ಭಾರತೀಯ ಮಹಿಳಾ ಕ್ರಿಕೆಟ್ ಲೋಕಕ್ಕೆ ಶಕ್ತಿ ತುಂಬಿದ್ದೇ ಈ ನಾಲ್ವರು!


Team Udayavani, Nov 10, 2018, 4:51 PM IST

cri-wmn.jpg

ಕ್ರಿಕೆಟ್ ಎಂದರೆ ಭಾರತದಲ್ಲಿ ಒಂದು ಧರ್ಮದಂತೆ ಆಚರಿಸಲಾಗುತ್ತದೆ. ಬೇರೆ ಎಲ್ಲಾ ಕ್ರೀಡೆಗಳಿಗಿಂತ ಕ್ರಿಕೆಟ್ ಗೆ ಸಿಗುವ ಗೌರವ  ಪ್ರೋತ್ಸಾಹ ಹೆಚ್ಚು. ಆದರೆ ಪುರುಷರ ಕ್ರಿಕೆಟ್ ಗೆ ಸಿಗುವ  ಪ್ರೋತ್ಸಾಹ ಭಾರತೀಯ ಮಹಿಳಾ ಕ್ರಿಕೆಟ್ ಗೆ ದೊರೆತಿಲ್ಲ. 1976ರಿಂದಲೇ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತೀಯ ಮಹಿಳಾ ಮಣಿಗಳು ಆಡಲು ಆರಂಭಿಸಿದ್ದರೂ ಪುರುಷರ ತಂಡದಂತೆ ಪ್ರಚಾರ ಪ್ರೋತ್ಸಾಹ  ಸಿಗಲಿಲ್ಲ. 2015ರ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತೀಯ ತಂಡದ ಅಮೋಘ ಪ್ರದರ್ಶನದಿಂದ ಕೂಟದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು. ಇದು ದೇಶದೆಲ್ಲೆಡೆ ಮಹಿಳಾ ಕ್ರಿಕೆಟ್ ಪರವಾದ ಗಾಳಿ ಬೀಸಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿತ್ತು. ಈಗ ಭಾರತೀಯ ಮಹಿಳಾ ತಂಡದ ಸುವರ್ಣ ಯುಗ. ಹೊಸ ತಾರೆಯರ ಉದಯವಾಗುತ್ತಿದೆ. ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಈ ನಾಲ್ವರು ಕ್ರಿಕೆಟಿಗರು ಭಾರತೀಯ ಮಹಿಳಾ ತಂಡದ ಇಂದಿನ ಈ ಸುಸ್ಥಿತಿಗೆ ಕಾರಣರು. ಭಾರತೀಯ ಮಹಿಳಾ ತಂಡದ ನಾಲ್ವರು ಶ್ರೇಷ್ಠ ಆಟಗಾರ್ತಿಯರ ಪರಿಚಯ ಇಲ್ಲಿದೆ.

1. ಮಿಥಾಲಿ ರಾಜ್
ಭಾರತೀಯರಿಗೆ ಚಿರಪರಿಚಿತ ಹೆಸರಿದು. ಭಾರತೀಯ ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕಿ ಈ ಮಿಥಾಲಿ ರಾಜ್. 35 ರ ಹರೆಯದ  ಮಿಥಾಲಿ ಮಹಿಳಾ ತಂಡದ ತೆಂಡೂಲ್ಕರ್ ಎಂದೇ ಖ್ಯಾತಿಯಾದವರು. 1999ರಲ್ಲಿ ತನ್ನ 16ನೇ ವಯಸ್ಸಿನಲ್ಲಿ ಐರ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ  ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಿಥಾಲಿ ಮೊದಲ ಪಂದ್ಯದಲ್ಲೇ ಭರ್ಜರಿ ಅಜೇಯ 114  ರನ್ ಗಳಿಸಿ ಕ್ರಿಕೆಟ್ ವಲಯದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತನ್ನ19 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಈಕೆ ಭಾರತದ ಪರ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರು.
 
