ಬೆಂಕಿಯಲ್ಲಿ ಅರಳಿದ ಹೂ; ಸಾಮಾನ್ಯ ಹುಡುಗಿಯೊಬ್ಬಳ ಬದುಕು ವೈರಲ್ ಆದ ಕಹಾನಿ !
ಸುಹಾನ್ ಶೇಕ್, Feb 26, 2020, 7:10 PM IST
ಜೀವನ ಅಂದುಕೊಂಡು ಜೀವಿಸುವುದಲ್ಲ. ನೊಂದುಕೊಂಡು,ಸಹಿಸಿಕೊಂಡು, ಹಿಂದಿನದನ್ನು ನೆನೆಸಿಕೊಂಡು, ಮುಂದಿನದನ್ನು ಬಯಸಿಕೊಂಡು, ನೋವವನ್ನು ಮರೆತುಕೊಂಡು, ನಲಿವಿನಲ್ಲಿ ಬೆರೆತುಕೊಂಡು ಸಾಗುವುದೇ ಜೀವನ.
ಎಲ್ಲರಿಗೂ ತಾನು ಅಂದುಕೊಂಡ ಬದುಕು ಲಭಿಸದು. ಶ್ರೀಮಂತನಾಗಬೇಕು, ಹಾಯಾಗಿ ಬದುಕಬೇಕು, ನಾಲ್ಕು ಅಂತಸ್ತಿನ ಮನೆ ಕಟ್ಟಿಕೊಂಡು ಯಾರ ಜಂಜಾಟವೇ ಇಲ್ಲದೆ ಕುಟುಂಬವನ್ನು ನಿಭಾಯಿಸುತ್ತಾ ಹೋಗಬೇಕೆನ್ನುವ ವ್ಯಕ್ತಿಗೆ ಆ ದೇವರು ಬದುಕಿನಲ್ಲಿ ಈ ಎಲ್ಲಾ ಅದೃಷ್ಟವನ್ನು ಅನುಭವಿಸುವ ಮುನ್ನ ಅತ್ಯಂತ ಕರಾಳ ಬದುಕಿನ ದಿನಗಳನ್ನು ಸವಾಲಿನ ರೂಪದಲ್ಲಿ ಪ್ರತಿಯೊಬ್ಬನಿಗೂ ಅಥವಾ ಪ್ರತಿಯೊಬ್ಬಳಿಗೂ ಎದುರು ಇಡುತ್ತಾನೆ. ಕಷ್ಟದ ಅಲೆಗಳ ಮುಂದೆ ಆತ್ಮವಿಶ್ವಾಸ ಹಾಗೂ ಸ್ಥೈರ್ಯದ ರೆಕ್ಕೆಗಳನ್ನು ಬಳಸಿಕೊಂಡು ಈಜಿಕೊಂಡು ಹೋಗಿ ದಡ ಸೇರುವವರು ಮಾತ್ರ ದೇವರು ಕೊಟ್ಟ ಸವಾಲನ್ನು ಗೆಲ್ಲಲು ಸಾಧ್ಯ.
ಕೇರಳದ ಕ್ಯಾ ಕಲ್ಲಿಕೋಟೆಯ ಹಿಂದುಳಿದ ಗ್ರಾಮ ಮುಕ್ಕಂ. ಸರಿಯಾದ ಸೌಲಭ್ಯ, ಸೌಕರ್ಯವಿಲ್ಲದ ಗ್ರಾಮದಲ್ಲಿ ಬಾಲ್ಯದ ಆಟ, ಪಾಠವನ್ನು ಆಡುತ್ತಾ, ಬೆಳೆಯುತ್ತಿರಬೇಕಾದ ಜಾಸ್ಮೀನ್ ಎಂ. ಮೂಸಾ ಎನ್ನುವ ಹುಡುಗಿ ಈ ಬಾಲ್ಯದ ಕನಸಿನಿಂದ ವಂಚಿತರಾಗಿ ಕಾನ್ವೆಂಟ್ ಶಾಲೆಯೊಂದರಲ್ಲಿ ಕಲಿಯುತ್ತಾ ಆಗಾಗ ಐಸ್ ಕ್ಯಾಂಡಿಗಳನ್ನು ತಿನ್ನುತ್ತಾ ಮನೆಯ ದಾರಿಯಲ್ಲಿ ಬರುವ ಅಪರೂಪದ ದಿನಗಳಲ್ಲಿ, ಒಂದು ದಿನ ಬದುಕು ಕರಾಳತೆಯ ನೆರಳಿನಲ್ಲಿ ನಡುಗುವಂತೆ ಮಾಡುತ್ತದೆ.!
