YouTubeಗೆ ಹದಿಹರೆಯ ; ಇಲ್ಲಿದೆ ಕೆಲ ಕುತೂಹಲಕರ ಮಾಹಿತಿ


Team Udayavani, Feb 27, 2019, 6:23 AM IST

youtube-logo-700.jpg

ಇಂಟರ್ನೆಟ್ ಜಮಾನದಲ್ಲಿ ಯೂ-ಟ್ಯೂಬ್ ಹೆಸರನ್ನು ಕೇಳದವರು ಯಾರಿದ್ದಾರೆ ಹೇಳಿ. ಈಗೀಗಂತೂ ಚಲನಚಿತ್ರಗಳ ಟೀಸರ್ ಟ್ರೈಲರ್ ಗಳೂ ಸಹ ಭರ್ಜರಿಯಾಗಿ ಯೂ-ಟ್ಯೂಬ್ ನಲ್ಲಿ ರಿಲೀಸ್ ಆಗಲು ಪ್ರಾರಂಭವಾದ ಮೇಲಂತೂ ನಮ್ಮಲ್ಲಿ ಯೂ-ಟ್ಯೂಬ್ ಅನ್ನುವುದು ಟಿ.ವಿ.ಗೆ ಪರ್ಯಾಯವಾಗಿ ತನ್ನ ಸ್ಥಾನವನ್ನು ನೆಟ್ ಯೂಸರ್ ವಲಯದಲ್ಲಿ ಗಟ್ಟಿಗೊಳಿಸುತ್ತಿದೆ.

ಎರಡನೇ ಅತೀದೊಡ್ಡ ಸರ್ಚ್ ಇಂಜಿನ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯೂ-ಟ್ಯೂಬ್ ಗೆ ಇದೀಗ 14ರ ಹರೆಯ. 2005ರಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರೇಮಿಗಳ ದಿನದಂದೇ ಪೇ ಪಾಲ್ ಸಂಸ್ಥೆಯ ಮಾಜೀ ಉದ್ಯೋಗಿಗಳು ವಿಡಿಯೋ ಪ್ರಸಾರಕ್ಕಾಗಿ ವೆಬ್ ಸೈಟ್ ಒಂದನ್ನು ಪ್ರಾರಂಭಿಸುತ್ತಾರೆ ಮುಂಬರುವ ದಿನಗಳಲ್ಲಿ ಅದೇ ವೆಬ್ ಸೈಟ್ ‘ಯೂ-ಟ್ಯೂಬ್’ ಅನ್ನುವ ಹೆಸರಿನಿಂದ ಜನಮಾನಸದಲ್ಲಿ ಮಾನ್ಯತೆಯನ್ನು ಪಡೆದುಕೊಳ್ಳುವ ಕಥೆಯೇ ಒಂದು ರೋಚಕ ಪಯಣ.

ಸ್ಟಿವ್ ಚೆನ್, ಜಾವೆದ್ ಕರೀಂ ಮತ್ತು ಚಾಡ್ ಹರ್ಲಿ ಎಂಬ ಮೂವರು ತಾವು ಈ ವಿಡೀಯೋ ಸ್ಟ್ರೀಮಿಂಗ್ ವೆಬ್ ಸೈಟ್ ಅನ್ನು ಪ್ರಾರಂಭಿಸಿದ ಒಂದೇ ವರ್ಷದಲ್ಲಿ ಇದನ್ನು ಗೂಗಲ್ ಗೆ ಮಾರಾಟ ಮಾಡುವ ಮೂಲಕ ತಾವು ಅಜ್ಞಾತರಾಗಿಬಿಡುತ್ತಾರೆ. ಹಾಗಾದರೆ ಗೂಗಲ್ ಇವರಿಗೆ ಕೊಟ್ಟ ಹಣವೆಷ್ಟು, ಈಗ ಈ ಮೂವರು ಎಲ್ಲಿದ್ದಾರೆ? ಯೂ-ಟ್ಯೂಬ್ ನಲ್ಲಿ ಪ್ರಪ್ರಥಮವಾಗಿ ಅಪ್ ಲೋಡ್ ಮಾಡಿದ ವಿಡಿಯೋ ಯಾವುದು ಎಂಬೆಲ್ಲ ವಿಚಾರಗಳ ಕುರಿತಾಗಿ ಈ ಲೇಖನ.

