ಕೊನೆಗೂ ಬಯಲಾಯ್ತು ಜ್ವಾಲೆಗಳ ನರ್ತನ ರಹಸ್ಯ!ವಿಸ್ಮಯ ನೋಟ


Team Udayavani, Sep 21, 2018, 5:17 PM IST

img5471.jpg

ದಿನವೆಲ್ಲಾ ಉರಿಯುತ್ತಲೇ ಇರುವ ಬೆಂಕಿಯ ಬಂಡೆಯಿದು. ಇಲ್ಲಿ ಪ್ರವಾಸಿಗರು ಶಾಖದಿಂದ ಮೈ ಬಿಸಿ ಮಾಡಿ, ಬೆಂಕಿಯಲ್ಲಿ ಚಹಾ ಕುದಿಸಿ ಸುಖಿಸುತ್ತಾರೆ.

ಇದು ಜಗತ್ತಿನ ಒಂದು ವಿಸ್ಮಯದ ನೋಟ. ವಿಶಾಲವಾಗಿ ನೆಲದ ತುಂಬ ಹರಡಿಕೊಂಡಿರುವ ಬಂಡೆಯ ಮೇಲೆ ಅಗಣಿತವಾದ ಬಿರುಕುಗಳಿವೆ. ಅಲ್ಲಿಂದ ಜ್ವಾಲೆಗಳ ರಾಶಿ ಮೇಲೆದ್ದು ಧಗಧಗ ಉರಿಯುತ್ತಲೇ ಇರುತ್ತದೆ. ರಾತ್ರಿ ಕಾಲದಲ್ಲಿ ಬಂಡೆಯ ಮೈಯಲ್ಲಿ ಲಾಸ್ಯವಾಡುವ ಸಾವಿರ ಸಾವಿರ ಸಾವಿರ ಜ್ವಾಲೆಗಳ ಗುಚ್ಛವನ್ನು ನೋಡುವುದೇ ಒಂದು ಅನನ್ಯ ಅನುಭವ. ಇದರ ವೀಕ್ಷಣೆಗೆ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಎರಡೂವರೆ ಸಾವಿರ ವರ್ಷಗಳಿಂದ ನಿರಂತರವಾಗಿ ಬಂಡೆ ಉರಿಯುತ್ತಲೇ ಇದ್ದರೂ ಅದರೊಳಗಿರುವ ಇಂಧನದ ಕಣಜ ಮಾತ್ರ ಬರಿದಾಗಿಲ್ಲ.

      ಇಂಥ ವಿಶಿಷ್ಟ ನೋಟ ಕಾಣಲು ಟರ್ಕಿ ದೇಶಕ್ಕೆ ಹೋಗಬೇಕು. ನೈಋತ್ಯ ಭಾಗದಲ್ಲಿ 50 ಮೈಲು ದೂರದಲ್ಲಿ ಅಂಟಾಲ್ಯ ನಗರವಿದೆ. ಇಲ್ಲಿಯ ಸಿರಾಲಿ ಪೇಟೆಯ ಹೊರಭಾಗದಲ್ಲಿ ಅಂಟಾಲ್ಯ ನಗರವಿದೆ. ಇಲ್ಲಿಯ ಸಿರಾಲಿ ಪೇಟೆಯ ಹೊರಭಾಗದಲ್ಲಿ ಚಿಮೇರಾ ಪರ್ತತವಿದೆ. ಇದನ್ನು ಏರಲು ನಿಸರ್ಗವೆ ಕಟ್ಟಿದ ಮೆಟ್ಟಿಲುಗಳಿವೆ. ಒಂದು ಕಿಲೋಮೀಟರ್ ಎತ್ತರದಲ್ಲಿ ಮೂರು ಚದರ ಮೈಲು ವಿಸ್ತಾರವಿರುವ ಹಾಸುಬಂಡೆಯಿದೆ. ಈ ಬಂಡೆಯಲ್ಲಿರುವ ಬಿರುಕುಗಳಲ್ಲಿ ಬೆಂಕಿಯ ಜ್ವಾಲೆಗಳ ನರ್ತನ ನಡೆಯುತ್ತದೆ. ಟರ್ಕಿಷ್ ಭಾಷೆಯಲ್ಲಿ ಈ ಬೆಂಕಿಗೆ ‘ಯಾನಾರ್ಟಾಸ್’ ಎಂದು ಕರೆಯುತ್ತಾರೆ.

