ಸೂಪರ್ ಓವರ್.. ನ್ಯೂಜಿಲ್ಯಾಂಡ್ ಮತ್ತು ವಿಲಿಯಮ್ಸನ್ ಎಂಬ ಹೃದಯವಂತ


ಕೀರ್ತನ್ ಶೆಟ್ಟಿ ಬೋಳ, Jan 31, 2020, 6:18 PM IST

Kane-Williamson-730

ವಿಶ್ವ ಕ್ರಿಕೆಟ್ ನಲ್ಲಿ ಆಧುನಿಕ ಫ್ಯಾಬ್ ಫೋರ್ ಎಂದು ಕರೆಸಿಕೊಂಡವರು ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್‌. ಇವರೆಲ್ಲರೂ ತಮ್ಮ ಅದ್ಭುತ ಬ್ಯಾಟಿಂಗ್‌ ಕೌಶಲದಿಂದ ಮನ್ನಣೆ ಪಡೆದವರು. ಆದರೆ ಇವರಲ್ಲಿ ಬ್ಯಾಟಿಂಗ್‌ ಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ವಿಶ್ವದ ಹೃದಯ ಗೆದ್ದವರು ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್.

ಸದಾ ನಗುಮುಖ, ಗೆಲುವಾಗಲಿ ಸೋಲಾಗಲಿ ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸದ ಶಾಂತಮೂರ್ತಿ, ಎದುರು ನಿಂತು ತಂಡವನ್ನು ಮುನ್ನಡೆಸುವ ಲೀಡರ್ .. ಹೀಗೆ ಹೇಳುತ್ತಾ ಹೋದರೆ ಕೇನ್ ವಿಲಿಯಮ್ಸನ್ ಗುಣಗಾನಕ್ಕೆ ವಿಶೇಷಣಗಳು ಸಾಲದು. ಅಂತಹ ವ್ಯಕ್ತಿತ್ವ ಆತನದ್ದು.

ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಸದಾ ಶಾಂತ ಸ್ವಭಾವದವರು. ಎಂದೂ ಅತಿರೇಕ ಮಾಡಿದವರಲ್ಲ. ಬ್ಲ್ಯಾಕ್ ಕ್ಯಾಪ್ಸ್ ಎಂದು ಹೆಸರಿದ್ದರೂ ಎಂದೂ ಆಟಕ್ಕೆ ಕಪ್ಪು ಚುಕ್ಕೆ ಬರುವಂತೆ ಆಡಿದವರಲ್ಲ. ಜಂಟಲ್ ಮ್ಯಾನ್ ಆಟವನ್ನು ಜಂಟಲ್ ಮ್ಯಾನ್ ಗಳಂತೆಯೇ ಆಡಿದವರು ನ್ಯೂಜಿಲ್ಯಾಂಡ್ ಕ್ರಿಕೆಟಿಗರು.

2019ರ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯವನ್ನು ಯಾರು ತಾನೆ ಮರೆಯಲು ಸಾಧ್ಯ. ಅಂತಿಮ ಕ್ಷಣದವರೆಗೂ ಹೋರಾಡಿತ್ತು ವಿಲಿಯಮ್ಸನ್ ಬಳಗ. ಆ ಪಂದ್ಯದಲ್ಲಿ ಐಸಿಸಿ ನಿಯಮದಿಂದಾಗಿ ಇಂಗ್ಲೆಂಡ್ ವಿಜಯಿಯಾಗಿತ್ತೇ ವಿನಃ ನ್ಯೂಜಿಲ್ಯಾಂಡ್ ಅಂದು ಸೋತಿರಲಿಲ್ಲ.

ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಗೆ ತಂಡವನ್ನು ಕೊಂಡೊಯ್ದಿದ್ದ ವಿಲಿಯಮ್ಸನ್ ಕಪ್ ಗೆಲ್ಲಲಾಗದೆ ಹತಾಶನಾಗಿದ್ದ. ವಿಶ್ವಕಪ್ ಹಿಡಿದು ಸಂಭ್ರಮಿಸಬೇಕು ಎಂದೆಣಿಸಿದ್ದ ಕಪ್ಪು ಕುದುರೆಗಳಿಗೆ ಆ ಸೂಪರ್ ಓವರ್ ನಲ್ಲಿ ಏನಾಯಿತೆಂದು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು. ವಿವಾದ, ವಿಷಾದ, ಗೊಂದಲಗಳಿಗೆ ಕಾರಣವಾದ ವಿಶ್ವಕಪ್ ಫೈನಲ್ ನಂತರ ಕಿವೀಸ್  ನಾಯಕ ಕೇನ್ ವಿಲಿಯಮ್ಸನ್ ಏನು ಹೇಳದೆ, ಅದೇ ಮಂದಸ್ಮಿತನಾಗಿ ನಿಂತಿದ್ದ. ಒಂದು ಚೂರು ಕೂಗಾಡಲಿಲ್ಲ, ಅತಿರೇಕದ ಹತಾಶೆ ವ್ಯಕ್ತಪಡಿಸಲಿಲ್ಲ, ಆಟಗಾರರ ಮೇಲೆ ಕೋಪ ತೋರಲಿಲ್ಲ. ವಿಶ್ವಕಪ್ ಎತ್ತಲಾಗಲಿಲ್ಲ ಎಂಬ ಬೇಸರ ಬಿಟ್ಟರೆ ಬೇರೇನೂ ಹೇಳಲಿಲ್ಲ. ಕಪ್ ಗೆಲ್ಲಲಾಗದಿದ್ದರೂ ಕೇನ್ ವಿಲಿಯಮ್ಸನ್ ವಿಶ್ವವನ್ನೇ ಗೆದ್ದಿದ್ದ.

