ಹೂಡಿಕೆ ನಮೂನೆ ಮತ್ತು ನಮ್ಮ ವಯಸ್ಸಿಗೆ ಇರುವ ನಂಟೇನು ಗೊತ್ತಾ ?


Team Udayavani, Mar 4, 2019, 12:30 AM IST

attractive-investment-600.jpg

ಉತ್ತಮ ಹೂಡಿಕೆಗಾಗಿ ಉಳಿತಾಯದ ಹಣವನ್ನು ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುವುದನ್ನು ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಹೂಡಿಕೆ ವಿಧಾನಕ್ಕೂ ನಮ್ಮ ವಯಸ್ಸಿಗೂ ನೇರವಾದ ಸಂಬಂಧ ಇರಬೇಕು ಎಂದು ಹೂಡಿಕೆ ಪರಿಣತರು ಹೇಳುತ್ತಾರೆ. ಹೂಡಿಕೆಗೆ ತೊಡಗುವ ಮೊದಲು ಅದೇನೆಂಬುದನ್ನು ನಾವು  ತಿಳಿದಿರುವುದು ಅಗತ್ಯ. 

ಉದಾಹರಣೆಗೆ ನಮ್ಮ ಸಾಮಾನ್ಯ ಜೀವಿತಾವಧಿ ನೂರು ವರ್ಷ ಎಂಬುದು ಸರಿಯಷ್ಟೇ !  ಹಾಗಿರುವಾಗ ನಮ್ಮ ವಯಸ್ಸನ್ನು ನೂರರಿಂದ ಕಳೆದ ಸಿಗುವ ಸಂಖ್ಯೆಗೆ ಅನುಗುಣವಾದ ಅನುಪಾತದಲ್ಲಿ ನಾವು ನಮ್ಮ ಆದಾಯದ ಅಂಶವನ್ನು ಹೂಡಿಕೆಗೆ ತೊಡಗಿಸುವುದು  ಮುಖ್ಯ ಎಂದು ಹಣಕಾಸು ವಿಶ್ಲೇಷಕರು, ಪರಿಣತರು ಅಭಿಪ್ರಾಯ ಪಡುತ್ತಾರೆ. 

ಉದಾಹರಣೆಗೆ ನನ್ನ ವಯಸ್ಸು ಈಗ 30 ವರ್ಷ ಎಂದಿಟ್ಟುಕೊಳ್ಳೋಣ. ನಾನು ನನ್ನ ಆದಾಯದ ಶೇ.70ರಷ್ಟು ಪ್ರಮಾಣವನ್ನು ನಿವೃತ್ತಿ ಬಳಿಕದ ಜೀವಿತಾವಧಿಗಾಗಿ ಉಳಿಸುವುದು ಅಗತ್ಯ ಎಂಬುದು ಪರಿಣತರ ಸಲಹೆ. ಉಳಿತಾಯದ ಹಣವನ್ನು ಅತ್ಯಧಿಕ ಇಳುವರಿಗಾಗಿ ಹೂಡುವ ವಿಷಯದಲ್ಲಿ ಶೇರು ಹೂಡಿಕೆಗೆ ಅಗ್ರ ಸ್ಥಾನವಿದೆ.  ನಾವು ಯಾವತ್ತೂ ನೆನಪಿಡಬೇಕಾದ ಸಂಗತಿ ಎಂದರೆ ಅತ್ಯಧಿಕ ಇಳುವರಿ ಯಾವತ್ತೂ ಅತ್ಯಧಿಕ ರಿಸ್ಕ್ ಒಳಗೊಂಡಿರುತ್ತದೆ ! ಆದುದರಿಂದಲೇ ಅತ್ಯಧಿಕ ಇಳುವರಿಯೊಂದಿಗೆ ಅತ್ಯಧಿಕ ರಿಸ್ಕ್ ಇರುವ ಶೇರು ಮಾಧ್ಯಮದಲ್ಲಿ ಹಣ ತೊಡಗಿಸುವಲ್ಲಿ  ನಮ್ಮ ವಯಸ್ಸು ಕೂಡ ಮುಖ್ಯ ಪಾತ್ರ ವಹಿಸುತ್ತದೆ. 

