ಸಮಾಜವಾದಿಯ ನಾಯಕನ ನೂರರ ನೆನಪು
ಬಿ. ವಿ. ಕಕ್ಕಿಲ್ಲಾಯ ಜನ್ಮಶತಾಬ್ದ
Team Udayavani, Aug 11, 2019, 5:40 AM IST
ಬದುಕಿನ ಉದ್ದಕ್ಕೂ ನಿಷ್ಠಾವಂತ ಸಮಾಜವಾದಿಯಾಗಿ, ಜೀವ ಪರ ಚಿಂತಕರಾಗಿ, ನ್ಯಾಯಪರ ಹೋರಾಟಗಾರರಾಗಿದ್ದ ಬಿ. ವಿ. ಕಕ್ಕಿಲ್ಲಾಯ ಎಂದೇ ಹೆಸರಾಗಿದ್ದ ಬೇವಿಂಜೆ ವಿಷ್ಣು ಕಕ್ಕಿಲ್ಲಾಯರ ಜನ್ಮ ಶತಾಬ್ದ ವರ್ಷವಿದು. ಕೇರಳದ ಕಾಸರಗೋಡು ಸಮೀಪದ ಬೇವಿಂಜೆಯಲ್ಲಿ 1919ರ ಎಪ್ರಿಲ್ 11ರಂದು ಹುಟ್ಟಿದ ಬಿ. ವಿ. ಕಕ್ಕಿಲ್ಲಾಯರು ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಚಳುವಳಿ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಆಕರ್ಷಣೆಗೆ ಒಳಗಾಗಿದ್ದರು. ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ನ ಸದಸ್ಯರಾಗಿ, ಮಂಗಳೂರು ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕಮ್ಯುನಿಸ್ಟ್ ನಾಯಕರ ಪರಿಚಯವಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು.
1942/43ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದಾಗ ನಿಷೇಧಿತ ಸಾಹಿತ್ಯ ಹೊಂದಿದ ಆರೋಪದಲ್ಲಿ ಮಂಗಳೂರಿನ ಸಬ್‌ಜೈಲಿನಲ್ಲಿ 9 ತಿಂಗಳ ಶಿಕ್ಷೆ ಅನುಭವಿಸಿದರು. 1943ರಿಂದ 45ರ ವರೆಗೆ ಬೀಡಿ, ಹಂಚು, ನೇಯ್ಗೆ, ಗೇರುಬೀಜ, ಮುದ್ರಣ, ಮುನಿಸಿಪಲ್ ನೌಕರರನ್ನು ಸಂಘಟಿಸುವಲ್ಲಿ ಸಕ್ರಿಯವಾಗಿ ದುಡಿದರು. ಸಿಪಿಐ ನಾಯಕರಾಗಿ ಬೆಳೆದರು.
ಅಂದಿನ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸೇರುವುದು ಸುಲಭವಾಗಿರಲಿಲ್ಲ. ಪಕ್ಷಕ್ಕಾಗಿ ಸರ್ವವನ್ನೂ ತ್ಯಾಗ ಮಾಡುವ ಮನೋಭಾವ ಬೇಕಿತ್ತು. ಕಮ್ಯುನಿಸ್ಟ್ ಪಕ್ಷದ ಸದಸ್ಯನೆಂದು ಸಂದೇಹ ಬಂದರೆ ಬಂಧಿಸಿ ಚಿತ್ರಹಿಂಸೆ ಕೊಡಲಾಗುತ್ತಿದ್ದ ದಿನಗಳವು. 1943-44ರಲ್ಲಿ ಪಕ್ಷವನ್ನು ಸಂಘಟಿಸಲು ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿದರು. 1944ರಲ್ಲಿ ಮುಂಬಯಿಯಲ್ಲಿ ವಿಜಯಲಕ್ಷಿ ಪಂಡಿತ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದರು. 1946ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ವೆಲ್ಲೂರು ಹಾಗೂ ಕಣ್ಣೂರು ಜೈಲುಗಳಲ್ಲಿ ಬಂಧನದಲ್ಲಿದ್ದರು. ಸ್ವಾತಂತ್ರ್ಯ ದೊರಕಿದ ದಿನವೇ ಕಣ್ಣೂರು ಜೈಲಿನಿಂದ ಬಿಡುಗಡೆ ಹೊಂದಿದರು. ಅವರಿಗೆ ಮಂಗಳೂರಲ್ಲಿ ಅದ್ದೂರಿ ಸ್ವಾಗತ ನೀಡಲಾಗಿತ್ತು. ಅಂದಿನಿಂದ ಕಾರ್ಮಿಕ ಮತ್ತು ಕಮ್ಯುನಿಸ್ಟ್ ಪಕ್ಷದ ಸಂಘಟನೆಗಳಲ್ಲಿ ಇನ್ನಷ್ಟು ತೊಡಗಿಸಿಕೊಂಡರು.
ಒಬ್ಬ ಪ್ರಬುದ್ಧ ರಾಜಕಾರಣಿ, ಹೋರಾಟ ಗಾರ ಮಾತ್ರವಲ್ಲ; ಅವರು ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಕಮ್ಯುನಿಸಂ ಎಂಬ ಪುಸ್ತಕ ತುಂಬ ಜನಪ್ರಿಯವಾಗಿದೆ. ಇದು 4 ಬಾರಿ ಮರುಮುದ್ರಣ ಕಂಡಿದೆ. ಮಾನವನ ನಡಿಗೆ ವಿಜ್ಞಾನದೆಡೆಗೆ, ಕಾರ್ಲ್ಮಾರ್ಕ್ಸ್ ಬದುಕು ಬರಹ, ಫ್ರೆಡ್ರಿಕ್ ಏಂಜಲ್ಸ್ ಜೀವನ, ಭಾರತೀಯ ಚಿಂತನೆ, ಹಿಂದೂ ಧರ್ಮ, ಮಾಕ್ಸìವಾದ ಮತ್ತು ಭಗವದ್ಗೀತೆ, ಭಾರತಕ್ಕೊಂದು ಕವಲುದಾರಿ, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ. ಬರೆಯದ ದಿನಚರಿಯ ಮರೆಯದ ಪುಟಗಳು ಅವರ ಆತ್ಮಕಥನ. ಕಕ್ಕಿಲ್ಲಾಯರು ನಿಧನರಾದದ್ದು 2012ರ ಜೂನ್ 4ರಂದು.
ನಿನ್ನೆ ಮತ್ತು ಇಂದು ಮಂಗಳೂರಿನಲ್ಲಿ ಬಿ. ವಿ. ಕಕ್ಕಿಲ್ಲಾಯರ ನೂರರ ನೆನಪಿನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ವಿ. ಕುಕ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.