ಯೂ ಟ್ಯೂಬ್ ನ ಕಿರಿಯ ಫೌಂಡರ್ ಜಾವೇದ್ ಕರೀಂ

2008ರಲ್ಲಿ ಹೀಗಿದ್ದರು ಜಾವೇದ್.

ಜಾವೇದ್ ಅವರು ಜನಿಸಿದ್ದು ಪೂರ್ವ ಜರ್ಮನಿಯ ಮರ್ಸ್ಬರ್ಗ್ ನಲ್ಲಾದರೂ ಇವರ ತಂದೆ ಬಾಂಗ್ಲಾದೇಶದವರಾದ ಕಾರಣ ಜಾವೇದ್ ಗೂ ಏಷ್ಯಾಕ್ಕೂ ಸಂಪರ್ಕವಿದೆ. ಇನ್ನು ಇವರ ತಾಯಿ ಜರ್ಮನಿಯವರಾಗಿದ್ದಾರೆ. ಜಾವೇದ್ ‘ಮಿ ಎಟ್ ದಿ ಝೂ’ ಎಂಬ ವಿಡಿಯೋ ಒಂದನ್ನು ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡುತ್ತಾರೆ. ಮತ್ತು ಈ ಮೂಲಕ ಜಾವೇದ್ ಅವರು ಯೂ ಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಪ್ರಪ್ರಥಮ ಯೂಸರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಆ ವಿಡಿಯೋವನ್ನು ಯೂ-ಟ್ಯೂಬ್ ಇಂದಿಗೂ ಉಳಿಸಿಕೊಂಡಿದ್ದು ಇವತ್ತಿಗೆ ಅದನ್ನು ವೀಕ್ಷಿಸಿದವರ ಸಂಖ್ಯೆ 62 ಮಿಲಿಯನ್ (62,706,445) ಆಗಿದೆ.

ಯೂ ಟ್ಯೂಬ್ ಅನ್ನು ಗೂಗಲ್ ಖರೀದಿಸಿದ ಸಂದರ್ಭದಲ್ಲಿ ಒಟ್ಟು ಪಾಲಿನಲ್ಲಿ ಜಾವೇದ್ ಕರೀಂ ಅವರಿಗೆ 137,443 ಶೇರುಗಳು ಸಂದಾಯವಾಗುತ್ತದೆ. ಇವರು ಆ ಸಮಯದಲ್ಲಿ ವಿದ್ಯಾರ್ಥಿಯಾಗಿದ್ದ ಕಾರಣ ಮತ್ತು ಯೂ ಟ್ಯೂಬ್ ನ ಆಡಳಿತದಲ್ಲಿ ಸಕ್ರಿಯರಾಗಿಲ್ಲದೇ ಇದ್ದ ಕಾರಣ ಉಳಿದಿಬ್ಬರಿಗಿರಿಂತ ಇವರಿಗೆ ಕಡಿಮೆ ಪಾಲು ಲಭಿಸುತ್ತದೆ. ಇದೀಗ ಜಾವೇದ್ ಅವರು ವೈ ವೆನ್ಚರ್ಸ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ ಮತ್ತಿದು ಅಂತರ್ಜಾಲ ಬಳಕೆಯ ಮಿತಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಹೊಸ ಉದ್ಯಮಿಗಳಿಗೆ ಸಲಹೆ ಸಹಕಾರವನ್ನು ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇನ್ನು ಜಾವೇದ್ ಅವರು ಮುಂಬರುವ ದಿನಗಳಲ್ಲಿ ತಮ್ಮದೇ ಆದ ವಿಡಿಯೋ ಸ್ಟ್ರೀಮಿಂಗ್ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಸಾಧ್ಯತೆಗಳ ಕುರಿತಾಗಿಯೂ ಮಾತುಗಳು ಕೇಳಿಬರುತ್ತಿವೆ.