ಜಾಸ್ಮೀನ್ ಗೆ ಹದಿನೇಳು ಪೂರ್ತಿಯಾಗಿ ಹದಿನೆಂಟನೆಯ ವಯಸ್ಸಿನ ಸಮೀಪದಲ್ಲಿದ್ದರು. ಶಾಲೆಯಿಂದ ಮನೆ, ಮನೆಯಿಂದ ಶಾಲೆ. ಇವಷ್ಟೇ ಬದುಕಿನ ದಿನವಾಗಿದ್ದ ಸಮಯದಲ್ಲಿ ಅದೊಂದು ದಿನ ಮನೆಗೆ ಬಂದು ನೋಡಿದಾಗ, ಮನೆಯಿಡೀ ಯಾರೋ ದೂರದ ಸಂಬಂಧಿಕರು ಬಂದಿದ್ದಾರೆ ಅನ್ನಿಸುವಂತಹ ವಾತಾವಾರಣ ಇತ್ತು. ಸಂಪ್ರದಾಯಸ್ಥ ರಾಗಿದ್ದ ಜಾಸ್ಮೀನ್ ತಂದೆ , ಮಗಳ ಆಗಮನವನ್ನು ಕಂಡು ಕೊಡಲೇ ಬಂದಿರುವ ನೆಂಟರಿಗೆ ಚಹಾ ಕೊಟ್ಟು ಬಾ ಎಂದರು. ಅಪ್ಪನ ಈ ಮಾತಿಗೆ ಮಗಳು ಜಾಸ್ಮೀನ್ ಅರ್ಧ ಹೆದರಿಕೆಯಿಂದಲೂ, ಕೊಂಚ ಹಿಂಜರಿಕೆಯಿಂದಲೂ ಅಪ್ಪನ ನುಡಿಗೆ ನಡೆಯಾಗಿ ಚಹಾ ಕೊಟ್ಟು ಬಂದಳು.
ಬಳಿಕ ಜಾಸ್ಮೀನ್ ಗೆ ತಿಳಿದ ವಿಷಯ ಅವಳನ್ನು ಕುಗ್ಗಿಸಿ ಬಿಟ್ಟಿತು. ಅವಳು ಚಹಾ ಕೊಟ್ಟದ್ದು ತನ್ನನ್ನು ಮದುವೆಯಾಗಲು ಬಂದ ಹುಡುಗನ ಮನೆಯವರಿಗೆಂದು ತಿಳಿದಾಗ ಕಾಲ ಮಿಂಚಿ ಹೋಗಿತ್ತು. ಇದಾದ ಒಂದೇ ವಾರದ ನಂತರ ಹದಿನೆಂಟು ತುಂಬಿದ ಜಾಸ್ಮೀನ್ ಕಲಿಯುವ ಕನಸು, ಅಮ್ಮನ ಕೆಲಸಕ್ಕೆ ಜೊತೆಯಾಗಿ ಹರಟೆ ಹೊಡೆಯುತ್ತಿದ್ದ ಕ್ಷಣಗಳು, ಭಯದಿಂದಲೇ ಅಪ್ಪನೊಂದಿಗೆ ಇರಾದೆಯನ್ನು ಹೇಳುತ್ತಿದ್ದ ದಿನಗಳು ಇವೆಲ್ಲಾ ಯೋಚಿಸುವ ಮುನ್ನವೇ, ತನಗೆ ಇಷ್ಟು ಬೇಗ ಮದುವೆ ಬೇಡ ಎನ್ನುವ ಮಾತಿಗೆ ಯಾರೂ ಗಮನವೇ ನೀಡದೆ ಮದುವೆ ನಡೆದು ಹೋಯಿತು. ಜಾಸ್ಮೀನ್ ತನ್ನ ಮದುವೆಯ ಹುಡುಗನನ್ನು ನೋಡಿದ್ದು ಅದೇ ಮೊದಲು. ಅದು ಮದುವೆಯ ದಿನದಂದು.
