ಕಿರುತೆರೆಯಲ್ಲಿ “ಶನಿ’ಗೆ ಜೀವ ತುಂಬಿದ ಹೊಸ ಪ್ರತಿಭೆಗಳು


ಲಕ್ಷ್ಮಿ ಗೋವಿಂದ್ ರಾಜ್, Dec 14, 2018, 6:35 PM IST

shani01.jpg

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಜನಪ್ರಿಯ ಧಾರಾವಾಹಿಗಳು ಸಾಕಷ್ಟು ಬರುತ್ತಿವೆ. ಆದರೆ ಅವುಗಳಲ್ಲಿ ಪೌರಾಣಿಕ ಧಾರಾವಾಹಿಗಳು ಅಪರೂಪ. ಇದಕ್ಕೆ ಕಾರಣ ಪೌರಾಣಿಕ ಧಾರಾವಾಹಿಗಳು ಯುವ ಸಮುದಾಯವನ್ನು ಸೆಳೆಯುವುದಿಲ್ಲ ಎಂಬ ಹಿಂಜರಿಕೆ. ಜತೆಗೆ ತುಂಬಾ ಬಂಡವಾಳ ಬೇಕು. ಸಮಯವೂ ಹಿಡಿಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಳ್ಳಿತೆರೆಯ ಮೇಲೆ ವಿಜೃಂಭಿಸುತ್ತಿರುವ ಐತಿಹಾಸಿಕ ಚಿತ್ರಗಳು ಕಿರುತೆರೆಯಲ್ಲೂ ಹೊಸ ಭರವಸೆಯನ್ನು ಮೂಡಿಸಿವೆ.

ಈ ಹಿನ್ನೆಲೆಯಲ್ಲಿ ಕಿರುತೆರೆಯ ನಿರ್ಮಾಪಕರೂ ಇಂತಹ ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಇತ್ತೀಚೆಗೆ ಮೂಡಿಬರುತ್ತಿರುವ ‘ಶನಿ’ ಧಾರಾವಾಹಿ ಕೂಡ ಅಂತಹ ಸಾಹಸಗಳಲ್ಲೊಂದು. ಇದಕ್ಕೆ ಇಂಜಿಯರಿಂಗ್ ಮತ್ತಿತರ ಕ್ಷೇತ್ರಗಳಲ್ಲಿರುವ ಯುವಪ್ರತಿಭೆಗಳೂ ಸಾಥ್ ನೀಡುತ್ತಿರುವುದು ವಿಶೇಷ. ಮೊದಲಿಗೆ ಬಾಲ ಶನಿಯಾಗಿ ಅನಾಥ ಹುಡುಗ ಸುನೀಲ್ ಇದರಲ್ಲಿ ನಟಿಸಿದ್ದರೆ, ಈಗ ಪ್ರಣವ್ ಶ್ರೀಧರ್ ಯೌವನಾವಸ್ಥೆಯ ಶನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಅಂದಹಾಗೆ, ಪ್ರಣವ್ ಶ್ರೀಧರ್ ಓದಿದ್ದು ಇಂಜಿನಿಯರಿಂಗ್. ಆದರೆ, ಅವನನ್ನು ಆಕರ್ಷಿಸಿದ್ದು ನಟನೆ. ನಗರದ ಬಿಎಂಎಸ್ ಕಾಲೇಜು ವಿದ್ಯಾರ್ಥಿಯಾಗಿರುವ ಇವರು ಮೂಲತಃ ಬೆಂಗಳೂರಿನರು, ಈ ಹಿಂದೆ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಶಾಂತಂ ಪಾಪಂ’ ಸಂಚಿಕೆಯಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸ ಶನಿಯ ಪಾತ್ರವನ್ನು ನಿರ್ವಹಿಸುವುದರ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾನೆ.