ವಿಪರ್ಯಾಸವೆಂದರೆ ಇವತ್ತು ಜಾವೇದ್ ಅವರು ಯೂ ಟ್ಯೂಬ್ ಹೊರತುಪಡಿಸಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿಲ್ಲ. ಮತ್ತು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾಗಿಯೂ ಯಾವುದೇ ಮಾಹಿತಿ ಲಭ್ಯವಿಲ್ಲ. ಜನರಿಗೆ ಆನ್ ಲೈನ್ ಮೂಲಕ ವಿಡಿಯೋ ನೋಡುವ ಮಾರ್ಗ ತೋರಿದ ವ್ಯಕ್ತಿಯೇ ಈಗ ತಾನು ಆಫ್ ಲೈನ್ ಆಗಿರುವುದು ವಿಚಿತ್ರವೇ ಸರಿ.

ಚಾಡ್ ಹರ್ಲಿ

ಯೂ-ಟ್ಯೂಬ್ ನ ಮಾಸ್ಟರ್ ಮೈಂಡ್ ಇವರು. ಇದರಲ್ಲಿ ಟ್ಯಾಗಿಂಗ್ ಮತ್ತು ವಿಡಿಯೋ ಶೇರ್ ಮಾಡುವ ಆಯ್ಕೆಗಳನ್ನು ಅಳವಡಿಸುವಲ್ಲಿ ಹರ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಯೂ ಟ್ಯೂಬ್ ನ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯಲ್ಲಿ ಇವರ ಪಾತ್ರ ನಿರ್ಣಾಯಕವಾಗಿದ್ದ ಕಾರಣದಿಂದ ಯೂ ಟ್ಯೂಬ್ ಅನ್ನು ಗೂಗಲ್ ಪಡೆದುಕೊಂಡ ಸಂದರ್ಭದಲ್ಲಿ ಹರ್ಲಿ ಅವರಿಗೆ ಹೆಚ್ಚಿನ ಪ್ರಮಾಣದ ಪಾಲನ್ನು ಪಡೆದುಕೊಂಡರು. ಇವರು ಯೂ-ಟ್ಯೂಬ್ ನ ಮೊದಲ ಸಿ.ಇ.ಒ. ಸಹ ಹೌದು. 2010ರವರೆಗೂ ಇವರು ಯೂ ಟ್ಯೂಬ್ ನ ಸಿ.ಇ.ಒ. ಆಗಿದ್ದರು ಬಳಿಕ ‘ಮಿಕ್ಸ್ ಬಿಟ್’ ಎಂಬ ಇನ್ನೊಂದು ವಿಡಿಯೋ ಶೇರಿಂಗ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮಿಕ್ಸ್ ಬಿಟ್ ಇವತ್ತು ‘ಝೀನ್’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಹಾಗೂ ಇದನ್ನು 2018ರಲ್ಲಿ ಬ್ಲೂ ಜೀನ್ಸ್ ಕಂಪೆನಿಯು ಖರಿದಿ ಮಾಡಿತ್ತು.

ಇವತ್ತು ಚಾಡ್ ಹರ್ಲಿ ಅಮೆರಿಕಾದ ಮಾಧ್ಯಮ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ಧಾರೆ. 2006ರಲ್ಲಿ ಇವರು ‘ಬ್ಯುಸಿನೆಸ್’ ನಿಯತಕಾಲಿಕೆಯ ’50 ಪೀಪಲ್ ಹೂ ಮ್ಯಾಟರ್’ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಪುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳಲ್ಲಿ ಇವರಿಗೆ ವಿಶೇಷವಾದ ಆಸಕ್ತಿಯ ಕಾರಣದಿಂದ ಹರ್ಲಿ ಅವರು ‘ಮೇಜರ್ ಸಾಕರ್ ಲೀಗ್ ಫುಟ್ಬಾಲ್ ಕ್ಲಬ್, ಗೋಲ್ಡನ್ ಸ್ಟೇಟ್ ವಾರಿಯರ್ಸ್ ಎಂಬ NBAಯ ಬಾಸ್ಕೆಟ್ ಬಾಲ್ ತಂಡಗಳ ಮಾಲಕರೂ ಆಗಿದ್ದಾರೆ.