194 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಮಿಥಾಲಿ ರಾಜ್ 50.18ರ ಸರಾಸರಿಯಲ್ಲಿ 6373 ರನ್ ಗಳಿಸಿದ್ದಾರೆ. 74 ಟಿ-ಟ್ವೆಂಟಿ ಪಂದ್ಯಗಳಲ್ಲಿ 2015 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಆರು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಮಿಥಾಲಿ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮಿಥಾಲಿ ಜಾಗತಿಕ ಮಹಿಳಾ ಕ್ರಿಕೆಟ್ ನ ಅತ್ಯುನ್ನತ ಆಟಗಾರ್ತಿ ಮತ್ತು ಆಟದ ಶ್ರೇಷ್ಠ ರಾಯಭಾರಿ ಎನ್ನಬಹುದು.

2. ಜೂಲನ್ ಗೋಸ್ವಾಮಿ
ಜೂಲನ್ ನಿಶಿತ್ ಗೋಸ್ವಾಮಿ 1982ರ ನವೆಂಬರ್ 25ರಂದು ಪಶ್ಚಿಮ ಬಂಗಾಲದಲ್ಲಿ ಜನಿಸಿದರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ತಮ್ಮ ವೇಗದ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ನಿಂದ ವಿಶ್ವದ ಗಮನ ಸೆಳೆದವರು.  2002ರಲ್ಲಿ ತನ್ನ 19ರ ಹರೆಯದಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ  ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. 2007ರ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಗೆಲುವಿನಲ್ಲಿ ಜೂಲನ್ ಪಾತ್ರ ಮಹತ್ವದ್ದಾಗಿತ್ತು. ಸುಮಾರು 25 ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಜೂಲನ್ ಮುನ್ನಡೆಸಿದ್ದರು. 


ಜೂಲನ್ ಗೋಸ್ವಾಮಿ ಅಂತರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಮೊದಲು 200 ವಿಕೆಟ್ ಗುರಿ ತಲುಪಿದ ಮೊದಲಿಗರು. ಮತ್ತು ಅತೀ ಹೆಚ್ಚು ವಿಕೆಟ್ ಪಡೆದವರು ( 207ವಿಕೆಟ್ ).166 ಏಕದಿನ ಪಂದ್ಯಗಳನ್ನಾಡಿರುವ ಜೂಲನ್ 995 ರನ್ ಕೂಡಾ ಗಳಿಸಿದ್ದಾರೆ.  10 ಟೆಸ್ಟ್ ಪಂದ್ಯಗಳಿಂದ 40 ವಿಕೆಟ್ ಕಬಳಿಸಿರುವ ಜೂಲನ್ ಮೂರು ಬಾರಿ ಐದು ವಿಕೆಟ್  ಪಡೆದ ಸಾಧನೆ ಮಾಡಿದ್ದಾರೆ. 60 ಟಿ-ಟ್ವೆಂಟಿ ಪಂದ್ಯಗಳಿಂದ 56 ವಿಕೆಟ್ ಪಡೆದಿರುವ ಜೂಲನ್ 2018ರ ಆಗಸ್ಟ್ ನಲ್ಲಿ ಟಿ-ಟ್ವೆಂಟಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಐಸಿಸಿ ವರ್ಷದ ಕ್ರಿಕೆಟರ್, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಜೂಲನ್ ಗೋಸ್ವಾಮಿ ಮುಡಿಗೇರಿವೆ. ಈ ವೇಗದ ಮಹಿಳಾ ಬೌಲರ್ ವಿಶ್ವ ಕಂಡ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರು.

3. ಅಂಜುಮ್ ಚೋಪ್ರಾ
ಮಿಥಾಲಿ ರಾಜ್, ಜೂಲನ್ ಗೋಸ್ವಾಮಿಗಿಂತ ಮೊದಲು ಭಾರತೀಯ ಮಹಿಳಾ ತಂಡದಲ್ಲಿ ತಾರೆಯಾಗಿ ಬೆಳೆದವರು ಅಂಜುಮ್ ಚೋಪ್ರಾ. ದೆಹಲಿ ಮೂಲದ ಆಟಗಾರ್ತಿ 1995ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆಗ ಅಂಜುಮ್ ವಯಸ್ಸು ಕೇವಲ17. ತನ್ನ ಕ್ರಿಕೆಟ್ ಜೀವನದ ಎರಡನೇ ಸರಣಿಯಲ್ಲಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