ಮದುವೆಯ ಮೊದಲ ರಾತ್ರಿಯೆಂದು ತನ್ನ ಗಂಡನನ್ನು ನೋಡಿ, ಇವನ ವರ್ತನೆ ವಿಚಿತ್ರ ಎಂದುಕೊಂಡು ಸುಮ್ಮನೆ ಕೂತಾಗ ಅಚಾನಕ್ಕಾಗಿ ಗಂಡ ಜಾಸ್ಮೀನ್ ಳನ್ನು ಬಲವಂತವಾಗಿ ಎಳೆದುಕೊಂಡು, ಅವಳ ಮೇಲೆ ತನ್ನ ಬಲವನ್ನೆಲ್ಲಾ ಹಾಕಿ, ಆಕೆಯನ್ನು ಹಿಂಸಿಸುತ್ತಾನೆ. ಜಾಸ್ಮೀನ್ ಹಿಂಸೆಯನ್ನು ಸಹಿಸಲಾಗೆದೆ ಕಿರುಚುತ್ತಾಳೆ. ಆದರೆ ಅವಳ ಧ್ವನಿಗೆ ಅಲ್ಲಿ ಯಾರೂ ಕಿವಿಗೂಡಲಿಲ್ಲ. ಇದು ದಿನನಿತ್ಯ ಮುಂದುವರೆಯುತ್ತದೆ. ಜಾಸ್ಮೀನ್ ಳನ್ನು ಹೊಡೆಯುವುದು, ಹಿಂಸಿಸುವುದು. ಗಂಡನ ಈ ವರ್ತನೆಯ ಮೂಲವನ್ನು ಅರಿತುಕೊಂಡಾಗ ಆತನಿಗೆ “ ಆಟಿಸ್ಟಿಕ್ “ ಸಮಸ್ಯೆ( ತಲೆ ಭಾಗದ ನರದ ಸಮಸ್ಯೆ) ಇದೆಯೆಂದು ತಿಳಿಯುತ್ತದೆ. ಶೀಘ್ರದಲ್ಲಿ ಜಾಸ್ಮೀನ್ ಮನೆಯವರ ಬಳಿ ತನಗಾದ ತೊಂದರೆಯನ್ನು ಹೇಳಿಕೊಂಡು ಗಂಡನಿಂದ ವಿಚ್ಛೇದನವನ್ನು ಪಡೆಯುತ್ತಾರೆ. ಆದರೆ ಊರಿಗೆ ಬರುವ ಸಮಯದಲ್ಲಿ ಊರಿನ ಜನರೆಲ್ಲಾ ಅವಳನ್ನು ಗಂಡ ಬಿಟ್ಟು ಬಂದ ಹೆಣ್ಣೆನ್ನುವ ಅಪವಾದನೆಯನ್ನು ಹೊರಿಸಿ ಅವಮಾನ ಮಾಡುತ್ತಾರೆ. ಇದನ್ನು ಮನಗಂಡ ಮನೆಯವರು ಮತ್ತೆ ಜಾಸ್ಮೀನಳನ್ನು ಬೇರೆ ಹುಡುಗನೊಂದಿಗೆ ಮರು ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ.
ಈ ಬಾರಿ ಜಾಸ್ಮೀನ್ ಮದುವೆಯಾಗುವ ಹುಡುಗನ ಜೊತೆ ಮಾತಾಡಿನಾಡಿಕೊಂಡು, ತನ್ನ ಮೇಲಾದ ದೌರ್ಜನ್ಯ, ಹಿಂಸೆ, ತನಗೆ ವಿಚ್ಛೇದನ ಆದದ್ದು ಎಲ್ಲವನ್ನೂ ಹೇಳಿಕೊಂಡು, ಮದುವೆ ಆಗಲು ಬರುವ ಹುಡುಗನ ನಿರ್ಧಾರವನ್ನು ಕೇಳುತ್ತಾರೆ. ಎಲ್ಲವನ್ನು ಕೇಳಿದ ಹುಡುಗ ಮದುವೆ ಆಗಲು ಒಪ್ಪುತ್ತಾನೆ. ಜಾಸ್ಮೀನ್ ಗೆ ಈ ವಿಷಯ ತಿಳಿದು ಸಂತೋಷವಾಗುತ್ತದೆ. ತಾನು