ಬದುಕು, ಕೊರಗಿಗಷ್ಟೇ ಮೀಸಲಿಟ್ಟ ಕತ್ತಲೆ ಕೋಣೆಯಲ್ಲ..!


ಶ್ರೀರಾಜ್ ವಕ್ವಾಡಿ, Mar 12, 2021, 1:12 PM IST

Self Esteem Is the must to Have Good Life

ನಿನ್ನನ್ನು ನೀನು ನಂಬದಿರೆ, ಸಾವಿರ ದೇವರುಗಳ ನಂಬಿ ಏನು ಪ್ರಯೋಜನ..? ಕುವೆಂಪು ತುಂಬಾ ಚೆನ್ನಾಗಿ ತಮ್ಮ ಒಂದು ಕಾವ್ಯದಲ್ಲಿ ಹೇಳುತ್ತಾರೆ.  ನಮ್ಮ ಬಗ್ಗೆ ಸ್ವಾಭಿಮಾನ, ಆತ್ಮ ಗೌರವ ಇಲ್ಲದೇ ಬದುಕುವುದು ಇದ್ದೂ ಸತ್ತಿರುವಂತೆಯೇ ಸರಿ. ನಿನ್ನನ್ನು ನೀನು ಗೌರವಿಸಿಕೊಳ್ಳುವುದು, ನಿನ್ನ ಮೇಲೆ ನೀನು ನಂಬಿಕೆ ಇಟ್ಟುಕೊಳ್ಳುವುದು ಆತ್ಮ ಗೌರವವನ್ನು ಸೂಚಿಸುತ್ತದೆ.

ನಮ್ಮಲ್ಲಿ ಎಷ್ಟೋ ಮಂದಿ ಶುಷ್ಕ ಬದುಕನ್ನು ಬದುಕುತ್ತಾರೆ. ಜೀವನದ ಬಗ್ಗೆ ಆನಂದವೇ ಇರುವುದಿಲ್ಲ. ಜೀವನದ ಬಗ್ಗೆ ಉತ್ಸಾಹವೇ ಇರುವುದಿಲ್ಲ. ಒಂದಿನಿತು ನಂಬಿಕೆ ಇಲ್ಲದಂತೆ ಬದುಕುತ್ತಾರೆ.  ಅದು ಆತ್ಮ ಗೌರವವಿಲ್ಲದಿರುವುದನ್ನು ಸೂಚಿಸುತ್ತದೆ.

ಓದಿ : ಬೆಳ್ತಂಗಡಿ: ಶಿವರಾತ್ರಿಯಂದೇ ರಸ್ತೆ ಬದಿ ಸಾಲು ಸಾಲು ಮರ ಕಡಿದು ವಿಕೃತಿ !

ನಮ್ಮಲ್ಲಿ ಎಂತಹ ಆತ್ಮ ಗೌರವವಿರಬೇಕು, ನಾವು ಅದನ್ನು ಹೇಗೆ ಸಾಧಿಸಿಕೊಳ್ಳಬಹುದು ಎನ್ನುವ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿದೆ.

ಅನವಶ್ಯಕವಾಗಿ ಜರುಗಿದ ಕೆಲವು ವಿಷಯಗಳನ್ನು ಆಲೋಚಿಸಿ ಆ ವೇದನೆಗೆ ಗುರಿಯಾಗುವ ಬದಲು ನಾವು ನಮ್ಮನ್ನು ಪ್ರಸ್ತುತತೆಗೆ ಒಗ್ಗಿಸಿಕೊಂಡರೇ ವೃಥಾ ಹಾಳಾಗುವ ಸಮಯವನ್ನು ನಾಔಉ ತಪ್ಪಿಸಿಕೊಳ್ಳಬಹದು. ನಮ್ಮ ಮೇಲೆ ನಮಗೇ ಧನಾತ್ಮಕ ಭಾವ ಹೆಚ್ಚುತ್ತದೆ. ಇದು ನಮ್ಮ ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ.

ನಿಮ್ಮ ಸಮಸ್ಯೆಗಳನ್ನು ಬೇರೆಯವರ ಸಹಾಯವಿಲ್ಲದೆ ಪರಿಷ್ಕರಿಸಿಕೊಳ್ಳುವುದು ಉತ್ತಮ. ಹಾಗಂತ ಬೇರೆಯವರ ಸಹಾಯ ಪಡೆಯುವುದರಲ್ಲಿ ತಪ್ಪಿದೆ ಅಂತರ್ಥವಲ್ಲ. ನನ್ನಿಂದ ಸಾಧ್ಯವಿಲ್ಲ ಎನ್ನುವ ನಿಮ್ಮ ಭಾವನೆ ನಿಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ಹಾಗಾಗಿ ನಿಮ್ಮ ಸಮಸ್ಯೆಗಳನ್ನು ಆದಷ್ಟು ನೀವಾಗಿಯೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರಿ. ಅದು ನಿಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

ನೀವು ಯಾರಿಗೂ ಕಡಿಮೆ ಇಲ್ಲ ಎನ್ನುವ ಧೋರಣೆ ನಿಮ್ಮಲ್ಲಿರಲಿ. ಆದರೇ ಅತಿಯಾದ ಆತ್ಮ ವಿಶ್ವಾಸ ಬೇಡ. ವಿಶ್ವಾಸ ಮತ್ತು ಧೈರ್ಯ ನಿಮ್ಮನ್ನು ಮುನ್ನಡೆಸುತ್ತದೆ.

