ಮಕ್ಕಳ ಭವಿಷ್ಯಕ್ಕೆ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಲಾಭದಾಯಕವೇ ?
Team Udayavani, Dec 17, 2018, 10:37 AM IST
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವೆಲ್ಲ ಮಾಧ್ಯಮಗಳಲ್ಲಿ ಲಾಭದಾಯಕವಾಗಿ ಹಣ ಹೂಡುವುದಕ್ಕೆ ಅವಕಾಶವಿದೆ ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ನಾವು ಕಳೆದ ವಾರ ರಿಯಲ್ ಎಸ್ಟೇಟ್ ಹೂಡಿಕೆ ಆಯ್ಕೆಯ ವಿಸ್ತೃತ ಅಧ್ಯಯನ ನಡೆಸಿದೆವು.
ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿರುವುದು ಸಹಜವೇ ಆದರೂ ವಾಸ್ತವತೆ ಮಾತ್ರ ಬೇರೆಯೇ ಇರುತ್ತದೆ ಎನ್ನುವುದಕ್ಕೆ ಇನ್ಶೂರೆನ್ಸ್ ಪ್ಲಾನ್ ಗಳು ಒಳ್ಳೆಯ ಉದಾಹರಣೆಗಳಾಗಿರುತ್ತವೆ.
ಏಕೆಂದರೆ ದೀರ್ಘಾವಧಿ ಹೂಡಿಕೆಯಲ್ಲಿ ಹಣ ಹಲವು ಪಟ್ಟು ವೃದ್ದಿಸುವುದಕ್ಕೆ ಸಾಕಷ್ಟು ಅವಕಾಶಗಳು, ಕಾಲಾವಧಿ ಇರುತ್ತವೆ ಎಂಬುದೊಂದು ಸಾಮಾನ್ಯ ನಂಬಿಕೆ. ಆದರೆ ವಾಸ್ತವದಲ್ಲಿ ಹಾಗೇನೂ ಆಗಬೇಕಾದ್ದದ್ದಿಲ್ಲ. ದೀರ್ಘಾವಧಿಯ ಲೆಕ್ಕಾಚಾರಗಳು ಎಷ್ಟೋ ವೇಳೆ ತಲೆಕೆಳಗಾಗುವುದಿದೆ.
ಹಾಗಾಗಿ ನಾವು ದೀರ್ಘಾವಧಿಯಲ್ಲಿ ಹಣ ಕಳೆದುಕೊಂಡೆವೋ, ಲಾಭ ಮಾಡಿದೆವೋ, ಹಣದುಬ್ಬರದಿಂದ ಕೊರೆದು ಹೋಗುವಷ್ಟು ಹಣದ ಮೌಲ್ಯವನ್ನು ನಾವು ಲಾಭದಾಯಕತೆಯಲ್ಲಿ ಸರಿಗಟ್ಟಿದೆವೋ ಎಂಬಿತ್ಯಾದಿ ಸಂಗತಿಗಳು ನಮ್ಮ ಲೆಕ್ಕಾಚಾರಕ್ಕೆ ಎಷ್ಟೋ ವೇಳೆ ಸಿಗುವುದಿಲ್ಲ.
ಈ ಹಿನ್ನೆಲೆಯಲ್ಲಿ ನಾವು ವಿಮಾ ಮಾಧ್ಯಮವನ್ನು ಕೂಡ ಚರ್ಚಿಸಬೇಕಾಗುತ್ತದೆ. ಎಷ್ಟೋ ಮಂದಿ ಹೆತ್ತವರು ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ವಿಮಾ ಪಾಲಿಸಿಗಳನ್ನು ಖರೀದಿಸಿಡುತ್ತಾರೆ. ದೀರ್ಘಾವಧಿಯಲ್ಲಿ ಈ ಪಾಲಿಸಿಗಳು ಮಗು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ದೊಡ್ಡ ಹಣದ ಗಂಟನ್ನು ಕೊಡುತ್ತದೆ ಎಂಬ ಭಾವನೆ ಅವರದ್ದಾಗಿರುತ್ತದೆ.
