ಕೊಹ್ಲಿ ಅಖಾಡದಲ್ಲಿ ಬ್ಯಾಟ್ಸಮನ್ ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಆಗಿ ಬದಲಾಗಿದ್ಹೇಗೆ?


ಕೀರ್ತನ್ ಶೆಟ್ಟಿ ಬೋಳ, Feb 7, 2020, 5:50 PM IST

k-l

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ರಿಷಭ್ ಪಂತ್ ಗೆ ಗಾಯವಾಗದೇ ಇದ್ದಿದ್ದರೆ ಏನಾಗುತ್ತಿತ್ತು?

ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಕೂಡಾ ಮಾಡಬಹುದು ಎಂದು ಹಲವರಿಗೆ ತಿಳಿಯುತ್ತಿರಲಿಲ್ಲ, ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲೂ ರಿಷಭ್ ಸ್ಥಾನದಲ್ಲಿ ಫಿಟ್ ಆಗಬಲ್ಲ ಎಂದು ಯಾರಿಗೂ ಅಂದಾಜಾಗುತ್ತಿರಲಿಲ್ಲ. ಅವಕಾಶವೇ ದೊರೆಯದೆ ಬೆಂಚು ಬಿಸಿ ಮಾಡುತ್ತಿದ್ದವ ವಿರಾಟ್, ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ಕ್ಯಾಪ್ಟನ್‌ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಕ್ರಮಾಂಕದಲ್ಲೂ ಆಡಿ, ಯಾವುದೇ ಜವಾಬ್ದಾರಿಯನ್ನೂ ನಿಭಾಯಿಸಬಲ್ಲ ಒಬ್ಬ ಅಪ್ಪಟ ಟೀಂ ಮ್ಯಾನ್ ಆಗಿ ರಾಹುಲ್ ಬದಲಾಗುತ್ತಿರಲಿಲ್ಲ. ಇದು ಮೊದಲ ಸಾಲಿನಲ್ಲಿ ಕೇಳಿದ ಪ್ರಶ್ನೆಗೆ ದೊರೆತ ಉತ್ತರ.

ಸಿಕ್ಕ ಸಣ್ಣ ಅವಕಾಶವನ್ನು ಬಾಚಿ ಬಳಸಿಕೊಳ್ಳುವುದು ಹೇಗೆ ಅಂದರೆ ಟೀಂ ಇಂಡಿಯಾದಲ್ಲಿ ರಾಹುಲ್ ಬಳಸಿಕೊಂಡ ಹಾಗೆ. ಸದ್ಯ ರಾಹುಲ್ ಜೀವನದ ಅತ್ಯುನ್ನತ ಫಾರ್ಮ್ ನಲ್ಲಿದ್ದಾರೆ. ಹೀಗೆಯೇ ಆಡಿದರೆ ನಿಗದಿತ ಓವರ್ ಕ್ರಿಕೆಟ್ ನಲ್ಲಿ ರಾಹುಲ್ ಸ್ಥಾನ ಭದ್ರವಾಗುವುದು ಖಚಿತ.

ಪಂತ್ ಗತಿಯೇನು?
ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಆಗಬಲ್ಲರು ಎಂಬ ಆಶಾದಾಯಕ ಭರವಸೆಯಿಂದ ತಂಡಕ್ಕೆ ಎಂಟ್ರಿಯಾದವರು ವಿಕೆಟ್ ಕೀಪರ್ ರಿಷಭ್ ಪಂತ್. ಹುಡುಗು ಬುದ್ಧಿಯ ಹೊಡೆತಗಳು, ಅಸ್ಥಿರ ಪ್ರದರ್ಶನ,ಗಟ್ಟಿ ಮನಸ್ಥಿತಿಯ ಕೊರತೆ ಪಂತ್ ಗೆ ಕಾಡುತ್ತಿದ್ದು ನಿಜ. ಆದರೆ ಬಿಸಿಸಿಐ ಬೇರೆ ಯುವ ವಿಕೆಟ್ ಕೀಪರ್ ಗಳ ಮೇಲೆ ಅಷ್ಟಾಗಿ ಭರವಸೆ ಇಡದ ಕಾರಣ ಅಸ್ಥಿರ ಪ್ರದರ್ಶನದ ಹೊರತಾಗಿಯೂ ಪಂತ್ ಗೆ ಅವಕಾಶ ಸಿಗುತ್ತಿತ್ತು. ಆದರೆ ರಾಹುಲ್  ವಿಕೆಟ್ ಹಿಂದೆ ಕೂಡ ಕಮಾಲ್ ಮಾಡಬಹುದು ಎಂದು ತಿಳಿಯಿತೋ ಆದು ಪಂತ್ ಕ್ರಿಕೆಟ್ ಬದುಕನ್ನೇ ಅಸ್ಥಿರಗೊಳಿಸಿದ್ದು ಮಾತ್ರ ಸುಳ್ಳಲ್ಲ.

