ಬ್ಯೂಟಿ ಪಾರ್ಲಗೇ ಹೋಗುವ ಅಗತ್ಯವಿಲ್ಲ, ಮನೆಯಲ್ಲಿಯೇ ಪೆಡಿಕ್ಯೂರ್!
Team Udayavani, Nov 3, 2018, 7:06 PM IST
ಇದು ವೇಗದ ಜಗತ್ತು. ದಿನದ ಎಲ್ಲಾ ಸಮಯದಲ್ಲೂ ಒಂದಲ್ಲೊಂದು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಕಾರಣ ಆಧುನಿಕ ಮಹಿಳೆಗೆ ಬ್ಯೂಟಿ ಪಾರ್ಲರ್ಗಳಿಗೆ ಹೋಗುವುದಕ್ಕೆ ಸಮಯ ಇರುವುದಿಲ್ಲ ಬಹುತೇಕ ಮಂದಿ ಮುಖ ಸೌಂದರ್ಯಕ್ಕೆ ಮಾತ್ರ ಮಹತ್ವ ಕೊಡುತ್ತಾರೆಯೇ ಹೊರತು ಕೈ ಬೆರಳುಗಳ ಉಗುರುಗಳ ಅಷ್ಟು ಮಹತ್ವ ಎನಿಸುವುದಿಲ್ಲ. ಆದರೆ ನಿಜವಾಗಲೂ ಸೌಂದರ್ಯ ಅಡಗಿರುವುದು ನಿಮ್ಮ ಬೆರಳಿನ ಉಗುರುಗಳಲ್ಲೂ ನಿಮ್ಮ ಕೈಗೆ ಉಗುರುಗಳ ಪಾತ್ರ ಅತೀ ಮುಖ್ಯ ಹಾಗಿದ್ದರೆ ಉಗುರುಗಳು ಹಾಗೂ ಕೈಕಾಲುಗಳ ಸೌಂದರ್ಯಕ್ಕಾಗಿ ಬ್ಯೂಟಿ ಪಾರ್ಲಗೇ ಹೋಗುವ ಅಗತ್ಯವಿಲ್ಲ ಅದನ್ನು ಮನೆಯಲ್ಲೇ ಮಾಡಿಕೊಳ್ಳಬಹುದು.ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ…
– ನಿಂಬೆರಸ ಮತ್ತು ಹಾಲಿನ ಕೆನೆ ಬೆರೆಸಿ ನಿತ್ಯ ಕೈಕಾಲುಗಳಿಗೆ ಹಚ್ಚಿದರೆ ಕೈಕಾಲುಗಳ ಚರ್ಮ ಮೃದುವಾಗಿ ಹೊಳೆಯುತ್ತದೆ.
- ಪರಂಗಿ ಹಣ್ಣಿನ ತುಂಡುಗಳನ್ನು ಅರೆದು ಅದನ್ನು ಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಕೈ ಮತ್ತು ಕಾಲುಗಳ ಚರ್ಮ ಕೋಮಲವಾಗುತ್ತದೆ.
- ಚಳಿಗಾಲದಲ್ಲಿ ಕೈಕಾಲು ಉಗುರುಗಳಿಗೆ ಬಾದಾಮಿ ಎಣ್ಣೆಗೆ ಚಿಟಿಕೆ ಉಪ್ಪು ಬೆರೆಸಿ ಲೇಪಿಸಬೇಕು.ಇದರಿಂದ ಮೃದುತ್ವ ಹಾಗೂ ಕಾಂತಿ ಹೆಚ್ಚುತ್ತದೆ.
– ಕಾಲಿನ ಹಿಮ್ಮಡಿ ಹಾಗೂ ಚರ್ಮ ಒಣಗಿ ಒಡೆಯುತ್ತಿದ್ದರೆ ಹಸಿ ಹಾಲಿಗೆ ಹರಳೆಣ್ಣೆ ಹಾಗೂ ಅರಸಿನ ಬೆರೆಸಿ ಲೇಪಿಸಿದರೆ ಒಡಕು ಗುಣಮುಖವಾಗುತ್ತದೆ.
- ಮಾವಿನ ಎಲೆಯ ರಸ ಹಚ್ಚಿದರೆ ಕಾಲಿನ ಒಡಕು ನಿವಾರಣೆಯಾಗುತ್ತದೆ.