ಸ್ಟೀವ್ ಚೆನ್

ತೈಪೆ ಮೂಲದ ಅಮೆರಿಕಾದ ಉದ್ಯಮಿಯಾಗಿರುವ ಸ್ಟಿವ್ ಚೆನ್ ಅವರೂ ಸಹ ಯೂ-ಟ್ಯೂಬ್ ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಫೇಸ್ಬುಕ್ ನ ಉದ್ಯೋಗಿಯಾಗಿದ್ದ ಚೆನ್ ಅವರು ಬಳಿಕ ತಮ್ಮ ಉದ್ಯೋಗವನ್ನು ತೊರೆದು ಉಳಿದ ಇಬ್ಬರೊಂದಿಗೆ ಸೇರಿಕೊಂಡು ಯೂ-ಟ್ಯೂಬ್ ಅನ್ನು ಸ್ಥಾಪಿಸಿದರು. ಯೂ ಟ್ಯೂಬ್ ಸ್ಥಾಪನೆಗೊಂಡ ಒಂದೇ ವರ್ಷದಲ್ಲಿ ಅದನ್ನು ಗೂಗಲ್ ಗೆ ಪರಭಾರೆ ಮಾಡಿದ ಈ ಸ್ಥಾಪಕರಲ್ಲಿ ಜಾವೇದ್ ಕರೀಂ ಇವರಿಬ್ಬರಿಂದ ಬೇರೆಯಾಗಿ ತನ್ನದೇ ಹಾದಿ ಹಿಡಿದರು. ಇತ್ತ ಚಾಡ್ ಹರ್ಲಿ ಮತ್ತು ಸ್ಟೀವ್ ಚೆನ್ ಜೊತೆಯಾಗಿ AVOS ಸಿಸ್ಟಮ್ಸ್ ಅನ್ನು ಸ್ಥಾಪಿಸಿದರು ಅದನ್ನು ಬಳಿಕ ಯಾಹೂ ಒಡೆತನದ ಡೆಲಿಷಿಯಸ್ ಖರೀದಿ ಮಾಡಿತು. ಬಳಿಕ ಹರ್ಲಿಯಿಂದ ಬೇರೆಯಾದ ಸ್ಟೀವ್ 2014ರಲ್ಲಿ ಗೂಗಲ್ ವೆನ್ಚರ್ಸ್ ನ ಪಾಲುದಾರರಾದರು ಮತ್ತೀಗ ಅವರು ಅದರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಸ್ಟೀವ್ ಅವರು 2016ರಲ್ಲಿ ಆಹಾರ ಪ್ರಿಯರಿಗಾಗಿ ‘ನೋಮ್’ ಎಂಬ ವೆಬ್ ಸೈಟ್ ಅನ್ನು ಸ್ಥಾಪಿಸಿದರು. ಆದರೆ ಸ್ಟೌವ್ ಅವರ ಈ ಪ್ರಯತ್ನ ಅವರಿಗೆ ಯಶ ತರದ ಕಾರಣ 2017ರಲ್ಲಿ ಅದನ್ನು ಅವರು ನಿಲ್ಲಿಸಬೇಕಾಯಿತು. ಸ್ಟೀವ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿಲ್ಲದಿದ್ದರೂ ತಮ್ಮ ಫೇಸ್ಬುಕ್ ಪುಟವನ್ನು ಆಗಾಗ ಮಾಹಿತಿಪೂರ್ಣವಾಗಿ ಅಪ್ಡೇಟ್ ಮಾಡುತ್ತಿರುತ್ತಾರೆ.

2006ರಲ್ಲಿ ಈ ತ್ರಿವಳಿಗಳು ತಾವು ಪ್ರಾರಂಭಿಸಿದ ಸ್ಟ್ರೀಮಿಂಗ್ ಸೈಟ್ ಅನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ ಗೆ 1.16 ಲಕ್ಷ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಈ ರೀತಿಯಾಗಿ ಇವತ್ತು ನೆಟ್ ಜಗತ್ತಿನಲ್ಲಿ ನೆಟ್ಟಿಗರ ಫೆವರಿಟ್ ವಿಡಿಯೋ ಸ್ಟ್ರೀಮಿಂಗ್ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯೂ ಟ್ಯೂಬ್ ಅನ್ನು ಪ್ರಾರಂಭಿಸಿದ ಈ ಮೂವರು ಬಳಿಕ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡ​​​​​​​ ಕಥೆ ‘ಸ್ಟಾರ್ಟ್ ಅಪ್’ ಕಲ್ಪನೆಗೆ ಉತ್ತಮ ಪ್ರೇರಣೆ ಎಂದರೆ ತಪ್ಪಾಗಲಾರದು.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.