ಓದಿ : ಗ್ರಾಹಕರೇ ಗಮನಿಸಿ: Bank ಕೆಲಸ ಇಂದೇ(ಮಾ.12) ಮುಗಿಸಿ;ವಾರಾಂತ್ಯಕ್ಕೆ ಹಣ ತೆಗೆದಿಟ್ಟುಕೊಳ್ಳಿ!

ಆಗಾಗ ನಿಮ್ಮಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಭಾವನೆ ಒಳ್ಳೆಯದು. ಅದು ನಿಮ್ಮ ಬಗ್ಗೆ ತಿಳಿಸಿಕೊಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಎಲ್ಲರೂ ಸಮ್ಮತಿಸುವಂತೆ ಬದುಕುವುದು ಕಷ್ಟ ಸಾಧ್ಯ, ಆದರೂ ಸಾಧ್ಯವಾದಷ್ಟು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಬದುಕುವುದನ್ನು ರೂಢಿಸಿಕೊಳ್ಳಿ. ಇನ್ನೊಬ್ಬರು ನಿಮ್ಮ ಮೇಲೆ ಇಡುವ ವಿಶ್ವಾಸ, ಪ್ರೀತಿ ಅಥವಾ ಸಣ್ಣದೊಂದು ಒಳ್ಳೆಯ ಭಾವನೆ ನಿಮಗೆ ಏನೋ ವಿಶೇಷವಾಗಿರುವುದರಿಂದ ನಿಮ್ಮ  ಆತ್ಮ ಗೌರವ ಹೆಚ್ಚಾಗುವುದಕ್ಕೆ ಕಾರಣವಾಗಬಹುದು.

ನಮ್ಮ ಬದುಕನ್ನು ನಿರ್ಧರಿಸುವು ನಾವೇ ಹೊರತು ಮೂರನೇ ವ್ಯಕ್ತಿ ಅಲ್ಲ. ನಮ್ಮ ಬದುಕು ಹೀಗಿರಬೇಕು ಅಂದುಕೊಳ್ಳುವವರು ನಾವಾದ ಮೇಲೆ ನಮ್ಮ ಬದುಕು ನಾವಂದುಕೊಂಡ ಹಾಗೆ ಇರಬೇಕು. ಪದೆ ಪದೆ ನಮ್ಮನ್ನು ಋಣಾತ್ಮಕವಾಗಿ ವಿಮರ್ಶಿಸಿಕೊಳ್ಳುವುದರಿಂದ ನಮ್ಮ ಏಳ್ಗೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮನ್ನು ನಾವು ಪರಿಶೀಲಿಸಿಕೊಳ್ಳುವುದೆಂದರೇ, ಆತ್ಮ ವಿಶ್ವಾಸವನ್ನು ಸಾಯಿಸಿಕೊಳ್ಳುವುದಲ್ಲ. ಹೈಪರ್ ಸೆನ್ಸಿಟಿವ್ ಆಗಿ ಆಲೋಚಿಸುವುದರಿಂದ ನಾವು ಏನೂ ಇಲ್ಲದ ಶೂನ್ಯವಾಗಿ ಬಿಡುತ್ತೇವೆ. ಹಾಗಾಗಿ ನಮ್ಮ ಚಿತ್ತ ಎಂದಿಗೂ ಒಳ್ಳೆಯದ ಬಗ್ಗೆಯೇ ಚಿಂತಿಸುತ್ತರಬೇಕು.

ನ್ಯೂರೋಟಿಕ್ ಸೈನ್ಸ್ ಆಫ್ ಗಿಲ್ಟ್, ಅಂದರೆ ಏನೋ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಭಾವಿಸುವುದು ನಮ್ಮನ್ನು ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿಸುತ್ತದೆ ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ. ಹಾಗಾಗಿ ಅಪರಾಧ ಭಾವನೆ ಬರುವ ಕ್ಷಣಗಳಿಗೆ ಹಿತವಲ್ಲ. ತಪ್ಪು ಈ ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿದವರೆಲ್ಲರೂ ಮಾಡಿರುತ್ತಾರೆ. ತಿದ್ದಿ ನಡೆಯುವವ ಗೆಲ್ಲುತ್ತಾನೆ. ಆ ಅನವಶ್ಯಕ ಮತ್ತೆ ಮತ್ತೆ ನೆನಪಿಸಿಕೊಳ್ಳುವುದರಿಂದ ನಮ್ಮ ಬದುಕು ಭಾರ ಅನ್ನಿಸುತ್ತದೆ. ಹಾಗಾಗಿ ಬದುಕು ಭಾರ ಅನ್ನಿಸುವ ಹಾಗೆ ಮಾಡಿಕೊಳ್ಳಬೇಡಿ. ಕೊರಗು ಇರುವುದು ಸಹಜ, ಕೊರಗಷ್ಟೇ ನಮ್ಮಬದುಕಲ್ಲ. ಅದರಾಚೆಗೂ ಒಂದು ಬದುಕಿದೆ. ಧನಾತ್ಮಕ ಚಿಂತನೆಗಳು ಸದಾ ನಿಮ್ಮಲ್ಲಿರಲಿ.

ಎಲ್ಲವನ್ನೂ ಅದುಮಿಟ್ಟುಕೊಳ್ಳುವುದು ಮೆಚ್ಯುರಿಟಿ ಅಲ್ಲ. ನಮ್ಮ ಪೂರ್ಣ ಬದುಕು ಅದಕ್ಕೆ ಮೀಸಲಿಡಬಾರದು ಎನ್ನವುದನ್ನು ನೆನಪಿನಲ್ಲಿಡಿ.

–ಶ್ರೀರಾಜ್ ವಕ್ವಾಡಿ

ಓದಿ : ಬ್ರಿಟನ್ ನ ಮಹಿಳೆಯರು ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?  

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.