ಪಾಲಕ್ ಸೊಪ್ಪಿನಿಂದ ರುಚಿಕರವಾದ ತಿಂಡಿ-ತಿನಿಸು ಮಾಡೋ ಸುಲಭ ವಿಧಾನ ಇಲ್ಲಿದೆ…
ಶ್ರೀರಾಮ್ ನಾಯಕ್, Nov 7, 2019, 7:15 PM IST
ಪಾಲಕ್ ಸೊಪ್ಪು ಹೆಚ್ಚು ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆಯಾಗುವುದು.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ದೇಹದ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಿದೆ.
ಕಬ್ಬಿಣಾಂಶ, ಕ್ಯಾಲ್ಸಿಯಂ,ಮೆಗ್ನಿàಷಿಯಂ ಇತ್ಯಾದಿ ಹಲವಾರು ಉತ್ತಮ ಅಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ತಯಾರಿಸಬಹುದು. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಪಾಲಕ್ ಪಕೋಡ ಹಾಗೂ ಪಾಲಕ್ ಪನ್ನೀರ್ ಮಂಚೂರಿ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ಮಾಡಿ ಸವಿಯಿರಿ…
ಪಾಲಕ್ ಪಕೋಡ
ಬೇಕಾಗುವ ಸಾಮಗ್ರಿ:
ಕಡಲೆ ಹಿಟ್ಟು 1 ಕಪ್, ಕಾನ್ಫ್ಲೋರ್ 1/2 ಕಪ್, ಮೆಣಸಿನ ಪುಡಿ 1ಚಮಚ, ಧನಿಯಾ ಪುಡಿ 1/2 ಚಮಚ, ಓಮ 1/4 ಚಮಚ, ಜೀರಿಗೆ 1/2 ಚಮಚ, ಪಾಲಕ್ ಸೊಪ್ಪು 1ಕಪ್ (ಸಣ್ಣಗೆ ಹಚ್ಚಿದ), ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ:
ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿರಿ. ನಂತರ ಕಡಲೆ ಹಿಟ್ಟು ಕಾನ್ಫ್ಲೋರ್ ಮೆಣಸಿನ ಪುಡಿ , ಧನಿಯಾ ಪುಡಿ, ಓಮ, ಜೀರಿಗೆ, ಉಪ್ಪು ಮತ್ತು ಪಾಲಕ್ ಸೊಪ್ಪನ್ನು ಹಾಕಿ ಗಟ್ಟಿಗೆ ಕಲಸಿ. ನಂತರ ಕಾದ ಎಣ್ಣೆಗೆ ಕೈಯಿಂದ ಸ್ವಲ್ಪ ಸ್ವಲ್ಪನೇ ತೆಗೆದು ಹಾಕಿ. ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಗರಿ ಗರಿಯಾದ ಪಾಲಕ್ ಪಕೋಡ ಸವಿಯಲು ಸಿದ್ಧ.
ಪಾಲಕ್ ಪನ್ನೀರ್ ಮಂಚೂರಿ
ಬೇಕಾಗುವ ಸಾಮಗ್ರಿ:
ಪಾಲಕ್ ಸೊಪ್ಪು 1 ಕಟ್ಟು, ಪನ್ನೀರ್ 200 ಗ್ರಾಂ, ಕಾನ್ ಫ್ಲೋರ್ 1 ಚಮಚ, ಮೈದಾ 1ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಹೆಚ್ಚಿದ ಈರುಳ್ಳಿ 1/2 ಕಪ್, ಹೆಚ್ಚಿದ ಕ್ಯಾಬೇಜ್ 4 ಚಮಚ, ಸೋಯಾ, ಚಿಲ್ಲಿ ಸಾಸ್ 2 ಚಮಚ, ಟೊಮೆಟೋ ಸಾಸ್ 4 ಚಮಚ, ಹಸಿ ಮೆಣಸು 4, ಕೊತ್ತಂಬರಿ ಸೊಪ್ಪು 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು,.
ತಯಾರಿಸುವ ವಿಧಾನ
ಪಾಲಕ್ ಸೊಪ್ಪನ್ನು ಬೇಯಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ ಇದಕ್ಕೆ ಮೈದಾ, ಕಾನ್ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ಕಲಸಿರಿ. ಈ ಮಿಶ್ರಣಕ್ಕೆ ಸಣ್ಣ ಸಣ್ಣ ಕತ್ತರಿಸಿದ ಪನ್ನೀರ್ ಹಾಕಿ ಡಿಪ್ ಮಾಡಿ ಎಣ್ಣೆಯಲ್ಲಿ ಕರಿದು ಮಂಚೂರಿ ತಯಾರಿಸಿಟ್ಟುಕೊಳ್ಳಿ.
ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ,ಈರುಳ್ಳಿ , ಹಸಿಮೆಣಸು, ಕ್ಯಾಬೇಜ್, ಸೋಯಾ, ಚಿಲ್ಲಿ ಸಾಸ್, ಟೊಮೆಟೋ ಸಾಸ್, ಉಪ್ಪು ಹಾಕಿ ಬಾಡಿಸಿಕೊಳ್ಳಿ. ನಂತರ ಕರಿದ ಮಂಚೂರಿಗಳನ್ನು ಇದಕ್ಕೆ ಸೇರಿಸಿ ಎರಡು ನಿಮಿಷ ಫ್ರೈ ಮಾಡಿದರೆ ಬಿಸಿ ಬಿಸಿಯಾದ ಪಾಲಕ್-ಪನ್ನೀರ್ ಮಂಚೂರಿ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.