ಸ್ಟೆಫನ್ ಎಂಬ ಮೂರು ಕಾಲಿನ ದೈತ್ಯ ಪ್ರತಿಭೆ; ವೀಲ್ ಚೇರ್ ನಲ್ಲೇ ಇತ್ತು ವಿಲ್ ಪವರ್!


ಸುಹಾನ್ ಶೇಕ್, Sep 4, 2019, 4:30 PM IST

web-write-tdy-1

ಸೋತವನು ರೋಧಿಸುತ್ತಾನೆ ಗೆದ್ದವನು ಸಾಧಿಸುತ್ತಾನೆ. ದೇಹದಲ್ಲಿ ಬಲವಿಲ್ಲ‌ ಮನಸ್ಸಿನಲ್ಲಿ ಛಲ ಇದೆ. ಇದು ಅಮೇರಿಕಾದ ಲೇಖಕ ಸೀನ್ ಸ್ಟೆಫೆನ್  ಸನ್‌ ಎನ್ನುವವರ ಅದ್ಭುತಗಾಥೆ..

ಹುಟ್ಟೇ ಸೋಲಾಯಿತು ..!

ಸೀನ್ ಸ್ಟೆಫೆನ್ ಸನ್  ಹುಟ್ಟಿದ್ದು 1979 ರ ಮೇ 5 ರಂದು ಚಿಕಾಗೊದ ಖಾಸಗಿ ಆಸ್ಪತ್ರೆಯಲ್ಲಿ . ಎಲ್ಲಾ ಅಪ್ಪ‌ ಅಮ್ಮಂದಿರ ಮುಖದಲ್ಲಿ ಇರಬೇಕಾದ ಖುಷಿಯ ಕ್ಷಣ ಸ್ಟೆಫೆನ್ ಅಪ್ಪ – ಅಮ್ಮನ ಬಾಳಿನಲ್ಲಿ ಕ್ಷಣಿಕವಾಗಿ ಹೋಯಿತು. ಮಗು ಹುಟ್ಟಿದ ಕೂಡಲೇ ಮಗುವಿಗೆ  ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ  ಅಂದರೆ  ಬ್ರಿಟ್ಟ್ಲ್ ಬೋನ್ ಡಿಸೀಸ್ ( ಮೂಳೆ ಸಂಬಂಧಿತ ರೋಗ ) ಅಂಟಿಕೊಂಡು ಬಿಟ್ಟಿತು. ಸ್ಟೆಫೆನ್ ಡೆಲಿವರಿ ಆಗುವ ಸಂಧರ್ಭದಲ್ಲಿ ದೇಹದ ಮೂಳೆಗಳು ಬಹುತೇಕವಾಗಿ ಮುರಿದು ಹೋಗಿದ್ದವು.

ವೀಲ್ ಚೇರ್ ನಲ್ಲೇ ಇತ್ತು ವಿಲ್ ಪವರ್ :

ಸ್ಟೆಫೆನ್ ಸನ್ ಈ ಬೆಳವಣಿಗೆ ನೋಡಿದ ವೈದ್ಯಕೀಯ ತಂಡ ಈತ ಶೀಘ್ರದಲ್ಲಿ ಸಾಯಬಹುದು ಈತನನ್ನು ಒಳ್ಳೆಯ ರೀತಿ ‌ನೋಡ್ಕೊಳ್ಳಿ  ಎನ್ನುವ ಮಾತನ್ನು ಹೇಳಿ‌ ಅಪ್ಪ ಅಮ್ಮನ ಆಸೆಗೆ ಕೊಡಲಿ‌ ಏಟು‌ ನೀಡುತ್ತಾರೆ. ದೇಹದಲ್ಲಿ ಅನುವಂಶೀಯತೆ ಅಸ್ವಸ್ಥತೆಯನ್ನು ಗಮನಿಸಿದ ವೈದ್ಯರು‌‌ ಸ್ಟೆಫೆನ್ ಬದುಕುಳಿಯುವ ಬಗ್ಗೆ ಯಾವ ಭರವಸೆಯನ್ನು ನೀಡುವುದಿಲ್ಲ. ನಂತರದಲ್ಲಿ ಸ್ಟೆಫೆನ್ ನನ್ನು  ಚಿಕಾಗೋದ ಮಕ್ಕಳ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ. ಸ್ಟೆಫೆನ್ ಸನ್ ಆಸ್ಪತ್ರೆಯ ಹಾಸಿಗೆಯಿಂದ ಎದ್ದು ವೀಲ್ ಚೇರ್ ಮೇಲೆ ಕೂರುತ್ತಾರೆ. ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾದ ಪೀಡಿತದಿಂದ ಸ್ಟೆಫೆನ್ ದೇಹ ಬೆಳೆಯಲಿಲ್ಲ. ಕುಂಠಿತ ಬೆಳವಣಿಗೆಯಲ್ಲಿ ಯೌವನದ ದಿನಗಳಲ್ಲಿ ನೋವಿನಲ್ಲಿ ನರಳುತ್ತಾರೆ. ಹೊರಗೆ ಹೋಗಿ ಆಡಲು ಆಟವೂ ಇಲ್ಲ ರಚ್ಚೆ ಹಿಡಿದು ಆಳುವ ಹಟವೂ ಇಲ್ಲ. ವೀಲ್ ಚೇರ್ ನಲ್ಲೇ ಕೂತು ದಿನ ದೂಡಿದ.

