ಕಾರ್ಖಾನೆಯಲ್ಲಿ ಕೂಲಿ, ಫೈಲ್ವಾನ್…ನಂತರ ಕನ್ನಡ ಚಿತ್ರರಂಗದಲ್ಲಿ ವಿಲನ್!


Team Udayavani, Dec 13, 2018, 12:16 PM IST

mp-shankar-03.jpg

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ ಹುಟ್ಟಿ ಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ…ಇದು 1965ರಲ್ಲಿ ತೆರೆಕಂಡಿದ್ದ ಸತ್ಯಹರಿಶ್ಚಂದ್ರ ಚಿತ್ರದ ಗೀತೆ…ಇದನ್ನು ರಚಿಸಿದ್ದು ಹುಣಸೂರು ಕೃಷ್ಣಮೂರ್ತಿ…ಈ ಹಾಡನ್ನು ಗೊಣಗುತ್ತಿದ್ದರೆ ನಮ್ಮ ಕಣ್ಣ ಮುಂದೆ ಹಾದು ಹೋಗುವುದು ಅಜಾನುಬಾಹು “ವೀರಬಾಹು”! ಹೌದು ಅವರು ಬೇರಾರು ಅಲ್ಲ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಎಂಪಿ ಶಂಕರ್.

ಬಡತನದ ಬೇಗೆ…ದಿನಗೂಲಿ ಕೆಲಸ…

ಶಂಕರ್ ಅವರ ತಂದೆ ಪುಟ್ಟಲಿಂಗಪ್ಪನವರು ಮೈಸೂರಿನಲ್ಲಿ ಕೈಮಗ್ಗದ ಕೈಗಾರಿಕೆಯನ್ನು ನಡೆಸುತ್ತಿದ್ದರು. ದಿನ ಕಳೆದಂತೆ ಟೆಕ್ಸ್ ಟೈಲ್ ಇಂಡಸ್ಟ್ರಿ ನಷ್ಟ ಅನುಭವಿಸಿದ್ದರಿಂದ ಇಡೀ ಕುಟುಂಬ ಆರ್ಥಿಕವಾಗಿ ಕುಗ್ಗಿ ಹೋಗಿತ್ತು. ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಶಂಕರ್ ಅವರಿಗೆ ಹಣಕಾಸಿನ ತೊಂದರೆಯಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೂ ಹಾಜರಾಗಲು ಸಾಧ್ಯವಾಗಿರಲಿಲ್ಲವಂತೆ.

ಬದುಕಿನ ಬಂಡಿ ಮುಂದೋಡಬೇಕಾದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗುವುದು ಶಂಕರ್ ಗೆ ಅನಿರ್ವಾವಾಗಿತ್ತು. ಮೈಸೂರು ವಿದ್ಯುಚ್ಛಕ್ತಿ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ಶಂಕರ್ ಅವರು 1955ರಲ್ಲಿ ಮೈಸೂರು ರೈಲ್ವೆ ಕಾರ್ಖಾನೆಯಲ್ಲಿ ಕುಲುಮೆ ಹೊತ್ತಿಸುವ, ಕಬ್ಬಿಣದ ಸರಳು ಕತ್ತರಿಸುವ ಕೆಲಸ ಮಾಡುತ್ತಿದ್ದರು. ಆಗ ಶಂಕರ್ ಅವರು ಒಂದು ತಿಂಗಳು ದುಡಿದಿದ್ದಕ್ಕೆ ಕೈಗೆ ಸಿಗುತ್ತಿದ್ದ ಸಂಬಳ ಕೇವಲ 80 ರೂಪಾಯಿ! ಕಬ್ಬಿಣದ ಸರಳು ಕತ್ತರಿಸುವ ಕೆಲಸ ಶಂಕರ್ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿತ್ತು.

ಕುಸ್ತಿ ಫೈಲ್ವಾನ್ ಕನ್ನಡ ಚಿತ್ರರಂಗದಲ್ಲಿ ವಿಲನ್ ಆದದ್ದು ಹೇಗೆ?

1956ರ ಹೊತ್ತಿಗೆ ಕುಸ್ತಿ ಅಭ್ಯಾಸದಲ್ಲಿ ತೊಡಗಿದ್ದ ಶಂಕರ್ ಅವರು ದಸರಾ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದರು. ಅಂದು ಮುಖ್ಯಮಂತ್ರಿ ಬಿ.ಡಿ.ಜತ್ತಿ ಅವರಿಂದ “ಶ್ರೀ ಮೈಸೂರು” ಎಂಬ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದರು. ಆದರೆ 1957ರಲ್ಲಿ ದಸರಾ ಕುಸ್ತಿ ಪಂದ್ಯದ ವೇಳೆ ನಡೆದ ಗಲಾಟೆಯಿಂದಾಗಿ ಮೂರು ವರ್ಷಗಳ ಕಾಲ ಕುಸ್ತಿ ಪಂದ್ಯವನ್ನೇ ನಿಷೇಧಿಸಲಾಗಿತ್ತು. ಇದರಿಂದಾಗಿ ಕುಸ್ತಿ ಪಂದ್ಯದಲ್ಲಿ ನಿರಂತರವಾಗಿ ಪಾಲ್ಗೊಳ್ಳುವ ಶಂಕರ್ ಕನಸು ಕೂಡಾ ಕಮರಿಹೋಗಿತ್ತು.