ಮುಖ್ಯವಾಗಿ ಬಾಲ ಶನಿಯ ಜೊತೆ ಅಭಿನಯಿಸುತ್ತಿದ್ದ ಇತರೆ ಪಾತ್ರಗಳಾದ ಕಾಕರಾಜ, ಯಮ, ಯಮಿ, ಹನುಮ ಇವರು ಕೂಡ ಬದಲಾಗಿದ್ದಾರೆ. ಕಥೆಯ ಪ್ರಕಾರ ಪಾತ್ರಗಳು ದೊಡ್ಡವರಾಗಿದ್ದು, ಯೌವ್ವನದ ಕಥೆ ಸಾಗುತ್ತಿದೆ. ಇದುವರೆಗೂ ಬಾಲ ಶನಿ ಪಾತ್ರ ನೋಡಿ ಮನಸೂರೆಗೊಂಡ ಪ್ರತಿಭೆಗಳು, ಈಗ ಶನಿ ಧಾರಾವಾಹಿಯಲ್ಲಿ ನೋಡೋಕೆ ಸಿಗುತ್ತಿಲ್ಲ. ಕಾರಣ ಶನಿಯ ಬಾಲ್ಯದ ಕಥೆ ಮುಕ್ತಾಯವಾಗಿದ್ದು, ಇನ್ನುಮುಂದೆ ಶನಿ ಬೆಳೆದು ದೊಡ್ಡವಾನಾದ ಕಥೆ ಮುಂದುವರೆಯುತ್ತಿದೆ.

ಶನಿಯಾಗಿ ಮನಗೆದ್ದ ಅನಾಥ ಬಾಲಕ
ಇನ್ನು ಬಾಲ ಶನಿ ಪಾತ್ರವನ್ನು ಮಾಡಿದ ಹುಡುಗನ ವಿಚಾರಕ್ಕೆ ಬಂದಾಗ ಆತ ಒಬ್ಬ ಅನಾಥ ಹುಡುಗ. ಬೆಳೆದಿದ್ದು ಒಂದು ಅನಾಥಾಶ್ರಮದಲ್ಲಿ. ಈಗ ಅದೇ ಹುಡುಗ ಪ್ರೇಕ್ಷಕರ ಪಾಲಿಗೆ ಸಾಕ್ಷಾತ್ ಶನಿದೇವನಾಗಿದ್ದ ಕೂಡ! ಮನೆ-ಮಠ ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದ ಸುನೀಲ್ ಎಂಬ ಬಾಲಕ ತನ್ನ ಅದ್ಭುತ ಪ್ರತಿಭೆಯಿಂದ ಎಲ್ಲರ ಮನದಲ್ಲಿ ಮನೆ ಮಾಡಿದ್ದಾನೆ. ಪ್ರತಿ ದಿನ ರಾತ್ರಿ ಬಾಲ ಶನಿ ದೇವರ ಅವತಾರದಲ್ಲಿ ಸುನೀಲ್ ಕಿರುತೆರೆಯಲ್ಲಿ ದರ್ಶನ ನೀಡುತ್ತಿದ್ದ. ಜನ ಯಾವುದೇ ಕಾರಣಕ್ಕೂ ಈ ಧಾರಾವಾಹಿಯನ್ನು ಮಾತ್ರ ಮಿಸ್ ಮಾಡುತ್ತಿರಲಿಲ್ಲ. ಇದು ಆ ಬಾಲಕನ ಪ್ರತಿಭೆಗೆ ಒಂದು ಉದಾಹರಣೆಯಾಗಿತ್ತು.