ಇದರ ಅರ್ಥವೇನೆಂದರೆ ನಾವು 30 ವರ್ಷ ಪ್ರಾಯದಲ್ಲಿ ನಮ್ಮ ಆದಾಯದಲ್ಲಿ ಉಳಿತಾಯಕ್ಕೆ ಒದಗುವ ಹಣದ ಶೇ.70ರಷ್ಟನ್ನು ನಾವು ಶೇರುಗಳಲ್ಲಿ ಹೂಡಬಹುದಾಗಿದೆ. ಏಕೆಂದರೆ ಈ ವಯಸ್ಸು ಬಹುತೇಕ ವಿವಾಹ ಪೂರ್ವ ವಯಸ್ಸಾಗಿರುತ್ತದೆ; ಹಾಗಾಗಿ ಸಾಂಸಾರಿಕ ಹಣಕಾಸು ಜವಾಬ್ದಾರಿಗಳು ಇನ್ನೂ ಅಂಟಿಕೊಂಡಿರುವುದಿಲ್ಲ.

ಹಾಗಾಗಿ ಈ ವಯಸ್ಸಿನಲ್ಲೇ ನಾವು ನಮ್ಮ ಜೀವನ ಗುರಿಗಳನ್ನು, ಉದಾಹರಣೆಗೆ ಸ್ವಂತ ಮನೆ, ಕಾರು, ಆಸ್ತಿಪಾಸ್ತಿ ಖರೀದಿ, ವಿವಾಹ, ಅನಂತರದಲ್ಲಿ ಮಕ್ಕಳ ಶಿಕ್ಷಣ, ಮುಂತಾದ ದೊಡ್ಡ ದೊಡ್ಡ ಗುರಿಗಳನ್ನು ನಿಗದಿಸಿಕೊಳ್ಳುವುದಕ್ಕೆ ಸಾಧ್ಯವಿರುತ್ತದೆ. ಆದುದರಿಂದಲೇ ಈ ವಯಸ್ಸಿನಲ್ಲಿ  ಅಪಾರ ರಿಸ್ಕ್ ಇರುವ ಶೇರು ಹೂಡಿಕೆಯು ಪ್ರಶಸ್ತವಾಗಿರುತ್ತದೆ. ತಾರುಣ್ಯದಲ್ಲಿ  ರಿಸ್ಕ್ ತೆಗೆದುಕೊಳ್ಳುವ ಛಾತಿ, ಬದುಕಿನ ಉನ್ನತ ಗುರಿ ಸಾಧಿಸುವ ಛಲ, ಹಣಕಾಸಿನ ಸೂಕ್ಷ್ಮ ಲೆಕ್ಕಾಚಾರದ ನಿಖರ ದೂರದೃಷ್ಟಿ ಮುಂತಾಗಿ ಎಲ್ಲವೂ ಇರುತ್ತದೆ. 

ಅಮೆರಿಕನ್ನರ ಜೀವಿತಾವಧಿಯನ್ನು 110 ರಿಂದ 120 ವರ್ಷ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಮೆರಿಕನ್ನರು ನಮಗಿಂತ ಹೆಚ್ಚು ಪ್ರಮಾಣದಲ್ಲಿ, ನಿವೃತ್ತಿ ಬಳಿಕದ ಜೀವಿತಾವಧಿಗಾಗಿ, ಉಳಿತಾಯ ಮಾಡುವ, ಹಣ ಹೂಡಿಕೆ ಮಾಡುವ ಅಗತ್ಯ ಇದೆ ಎಂದು ಪರಿಣತರು ಹೇಳುವುದನ್ನು ನಾವಿಲ್ಲಿ ಉಲ್ಲೇಖಿಸಬಹುದು. 