ಹೀಗೆ ಜೀವನದಲ್ಲಿ ಹಲವಾರು ಏಳು ಬೀಳು ಕಂಡ ಶಂಕರ್ ಅವರು ಬಾನುಮಯ್ಯಾಸ್ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾಡು ಕುರುಬ ನಾಟಕದಲ್ಲಿ ನಟಿಸಿದ್ದರು. ಈ ವೇಳೆ ಅವರ ಅದ್ಭುತ ನಟನೆಗೆ ಬಹುಮಾನ ಬಂದಿತ್ತು..ಅದನ್ನು ಅಂದು ಜಯಚಾಮರಾಜೇಂದ್ರ ಒಡೆಯರ್ ಶಂಕರ್ ಗೆ ಹಸ್ತಾಂತರಿಸಿ ಶುಭ ಹಾರೈಸಿದ್ದರಂತೆ.

ಇದಕ್ಕೂ ಮುನ್ನ ಶಂಕರ್ ಅವರು ಭರಣಿ ಕಲಾವಿದರು ಎಂಬ ನಾಟಕ ತಂಡವನ್ನು ಕಟ್ಟಿಕೊಂಡು ಗದಾಯುದ್ಧ, ಎಚ್ಚಮ ನಾಯಕ ಸೇರಿದಂತೆ ಹಲವು ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತಿದ್ದರು. ಶಂಕರ್ ಅವರ ಅಭಿನಯ ಗಮನಿಸಿದ್ದ ಹಿರಿಯ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ 1962ರಲ್ಲಿ ತಮ್ಮ ನಿರ್ದೇಶನದ ರತ್ನಮಂಜರಿ ಸಿನಿಮಾದಲ್ಲಿ ವಿಲನ್ ಪಾತ್ರ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ತದನಂತರ ಡಾ.ರಾಜ್ ಕುಮಾರ್ ಜೊತೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು.

ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದ ಎಂಪಿ!

ಸತ್ಯ ಹರಿಶ್ಚಂದ್ರದಲ್ಲಿ ವೀರಬಾಹುವಾಗಿ ಕನ್ನಡ ಚಿತ್ರರಸಿಕರ ಮನಗೆದ್ದಿದ್ದ ಎಂಪಿ ನಂತರ ವೀರ ಸಂಕಲ್ಪ, ಕಾಡಿನ ರಹಸ್ಯ, ನಾರಿ ಮುನಿದರೆ ನಾರಿ, ರಾಮ ಲಕ್ಷ್ಮಣ, ಗಂಧದ ಗುಡಿ, ಭೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಮಯೂರ, ನಾಗರಹಾವು, ಮೇಯರ್ ಮುತ್ತಣ್ಣ, ಭೂಲೋಕದಲ್ಲಿ ಯಮರಾಜ, ದೂರದ ಬೆಟ್ಟ, ದೇವರ ಮಕ್ಕಳು, ಗಿಡ್ಡುದಾದ, ನಾರದ ವಿಜಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು.

ಸುಮಾರು 108 ಸಿನಿಮಾಗಳಲ್ಲಿ ನಟಿಸಿದ್ದ ಎಂಪಿ ಶಂಕರ್ ಅಭಯಾರಣ್ಯ ಮತ್ತು ಕಾಡಿನ ಪರಿಸರದ ಬಗ್ಗೆ ತಮ್ಮ ಸಿನಿಮಾಗಳ ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಡಿನ ರಹಸ್ಯ, ಗಂಧದ ಗುಡಿ, ರಾಮ ಲಕ್ಷ್ಮಣ, ಮೃಗಾಲಯದಂತಹ ಚಿತ್ರಗಳನ್ನು ನಿರ್ಮಿಸಿದ್ದರು.

ಇದರಲ್ಲಿ ಗಂಧದ ಗುಡಿ ಸಿನಿಮಾ ಬಹಳ ಮುಖ್ಯವಾದದ್ದು. ಯಾಕೆಂದರೆ ಕನ್ನಡ ಸಿನಿಮಾ ರಂಗ ಕಂಡ ಇಬ್ಬರು ದಿಗ್ಗಜರಾದ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಟ್ಟಾಗಿ ನಟಿಸಿದ್ದ ಮೊದಲ ಮತ್ತು ಕೊನೆಯ ಚಿತ್ರ! ಗಂಧದ ಗುಡಿ ಸಿನಿಮಾ ಚಿತ್ರೀಕರಣವಾಗುತ್ತಿದ್ದ ಸಂದರ್ಭದಲ್ಲಿ ಅಂದು ಹುಟ್ಟಿಕೊಂಡ ಪುಕಾರು, ಸುತ್ತಿಕೊಂಡ ಅನುಮಾನಗಳಿಂದ ಇಬ್ಬರು ಮೇರು ನಟರು ನಾನೊಂದು ತೀರ, ನೀನೊಂದು ತೀರವಾಗಿದ್ದಂತೂ ಸುಳ್ಳಲ್ಲ. ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದ ಕೀರ್ತಿ ಮಾತ್ರ ಎಂಪಿ ಶಂಕರ್ ಗೆ ಸಲ್ಲುತ್ತದೆ.