ಸುನೀಲ್ ಬಹುಮುಖ ಪ್ರತಿಭೆ. ನೃತ್ಯ, ಯಕ್ಷಗಾನ, ಡೈಲಾಗ್ ಡೆಲಿವರಿ ಸೇರಿದಂತೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾನೆ. ಈಗ “ಕಲರ್ಸ್ ಕನ್ನಡ’ದಲ್ಲಿ ನಿತ್ಯ ಪ್ರಸಾರವಾಗುವ “ಶನಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಬಾಲ ಶನಿ ದೇವನಾಗಿ ಮಿಂಚಿ ಮನೆ ಮಾತಾಗಿದ್ದಾರೆ. ತನ್ನ ಅಮೋಘ ಅಭಿನಯ, ತೀಕ್ಷ್ಣ ನೋಟ, ಮುಖದ ಗಾಂಭೀರ್ಯ, ಅಮೋಘ ಡೈಲಾಗ್ ಡೆಲಿವರಿ ಮೂಲಕ ಕಿರುತೆರೆ ಲೋಕದ ಮನ ಗೆದ್ದಿದ್ದಾನೆ. ಅಂದಹಾಗೆ ಸುನೀಲ್ ಬೆಳೆಯುತ್ತಿರುವುದು ಚಾಮರಾಜನಗರದ ಅನಾಥಾಶ್ರಮದಲ್ಲಿ. ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು ದೀನಬಂಧು ಮಕ್ಕಳ ಆಶ್ರಮದಲ್ಲಿ.

ಅದನ್ನು ನಡೆಸುತ್ತಿರುವವರು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಮಗ ಜಯದೇವ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ತನ್ನ ಹತ್ತನೇ ತರಗತಿವರೆಗಿನ ವಿದ್ಯಾಭ್ಯಾಸ ಆಶ್ರಮದಿಂದಲೇ ಮುಗಿಸಿದ್ದಾನೆ. ಅಲ್ಲದೆ, ತುಂಬಾ ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನ ಕೂಡ ಕಲಿತಿದ್ದಾರೆ. ಶನಿ ಧಾರಾವಾಹಿಯ ಆಡಿಶನ್ ತಂಡದ ಕಣ್ಣಿಗೆ ಬಿದ್ದ ಇವರ ಅಮೋಘ ಅಭಿನಯಕ್ಕೆ ಮನಸೋತ ಶನಿ ಧಾರವಾಹಿ ತಂಡದವರು ಧಾರಾವಾಹಿಯ ಮುಖ್ಯ ಪಾತ್ರ ಭಗವಾನ್ ಶನಿದೇವನ ಪಾತ್ರಕ್ಕೆ ಆಯ್ಕೆ ಮಾಡಿದರು.

ಸುನೀಲ್ ಜೀವನದ ವಿಷಯಕ್ಕೆ ಬಂದಾಗ ಅವರಿಗೆ ತಂದೆ- ತಾಯಿ ಇಲ್ಲ. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಸುನೀಲ್ ತಾಯಿ, ಮಗನನ್ನ ನೋಡಿಕೊಳ್ಳಲು ಆಗದೇ ಏಳು ವರ್ಷದವನಿದ್ದಾಗಲೇ ಚಾಮರಾಜನಗರದ ದೀನಬಂಧು ಆಶ್ರಮಕ್ಕೆ ತಂದು ಬಿಟ್ಟಿದ್ದರು. ಕೆಲ ಸಮಯ ಮಗನ ಯೋಗಕ್ಷೇಮ ವಿಚಾರಿಸಲು ಬಂದು ಹೋಗುತ್ತಿದ್ದರು. ಆದರೆ ಅವರು ಅದೊಂದು ದಿನ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನಲ್ಲಿ ಸಾವನ್ನಪುತ್ತಾರೆ. ಉಳಿದಂತೆ ಸುನಿಲ್ ತಂದೆ ಎಲ್ಲಿದ್ದಾರೆ ಹೇಗಿದ್ದಾರೆ? ಅಷ್ಟಕ್ಕೂ ಅವರು ಜೀವಂತವಾಗಿ ಇದ್ದಾರಾ? ಇಲ್ಲವಾ? ಇದ್ಯಾವುದಕ್ಕೂ ಸದ್ಯಕ್ಕೆ ಮಾಹಿತಿ ಇಲ್ಲ.