 

ಸೀನ್  ಸ್ಟೆಫೆನ್ ಸನ್ ಮಾತಿನಲ್ಲಿ ಬಲು ಚತುರ. ಮಾತೇ ಅವನ ಬಂಡವಾಳ. ತನ್ನ ಹದಿನೇಳನೇಯ ವಯಸ್ಸಿನಲ್ಲಿ ‘ಮೇಕ್ ಎ ವಿಶ್’ ಫೌಂಡೇಶನ್ ಅಡಿಯಲ್ಲಿ 1998 ರಿಂದ ಸ್ಪೂರ್ತಿದಾಯಕ ಮಾತುಗಳನ್ನು ಆಡಲು ಆರಂಭಿಸುತ್ತಾರೆ. ಇದೇ ವೇಳೆಯಲ್ಲಿ ಸ್ಟೆಫೆನ್ ಸನ್ ಗೆ ತನ್ನ ಮೆಚ್ಚಿನ ಇಷ್ಟ ಹಾಗೂ ತಾನು ಮಾದರಿಯಾಗಿ ಪರಿಗಣಿಸಿ ಕೊಂಡಿದ್ದ ಸ್ಪೂರ್ತಿದಾಯಕ ಮಾತುಗಾರ ಟೋನಿ ರಾಬಿನ್ಸ್   ಭೇಟಿಯಾಗುತ್ತಾರೆ. ಇಲ್ಲಿಂದ ಟೋನಿ ಸ್ಟೆಫೆನ್ ಸನ್ ರಿಗೆ ಮಾರ್ಗದರ್ಶಿ ಹಾಗೂ ಧೈರ್ಯ ತುಂಬವಂತ ವ್ಯಕ್ತಿ ಆಗಿ ಜೊತೆಗೆ ಇರುತ್ತಾರೆ.

 

ತನಗೆ ತಾನೇ ಸಹಾಯಕನಾದ ದಾರಿ : ಸ್ಟೆಫನ್ ಸನ್ ತನ್ನ ಹದುನೇಳನೇ ವಯಸ್ಸಿನಲ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಆರಂಭಿಸಿದ ನಂತರ ಜನ ಈತನ ಮಾತುಗಳಿಂದ ಪ್ರಭಾವಿತರಾಗುತ್ತಾರೆ. ಜನ ಸ್ಟೆಫನ್ ಸನ್ ಮನೆಗೆ ಬಂದು ತನ್ನ ವೈಯಕ್ತಿಕ ಸಮಸ್ಯೆ ಹಾಗೂ ಜೀವನದಲ್ಲಿ ಯಶಸ್ವಿ ಕಾಣುವ ಮಾರ್ಗದ ಬಗ್ಗೆ ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಾರೆ. ಇದೇ ವೇಳೆಯಲ್ಲಿ ಸ್ಟೆಫನ್ ಸನ್ ಗೆ  ಕಲಿಯುವ ಉಮೇದು ಹುಟ್ಟುತ್ತದೆ. 2001 ರಲ್ಲಿ ದಿಪೌಲ್  ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆಯುತ್ತಾರೆ. ಈ ವೇಳೆಯಲ್ಲಿ ಸ್ಟೆಫನ್ ಸನ್ ಒಳಗೆ ಒಬ್ಬ ಒಳ್ಳೆ ವಾಗ್ಮಿಯ ಜೊತೆ ಒಬ್ಬ ಅದ್ಭುತ ಬರಹಗಾರ ಹುಟ್ಟುತ್ತಾನೆ.