ಶೇರು ಹೂಡಿಕೆಯಿಂದ ಬಾಂಡ್ ಹೂಡಿಕೆಯತ್ತ…

ಶೇರು ಹೂಡಿಕೆಯಿಂದ ಬಾಂಡ್ ಹೂಡಿಕೆಯತ್ತ ಬಂದಾಗ ನಮ್ಮ ವಯಸ್ಸಿಗೂ ಬಾಂಡ್ ಹೂಡಿಕೆ ಅನುಪಾತಕ್ಕೂ ಇರುವ ನಿಕಟತೆಯನ್ನುನಾವು ತಿಳಿಯಬೇಕಾಗುತ್ತದೆ.

ನಮ್ಮ ವಯಸ್ಸು 40 ವರ್ಷ ಎಂದಿಟ್ಟುಕೊಳ್ಳೋಣ. ಅಂತಿರುವಾಗ ನಮ್ಮ ಹಣ ಹೂಡಿಕೆಯ ಅನುಪಾತ ಶೇರು ಮತ್ತು ಬಾಂಡ್ ನಡುವೆ ಹೇಗಿರಬೇಕು ? ಹೂಡಿಕೆ ಪರಿಣತರ ಪ್ರಕಾರ ನಾವು 40ರ ಹರೆಯದವರಿರುವಾಗ ನಮ್ಮ ಉಳಿತಾಯದ ಒಟ್ಟು ಹಣದ ಶೇ.70ರಷ್ಟನ್ನು ನಾವು ಶೇರುಗಳಲ್ಲೂ ಉಳಿದ ಶೇ.30ರಷ್ಟನ್ನು ಸರಕಾರಿ ಬಾಂಡ್‌ ಗಳಲ್ಲೂ ಹೂಡಬಹುದಾಗಿರುತ್ತದೆ.

ಸರಕಾರಿ ಬಾಂಡ್‌ ಗಳು, ಇನ್ಫ್ರಾಸ್ಟ್ರಕ್ಚರ್ ಬಾಂಡುಗಳು ಸಾಮಾನ್ಯವಾಗಿ ಹತ್ತು ವರ್ಷಗಳ ದೀರ್ಘಾವಧಿಯದ್ದಾಗಿರುತ್ತವೆ. ಇವುಗಳ ಮೇಲಿನ ಬಡ್ಡಿದರ ಆಕರ್ಷಕವಾಗಿರುತ್ತದೆ ಮತ್ತು ಸಹಜವಾಗಿಯೇ ಬಾಂಡ್ ಹೂಡಿಕೆ ಸುಭದ್ರವೂ, ನಿಶ್ಚಿಂತೆಯದ್ದೂ ಆಗಿರುತ್ತದೆ. 

ಶೇರುಗಳಲ್ಲಿ ಹಣ ತೊಡಗಿಸ ಬಯಸುವವರು ತಮ್ಮ ಆರು ತಿಂಗಳ ಗೃಹ ನಿರ್ವಹಣೆ ಖರ್ಚು ಮೊತ್ತವನ್ನು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಮತ್ತು ಈ ನಿಧಿಗೆ ಆಗೀಗ ಸ್ವಲ್ಪ ಸ್ವಲ್ಪವೇ ಮೊತ್ತವನ್ನು ಹಾಕುತ್ತಿರುವುದು ಸೂಕ್ತ ಎಂದು ಪರಿಣತರು ಹೇಳುತ್ತಾರೆ.

