿತಾಯ ಪ್ರವೃತ್ತಿಗೆ ಪ್ರೋತ್ಸಾಹ, ಉತ್ತೇಜನ ದೊರಕುತ್ತದೆ. ಆದುದರಿಂದಲೇ ಹಣ ಉಳಿತಾಯ ಮಾಡುವವರು ಅದನ್ನು ಎಲ್ಲಿ ತೊಡಗಿಸಿದರೆ ಹೆಚ್ಚು ಇಳುವರಿ ಬರುತ್ತದೆ ಎಂಬುದನ್ನು ತಿಳಿಯಲು ಸದಾ ಉತ್ಸುಕರಾಗಿರುತ್ತಾರೆ. 

ಜೀವನದಲ್ಲಿ ಮನುಷ್ಯನಿಗೆ ಹಲವಾರು ಗುರಿಗಳಿರುತ್ತವೆ. ಉನ್ನತ ಶಿಕ್ಷಣ, ಸ್ವಂತ ಮನೆ, ಮಕ್ಕಳ ಶಿಕ್ಷಣ, ಮಕ್ಕಳ ಮದುವೆ, ಹಂಗಿಲ್ಲದ ನಿವೃತ್ತಿಯ ಬದುಕು ಹೀಗೆ ಪಟ್ಟಿ ದೊಡ್ಡದಿರುತ್ತದೆ. ಈ ಗುರಿಗಳನ್ನು ಸಾಧಿಸಲು ಮನುಷ್ಯನಿಗೆ ಹಣ ತುಂಬಾ ಮುಖ್ಯ. ಅಂತೆಯೇ ಸಂಪಾದನೆಯ ಹಣವನ್ನು ಉಳಿಸಿ ತೊಡಗಿಸುವುದು ಕೂಡ ಅಷ್ಟೇ ಮುಖ್ಯ.

ಹಾಗೆ ಉಳಿಸಿ ತೊಡಗಿಸಿದ ಹಣ ಅಧಿಕ ಇಳುವರಿಯನ್ನು ತರುವುದು ಕೂಡ ಮುಖ್ಯ.ಏಕೆಂದರೆ ಬದುಕಿನ ವಿಭಿನ್ನ ಗುರಿಗಳನ್ನು ಸಾಧಿಸಲು ಉಳಿಸಿ ತೊಡಗಿಸಿದ ಹಣ ಹಲವು ಪಟ್ಟು ಬೆಳೆದು ಹೆಮ್ಮರವಾಗಬೇಕು. ಆದುದರಿಂದ ಈ ಗುರಿಯನ್ನು ಸಾಧಿಸಲು ನಾವು ಮೂರು ಅತೀ ಮುಖ್ಯ ಚಿನ್ನದ ನಿಯಮಗಳನ್ನು ಪಾಲಿಸಲೇ ಬೇಕು.

ಅವೆಂದರೆ : 1. ಸಣ್ಣ ವಯಸ್ಸಿನಲ್ಲೇ ಹಣ ಹೂಡಿಕೆಯನ್ನು ಆರಂಭಿಸುವುದು. 2. ಕ್ರಮಬದ್ಧವಾಗಿ ಹಣ ಹೂಡುವುದು. 3. ದೀರ್ಘಾವಧಿಗೆ ಹಣವನ್ನು ತೊಡಗಿಸುವುದು, ಅರ್ಥಾತ್ ಎಂದಿಗೂ ಕಿರು ಅವಧಿಗೆ ಅಲ್ಲ ! 

ನಾವು ದೀರ್ಘಾವಧಿಗೆ ಹೂಡುವ ಹಣ ದುಪ್ಪಟ್ಟು, ನಾಲ್ಕು ಪಟ್ಟು, ಎಂಟು ಪಟ್ಟು, ಹದಿನಾರು ಪಟ್ಟು, 32 ಪಟ್ಟು, 64 ಪಟ್ಟು ಬೆಳೆಯುತ್ತಾ ಹೋಗುವುದಕ್ಕೆ ಕಾಂಪೌಂಡಿಂಗ್ ಎಂದು ಹೂಡಿಕೆ ಭಾಷೆಯಲ್ಲಿ ಹೇಳುತ್ತಾರೆ. ಸಣ್ಣ ವಯಸ್ಸಿನಲ್ಲೇ ನೀವು ಆರಂಭಿಸುವ ದೀರ್ಘಾವಧಿಯ ಪೋಸ್ಟಲ್ ಆರ್ ಡಿ ಇದಕ್ಕೊಂದು ಅತ್ಯಂತ ಮಹತ್ವದ ಉದಾಹರಣೆ ಎನ್ನಬಹುದು. ಕಿರು ಅವಧಿಗೆ ಹೂಡುವ ಹಣ ಆ ಅವಧಿ ಮುಗಿದಾಕ್ಷಣ ಕೈ ಸೇರಿ ಒಡನೆಯೇ ನೀರಿನಂತೆ ಖರ್ಚಾಗುವುದು ನಮ್ಮ ನಿಮ್ಮ ಎಲ್ಲರ ಅನುಭವ. 

ಹಣ ಹೂಡುವುದಕ್ಕೆ ಯಾವ ಮಾಧ್ಯಮ ಅತ್ಯಂತ ಆಕರ್ಷಕ ಎಂಬ ಪ್ರಶ್ನೆಗೆ ನಾವು ಈ ಕೆಳಗಿನಂತೆ ಅವುಗಳನ್ನು ಪಟ್ಟಿ ಮಾಡಬಹುದು.

1. ಈಕ್ವಿಟಿ ಶೇರುಗಳು 
2. ಬಾಂಡ್‌ ಗಳು 
3. ಮ್ಯೂಚುವಲ್ ಫ‌ಂಡ್‌
4. ನಿರಖು ಠೇವಣಿಗಳು (FD)
5. ಇತರ ಮಾರ್ಗಗಳು. 

ಟಾಪ್ ನ್ಯೂಸ್

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

1-fish

Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.