ಹಾಗಾದರೆ ಪಂತ್ ಗೆ ಇನ್ನು ಅವಕಾಶವೇ ಇಲ್ಲವೆ? ಖಂಡಿತ ಇದೆ. ತಾನು ಯಾಕೆ ತಂಡಕ್ಕೆ ಅಗತ್ಯ ಎಂದು ಪಂತ್ ನಿರೂಪಿಸ ಬೇಕಿದೆ. ಪರಿಪೂರ್ಣ ವಿಕೆಟ್ ಕೀಪರ್ ಆಗಲು ಇನ್ನಷ್ಟು ಪಳಗಬೇಕಿದೆ. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ತಾಳ್ಮೆ ಬೆಳೆಸಬೇಕಿದೆ. ಪಂತ್ ಇನ್ನಷ್ಟು ಪಕ್ವವಾಗಬೇಕಿದೆ. ಇದಕ್ಕೆ ಪಂತ್ ಮಾಡಬೇಕಿರುವುದು ಇಷ್ಟೇ, ಇನ್ನಷ್ಟು ಕ್ರಿಕೆಟ್ ಆಡಬೇಕು. ದೇಶೀಯ ಟೂರ್ನಮೆಂಟ್ ಗಳಲ್ಲಿ ಆಡಬೇಕಿದೆ.

ಕೀಪರ್ ಆಗಿ ರಾಹುಲ್
ರಾಹುಲ್ ಅಚಾನಕ್ ಆಗಿ ವಿಕೆಟ್ ಕೀಪಿಂಗ್ ಗ್ಲೌಸ್ ಹಿಡಿದವರಲ್ಲ. ಬಾಲ್ಯದಿಂದಲೂ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡಿದ್ದ. ಕರ್ನಾಟಕ ತಂಡ, ಐಪಿಎಲ್ ಫ್ರಾಂಚೈಸಿಗಳಿಗೆ ರಾಹುಲ್ ವಿಕೆಟ್ ಹಿಂದೆ ನಿಂತಿದ್ದಾರೆ. ಆದರೆ ಭಾರತ ತಂಡದಲ್ಲಿ ಧೋನಿ, ನಂತರ ಪಂತ್ ಇದ್ದ ಕಾರಣ ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಆದರೆ ಸದ್ಯ ತಾನಾಗಿಯೇ ಒಲಿದು ಬಂದ ಅಮೂಲ್ಯ ಅವಕಾಶವನ್ನು ಕೆ ಎಲ್ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

ಕೀಪರ್ಆಗಿ ರಾಹುಲ್ ಯಾಕೆ ಬೇಕು
ಪ್ರಮುಖ ಕೀಪರ್‌ ರಿಷಭ್ ಪಂತ್ ಗುಣಮುಖರಾಗಿದ್ದಾರೆ. ಪಂತ್ ಗೆ ಮತ್ತೆ ಕೀಪಿಂಗ್ ಗ್ಲೌಸ್ ಕೊಡಬಹುದಲ್ವ? ಮತ್ತೊಬ್ಬ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಇದ್ದರಲ್ಲ, ಅವರಿಗೆ ಅವಕಾಶ ನೀಡಬಹುದಲ್ವ? ರಾಹುಲ್ ಯಾಕೆ ಬೇಕು? ರಾಹುಲ್ ಯಾಕೆ ಬೇಕೆಂದರೆ ಸದ್ಯ ಆತನಿರುವ ಫಾರ್ಮ್. ಜೀವನದ ಅತ್ಯುನ್ನತ ಫಾರ್ಮ್ ನಲ್ಲಿರುವ ರಾಹುಲ್ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದಾರೆ. ಅದೇ ಆಟವನ್ನು ಪಂತ್ ಅಥವಾ ಸಂಜುವಲ್ಲಿ ಸದ್ಯಕ್ಕಿಲ್ಲ.

ನಿಮ್ಮ ಅತ್ಯುತ್ತಮ ಬ್ಯಾಟ್ಸ್ ಮನ್ ಒಬ್ಬ ಕೀಪಿಂಗ್ ಕೂಡ ಮಾಡಬಲ್ಲ ಎಂದಾದರೆ ಅದು ಆ ತಂಡದ ಅದೃಷ್ಟ. ಆಗ ಮತ್ತೋರ್ವ ಕೀಪರ್ ಆಡಿಸುವ ಜಾಗದಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ ಅಥವಾ ಆಲ್ ರೌಂಡರ್ ನನ್ನು ಆಡಿಸುವ ಅವಕಾಶವಿರುತ್ತದೆ. ಈ ಹಿಂದೆ ಸೌರವ್ ಗಂಗೂಲಿಯೂ ಇದೇ ಲೆಕ್ಕಾಚಾರದಲ್ಲಿ ರಾಹುಲ್ ದ್ರಾವಿಡ್ ಗೆ ಕೀಪಿಂಗ್ ಜವಾಬ್ದಾರಿ ನೀಡಿದ್ದು. ದಕ್ಷಿಣ ಆಫ್ರಿಕಾ ತಂಡದಲ್ಲಿ ಬೌಚರ್ ರಾಜೀನಾಮೆ ನಂತರ ಕ್ವಿಂಟನ್ ಡಿ ಕಾಕ್ ಪದಾರ್ಪಣೆ ಆಗುವವರೆಗೆ ಡಿ ವಿಲಿಯರ್ಸ್ ಕೀಪರ್ ಆಗಿದ್ದು ಕೂಡ ಇದೇ ರೀತಿಯ ಕಾರಣದಿಂದ.

