ನಿಕಾನ್ ಡಿ780 ಕ್ಯಾಮರಾ ಭಾರೀ ಜನಪ್ರಿಯತೆ ಪಡೆಯಲು ಕಾರಣವೇನು, ಏನಿದರ ವಿಶೇಷತೆ?
ಮಿಥುನ್ ಪಿಜಿ, Jan 21, 2020, 6:00 PM IST
ಛಾಯಾಗ್ರಹಣ ಎಂಬುದು ಇಂದು ಹಲವರ ಆಸಕ್ತಿಯ ಕ್ಷೇತ್ರ. ಡಿಜಿಟಲ್ ಕ್ಯಾಮರಾ ಬಂದ ನಂತರವಂತೂ ಪ್ರತಿಯೊಬ್ಬರು ಇಂದು ಫೋಟೋಗ್ರಾಫರ್ ಗಳಾಗಿ ಬದಲಾಗಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿಕಾನ್ ಮತ್ತು ಕ್ಯಾನನ್ ಕ್ಯಾಮರಾಗಳು ಹೆಚ್ಚು ಜನಾಕರ್ಷಣೆ ಪಡೆದಿವೆ. ಅದರಲ್ಲೂ ಕ್ಯಾಮರಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿಕಾನ್ ಸಂಸ್ಥೆ ಇದೀಗ ಎಫ್ ಎಕ್ಸ್ ಫಾರ್ಮೆಟ್ ನ ಡಿ780 ಕ್ಯಾಮರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅತಿ ವೇಗದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲು ಹಾಗೂ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಈ ಕ್ಯಾಮರಾ ಸಹಕಾರಿಯಾಗಲಿದೆ.
ಹೌದು. ನಿಕಾನ್‌ನ ಹೊಸ ಸರಣಿಯ ಕ್ಯಾಮರಾ ದೇಶದಲ್ಲಿ ಬಿಡುಗಡೆಯಾಗಿದೆ. ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ಅನುಕೂಲವಾಗುವಂತಹ ವಿವಿಧ ಆಯ್ಕೆಗಳನ್ನು ನಿಕಾನ್ ನೂತನ ಕ್ಯಾಮರಾ ಹೊಂದಿದೆ. ನಿಕಾನ್ ಪರಿಚಯಿಸಿದ ಕ್ಯಾಮರಾಗಳ ಪೈಕಿ ಅತಿ ವೇಗವಾಗಿ ಕೆಲಸ ನಿರ್ವಹಿಸುವ ಸಾಲಿಗೆ ಡಿ780 ಕ್ಯಾಮರಾ ಕೂಡ ಸೇರುತ್ತದೆ. ಇನ್ನು, ಕಡಿಮೆ ಬೆಳಕಿದ್ದಾಗ ಛಾಯಾಗ್ರಾಹಕ ಫೋಕಸ್ ಮಾಡಲು ಹರಸಾಹಸ ಪಡಬೇಕು. ಆದರೆ, ಡಿ780ಯಲ್ಲಿ ಈ ಸಮಸ್ಯೆ ಎದುರಾಗುವುದೇ ಇಲ್ಲ. ಇದರಲ್ಲಿ ಇಂಟರ್ ಚೇಂಜೇಬಲ್ ಎಫ್ ಮೌಂಟ್ ಲೆನ್ಸ್ ಇದ್ದು, ಬ್ಯಾಟರಿ ಬಾಳಿಕೆ ಹೆಚ್ಚಿದೆ. ಇದರ ಪರಿಣಾಮ ಅತ್ಯುತ್ಕೃಷ್ಠವಾದ ರೀತಿಯಲ್ಲಿ ಶೂಟಿಂಗ್‍ನೊಂದಿಗೆ ಅತ್ಯಧಿಕ ನಿಖರತೆಯನ್ನು ಕ್ಷಿಪ್ರವಾಗಿ ಪಡೆದುಕೊಳ್ಳಬಹುದಾಗಿದೆ ಮತ್ತು ಅತ್ಯುತ್ತಮವಾದ ಸ್ಪಷ್ಟತೆಯನ್ನು ಪಡೆಯಬಹುದು.