ಇದಕ್ಕೆ ಕಾರಣ ಶೇರು ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಲಾಭ ನಗದೀಕರಣ ಕೆಲವೊಮ್ಮೆ ಕಷ್ಟಕರವೂ ನಷ್ಟಕರವೂ ಆಗಿರುತ್ತದೆ. ಆದುದರಿಂದ ಯಾವುದೇ ರೀತಿಯ ಆರ್ಥಿಕ ತುರ್ತನ್ನು  ನಿಭಾಯಿಸುವುದಕ್ಕೆ ಈ ನಿಧಿ ಸಕಾಲಿಕವಾಗಿ ಉಪಯೋಗಕ್ಕೆ ಬರುತ್ತದೆ ಎನ್ನುವುದು ಹೂಡಿಕೆ ಪರಿಣತರ ಕಿವಿಮಾತು. 

40 ಕಳೆದು ನಿಧಾನವಾಗಿ ನಿವೃತ್ತಿಯ ವಯಸ್ಸಿನೆಡೆಗೆ ಸಾಗುವ ಹಂತದಲ್ಲಿ  ಸುಭದ್ರ ಮತ್ತು ಸುಖಕರ ವಿಶ್ರಾಂತ ಬದುಕಿಗಾಗಿ ನಮ್ಮ ಹೂಡಿಕೆ ರೀತಿಯು ಹೇಗಿರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.

60ರಲ್ಲಿ ನಿವೃತ್ತರಾದರೆ ಮುಂದಿನ 20 ವರ್ಷಗಳ ಕಾಲ, ಎಂದರೆ 80ರ ವಯಸ್ಸನ್ನು ತಲುಪುವ ತನಕದ ಸಂಭಾವ್ಯ ವಾರ್ಧಕ್ಯದ ಜೀವಿತಕ್ಕೆ ನಾವು ಪರ್ಯಾಪ್ತ ಹಣಕಾಸು ನಿಧಿಯನ್ನು ರೂಪಿಸುವ ಸಿದ್ಧತೆಗೆ ತೊಡಗಬೇಕಾಗುತ್ತದೆ.

ಅಂತಿರುವಾಗ ನಮ್ಮ ಮುಂದೆ ತೆರೆದುಕೊಳ್ಳುವ ಹೂಡಿಕೆ ಮಾರ್ಗಗಳು ಅಥವಾ ಮಾಧ್ಯಮಗಳು ಯಾವುವು ಎಂಬುದನ್ನು ನಾವು ಗಮನಿಸಬೇಕಾಗುತ್ತದೆ.ಅವುಗಳನ್ನು ಈ ಕೆಳಗಿನಂತೆ ಗುರುತಿಸಬಹುದು. 

1. ನಿವೃತ್ತಿಯ ಸಂದರ್ಭದಲ್ಲಿ ದೊರಕುವ ಭವಿಷ್ಯ ನಿಧಿ, ಗ್ರಾಚ್ಯುಯಿಟಿ, ಲೀವ್ ಸ್ಯಾಲರಿ ಇತ್ಯಾದಿ ಮೊತ್ತದ ನಿರಖು ಠೇವಣೀಕರಣ.

2. ಸರಕಾರಿ ಬಾಂಡುಗಳಲ್ಲಿ ಹೂಡಿಕೆ.

3. ರಿಟೈರ್ವೆುಂಟ್ ಇನ್‌ಕಂ ಫ‌ಂಡ್‌ ಗಳಲ್ಲಿ ಹೂಡಿಕೆ

4. ರೆಂಟಲ್ ರಿಯಲ್ ಎಸ್ಟೇಟ್ ಹೂಡಿಕೆ

5. ವ್ಯತ್ಯಸ್ತ ವಾರ್ಷಿಕ ಪಿಂಚಣಿ ಯೋಜನೆಗಳಲ್ಲಿ  ಹೂಡಿಕೆ

6. ಕ್ಲೋಸ್ಡ್ ಎಂಡ್ ಫ‌ಂಡ್‌ ಗಳಲ್ಲಿ ಹೂಡಿಕೆ

7. ಡಿವಿಡೆಂಡ್ ಇನ್ಕಮ್ ಫ‌ಂಡ್‌ ಗಳಲ್ಲಿ ಹೂಡಿಕೆ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.