ಸರಳ, ಸಜ್ಜನಿಕೆ ವ್ಯಕ್ತಿತ್ವದ  ಎಂಪಿ ಶಂಕರ್ ತಮ್ಮ ಭರಣಿ ಚಿತ್ರ ಬ್ಯಾನರ್ ನಡಿ  ಗಂಧದ ಗುಡಿ ಸೇರಿದಂತೆ 16 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ತಮ್ಮ ನಿರ್ಮಾಣದ ಸಿನಿಮಾದಲ್ಲಿ ಎಂಪಿ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕೈ ಸುಟ್ಟುಕೊಂಡವರಲ್ಲ. ತಮ್ಮ ಕಿರಿಯ ಮಗ ತೀರಿಕೊಂಡ ಬಳಿಕ ಎಂಪಿ ಶಂಕರ್ ತೀವ್ರ ಆಘಾತಕ್ಕೊಳಗಾಗಿದ್ದರು.

ಕನ್ನಡ ಚಿತ್ರರಂಗಕ್ಕೆ ಟೈಗರ್ ಪ್ರಭಾಕರ್ ಅವರನ್ನು ಪರಿಚಯಿಸಿದ್ದ ಕೀರ್ತಿ ಎಂಪಿ ಶಂಕರ್ ಗೆ ಸಲ್ಲಬೇಕು. ಅಷ್ಟೇ ಅಲ್ಲ ವಿ.ರವಿಚಂದ್ರನ್ ಕೂಡಾ ಶಂಕರ್ ಅವರ ಬ್ಯಾನರ್ ನಡಿಯೇ ಹೀರೋ ಆಗಿ ಗುರುತಿಸಿಕೊಂಡಿದ್ದರು.

ಎಂಪಿ ಪ್ರಾಣಿ ಪ್ರಿಯರೂ ಹೌದು…

ಕನ್ನಡ ಸಿನಿಮಾ ರಂಗದಲ್ಲಿ ತುಂಬಾ ಅಪಾಯಕಾರಿ ಕ್ಷೇತ್ರವಾದ ಕಾಡಿನ ಕುರಿತು ಎಂಪಿ ಶಂಕರ್ ರೀತಿ ಕನ್ನಡದಲ್ಲಿ ಸಿನಿಮಾ ನಿರ್ಮಿಸಿದವರು ಯಾರೂ ಇಲ್ಲ. ವೈಯಕ್ತಿವಾಗಿಯೂ ಎಂಪಿ ಪ್ರಾಣಿ ಪ್ರಿಯರಾಗಿದ್ದರು. ಹುಲಿ, ಸಿಂಹಗಳನ್ನು ಮನೆಯ ನಾಯಿಗಳಂತೆ ಸಾಕಿದ್ದ ಅಪರೂಪದ ನಟ ಅವರಾಗಿದ್ದರು.

ಕನ್ನಡ ಸಿನಿಮಾ ರಂಗಕ್ಕೆ ನೀಡಿದ್ದ ಕೊಡುಗೆ ಪರಿಗಣಿಸಿ ಎಂಪಿ ಶಂಕರ್ ಗೆ ಡಾ.ರಾಜ್ ಪ್ರಶಸ್ತಿ ನೀಡಲಾಗಿತ್ತು. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಟಿಎಸ್ ನಾಗಾಭರಣ ನಿರ್ದೇಶನದ ಕಲ್ಲರಳಿ ಹೂವಾಗಿ ಎಂಪಿ ಶಂಕರ್ ಅಭಿನಯಿಸಿದ ಕೊನೆಯ ಸಿನಿಮಾವಾಗಿದೆ. ಮೈಸೂರಿನ ತಮ್ಮ ಸ್ವಗೃಹದಲ್ಲಿ ಜಾರಿಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿತ್ತು. ಅಲ್ಲಿಂದ ಗುಣಮುಖರಾಗಿ ಬಂದ ಅವರು ಪಿತ್ತಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, 2008ರ ಜುಲೈ 17ರಂದು ಇಹಲೋಕ ತ್ಯಜಿಸಿದ್ದರು. ಅಜಾನುಬಾಹು ಎಂಪಿ ಶಂಕರ್ ಅಭಿನಯ ಹಾಗೂ ಅವರು ನಿರ್ದೇಶಿಸಿದ, ನಿರ್ಮಿಸಿದ ಸಿನಿಮಾಗಳ ಮೂಲಕ ಸಿನಿ ಪ್ರಿಯರ ಮನದಾಳದಲ್ಲಿ ಜೀವಂತವಾಗಿದ್ದಾರೆ.

ಟಾಪ್ ನ್ಯೂಸ್

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kmc

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್;‌ ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.