ಈ ಹೊಸ ಡಿ780 ಕ್ಯಾಮರಾ ಸುಲಭವಾಗಿ ದೃಷ್ಟಿ ಹರಿಸಬಲ್ಲ ವ್ಯೂ ಫೈಂಡರ್ ಹೊಂದಿದೆ. ಈ ಕ್ಯಾಮರಾದಿಂದ ನಿಸರ್ಗದ ಅದ್ಭುತ ಸೌಂದರ್ಯವನ್ನು ಮತ್ತು ಬೆರಗುಗೊಳಿಸುವ ರಸಕ್ಷಣಗಳನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ಸೆರೆ ಹಿಡಿಯಬಹುದಾಗಿದೆ. ಫೋಟೋಗ್ರಾಫರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು ಸ್ವಿಫ್ಟ್ ಮೋಶನ್ ಅನ್ನು ಅತ್ಯಂತ ಚಾಕಚಕ್ಯತೆಯಿಂದ ಕ್ಲಿಕ್ಕಿಸಬಹುದು.
ಈ ಕ್ಯಾಮರಾ ಸಿಎಂಓಎಸ್ ಸೆನ್ಸಾರ್ ಅನ್ನು ಒಳಗೊಂಡಿದ್ದು ನಿಕಾನ್ ಡಿ750 ಮಾದರಿಯಲ್ಲೇ 24. 5 ಮೆಗಾಫಿಕ್ಸೆಲ್ ನಲ್ಲಿ ಚಿತ್ರಗಳನ್ನು ತೆಗೆಯಬಹುದು. ಈ ಕ್ಯಾಮಾರದಲ್ಲಿ ಕಲರ್ ಮತ್ತು ಕ್ವಾಲಿಟಿ ಅತ್ಯುತ್ತಮವಾಗಿದೆ. 6 ಇಮೇಜ್ ಪ್ರೊಸೆಸರ್ ಹೊಂದಿದ್ದು 4K UHD ವಿಡಿಯೋ ರೆಕಾರ್ಡ್ ಮಾಡುವ ಅವಕಾಶವಿದೆ. ಐಎಸ್ ಓ ರೇಂಜ್ ಕೂಡ ಮೈನವಿರೇಳಿಸುವಂತಿದ್ದು 51,200 ಇದ್ದು 204,800 ವರೆಗೂ ವಿಸ್ತರಿಸಬಹುದು. ಒಂದು ಸೆಕೆಂಡ್ ಗೆ 1/8000 ಶಟರ್ ಸ್ಪೀಡ್ ಈ ಕ್ಯಾಮಾರದಲ್ಲಿ ಕಂಡುಬರಲಿದೆ.
ನಿಕಾನ್ ಕಾರ್ಪೊರೇಶನ್ ಟೋಕಿಯೋದ ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಹೊಸ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಿಕಾನ್ ಡಿ780 ಬೆಲೆ: ಹೊಸ ನಿಕಾನ್ ಡಿ780 Body 1,98,995 ರೂ. 24-120 ಎಂಎಂ ವಿಆರ್ ಲೆನ್ಸ್ ನೊಂದಿಗೆ ನಿಕಾನ್ ಡಿಜಿಟಲ್ ಕ್ಯಾಮರಾ ಡಿ780 ಕಿಟ್ ಬೆಲೆ 2,42,495 ರೂಪಾಯಿಗಳು. ಬ್ಲೂಟೂತ್ ಹಾಗೂ ವೈಫೈ ವ್ಯವಸ್ಥೆ ಕೂಡ ಇದಕ್ಕಿದೆ. 3.2 ಇಂಚು ಉದ್ದದ ಸ್ಕ್ರೀನ್ ಅನ್ನು ಇದು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.