 

2001 ರಲ್ಲಿ ಸ್ಟೆಫನ್ ಸನ್ ತನ್ನ ಮೊದಲ ಪುಸ್ತಕವನ್ನು ಪ್ರಕಟಿಸುತ್ತಾರೆ. “ಯುವ ಜನಾಂಗ ಹೇಗೆ ಯಶಸ್ವಿಯಾಗಬೇಕು”.. (HOW YOUTH CAN BE SUCCEED!)  ಎನ್ನುವ ಪುಸ್ತಕವನ್ನು ಹೊರ ತರುತ್ತಾರೆ.ತಾನೊಬ್ಬ ಥೆರಪಿಸ್ಟ್ ಆಗುತ್ತೇನೆ ಅನ್ನುವ ನಿಟ್ಟಿನಲ್ಲಿ  ಸ್ಟೆಫನ್ ಸನ್ ಬೆನೆಟ್ ವಿಶ್ವವಿದ್ಯಾಲಯಕ್ಕೆ ದಾಖಲಾಗುತ್ತಾರೆ. ನಂತರ ಅಮೇರಿಕಾದ ಪೆಸಿಫಿಕ್ ಅಂದರೆ ಇಂದಿನ ಕೋನ ವಿಶ್ವವಿದ್ಯಾಲಯದಲ್ಲಿ ಕುರಿತು ನರ ಭಾಷಶಾಸ್ತ್ರ (NEURO- LINGUISTIC)  ದಲ್ಲಿ ಅಧ್ಯಯನ ಮಾಡಿ ಕ್ಲಿನಿಕಲ್ ಹಿಪ್ನೋಥೆರಪಿಯಲ್ಲಿ ಡಾಕ್ಟರೇಟ್ ಅನ್ನು ಪೂರ್ತಿಗೊಳಿಸಿದರು. ನಂತರದಲ್ಲಿ ಸ್ಟೆಫನ್ ಸನ್ ಪ್ರಮಾಣೀಕೃತ ಚಿಕ್ಸಿತಕ (ಥೆರಪಿಸ್ಟ್ ) ರಾಗಿ ಓಕ್ ಬ್ರೂಕ್ ಟೇರೀಸ್ ಎಂಬಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸುತ್ತಾರೆ.

 

ಜೊತೆಯಾದ ಮಡದಿ :  ಸ್ಟೆಫನ್ ಸನ್ 2011 ರ ಮೇ 12  ಮಿಂಡಿ ನಿಸ್ ಎನ್ನುವ ಸುಂದರ ಹುಡುಗಿಯನ್ನು ನೋಡಿ ಪ್ರೀತಿಯ ನಿವೇದನೆಯನ್ನು ಮಾಡುತ್ತಾರೆ. ನಂತರ ಮುಂದಿನ ವರ್ಷ 2012 ರ ಸೆಪ್ಟೆಂಬರ್ ‌14 ರಂದು ಅರಿಜ್ಹೋನಾ ಎಂಬಲ್ಲಿ ಸರಳವಾಗಿ ಮದುವೆ ಆಗುತ್ತಾರೆ. ಕೆಲವಡೆ ದಂಪತಿಗಳ ಬಗ್ಗೆ ಜನ ವ್ಯಂಗ್ಯವಾಗಿ ಮಾತಾಡಲು ಆರಂಭಿಸುತ್ತಾರೆ. ದೈಹಿಕವಾಗಿ ಅನೋನ್ಯವಾಗಿ ಇರಲಾರದು ಎನ್ನುವ ಮಾತುಗಳಿಗೆಲ್ಲಾ ಸ್ಟೆಫನ್ ಸನ್ ದಂಪತಿ ಅಲ್ಲಗೆಳೆದು ಯಾವುದೇ ಚ್ಯುತಿ ಬಾರದ ಹಾಗೆ ಜೀವನ ಸಾಗಿಸುತ್ತಾರೆ. ಸ್ಟೆಫೆನ್ ಸನ್ ಪತ್ನಿ ಫಿಲಾಸಫರು, ಉದ್ಯಮಿ ಹಾಗೂ ಸೃಜನಶೀಲ ಬರಹಗಾರ್ತಿಯೂ ಆಗಿದ್ದಾರೆ.

 ಮೂರು ಅಡಿ ಉದ್ದ ದೇಹ ಆರು ಅಡಿ ಭಂಡ ಧೈರ್ಯ ..!