ಸುನಿಲ್ ಅವರಿಗೆ ತನ್ನವರು ಅಂತ ಯಾರು ಇಲ್ಲ. ತಂದೆ- ತಾಯಿ ಅಣ್ಣ ತಮ್ಮ ಎಲ್ಲವೂ ಅವರು ಬೆಳೆಯುತ್ತಿರುವ ಆಶ್ರಮದ ಗುರುಗಳಾದ ಜಯದೇವಣ್ಣನವರು. ಸುನೀಲ್ ತಾಯಿ ಕಾಲವಾದ ಎಂಬ ಸುದ್ದಿ ಜೈದೇವ್ ಅವರಿಗೆ ತಿಳಿದ ಬಳಿಕ ಅವರು ಸುನೀಲ್ನ್ನ ಮತ್ತಷ್ಟು ಸೂಕ್ಷವಾಗಿ ನೋಡಿಕೊಳ್ಳುತ್ತಾರೆ. ಬಳಿಕ ಒಂದು ದಿನ ಅಮ್ಮ ಇನ್ನಿಲ್ಲ ಎಂಬ ವಿಷಯವನ್ನು ತಿಳಿಸುತ್ತಾರೆ. ಅಷ್ಟರಲ್ಲೇ ಆಶ್ರಮದ ವಾತಾವರಣಕ್ಕೆ ಹೊಂದಿಕೊಂಡಿದ್ದ ಸುನೀಲ್, ತನ್ನ ಅಮ್ಮ ಇಲ್ಲ ತಾನೊಬ್ಬ ಅನಾಥ ಎಂಬ ವಿಷಯವನ್ನ ಅಷ್ಟಾಗಿ ತಲೆಗೆ ಹಚ್ಚಿಕೊಳ್ಳದೇ ಗುರುಗಳು ಹೇಳಿದಂತೆ ತನ್ನ ಕನಸುಗಳನ್ನ ನನಸು ಮಾಡಿಕೊಳ್ಳುವತ್ತ ಮುಖ ಮಾಡುತ್ತಾರೆ.

ಹೀಗೆ ಅನಾಥನಾಗಿದ್ದ ಸುನೀಲ್ನ ಬೆಳವಣಿಗೆಗೆ ಕಾರಣವಾಗಿದ್ದು ಇದೇ ಆಶ್ರಮ. ಹಾಗೂ ತನಗೆ ಮನೆ, ಬಂಧು-ಬಳಗ, ಊರು ಎಲ್ಲವೂ ಇದೇ ಆಗಿತ್ತು. ಚಿಕ್ಕಂದಿನಿಂದಲೂ ಸುನೀಲ್ಗೆ ಓದಿನ ಮೇಲೆ ಆಸಕ್ತಿ ಅಷ್ಟಕ್ಕಷ್ಟೆ. ಆದರೆ ಕಲೆ ಇಂದು ಅವರಿಗೆ ದೊಡ್ಡ ಸ್ಟಾರ್ ಪಟ್ಟ ನೀಡಿದೆ. ಇನ್ನು ಸುನೀಲ್ ಆಡಿಶನ್ ವೇಳೆ ಒಂದು ಡೈಲಾಗ್ನಿಂದಲೇ ಶನಿಯ ಮುಖ್ಯ ಪಾತ್ರಕ್ಕೆ ಆಯ್ಕೆಯಾದರು. ನಟನೆಯಲ್ಲಿ ಯಾವುದೇ ಆಸಕ್ತಿಯಿಲ್ಲದೇ ಡಾನ್ಸ್ ಅಂದ್ರೆ ಬಹಳ ಇಷ್ಟ ಪಡೋ ಈ ಹುಡುಗನಿಗೆ ಶನಿ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ. ಕಲೆಯಲ್ಲಿ ಈ ಹುಡುಗನಿಗಿರುವ ಆಸಕ್ತಿಯನ್ನು ಗಮನಿಸಿ ಅನಾಥಾಶ್ರಮ ಉಡುಪಿಯಲ್ಲಿರುವ ಮಣಿಪಾಲದಲ್ಲಿ ಯಕ್ಷ ಗುರು ಸಂಜೀವ ಸುವರ್ಣ ಅವರ ಬಳಿ ಯಕ್ಷಗಾನ ಕಲಿಕೆಗೆ ಕಳುಹಿಸಿದ್ದರು.