ಅಂದುಕೊಂಡ ಗುಣಗಳೆಲ್ಲಾ ಆ ಹುಡುಗನಲ್ಲಿ ಇರುತ್ತದೆ. ಹೀಗೆ ಮಾತುಕತೆ ಮುಗಿದು ಮದುವೆಯ ಬಂಧ ನೆರವೇರುತ್ತದೆ. ಆದರೆ ವಿಧಿ ಇಲ್ಲಿಯೂ ಜಾಸ್ಮೀನ್ ಜೀವನಕ್ಕೆ ಕೊಳ್ಳಿ ಇಟ್ಟು ಬಿಟ್ಟಿತು. ಮದುವೆಯ ಒಂದು ರಾತ್ರಿ ಇದ್ದಕ್ಕಿದ್ದಂತರ, ಜಸ್ಮೀನ್ ನ ಗಂಡ ಆಕೆಯ ಸಮೀಪ ಬಂದು ಕಪಾಳ ಮೋಕ್ಷ ಮಾಡುತ್ತಾನೆ, ನೇರವಾಗಿ ಮುಖಕ್ಕೆ ಹೊಡೆಯುತ್ತಾನೆ, ನೋವಿನಲ್ಲಿ ಜಾಸ್ಮೀನ್ ಏನನ್ನೂ ಪ್ರತಿಕ್ರಿಯಿಸದೆ ಹಾಗೆ ಆಳುತ್ತಾ ಕೂರುತ್ತಾಳೆ. ಆದರೆ ಜಾಸ್ಮೀನ್ ನ ಗಂಡ ಈ ದೌರ್ಜನ್ಯ ಹೆಚ್ಚುತ್ತದೆ. ಜಾಸ್ಮೀನ್ ನ ಕೈ ಕಾಲನ್ನು ಹಗ್ಗಕ್ಕೆ ಕಟ್ಟಿ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾನೆ.
ಗಂಡನ ಈ ಹಿಂಸೆಯನ್ನು ಸಹಿಸಿಕೊಂಡ ಜಾಸ್ಮೀನ್, ಒಂದು ದಿನ ಗರ್ಭಿಣಿಯಾಗುತ್ತಾಳೆ. ಈ ವಿಷಯವನ್ನು ಗಂಡನಿಗೆ ಹೇಳಲು ಹೋದಾಗ ಆತ, ಆಕೆಯ ಹೊಟ್ಟೆಯ ಮೇಲೆ ತುಳಿದು, ಹೀಯಾಳಿಸುತ್ತಾನೆ. ರಕ್ತದ ಮಡುವಿನಲ್ಲಿ ಬಿದ್ದ ಜಾಸ್ಮೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಒಂದು ವಾರದ ಬಳಿಕ ಜಾಸ್ಮೀನ್ ಳ ಚೊಚ್ಚಲ ಶಿಶು ಕಣ್ಣು ತೆರೆಯುವ ಮುನ್ನವೇ ಕಣ್ಣು ಮುಚ್ಚುತ್ತದೆ. ದೌರ್ಜನ್ಯದ ಬಗ್ಗೆ ಜಾಸ್ಮೀನ್ ಮನೆಯವರ ಬಳಿ ಹೇಳಿಕೊಳ್ಳುತ್ತಾಳೆ. ಮಾದಕ ದ್ರವ್ಯದ ವ್ಯಸನಿಯಾದ ಗಂಡಜಾಸ್ಮೀನ್ ಳಿಂದ ವಿಚ್ಛೇದನ ಪಡೆಯಲು ನಿರ್ಣಾಯಿಸುತ್ತಾನೆ. ಆದರೆ ಜಾಸ್ಮೀನ್ ವಿಚ್ಛೇದನ ನೀಡುವ ಮುನ್ನ ತನ್ನ ಪಾಪಿ ಗಂಡನಿಗೆ ತಕ್ಕ ಶಿಕ್ಷೆಯಾಗಬೇಕೆನ್ನುವ ಕಾರಣದಿಂದ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುತ್ತಾಳೆ.