ಹೀಗಾಗಿ ಹೆತ್ತವರು ಸಹಜವಾಗಿಯೇ ಚೈಲ್ಡ್ ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿಗಳನ್ನು ಖರೀದಿಸುವ ಆಯ್ಕೆಯನ್ನು ಪರಿಗಣಿಸುತ್ತಾರೆ. ವಿಮಾ ಪಾಲಿಸಿಗಳ ಬಗ್ಗೆ ಜನ ಸಾಮಾನ್ಯರಲ್ಲಿ ಹಿಂದಿನಿಂದಲೂ ಒಂದು ಗೌರವದ ಮತ್ತು ಪ್ರಶ್ನಾತೀತವಾದ ಅಭಿಪ್ರಾಯವಿದೆ. ಅದೆಂದರೆ ಈ ಪಾಲಿಸಿಗಳು ನಮ್ಮ ಪಾಲಿನ ಆಪದ್ಭಾಂಧವ ಎಂಬುದು !
ಹೂಡಿಕೆ ತಜ್ಞರು ಮತ್ತು ಪರಿಣತರ ಪ್ರಕಾರ ವಿಮಾ ಪಾಲಿಸಿಗಳು ಹೂಡಿಕೆಯ ದೃಷ್ಟಿಯಿಂದ ಏನೇನೂ ಲಾಭದಾಯಕವಲ್ಲ. ವಿಮೆಯ ಉದ್ದೇಶದಲ್ಲಿ ಲಾಭದಾಯಕ ಹೂಡಿಕೆಯ ಅಂಶ ಅಡಕವಾಗಿರುವುದೇ ಇಲ್ಲ ಎಂಬುದನ್ನು ಜನರು ಅರಿಯದಾಗಿರುತ್ತಾರೆ.
ಆರ್ಥಿಕ ಪರಿಣತರು ಹೇಳುವ ಪ್ರಕಾರ ವಿಮಾ ಹೂಡಿಕೆ ಅತ್ಯಂತ ನಿಕೃಷ್ಟ ಇಳುವರಿಯನ್ನು ತರುತ್ತವೆ. ಇವುಗಳಿಂದ ಸಿಗುವ ವಾರ್ಷಿಕ ಇಳುವರಿ ಅಥವಾ ರಿಟರ್ನ್ ಶೇ.4 ರಿಂದ 6 ಅಥವಾ ಅದಕ್ಕಿಂತ ಕಡಿಮೆ. ಎಂದರೆ ಇವು ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕೂಡ ಖಾತರಿಪಡಿಸುವುದಿಲ್ಲ.
ಮಕ್ಕಳ ಶ್ರೆಯೋಭಿವೃದ್ಧಿಗೆಂದೇ ರೂಪಿಸಲ್ಪಟ್ಟಿರುವುದಾಗಿ ಹೇಳಲ್ಪಡುವ ವಿಮಾ ಯೋಜನೆಗಳು ಮಕ್ಕಳಿಗಾಗಲೀ ಯೌವನಸ್ಥರಿಗಾಗಲೀ ಎಷ್ಟು ಮಾತ್ರಕ್ಕೂ ಲಾಭದಾಯಕವಾಗಲಾರವು. ಏಕೆಂದರೆ ಇವುಗಳನ್ನು ಕೊಂಡ ಬಳಿಕದಲ್ಲಿ ತಿಂಗಳು ತಿಂಗಳೂ ಪಾವತಿಸುವ ಪ್ರೀಮಿಯಂಗಳು ಪಾವತಿದಾರರ ಮಟ್ಟಿಗೆ ತುಟ್ಟಿಯಾಗೇ ಪರಿಣಮಿಸುವವು.
ನಿಜಕ್ಕೂ ವಿಮೆ ಬೇಕಿರುವುದು ಮಕ್ಕಳಿಗಲ್ಲ; ದೊಡ್ಡವರಿಗೆ ಎಂಬುದನ್ನು ಕೂಡ ಎಷ್ಟೋ ಮಂದಿ ಹೆತ್ತವರು ಹೂಡಿಕೆ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಿದ್ದರೂ ವಿಮಾ ಪಾಲಿಸಿಗಳ ಆಶ್ವಾಸಿತ ಮೊತ್ತ ತುಂಬ ಕಡಿಮೆ ಇದ್ದು ಅವು ಕಾಲಕ್ರಮದಲ್ಲಿ ಅಥವಾ ಮೆಚ್ಯುರಿಟಿ ಸಮಯದಲ್ಲಿ ಆಗಿನ ಹಣದ ಮೌಲ್ಯದೆದುರು ನಗಣ್ಯವಾಗಿರುತ್ತವೆ.