ಇತ್ತ ಶನಿ ಸೀರಿಯಲ್ಗೆ ರಾಜ್ಯಾದ್ಯಂತ 500 ರಷ್ಟು ಮಕ್ಕಳನ್ನು ಆಡಿಷನ್ ಮಾಡಿದ್ದ ಧಾರಾವಾಹಿಯ ಕಾಸ್ಟಿಂಗ್ ನಿರ್ದೇಶಕರು ಯಾರೊಬ್ಬರೂ ಪಾತ್ರಕ್ಕೆ ಸರಿ ಹೊಂದುವವರು ಸಿಗದೇ, ಕೊನೆಗೆ ಅನಾಥಾಲಯದ ಬಾಲಕರನ್ನು ಸಂದರ್ಶಿಸುತ್ತಿದ್ದರು. ದೀನಬಂಧು ಆಶ್ರಮಕ್ಕೆ ಹೋದಾಗ ಸುನೀಲ್ ಬಗ್ಗೆ ತಿಳಿಯಿತು. ಮಣಿಪಾಲಕ್ಕೆ ಹೋಗಿ ಆಡಿಶನ್ ಮಾಡಿದರು. ಆಡಿಷನ್ನಲ್ಲಿ ಸುನೀಲ್ಗೆ ಕಥೆ ಬಗ್ಗೆಯಾಗಲೀ, ಪಾತ್ರದ ಬಗ್ಗೆಯಾಗಲೀ ಹೆಚ್ಚೇನೂ ಹೇಳದೇ ಆರೇಳು ವಾಕ್ಯದ ಸುದೀರ್ಘ ಸಂಭಾಷಣೆಯನ್ನು ವಿವರಿಸಿ ಹೇಳಿದರು. ಆ್ಯಕ್ಷನ್ ಹೇಳಿದ್ದೇ, ಏಳು ವಾಕ್ಯಗಳ ಆ ಸುದೀರ್ಘ ಸಂಭಾಷಣೆಯನ್ನು ಪಟಪಟನೆ ಹೇಳಿದ. ಮೊದಲ ಟೇಕ್ ಓಕೆ ಆಯ್ತು.

ಆಡಿಷನ್ ಮಾಡಿದ ಹುಡುಗರಿಗಿಂತ ಭಿನ್ನವಾಗಿದ್ದ, ನಟನೆಯಲ್ಲಿ ಹೊಸತನ ಇತ್ತು. ಅಲ್ಲದೇ ಆಡಿಷನ್ಗೆ ಬಂದವರಿಗೆ ಈ ಹುಡುಗನೇ ಶನಿ ಪಾತ್ರಧಾರಿ ಎಂದು ಅನಿಸಿಬಿಟ್ಟಿತು. ಮುಖ್ಯವಾಗಿ ಸುನೀಲ್ಗೆ ದೇವರ ಬಗ್ಗೆ ನಂಬಿಕೆಯಿದ್ದು, ಈತ ಹನುಮಂತನ ಭಕ್ತ. ದಿನನಿತ್ಯ ದೇವರಿಗೆ ಕೈ ಮುಗಿಯುವ ಜೊತೆಗೆ ತಾನು ಪಾತ್ರ ಮಾಡುವ ಶನಿಯ ಬಗ್ಗೆ ಮಾತ್ರ ಈತನಿಗೆ ತಿಳಿದದ್ದು, ಧಾರಾವಾಹಿಗೆ ಬಂದಾಗಲೇ. ಪಾತ್ರ ಮಾಡುತ್ತಲೇ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುತ್ತಿರುವ ಸುನೀಲ್ ಚಿಕ್ಕವಯಸ್ಸಿನಲ್ಲೇ ಅದ್ಭುತ ಪ್ರತಿಭೆ ಅಂತ ನಿರೂಪಿಸಿರುವ ಕಲಾವಿದ. ಈಗಾಗಲೇ ಶನಿಯ ಚಿಕ್ಕ ಹುಡುಗನ ಪಾತ್ರ ಮಗಿದಿದ್ದು, ಸುನೀಲ್ ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

* ಲಕ್ಷ್ಮಿಗೋವಿಂದರಾಜು ಎಸ್.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.