- ಕೈಕಾಲುಗಳಿಗೆ ಮೆಹಂದಿ ಹಚ್ಚುವುದರಿಂದ ಅಂದವೂ ಹೆಚ್ಚುತ್ತದೆ ಜೊತೆಗೆ ದೇಹಕ್ಕೆ ತಂಪು
- ಬೇವಿರಸ ತುಳಸೀ ರಸ ಹಾಗೂ ಅರಸಿನ ಪುಡಿ ಬೆರೆಸಿ ಉಗುರಿನ ಸುತ್ತ ಚರ್ಮಕ್ಕೆ ಹಚ್ಚಿದರೆ ಊತ,ತುರಿಕೆ ನಿವಾರಣೆಯಾಗುತ್ತದೆ.
- ಕೊಬ್ಬರಿ ಎಣ್ಣೆ ,ಹಾಲು ಹಾಗೂ ಅರಸಿನ ಪುಡಿ ಬೆರೆಸಿ ಮೈಕೈ ಕಾಲುಗಳಿಗೆ ನಿತ್ಯ ಲೇಪಿಸಿ ಸ್ನಾನ ಮಾಡಿದರೆ ಚರ್ಮ ಕಾಂತಿಯಾಗುತ್ತದೆ.
ಮನೆಯಲ್ಲಿಯೇ ಪೆಡಿಕ್ಯೂರ್:
– ಕಾಲುಗಳನ್ನು ಚೆನ್ನಾಗಿ ತೊಳೆದು ಸ್ವತ್ಛಗೊಳಿಸಿ ತದನಂತರ ಪಾಲಿಶ್ ರಿಮೂವರ್ ಹಾಕಿ ಹತ್ತಿಯ ಉಂಡೆಗಳಿಂದ ಒರೆಸಿ ತೆಗೆಯಿರಿ.ಹತ್ತಿಯ ಉಂಡೆಗಳಿಂದ ನಿಮ್ಮ ಕಾಲುಗಳ ಉಗುರುಗಳನ್ನು ಸರಿಯಾಗಿ ಉಜ್ಜಿಕೊಳ್ಳಿ.
– ಉತ್ತಮ ನೇಲ್ಕಟ್ನಿಂದ ಕಾಲುಗಳ ಉಗುರುಗಳನ್ನು ನೀಟಾಗಿ ಕತ್ತರಿಸಿ.ನೆನೆಪಿಡಿ ಕಾಲುಗಳ ಉಗುರುಗಳನ್ನು ಜಾಸ್ತಿ ಬೆಳೆದರೆ ನೋಡಲೂ ಚೆಂದ ಕಾಣುವುದಿಲ್ಲ.ಆರೋಗ್ಯಕ್ಕೂ ಒಳ್ಳೆಯದಲ್ಲ.
– ಅಗಲ ತಳವುಳ್ಳ ಪಾತ್ರೆಗೆ ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಕಾಲುಗಳನ್ನು ಸ್ವಲ್ಪ ಹೊತ್ತು ನೆನೆಪಿಡಿ.
– ನಂತರ ನೇಲ್ಕಟ್ನಿಂದ ನಿಧಾನಕ್ಕೆ ಚರ್ಮವನ್ನು ಉಜ್ಜಿ.ಆಗ ಸಡಿಲಗೊಂಡಿರುವ ಚರ್ಮ ಬಿದ್ದು ಹೋಗುತ್ತದೆ.ಒಂದು ನಿಮಿಷದ ನಂತರ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಕಾಲುಗಳನ್ನು ಮೃದುವಾಗಿ ಉಜ್ಜಿ.ಉಗುರಿನವರೆಗೂ ಉಜ್ಜಿತ್ತಿರಿ.
– ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಮೃದುವಾಗಿ ಒರೆಸಿಕೊಳ್ಳಿ.ನಂತರ ಅದಕ್ಕೆ ಸ್ಕಿನ್ ಕ್ರೀಮ್ಅನ್ನು ನಿಧಾನಕ್ಕೆ ಸವರಿ.
– ಆಗ ಕಾಲುಗಳ ಚರ್ಮ ಮೃದುವಾಗುತ್ತದೆ.ವಾರಕ್ಕೆರಡು ಬಾರಿಯಾದರೂ ರಾತ್ರಿ ಮಲಗುವಾಗ ಕಾಲಿಗೆ ಎಳ್ಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ.
– ಸ್ನಾನ ಮಾಡುವಾಗ ಕಲ್ಲುಗಳ ಮೇಲೆ ಕಾಲುಗಳನ್ನು ಚೆನ್ನಾಗಿ ಉಜ್ಜಿ.ಅದರಲ್ಲೂ ಹಿಮ್ಮಡಿಯನ್ನು 4 5 ಬಾರಿ ಉಜ್ಜಿ.ಇದರಿಂದ ಹೆಚ್ಚುವರಿ ಚರ್ಮ ಸಡಿಲಗೊಂಡು ಚರ್ಮ ಮೃದುವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.