ಹಳ್ಳಿ ಸಣ್ಣದು…ಊರಿನ ಹೆಸರು ಕೇಳಿದ್ರೆ ಗಾಬರಿಯಾಗುತ್ತೆ!


Team Udayavani, Dec 15, 2018, 6:11 PM IST

samall.jpg

ಈ ಊರಿನ ಹೆಸರು ಕೇಳಿದಾಕ್ಷಣ ನೀವು ಗಾಬರಿಯಾಗುತ್ತೀರಿ! ಏಕೆಂದರೆ ಈ ಊರಿನ ಹೆಸರಿನಲ್ಲಿ 58 ಅಕ್ಷರಗಳಿವೆ. ಬಹುಶಃ ಒಂದೇ ಉಸಿರಿನಲ್ಲಿ ಉಸುರಿ ಮುಗಿಯದಷ್ಟು! ಬ್ರಿಟನ್ ದೇಶದ ವೇಲ್ಸ್ ನ ಆಂಗ್ಲೇಸಿ ದ್ವೀಪದಲ್ಲಿರುವ ಒಂದು ಹಳ್ಳಿ- Llanfairpwllgwyngyngogerychwyrndrowllllantysiliogogogoch...ಇಷ್ಟುದ್ದದ ಹೆಸರಿನಿಂದ ಕರೆಯುವುದು ಕಷ್ಟವೆಂದು ಸ್ಥಳೀಯರು ಲಾನ್ಫೇರ್ ಪಿಜಿ (Llanfair PG) ಎಂದು ಸರಳೀಕರಿಸಿಕೊಂಡಿದ್ದಾರೆ. 2011 ರ ಜನಗಣತಿಯ ಪ್ರಕಾರ ಇಲ್ಲಿ ವಾಸಿಸುವ ಜನಸಂಖ್ಯೆ 3,107. ಅದರಲ್ಲಿ ಶೇ.71 ರಷ್ಟು ಮಂದಿ ವಲ್ಶ್ ಭಾಷೆಯಲ್ಲಿ ಮಾತನಾಡುತ್ತಾರೆ. 1860 ರಲ್ಲಿ ಈ ಊರಿಗೆ ದೊಡ್ಡ ಹೆಸರು ಬಂದಿದ್ದು, 58 ಅಕ್ಷರಗಳಿಂದ. ಇದು ಯುರೋಪ್ ನ ಅತಿ ದೊಡ್ಡ ಹೆಸರಿನ ಊರು ಹಾಗೂ ವಿಶ್ವದ ಅತಿ ದೊಡ್ಡ ಹೆಸರಿನ ಎರಡನೆಯ ಊರು ಎಂದು ಖ್ಯಾತಿ ಪಡೆದಿದೆ.  (ವಿಶ್ವದಲ್ಲೇ ಅತಿ ಹೆಚ್ಚಿನ ಎಂದರೆ 84 ಅಕ್ಷರಗಳ ಊರು ಇರುವುದು ನ್ಯೂಜಿಲೆಂಡಿನ ನಾರ್ತ್ ಐಸ್ ಲ್ಯಾಂಡೀನಲ್ಲಿ. ಕ್ಲಿಷ್ಟಕರವಾದ ಹೆಸರನ್ನು ಉಚ್ಚರಿಸಲು ಸಾಧ್ಯವಾಗದೆ ಅವರು ಟೌಮಾಟ ಎಂಬ 7 ಅಕ್ಷರಗಳಿಂದ ಕರೆಯುತ್ತಾರೆ).

ಈ ಊರು ಕ್ರಿ.ಪೂ 4000ದಲ್ಲೇ ಅಸ್ತಿತ್ವದಲ್ಲಿತ್ತು ಎನ್ನಲಾಗಿದ್ದು, ಕೃಷಿ ಮತ್ತು ಮೀನುಗಾರಿಕೆಯನ್ನೇ ನಂಬಿಕೊಂಡಿತ್ತು. ಬೋಟ್ ಮೂಲಕ ಮಾತ್ರ ಈ ದ್ವೀಪವನ್ನು ತಲುಪಲು ಸಾಧ್ಯವಿತ್ತು. ರೋಮನ್ ಆಡಳಿತ ಕೊನೆಗೊಂಡ ಬಳಿಕ ಗ್ವಿನೇಡ್ ಸಾಮ್ರಾಜ್ಯ ಈ ನಗರವನ್ನಾಳಿತು. ರಾಜನ ಆಡಳಿತವಿದ್ದು 1563 ಸುಮಾರಿಗೆ ಇಲ್ಲಿ ಕೇವಲ 80 ಜನ ವಾಸಿಸತ್ತಿದ್ದರು.