ಮತ್ತೊಂದು ಸೂಪರ್ ಓವರ್, ಮತ್ತೊಂದು ಹೋರಾಟ, ಮತ್ತೊಂದು ಸೋಲು
ಏಕದಿನ ವಿಶ್ವಕಪ್ ಸೂಪರ್ ಓವರ್ ಸೋಲಿನ ಸುಮಾರು 7 ತಿಂಗಳ ಬಳಿಕ ವಿಲಿಯಮ್ಸನ್ ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಯಿತು. ತವರಿನಲ್ಲಿ ಟಿ20 ಸರಣಿ ಉಳಿಸಿಕೊಳ್ಳುವ ಸವಾಲು. ಮೊದಲೆರಡು ಪಂದ್ಯ ಸೋತಿದ್ದರಿಂದ ಮೂರನೇ ಪಂದ್ಯವನ್ನು ಶತಾಯಗತಾಯ ಗೆಲ್ಲಲೇ ಬೇಕೆಂಬ ಒತ್ತಡ.

ಮೊದಲು ಬ್ಯಾಟಿಂಗ್ ಮಾಡಿದ್ದ  ಭಾರತ ಗಳಿಸಿದ್ದು 179 ರನ್. ಹ್ಯಾಮಿಲ್ಟನ್ ಅಂಗಳದಲ್ಲಿ ಇದು ಕಡಿಮೆಯೇ. ಪಂದ್ಯ ಗೆಲ್ಲಲೇ ಬೇಕೆಂದು ಹಠ ಹಿಡಿದಂತೆ ಆಡಿದ ವಿಲಿಯಮ್ಸನ್ ಅಂತಿಮ ಓವರ್ ತನಕ ಹೋರಾಡಿದರು. ಇನ್ನೇನು ಗೆಲುವಿಗೆ ಎರಡು ರನ್ ಬೇಕಾಗಿದ್ದಾಗ ಔಟ್. 95 ರನ್ ಗಳಿಸಿದ್ದ ವಿಲಿಯಮ್ಸನ್ ಗೆ ಶತಕ ವಂಚಿತ ಆದೆ ಎಂಬ ಬೇಸರ ಎಳ್ಳಷ್ಟು ಇರಲಿಲ್ಲ. ಆದರೆ ಇಷ್ಟು ಹೋರಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಾಗಲಿಲ್ಲ ಎಂಬ ಬೇಸರದಿಂದಲೇ ಸೂಪರ್ ಓವರ್ ಗೆ ಸಿದ್ದರಾಗಿದ್ದರು.

ಸೂಪರ್ ಓವರ್ ನಲ್ಲಿ ಕಿವೀಸ್ ಗಳಿಸಿದ್ದ 17 ರನ್ ಗಳಲ್ಲಿ 12 ರನ್ ವಿಲಿಯಮ್ಸನ್ ಒಬ್ಬರೇ ಬಾರಿಸಿದ್ದರು. ಆದರೆ ಸೂಪರ್ ಓವರ್ ಮತ್ತು ಕಿವೀಸ್ ಗೆ ಅದೇನೋ ಆಗದ ಸಂಬಂಧ. ಸೌಥಿಯಂತಹ ಶ್ರೇಷ್ಠ ಬೌಲರ್ ಇದ್ದರೂ ಗೆಲುವು ಸಾದ್ಯವಾಗಲಿಲ್ಲ. ಮತ್ತೊಮ್ಮೆ ಸೂಪರ್ ಓವರ್ ಅದೃಷ್ಟ ನ್ಯೂಜಿಲ್ಯಾಂಡ್ ಮತ್ತು ವಿಲಿಯಮ್ಸನ್ ಕೈಹಿಡಿಯಲಿಲ್ಲ.

ಕೇನ್ ವಿಲಿಯಮ್ಸನ್ ಕೇವಲ ತನ್ನ ಅದ್ಭುತ ಆಟದಿಂದ ಜನರ ಮನ ಗೆದ್ದಿರುವುದಲ್ಲ. ತಮ್ಮ ಸನ್ನಡತೆಯಿಂದ ವಿಶ್ವದ ಮನಸ್ಸನ್ನೇ ಗೆದ್ದಿದ್ದಾರೆ. ವಿಲಿಯಮ್ಸನ್ ಆಡಿರುವ ಆಟಕ್ಕೆ ನ್ಯೂಜಿಲ್ಯಾಂಡ್ ಗೆಲ್ಲಬೇಕಿತ್ತು. ಅವರು ಗೆಲುವಿಗೆ ಅರ್ಹರಾಗಿದ್ದರು ಎಂದು ಮೂರನೇ ಟಿ20 ಪಂದ್ಯದ ನಂತರ ಭಾರತೀಯ ನಾಯಕ ವಿರಾಟ್ ಕೊಹ್ಲಿಯೇ ಗುಣಗಾನ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.

– ಕೀರ್ತನ್ ಶೆಟ್ಟಿ ಬೋಳ

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.