ಮಕ್ಕಳ ಹೆಸರಲ್ಲಿ ಹೆತ್ತವರು ಎಂಡೋಮೆಂಟ್ ವಿಮಾ ಪಾಲಿಸಿಗಳನ್ನು ಖರೀದಿಸುವುದು ಕೂಡ ಕಂಡುಬರುತ್ತದೆ. ಇವು ದೀರ್ಘಾವಧಿಯ, ಕಡಿಮೆ ಪ್ರೀಮಿಯಂನ ಯೋಜನೆಗಳಾಗಿರುತ್ತವೇನೋ ನಿಜ; ಆದರೆ ಇವುಗಳ ಆಶ್ವಾಸಿತ ಮೊತ್ತ ತುಂಬಾ ಕಡಿಮೆ ಇರುತ್ತದೆ ಮತ್ತು ಇವುಗಳ ಇಳುವರಿ ಶೇ.ಆರನ್ನು ಕೂಡ ದಾಟದಿರುವುದು ಹಣದ ಲೆಕ್ಕಾಚಾರ ಅರಿಯದ ಜನಸಾಮಾನ್ಯರಿಗೆ ಗೊತ್ತೇ ಇರುವುದಿಲ್ಲ.
ಒಂದೊಮ್ಮೆ ಹೆತ್ತವರು ವಿಮಾ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಟರ್ಮ್ ಕವರ್ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಯ ಅವಕಾಶಗಳು ಪರಸ್ಪರ ಅಂತರ್ಗತವಾಗಿರುವ ಸ್ಕೀಮುಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಲೇಸು ಎಂಬುದು ಪರಿಣತರ ಅಭಿಪ್ರಾಯ.
ಈ ರೀತಿಯ ಅವಳಿ ಲಾಭದ ಮ್ಯೂಚುವಲ್ ಫಂಡ್ ಸ್ಕೀಮುಗಳು ಅತ್ಯಧಿಕ ಇಳುವರಿ (ರಿಟರ್ನ್) ಕೊಡುತ್ತವೆ; :ಹೂಡಿಕೆಯ ಮಟ್ಟಿಗೆ ಹೆಚ್ಚು ಪಾರದರ್ಶಕವಾಗಿರುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಶೇ.10ರ ವರೆಗೂ ಹೋಗಬಹುದಾದ ಹಣದುಬ್ಬರ ಪ್ರಮಾಣ, ಇವನ್ನು ಸಂಭಾಳಿಸುವಷ್ಟು ಮಟ್ಟಿನ ಲಾಭದಾಯಕತೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಇರುತ್ತದೆ ಎನ್ನುವುದು ಗಮನಾರ್ಹವಾಗುತ್ತದೆ.
ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜಂಟರು ತಮಗೆ ಲಾಭದಾಯಕ ಕಮಿಷನ್ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಜನರು ಯುಲಿಪ್ ಕೇಳಿದರೆ ಎಂಡೋಮೆಂಟ್ ಪಾಲಿಸಿಯೇ ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ.
ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆ, ಎಚ್ಚರಿಕೆ ಇಲ್ಲದಿರುವುದರಿಂದ ಅವರು ಸುಲಭದಲ್ಲಿ ಎಂಡೋಮೆಂಟ್ ಸ್ಕೀಮುಗಳಲ್ಲಿ ಏಜಂಟರ ಕುಟಿಲತೆಯಿಂದಾಗಿ ಸಿಲುಕಿಕೊಳ್ಳುತ್ತಾರೆ. ಮನಿ ಬ್ಯಾಕ್ ಪಾಲಿಸಿಗಳು ಆಕರ್ಷಕವೆಂಬ ಭಾವನೆ, ನಂಬಿಕೆ ಜನರಲ್ಲಿರುವುದು ಸಹಜವೇ. ಆದರೆ ಮನಿ ಬ್ಯಾಕ್ ಪಾಲಿಸಿಗಳಡಿ ಜನರ ಕೈಗೆ ಕಾಲಕಾಲಕ್ಕೆ ಬರುವ ಹಣ ಹಾಗೆಯೇ ಕರಗಿ ಹೋಗಿ ಪಾಲಿಸಿ ಮೆಚೂÂರ್ ಆದಾಗ ದೊಡ್ಡ ಮೊತ್ತ ಕೈಗೆ ಬರುವುದರಿಂದ ವಂಚಿತರಾಗುತ್ತಾರೆ.