ಸ್ಟೆಫನ್ ಸನ್ ಸ್ಫೂರ್ತಿದಾಯಕ ಮಾತುಗಳು ಜಗತ್ತನೆಲ್ಲೆಡೆ ಸಂಚಲನ ಸೃಷ್ಟಿಸುತ್ತದೆ. ಅಮೇರಿಕಾದ ಅಧ್ಯಕ್ಷರು, ಕಲಾ ಜಗತ್ತಿನ ಸೆಲೆಬ್ರಿಟಿಗಳು ಟಬೆಟ್ ಗುರು ದಲಾಯಿಲಾಮರೊಂದಿಗೆ ವೇದಿಕೆ ಹಂಚಿಕೊಂಡು ಸ್ಪೂರ್ತಿದಾಯಕ ಮಾತುಗಳನ್ನು ಆಡಿ ಸೆಳೆಯುತ್ತಾರೆ. ವಿವಿಧ ಖಾಸಗಿ ಕಂಪೆನಿಗಳ ಕಾರ್ಯಕ್ರಮಗಳಲ್ಲಿ ಹಾಗೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. 2009 ರಲ್ಲಿ ಸ್ಟೆಫನ್ ಸನ್ ತನ್ನ  ಪುಸ್ತಕ  ಪ್ರಕಟನೆಯನ್ನು ಮುಂದುವರೆಸುತ್ತಾರೆ “ಸ್ಟ್ಯಾಂಡ್ ಅಪ್ ಯುವರ್ ಸೆಲ್ಫ್ “ (STAND UP YOURSELF)  ಹಾಗೂ ಗೆಟ್ ಯುವರ್ ಬಟ್  (Get your but)  ದಲ್ಲಿ ತನ್ನ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.ಈ ಪುಸ್ತಕ ಜಗತ್ತಿನ ನಾನಾ ಭಾಷೆಯಲ್ಲಿ ಅನುವಾದಗೊಂಡು ಜನಪ್ರಿಯವಾಗುತ್ತದೆ.

 

ಸ್ಟೆಫನ್ ಸನ್ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿವಾಹಿಯೊಂದು ಮೂರು ಕಾಲು ದೈತ್ಯ ( Three foot Gaint)  ಎನ್ನುವ ಸಾಕ್ಷ್ಯಚಿತ್ರವನ್ನು ಮಾಡಿದ್ದಾರೆ. ಕಳೆದ 21 ವರ್ಷಗಳಿಂದ ಸ್ಟೆಫನ್ ಸನ್ ಸ್ಪೂರ್ತಿದಾಯಕ ಮಾತುಗಳು ಜಗತ್ತಿನ 15 ದೇಶಗಳಲ್ಲಿ ಹಬ್ಬಿದೆ.

 

ಸ್ಟೆಫನ್ ಸನ್ ಸ್ಪೂರ್ತಿದಾಯಕ ಮಾತುಗಳು ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಮಾತು ಮಾತ್ರವಲ್ಲ ವೀಲ್ ಚೇರ್ ನಲ್ಲೇ ಕೂತು “ಡ್ಯಾನ್ಸ್ ಪಾರ್ಟಿ” ಎನ್ನುವ ವಿಡೀಯೋವನ್ನು ಮಾಡಿ ಜನರಿಗೆ ಮನರಂಜನೆಯನ್ನು ನೀಡಿದ್ದಾರೆ.

 

ಇಂಥ ಅದ್ಭುತ ವ್ಯಕ್ತಿತ್ವ ಕಳೆದ ತಿಂಗಳ ಆಗಸ್ಟ್ 28 ರಂದು ತಲೆಗೆ ಪೆಟ್ಟಾಗಿ ತನ್ನ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಕಡಿಮೆ ಆಯುಷ್ಯದಲ್ಲಿ ಸ್ಟೆಫನ್ ಸನ್ ಲಕ್ಷ ಅಭಿಮಾನಿಗಳನ್ನು ಸಂಪಾದಿಸಿದ್ದರು.ಕೋಟಿ ದುಡಿದ್ದಿದ್ದರು. ಯಶಸ್ವಿ ಆಗುವುದಕ್ಕೆ ಮೊದಲು ಮನಸ್ಸು ಮಾಡಿ ನಂತರ ಕನಸು ಕಾಣುವುದರಲ್ಲಿ ತಪ್ಪಿಲ್ಲ..

 

-ಸುಹಾನ್ ಶೇಕ್

ಟಾಪ್ ನ್ಯೂಸ್

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.