ಈ ಎಲ್ಲಾ ನೋವಿನ ಬೇನೆಯನ್ನು ಮರೆಯಲು ದೇಶ ಬಿಟ್ಟು ನೆಲೆಸಲು ನಿರ್ಧಾರಿಸಿದಾಗ, ಜಾಸ್ಮೀನ್ ಳ ಮನೆಯವರು ಆಕೆಯ ಪಾಸ್ ಪೋರ್ಟನ್ನು ಸುಟ್ಟು ಬಿಡುತ್ತಾರೆ. ದೇಶ ಬಿಟ್ಟು ನೆಲಸಲು ವಿಫಲರಾದಾಗ, ಜಾಸ್ಮೀನ್ ಕೊಚ್ಚಿಗೆ ಹೋಗಿ ಪ್ರತಿಷ್ಠಿತ ಫಿಟ್ ನೆಸ್ ಕಛೇರಿಯಲ್ಲಿ ರಿಸೆಪ್ಷಿನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ವೈರಲ್ ಆಯಿತು ಜಾಸ್ಮೀನ್ ಬದುಕು : ರಿಸೆಪ್ಷನಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡ ಜಾಸ್ಮೀನ್ ಮಾನಸಿಕ ಹಾಗೂ ದೈಹಿಕವಾಗಿ ಸ್ಥೈರ್ಯವಂತಳಾಗಿ ಫಿಟ್ ನೆಸ್ ನಲ್ಲಿ ತನ್ನನ್ನು ತಾನು ತೂಡಗಿಸಿಕೊಳ್ಳುತ್ತಾಳೆ. ಫಿಟ್ ನೆಸ್ ಸಂಸ್ಥೆಯಲ್ಲಿರುವ ಎಲ್ಲರೂ ಜಾಸ್ಮೀನ್ ನಲ್ಲಿ ಧೈರ್ಯ ತುಂಬುತ್ತಾರೆ. ಇಷ್ಟೆಲ್ಲಾ ಆದ ಬಳಿಕ ಜಾಸ್ಮೀನ್ ಸುಮ್ಮನೆ ಕೂರಲಿಲ್ಲ. ತಾನೊಂದು ವೃತ್ತಿಪರ ಪ್ರಬಲತರಬೇತಿದಾರ ರಾಗಬೇಕೆನ್ನುವ ಕಾರಣದಿಂದ ಬೆಂಗಳೂರಿಗೆ ಬಂದು ಸರ್ಟಿಫಿಕೇಟ್ ಕೋರ್ಸ್ ಒಂದರಲ್ಲಿ ಸೇರಿಕೊಳ್ಳುತ್ತಾರೆ. ಕೋರ್ಸಿನ ಹಣಕ್ಕಾಗಿ ಹಾಗೂ ತನ್ನ ದಿನ ಖರ್ಚಿಗಾಗಿ ಜಸ್ಮೀನ್ ರೆಸ್ಟೋರೆಂಟ್ ಹಾಗೂ ಕೆಫೆಗಳಲ್ಲಿ ಕೆಲಸ ಮಾಡಿಕೊಂಡು ಸಾಗುತ್ತಾರೆ. ಜಾಸ್ಮೀನ್ ಹಗಲು ರಾತ್ರಿ ದೇಹ ದಂಡನೆಯನ್ನು ಮಾಡುತ್ತಾರೆ. ಜಾಸ್ಮೀನ್ ಬೆಂಗಳೂರಿನಲ್ಲಿ ತ್ರೀ ಲೆವೆಲ್ ತರಬೇತುದಾರ ರಾಗುತ್ತಾರೆ.
ಇತ್ತೀಚಿಗಷ್ಟೇ ಜಾಸ್ಮೀನ್ ದೇಹ ದಂಡನೆಯನ್ನು ಮಾಡಿ, ಸಂಪೂರ್ಣ ರೂಪಂತಾರಗೊಂಡ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದು ಎಲ್ಲೆಡೆಯೂ ವೈರಲ್ ಆಗುತ್ತದೆ. ಅಲ್ಲಿಂದ ಎಲ್ಲರಿಗೂ ಜಾಸ್ಮೀನ್ ಬದುಕಿನ ಕಥನ ತಿಳಿಯುತ್ತದೆ. ಜಾಸ್ಮೀನ್ ಬದುಕಿನ ದಾರಿಯನ್ನು ಮುಕ್ತವಾಗಿ, ಧೈರ್ಯವಾಗಿ ಮಾತಿನ ಮೂಲಕ ಹಂಚಿಕೊಂಡಿದ್ದಾರೆ. ಆ ವೀಡಿಯೋ ಮಲೆಯಾಳಂ ಭಾಷೆಯಲ್ಲಿದ್ದು, ಯೂಟ್ಯೂಬ್ ನಲ್ಲಿ ಒಂದು ಮಿಲಿಯನ್ ಗಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
– ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.