ಎಂಡೋಮೆಂಟ್ ಪ್ಲಾನ್ಗಿಂತ ಯುಲಿಪ್ ಎಷ್ಟೋ ಮೇಲು ಎಂಬುದನ್ನು ನಾವು ಈ ಕೆಳಗಿನ ಸಂಕ್ಷಿಪ್ತ ವಿಶ್ಲೇಷಣೆಯಲ್ಲಿ ಅರಿಯಬಹುದಾಗಿದೆ.
ಮೊದಲಾಗಿ ಯುಲಿಪ್ ಸ್ಕೀಮನ್ನು ನೋಡೋಣ :
1. ರಿಟರ್ನ್ : ಮ್ಯೂಚುವಲ್ ಫಂಡ್ ಜತೆ ತುಲನೆ ಮಾಡುವಷ್ಟು ಅತ್ಯಧಿಕ ರಿಟರ್ನ್ ಇರುತ್ತದೆ.
2. ತೆರಿಗೆ ಲಾಭ : ಸೆ.80ಸಿ ಅಡಿ 1.5 ಲಕ್ಷ ರೂ. ತನಕದ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ; ಮೆಚ್ಯುರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
3. ನಗದೀಕರಣ : ಐದು ವರ್ಷಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಐದು ವರ್ಷಗಳ ಅನಂತರ ಸರೆಂಡರ್ ಚಾರ್ಜ್ ಇರುವುದಿಲ್ಲ.
4. ಹಣ ಹಿಂಪಡೆಯುವಿಕೆ : ಐದು ವರ್ಷಗಳ ಬಳಿಕ ಶೇ.20 ಮೀರದಿರುವ ಮೊತ್ತದ ಹಣ ಹಿಂಪಡೆಯುವಿಕೆಗೆ ಅವಕಾಶ ಇರುತ್ತದೆ.
5. ಹೂಡಿಕೆ ಬದಲಾಯಿಸುವ ಅವಕಾಶ : ರಿಸ್ಕ್ ಪ್ರೊಫೈಲ್ಗೆ ಅನುಗುಣವಾಗಿ ಈಕ್ವಿಟಿ – ಡೆಟ್ ಹಣ ಹೂಡಿಕೆ ಪ್ರಮಾಣವನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ.
ಎಂಡೋಮೆಂಟ್ ಪ್ಲಾನ್ :
1. ರಿಟರ್ನ್ ಶೇ.4ರಿಂದ 6
2. ತೆರಿಗೆ ಲಾಭ : ಯೂಲಿಪ್ನ ಹಾಗೇ ಇರತ್ತದೆ.
3. ನಗದೀಕರಣ ಸೌಕರ್ಯ : ಕೆಲವು ವಿಮಾ ಕಂಪೆನಿಗಳು ಪಾಲಿಸಿ ಮೇಲೆ ಶೇ.8-9ರ ಬಡ್ಡಿಗೆ ಸಾಲ ನೀಡುತ್ತವೆ.
4. ಹಣ ಹಿಂಪಡೆಯುವಿಕೆ : 10 ವರ್ಷಗಳ ವಿಮಾ ಸ್ಕೀಮಿನಡಿ ಎರಡು ಅಥವಾ ಮೂರು ವರ್ಷ ಪ್ರೀಮಿಯಂ ಕಟ್ಟಿದ್ದಲ್ಲಿ ಮಾತ್ರವೇ ನಿಮಗೆ ಸರೆಂದರ್ ವ್ಯಾಲ್ಯೂ ಸಿಗುತ್ತದೆ.
5. ಹೂಡಿಕೆ ಸ್ವರೂಪದಲ್ಲಿನ ಬದಲಾವಣೆ : ಯಾವುದೇ ಆಯ್ಕೆ ಇರುವುದಿಲ್ಲ.
ಮಕ್ಕಳ ಉಜ್ವಲ ಭವಿಷ್ಯದ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸುವ ಪ್ರಶ್ನೆ ಬಂದಾಗ ವಿಮಾ ಹೂಡಿಕೆ ಅಷ್ಟೇನೂ ಆಕರ್ಷಕವೂ ಲಾಭದಾಯಕವೂ ಅಲ್ಲ ಎಂಬುದನ್ನು ಅರಿಯದ ಜನಸಾಮಾನ್ಯರಿಂದಾಗಿ ವಿಮಾ ಏಜಂಟರು ಖೂಬ್ ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದು ಇಂದಿನ ವಾಸ್ತವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.