2000 ವಿಶ್ವಕಪ್ ಕೂಟದಲ್ಲಿ ತಂಡದ ನಾಯಕತ್ವ ವಹಿಸಿದ ಅಂಜುಮ್ ಎರಡು ಪಂದ್ಯಶ್ರೇಷ್ಠ  ಪ್ರಶಸ್ತಿ ಜೊತೆಗೆ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ತಂಡ ಸೆಮಿ ಫೈನಲ್ ನಲ್ಲಿ ಸೋಲುಂಡರೂ ಕೂಡಾ ಅಂಜುಮ್ ವಿಶ್ವ ಕ್ರಿಕೆಟ್ ನಲ್ಲಿ ಮನೆಮಾತಾದರು. 127  ಏಕದಿನ ಪಂದ್ಯಗಳಿಂದ 2,856 ರನ್ ಗಳಿಸಿರುವ ಅಂಜುಮ್ ಚೋಪ್ರಾ 9 ವಿಕೆಟ್ ಕೂಡಾ ಪಡೆದಿದ್ದರು.

ಭಾರತದ ಮೊದಲ ವಿದೇಶಿ ನೆಲದ ಟೆಸ್ಟ್ ಜಯದಲ್ಲಿ ಅಂಜುಮ್ ಪಾತ್ರ ಮಹತ್ತರವಾದದ್ದು. 2005ರ ವಿಶ್ವಕಪ್, 2009ರ ವಿಶ್ವಕಪ್ ಗಳಲ್ಲಿ ಭಾರತದ ಪರ ಮಿಂಚಿದ್ದ ಅಂಜುಮ್ ಚೋಪ್ರಾ ಒಟ್ಟು ಆರು ವಿಶ್ವಕಪ್ ಆಡಿದ್ದರು. ಭಾರತದ ಪರ 100 ಏಕದಿನ ಪಂದ್ಯ ಆಡಿದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅಂಜುಮ್ ಚೋಪ್ರಾರದ್ದು. 2012ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟಿಗೂ ವಿದಾಯ ಹೇಳಿದ ಅಂಜುಮ್ ಸದ್ಯ ವೀಕ್ಷಕ ವಿವರಣೆಕಾರರಾಗಿದ್ದಾರೆ.  ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಮೂರು ಬಾರಿ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿ ಪಡೆದ ಸಾಧನೆ ಅಂಜುಮ್ ಚೋಪ್ರಾರದ್ದು.

4. ಡಯಾನ ಎಡುಲ್ಜಿ
ಈ ಹೆಸರು ಅನೇಕ ಭಾರತೀಯರಿಗೆ ಗೊತ್ತಿರಲಿಕ್ಕಿಲ್ಲ. ಮುಂಬೈ ಮೂಲದ ಈ ಆಟಗಾರ್ತಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದು 1976ರಲ್ಲಿ . ಎಡಗೈ ಸ್ಪಿನ್ನರ್ ಆಗಿದ್ದ ಡಯಾನ 20 ಟೆಸ್ಟ್ ಪಂದ್ಯಗಳಿಂದ 63 ವಿಕೆಟ್ ಪಡೆದಿದ್ದಾರೆ.  34 ಏಕದಿನ ಪಂದ್ಯಗಳನ್ನಾಡಿ 46 ವಿಕೆಟ್ ಇವರ ಹೆಸರಲ್ಲಿದೆ.

1978 ರಲ್ಲಿ ಭಾರತೀಯ ತಂಡದ ನಾಯಕತ್ವ ಕೂಡಾ ವಹಿಸಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಎಸೆತಗಾರಿಕೆ ನಡೆಸಿದ ಭಾರತೀಯ ದಾಖಲೆ ಇನ್ನೂ ಡಯಾನ ಹೆಸರಲ್ಲಿದೆ. ( 5098). ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಡಯಾನ. ಪದ್ಮಶ್ರೀ ಪ್ರಶಸ್ತಿ ಕೂಡಾ ಇವರ ಸಾಧನೆಗೆ ಸಂದಿದೆ.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.