ಪೌರಾಣಿಕ ಹಿನ್ನೆಲೆ
ಈ ಪರ್ವತದ ಬೆಂಕಿಯ ಹಿಂದೆ ಹಲವು ಪೌರಾಣಿಕ ನಂಬಿಕೆಗಳೂ ಹಾಸುಹೊಕ್ಕಾಗಿವೆ. ಉರಿಯುವ ಬಂಡೆಯ ನಡುಭಾಗದಲ್ಲಿ ಐದು ಸಾವಿರ ಸೆಂ.ಮೀ. ವಿಸ್ತಾರವಿರುವ ಒಂದು ನೈಸರ್ಗಿಕ ಶಿಲ್ಪವಿದೆ. ಇದರ ತಲೆ ಸಿಂಹದಂತಿದೆ, ದೇಹ ಮೇಕೆಯಂತೆ, ಬಾಲ ಹೆಬ್ಬಾವಿನಂತಿದೆ. ಪುರಾಣ ಕಾಲದಲ್ಲಿ ಇಲ್ಲಿ ಈ ಮೂರು ಜೀವಿಗಳೂ ನೆಲೆಸಿದ್ದವು. ಧಾರಾಳವಾಗಿ ಮೇವು ಸಿಗುವ ಹುಲ್ಲಿಗಾವಲು ಇತ್ತು. ಸಾಹಸಿಯಾದ ಬೆಲ್ಲೊಪೋನ್ ಇವುಗಳನೆಲ್ಲ ಕೊಂದ. ಆಗ ಮೂರು ಜೀವಿಗಳ ದೇಹಭಾಗವನ್ನು ಹೊಂದಿರುವ ಪ್ರಾಣಿ ಸೃಷ್ಟಿಯಾಯಿತು. ಆದರೆ ಕ್ರೋಧದ ಉಸಿರೇ ಇಲ್ಲಿ ಉರಿಯುತ್ತಿರುವ ಬೆಂಕಿ ಎಂಬುದು ನಂಬಲಾದ ಒಂದು ಕತೆ.

      ಬೆಟ್ಟದ ಕೆಳಭಾಗದಲ್ಲಿ ಹೆಘಿಸ್ಟೋನ್ ನ ದೇವಾಲಯದ ಅವಶೇಷಗಳಿವೆ.ಗ್ರೀಕ್ ಪುರಾಣದ ಪ್ರಕಾರ ಅವನು ದೇವರ ಆಯುಧಗಳನ್ನು ತಯಾರಿಸುವ ಕಮ್ಮಾರ. ಕಬ್ಬಿಣವನ್ನು ಕಾಯಿಸಲು ಅವನೇ ಈ ಬೆಂಕಿಯನ್ನು ಸೃಷ್ಟಿಸಿದ ಎಂಬ ಇ0ನ್ನೊಂದು ಕತೆಯೂ ಪ್ರಚಲಿತವಾಗಿದೆ. ಬಹು ವರ್ಷಗಳಿಂದ ಕಡಲಿನಲ್ಲಿ ಸಂಚರಿಸುವ ಹಡಗುಗಳ ನಾವಿಕರಿಗೆ ರಾತ್ರಿ ನೇರ ದಿಕ್ಕನ್ನು ತಿಳಿಯಲು ದೂರದವರೆಗೂ ದೀಪಸ್ತಂಭದಂತೆ ಕಾಣಿಸುವ ಈ ಬೆಂಕಿಯ ಬಂಡೆಯೇ ನೆರವಾಗುತ್ತಿತ್ತು.

