ನಮ್ಮ ಬದುಕು ಮತ್ತು ಯಕ್ಷಗಾನ ವಿಷವಾಗಿದೆ…99 ರ ಗೋಪಾಲರಾಯರ ಮಾತು!
Team Udayavani, Aug 5, 2018, 2:48 PM IST
ತನ್ನದೇ ಆದ ವಿಶಿಷ್ಠ ಸಾಧನೆಯ ಮೂಲಕ ಯಕ್ಷರಂಗದಲ್ಲಿ ದಿಗ್ಗಜರ ಸಾಲಿನಲ್ಲಿ ಗುರುತಿಸಿಕೊಂಡವರು ಹಿರಿಯಡಕ ಗೋಪಾಲ ರಾವ್ ಅವರು. ಮದ್ದಳೆಯಲ್ಲಿ ಮಾಯಾಲೋಕಕ್ಕೆ ಪ್ರೇಕ್ಷಕರನ್ನು ಹಲವು ದಶಕಗಳ ಕಾಲ ಕರೆದೊಯ್ದಿದ್ದ ಇವರು ತನ್ನ ಕೈ ಬೆರಳುಗಳ ಚಮತ್ಕಾರವನ್ನು ಅಮೆರಿಕಾದಲ್ಲೂ ತೋರಿ ಬೆರಗು ಮೂಡಿಸಿದವರು. ಇಂತಹದ್ದೊಂದು ಅದ್ಭುತ ಏರು ಮದ್ದಳೆ ವಾದನ ಇದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟವರು.
ಅವರ ಸಂದರ್ಶನಕ್ಕೆಂದು ಹಿರಿಯಡಕದ ಓಂತಿಬೆಟ್ಟಿನ ಬಳಿ ಹೆದ್ದಾರಿಯ ಪಕ್ಕದಲ್ಲಿ ನಿವಾಸಕ್ಕೆ ಉದಯವಾಣಿ ತಂಡ ತೆರಳಿತ್ತು. ಸಂಜೆ ಸರಿಯಾಗಿ 4 ಗಂಟೆಯ ವೇಳೆಗೆ ಮನೆಯ ಒಳಗೆ ಶಾಲು ಹೊದ್ದು ಕುಳಿತಿದ್ದರು. ರಾಯರ ಪುತ್ರ ರಾಮಮೂರ್ತಿ ಅವರು ನಮ್ಮನ್ನು ಕಂಡು ಕೈಮುಗಿದು ಸ್ವಾಗತಿಸಿದರು. 99 ರ ಹರೆಯದ ಗೋಪಾಲರಾಯರು ಯಾರ ಸಹಾಯವೂ ಇಲ್ಲದೆ, ಕೈಯಲ್ಲಿ ಕೋಲೂ ಇಲ್ಲದೆ ಮನೆಯಿಂದ ಹೊರ ಬಂದು ನಮ್ಮ ಜೊತೆ ಮಾತಿಗಿಳಿದರು.
ಈಗ ಬದುಕಿನ ಶೈಲಿಯೇ ಬದಲಾಗಿ ಹೋಗಿದೆ. ಹಳೆಯದ್ದನ್ನು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೆನಪು ಮಾಡಿಕೊಳ್ಳಬೇಕಾಗಿದೆ. ಕೃಷಿ ಪರಂಪರೆ, ಋಷಿ ಪರಂಪರೆಗೆ ಆಧುನಿಕತೆಯ ಹೊಡೆತ ಬಿದ್ದಿದೆ. ಅಂತೆಯೇ ಯಕ್ಷಗಾನ ಪ್ರಪಂಚದಲ್ಲಿಯೂ ಭಾರೀ ಬದಲಾವಣೆ ಆಗಿ ಚಿತ್ರಣ ಬದಲಾವಣೆ ಆಗಿದೆ. ಇತ್ತೀಚೆಗೆ ನಾನೂ ಆಟವನ್ನು ನೋಡಿದ್ದೆ ಆದರೆ ಅಲ್ಲಿ ನಮ್ಮತನವನ್ನು ನಾನು ಕಾಣಲಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು.
ಹಳೆಯದ್ದೆ ಇರಲಿ ಎಂದು ಹೇಳಲು ಆಗುವುದಿಲ್ಲ ನಾವೀಗ ಹಸಿವಾದಾಗ 10 ರೂಪಾಯಿ ಕೊಟ್ಟು ಒಂದು ಪ್ಯಾಕೆಟ್ (ಚಿಪ್ಸ್, ಕುರ್‌ಕುರೆ ಇತ್ಯಾದಿ ) ತಂದು ತಿನ್ನುತ್ತೇವೆ. ಹೊಟೇಲ್‌ಗ ಳಲ್ಲಿ ಭರ್ಜರಿ ವಿಧ ವಿಧದ ಭೋಜ್ಯಗಳನ್ನು ತಿನ್ನುತ್ತೇವೆ. ಹಿಂದೆ ಹಾಗಿರಲಿಲ್ಲ. ನಮ್ಮದೇ ಆದ ವೈಶಿಷ್ಠ್ಯ ಪೂರ್ಣ ಆಹಾರಗಳಿದ್ದವು. ಪ್ರಾಂತ್ಯಕ್ಕೆ ತಕ್ಕ ಹಾಗೆ ಭಿನ್ನತೆಗಳಿದ್ದವು. ಆದರೆ ಅದರಲ್ಲಿ ನಮ್ಮತನವಿತ್ತೇ ಹೊರತು ವಿದೇಶ ಆಹಾರ ಪದ್ಧತಿಯ ಪ್ರಭಾವ ಇರಲ್ಲಿಲ್ಲ ಎಂದರು.
ನಾವೀಗ ಆಟಿಡೊಂಜಿ ದಿನ, ಕೆಸರಲ್ಲಿ ಒಂದು ದಿನ , ನೇಜಿ ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದ ಪರಿಸ್ಥಿತಿ ಬಂದಿದೆ. ಹಿಂದೆ ಅದು ಜನಜೀವನದಲ್ಲೇ ಅಡಕವಾಗಿತ್ತು. ಹಾಗೆಯೇ ಯಕ್ಷಗಾನ ಕ್ಷೇತ್ರದಲ್ಲಿ ಹಳೆಯ ವಿಶಿಷ್ಠ ನಡೆಗಳು, ವೇಷಭೂಷಣಗಳು, ಶೈಲಿಗಳನ್ನು ಮತ್ತೆ ನೆನಪಿಸುವ ಕಾಲ ಬಂದೇ ಬರುತ್ತದೆ. ಅದು ಮರೆಯಲ್ಲಿ ಇದ್ದು ಮತ್ತೆ ಮೇಳೈಸುತ್ತದೆ ಎಂದು ಭವಿಷ್ಯವಾಣಿ ನುಡಿದರು.
ನಿಮ್ಮ ಕಾಲದಲ್ಲಿ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಯಕ್ಷಗಾನದ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದಾಗ ..ರಸವತ್ತಾಗಿ ತಮ್ಮ ಅಂದಿನ ಅನುಭವಗಳನ್ನು ರಾಯರು ಬಿಚ್ಚಿಟ್ಟರು…(ಮುಂದುವರಿಯುವುದು)
ವಿಷ್ಣು ದಾಸ್ ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.