16 ನೇ ಶತಮಾನ ಆರಂಭವಾಗುತ್ತಲೇ ಎಸ್ಟೇಟ್ ಪದ್ಧತಿ ಆರಂಭವಾಗುತ್ತಲೇ, ಶ್ರೀಮಂತರು ಜಾಗವನ್ನು ಆಕ್ರಮಿಸಿಕೊಂಡರು. ಊಳಿಗಮಾನ್ಯ ಪದ್ಧತಿ ಜಾರಿಗೆ ಬಂದಿತು. ರೈತರು ತಾವು ಬೆಳೆದ ಪದ್ಧತಿಯಲ್ಲಿ ಬಹುಪಾಲು ಒಡೆಯರಿಗೇ ನೀಡಬೇಕಿತ್ತು. ಅದರ ಪರಿಣಾಮ ಜಾಗದ ಒತ್ತುವರಿ ನೆಡೆಯಿತು. ಅದರ ತೀವ್ರತೆ ಎಷ್ಟಿತ್ತೆಂದರೆ, 1844 ರ ಹೊತ್ತಿಗೆ ಇಡೀ ಹಳ್ಳಿಯ ಶೇ.92 ಭಾಗ ಮೂವರು ಸಿರಿವಂತರ ಕೈಯಲ್ಲಿತ್ತು!

ಕಾರಣವಿಷ್ಟೇ

ಕ್ರಮೇಣ ಜನಸಂಖ್ಯೆ ಹೆಚ್ಚಿತು. ಪೂರಕವಾಗಿ ಹೆಚ್ಚು ಮನೆಗಳೂ ನಿರ್ಮಾಣಗೊಂಡವು. 1826ರ ಬಳಿಕ ಲಂಡನ್ ಸೇರದಂತೆ ಹಲವು ನಗರಗಳಿಗೆ ಸೇರುವ ಸೇತುವೆ ನಿರ್ಮಾಣಗೊಂಡು, ಆಧುನಿಕತೆಯೊಂದಿಗೆ ಸಂಪರ್ಕ ಪಡೆದುಕೊಂಡಿತು. ಹಳ್ಳಿಯಲ್ಲಿ ರೈಲುಮಾರ್ಗವೂ ಹರಿದು ಹೋದದ್ದರಿಂದ ನಿಲ್ದಾಣದ ಆಸುಪಾಸಿನ ಪ್ರದೇಶ ವಾಣಿಜ್ಯಕೇಂದ್ರವಾಗಿ ಬದಲಾಯಿತು. ಬೇರೆ ಪ್ರದೇಶದ ಉದ್ಯಮಿಗಳನ್ನೂ ಇತ್ತ ಆಕರ್ಷಿಸಿತು.

 19 ನೇ ಶತಮಾನದ ಆರಂಭದಲ್ಲಿ ಹಳ್ಳಿಗೆ ಈ ಉದ್ದನೆಯ ಹೆಸರಿನ ನಾಮಕರಣ ಮಾಡಲಾಯಿತು. ಇದರ ಮೂಲ ಉದ್ದೇಶ ಹೆಚ್ಚಿನ ವ್ಯಾಪಾರಿಗಳನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಾಗಿತ್ತು. ರೈಲು ನಿಲ್ದಾಣಕ್ಕೂ ಅದೇ ಹೆಸರು ನೀಡಿ ಪ್ರಯಾಣಿಕರನ್ನು ಆಕರ್ಷಿಸಿತು. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ಹೆಸರು ಬರೆಸಿಕೊಂಡಿತು.

ತನ್ನ ಇಷ್ಟುದ್ದದ ಹೆಸರಿಗೆ .com  ಸೇರಿಸಿ ಹಳ್ಳಿಯ ಸಮಗ್ರ ಮಾಹಿತಿ ನೀಡುವ ವೆಬ್ ಸೈಟ್ ಕೂಡ ತೆರೆದಿದೆ. ಊರಿನ ಪ್ರವಾಸಿ ತಾಣಗಳ ಬಗ್ಗೆ, ವಿಶೇಷತೆಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ದೊರೆಯುತ್ತದ. ಉದ್ದ ಹೆಸರಿನ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆ ಕಡಿಮೆಯಿಲ್ಲವಂತೆ!

ವಲ್ಡ್ ಭಾಷೆಯಲ್ಲಿ ಈ ಹೆಸರಿನ ಅರ್ಥ “ಕೆಂಪು ಗುಹೆಯ ಬಳಿ  ಸುಂಟರಗಾಳಿಯಿಂದ ಉಂಟಾದ ಬಿಳಿ ಹುಲ್ಲುಗಾವಲಿನಲ್ಲಿರುವ ಸೈಂಟ್ ಮೇರಿ ಚರ್ಚ್”. ಸ್ಥಳೀಯ ನಿವಾಸಿಯಾಗಿದ್ದ ದರ್ಜಿಯೊಬ್ಬ ಈ ಹೆಸರು ಇಟ್ಟಿದ್ದ. ಕೊನೆಗೆ ಆತ ಸಾಯುವವರೆಗೂ ಹೆಸರಿನ ಅರ್ಥವನ್ನು ನಿಗೂಢವಾಗಿಯೇ ಇಟ್ಟಿದ್ದ ಎನ್ನಲಾಗಿದೆ. ಇಂದು ಈ ಊರಿನ ಹೆಸರನ್ನು ಸ್ವಲ್ಪವೂ ತಪ್ಪಿಲ್ಲದ ತಡವರಿಸದೆ ಸ್ಪಷ್ಟವಾಗಿ ಉಚ್ಚರಿಸುವವರು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರದವರು ಮಾತ್ರ!

ಸವಿತಾ (ತರಂಗ-ಸೆಪ್ಟೆಂಬರ್ 6)

ಟಾಪ್ ನ್ಯೂಸ್

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Chamarajanagara: A third-grade girl passed away after collapsing in class.

Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.