ಮಧ್ಯಮ ಕ್ರಮಾಂಕದಲ್ಲಿ ಯಾಕೆ?
ಕೆ.ಎಲ್ .ರಾಹುಲ್ ಈಗ ಆರಂಭಿಕ ಆಟಗಾರನಲ್ಲ. ಬದಲಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುವ ರಾಹುಲ್, ಹಿಂದೆ ಧೋನಿ ನಿಭಾಯಿಸುತ್ತಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐದನೇ ಕ್ರಮಾಂಕದಲ್ಲಿ ಆಡಿಸಿ ಫಿನಿಶರ್ ಆಗಿ ಕೆ.ಎಲ್.ರಾಹುಲ್ ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಐದನೇ ಕ್ರಮಾಂಕದಲ್ಲಿ ಆಡಿದ ಎರಡು ಇನ್ನಿಂಗ್ಸ್ ನಲ್ಲಿ ರಾಹುಲ್ ಅದ್ಭುತವಾಗಿ ಆಡಿದ್ದಾರೆ.

ಕೆ.ಎಲ್.ರಾಹುಲ್ ನ ಶಕ್ತಿ ಏನೆಂದರೆ ಆತ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಬಲ್ಲ ಅಥವಾ ಮೊದಲ ಎಸೆತದಿಂದಲೇ ಸಿಕ್ಸರ್ ಬಾರಿಸಬಲ್ಲ. ಹೀಗಾಗಿ ಯಾವ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ರಾಹುಲ್ ಗಿದೆ. ಐದನೇ ಕ್ರಮಾಂಕದಲ್ಲಿ ಸಂದರ್ಭಕ್ಕೆ ತಕ್ಕ ವೇಗದಲ್ಲಿ ಬ್ಯಾಟ್ ಬೀಸುತ್ತಿರುವುದು ತಂಡಕ್ಕೆ ಹೊಸ ಹುರುಪು ಕೊಡುತ್ತಿದೆ.

ಕಿವೀಸ್ ಏಕದಿನ ಸರಣಿಯಲ್ಲಿಇಬ್ಬರು ಆರಂಭಿಕರು ಗೈರಾಗಿದ್ದರೂ ರಾಹುಲ್ ರನ್ನು ಐದನೇ ಕ್ರಮಾಂಕದಲ್ಲೇ ಆಡಿಸಲು ಪ್ರಮುಖ ಕಾರಣ ನಾಯಕ ರಾಹುಲ್ ರನ್ನು ರಕ್ಷಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ. ಕೆ ಎಲ್ ರಾಹುಲ್ ರ ಕೌಶಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರನ್ನು ತಂಡದಿಂದ ಕೈಬಿಡಲು ತಯಾರಿಲ್ಲ. ರಾಹುಲ್ ರನ್ನು ಆರಂಭಿಕರಾಗಿ ಇಳಿಸಿದರೆ, ಗಾಯಗೊಂಡಿರುವ ರೋಹಿತ್ ಮತ್ತು ಧವನ್ ಮರಳಿ ಬಂದಾಗ ಅವರ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಆಗ ರಾಹುಲ್ ಸ್ಥಾನಕ್ಕೆ ಕುತ್ತು ಬರುತ್ತದೆ. ಹಾಗಾಗಿ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ರನ್ನು ಗಟ್ಟಿಗೊಳಿಸಲು ಕೊಹ್ಲಿ ಉತ್ತಮ ವೇದಿಕೆ ಸೃಷ್ಟಿಸುತ್ತಿದ್ದಾರೆ.

ಕೆ.ಎಲ್. ರಾಹುಲ್ ರ ಪ್ರತಿಭೆ ಅಗಾಧವಾದದ್ದು. ಸದ್ಯ ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ಗೆ ಉತ್ತಮ ಅವಕಾಶವೂ ದೊರೆಯುತ್ತಿದೆ. ಸರಿಯಾಗಿ ಬಳಸಿಕೊಳ್ಳಬೇಕಷ್ಟೆ.

ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.