ಕೊನೆಗೂ ಬಯಲಾಯ್ತು ರಹಸ್ಯ

1811 ರಲ್ಲಿ ಸರ್ ಫ್ಯಾನ್ಸಿಸ್ ಬ್ಯುಫೋರ್ಟಿ ಹೀಗೊಂದು ನಿಸರ್ಗದ ವಿಸ್ಮಯವಿರುವುದನ್ನು ಹೊರ ಜಗತ್ತಿಗೆ ಪರಿಚಯಿಸಿದ. 1844 ರಲ್ಲಿ ಅದರ ಬಗೆಗೆ ಹೆಚ್ಚಿನ ಸಂಶೋಧನೆಗಳನ್ನು ನಡೆದವು. ಇಂಗ್ಲೆಂಡಿನ ಪುರಾತತ್ವ ಶಾಸ್ತ್ರಜ್ಞ ಜಾರ್ಜ್ ಇ ಬೀನ್ ಇಂಥ ಸ್ಥಿತಿಗೆ ‘ಅಲೊಕ್ತೋನೊಸ್’ ಎಂದು ಹೆಸರಿಟ್ಟ. ವಾತಾವರಣದಲ್ಲಿ ಗಾಳಿಯ ಒತ್ತಡದಿಂದ ತಾಪಮಾನ ಇಳಿಮುಖವಾಗಿರುವಾಗ ಬಂಡೆಯಲ್ಲಿ ಜ್ವಾಲೆಗಳು ಹೆಚ್ಚು ಸಂಖ್ಯೆಯಲ್ಲಿ ಉರಿಯುವುದು ಗೋಚರಿಸಿತು. ಅಂತರ್ಜಲದ ಪ್ರಮಾಣ ಹೆಚ್ಚಿರುವ ಋತುಗಳಲ್ಲಿ ಸ್ವಲ್ವ ಬಂಡೆ ಮತ್ತು ಬೂದಿಯ ರಾಶಿಯನ್ನು ಗುರುತಿಸಿ ಪರೀಕ್ಷೆಗೊಳಪಡಿಸಿತು.

      ಆಗ ಬಯಲಾದ ಜ್ವಾಲೆಯ ರಹಸ್ಯವೆಂದರೆ ಬಂಡೆಯೊಳಗೆ ಸಾಕಷ್ಟು ಅನಿಲಗಳ ಎಂದಿಗೂ ಬತ್ತದ ಕಣಜವೇ ಇದೆ. ತಳಭಾಗದ ಶಿಲೆಗೆ ಅಗ್ನಿವರ್ಧಕ ಗುಣವಿದೆ. ಶೇ.87 ಅಬಿಯಾನಿಕ್ ಮಿಥೇನ್ ಅನಿಲ, ಶೇ.11 ಹೈಡ್ರೋಜನ್, ಶೇ.3 ಸಾರಜನಕ, 0.57 ಅಲ್ಕೆನ್,0.01 ಕಾರ್ಬನ್ ಡೈ ಆಕ್ಸೈಡ್ ಮತ್ತು ಹೀಲಿಯಂ ಗೋಚರಿಸಿದೆ. ಇದನ್ನು ಬಳಸಿಕೊಂಡು ಬೆಂಕಿ ಉರಿಯುತ್ತಲೇ ಇರುತ್ತದೆ. ಇದರಿಂದಾಗಿ ಕೆಳಭಾಗದಲ್ಲಿರುವ ಯಾನಾರ್ಟಾಸ್ ಜಲಾಪಾತದ ನೀರು ಬಿಸಿಯಾಗುವುದಿಲ್ಲ. ಉರಿಯುವ ಬಂಡೆಯ ಸನಿಹ ಒಲಿಮಾಪೋಸ್ ಕಣಿವೆಯಲ್ಲಿ ಸಂರಕ್ಷಿತ ಅರಣ್ಯವಿದೆ. ಈ ಸುದೀರ್ಘ ಇತಿಹಾಸದಲ್ಲಿ ಬೆಂಕಿ ಬಂಡೆಯಿಂದು ಕೆಳಗಿಳಿದು ಕಾಡಿಗೆ ಹಾನಿ ಮಾಡಿದ ಪ್ರಸಂಗಗಳಿಲ್ಲ.

      ಪ್ರವಾಸಿಗರು ರಾತ್ರಿ ನಿಸರ್ಗದ ಈ ಚೋದ್ಯವನ್ನು ನೋಡಲು ಬರುತ್ತಾರೆ. ಬಂಡೆಯ ಬೆಂಕಿಯಲ್ಲಿ ಚಹಾ ಕುಡಿದು, ಇದರ ಶಾಖದಿಂದ ಚಳಿಯನ್ನು ನೀಗಿಕೊಂಡು ಸಂತೋಷಪಡುತ್ತಾರೆ. 

ಟಾಪ್ ನ್ಯೂಸ್

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.