ಕೈಕೊಟ್ಟ ಪ್ರೀತಿ, ಆತ್ಮಹತ್ಯೆ ವಿಫಲವಾದ ಯುವತಿಯೊಬ್ಬಳ ಸ್ಫೂರ್ತಿಯ ಜೀವನಗಾಥೆ ಇದು!

ಅರ್ಧ ಸತ್ತು ಪರಿಪೂರ್ಣ ಬದುಕು ನಡೆಸುತ್ತಿರುವ ಯುವತಿಯೊಬ್ಬಳ ಸ್ಪೂರ್ತಿಯ ಕಥೆ

ಹರಿಪ್ರಸಾದ್, Oct 16, 2019, 6:19 PM IST

Love-Web-Focus

ಮನೆಯಲ್ಲಿ ಅಪ್ಪ ಅಮ್ಮನ ನಡುವೆ ನಡೆಯುತ್ತಿದ್ದ ನಿತ್ಯ ಜಗಳ ನೋಡಿ ನೋಡಿ ಬೇಸತ್ತಿದ್ದ ಆ ಯುವತಿಗೆ ಅದೊಂದು ದಿನ ಇನ್ನೊಂದು ಶಾಕ್ ಕಾದಿತ್ತು. ತಾನು ತನ್ನ ಜೀವಕ್ಕಿಂತ ಜಾಸ್ತಿ ಪ್ರೀತಿಸುತ್ತಿದ್ದ ಮತ್ತು ತನ್ನ ಮನಸ್ಸಿನ ಭಾವನೆ ಹಾಗೂ ನೋವುಗಳನ್ನು ಹಂಚಿಕೊಳ್ಳಲು ಜತೆಗಿದ್ದ ಜೀವವೊಂದು ‘ನಾನಿನ್ನು ನಿನ್ನ ಜೊತೆ ಇರಲಾರೆ’ ಎಂದು ಕಡ್ಡಿಮುರಿದಂತೆ ಹೇಳಿ ಆಕೆಯಿಂದ ದೂರವಾಗಿ ಬಿಟ್ಟಿದ್ದ. ಆಯ್ತು ಇಲ್ಲಿಗೆ ನನ್ನ ಜೀವನ ಮುಗಿಯಿತು ಎಂದು ತನಗೆ ತಾನೇ ಹೇಳಿಕೊಂಡ ಆಕೆ ಅದೊಂದು ದೃಢ ನಿರ್ಧಾರಕ್ಕೆ ಬಂದು ಬಿಟ್ಟಿದ್ದಳು. ಅದೇ ‘ಆತ್ಮಹತ್ಯೆ’!.

ಅಂದು ಆಕೆಯ ಪಾಲಿಗೆ ಕೆಟ್ಟ ದಿನವೇ ಆಗಿಬಿಟ್ಟಿತ್ತು. ಗಾಢವಾಗಿ ಪ್ರೀತಿಸಿದ್ದ ಗೆಳೆಯ ದೂರಾಗಿದ್ದ, ಮನೆಯಲ್ಲಿ ಹೆತ್ತವರ ನಿತ್ಯ ಜಗಳ, ಪ್ರೀತಿ ಮತ್ತು ನೆಮ್ಮದಿ ಎಂಬುದು ಆಕೆಯ ಪಾಲಿಗೆ ಸತ್ತು ಹೋಗಿತ್ತು, ಹಾಗಾಗಿ ಆಕೆ ಸಾಯಲು ನಿರ್ಧರಿಸಿದ್ದಳು. ಹಾಗೆ ನಿರ್ಧರಿಸಿ ತನ್ನ ಮನೆಯಿಂದ ಹೊರಬಿದ್ದವಳೇ ತನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ರಸ್ತೆಯಲ್ಲಿ ನಿಂತುಕೊಂಡೇ ಬರೋಬ್ಬರಿ ಒಂದು ಬಾಟಲಿ ಫಿನಾಯಿಲ್ ಅನ್ನು ಗಟಗಟನೇ ಕುಡಿದುಬಿಟ್ಟಿದ್ದಳು!

ಆದರೆ ಸಾವಿಗೂ ಅವಳು ಸದ್ಯಕ್ಕೆ ಅನಪೇಕ್ಷಿತ ಅತಿಥಿಯೇ ಆಗಿಬಿಟ್ಟಿದ್ದಳು. ಕಮಟು ವಾಸನೆಯ ಆ ದ್ರಾವಣವನ್ನು ಮೂಗುಮುಚ್ಚಿಕೊಂಡೇ ಕುಡಿದಿದ್ದ ಆಕೆ ಮತ್ತೆ ಕಣ್ಣುಬಿಟ್ಟಿದ್ದು ನಾಲ್ಕು ದಿನಗಳ ಬಳಿಕ ಆಸ್ಪತ್ರೆಯ ICU ಬೆಡ್ ಮೇಲೆ!

ಸಾವಿಗೂ ಒಲ್ಲದ ಅತಿಥಿಯಾಗಿಬಿಟ್ಟಿದ್ದ ಈ ಹುಡುಗಿಯನ್ನು ಇದೀಗ ಆಕೆಯ ಫ್ರೆಂಡ್ಸ್ ಸಹ ದೂರವಿಡಲು ಶುರುಮಾಡಿಬಿಟ್ಟಿದ್ದರು. ಒಂದು ವಿಫಲ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಆಕೆಯನ್ನು ನೋಡಲೆಂದು ಬಂದ ಅಪ್ಪ ಎಂಬ ಮಹಾನುಭಾವ ಅಂದು ಆಡಿದ್ದ ಮಾತಾದರು ಏನು ಗೊತ್ತೇ, ‘ಹೀಗೆ ಮಾಡಿಕೊಳ್ಳುತ್ತಿದ್ದಿ ಎಂದು ನನಗೆ ಮೊದಲೇ ತಿಳಿಸಿದ್ದಿದ್ದರೆ ಸಾಯಲು ಇನ್ನೂ ಒಳ್ಳೆಯ ಉಪಾಯವನ್ನು ನಾನು ಕೊಡುತ್ತಿದ್ದೆ..’ ಎಂದು! ಆಗ ಆಕೆಗೆ ಮತ್ತೊಮ್ಮೆ ಅನ್ನಿಸಿಬಿಟ್ಟಿತ್ತು ‘ಯಾರಿಗಾಗಿ ನಾನು ಬದುಕಿರಬೇಕು..?’

ಆದರೆ, ಆಕೆಗಾಗಿ ಅವಳು ಬದುಕಲೇಬೇಕಿತ್ತು. ಈ ಸಮಾಜದಲ್ಲಿ ಸಣ್ಣ ಸಣ್ಣ ಕಾರಣಕ್ಕೆಲ್ಲ ನೊಂದುಕೊಂಡು ಕೊರಗುವ ಜೀವಗಳಿಗೊಂದು ಜೀವನ ಸ್ಪೂರ್ತಿಯನ್ನು ತುಂಬಲು ಆಕೆ ಜೀವಂತವಾಗಿರಬೇಕಿತ್ತು. ಇನ್ನು, ಅಪ್ಪ ನನಗೆ ಮೊಬೈಲ್ ಕೊಡಲಿಲ್ಲ, ಅಮ್ಮ ನನಗೆ ಬೈದಳು, ಫ್ರೆಂಡ್ಸ್ ನನ್ನನ್ನು ಗೇಲಿ ಮಾಡಿದ್ರು ಎಂಬೆಲ್ಲಾ ಕಾರಣಗಳಿಗೆ ನೇಣಿಗೆ ಜೀವ ಕೊಡುವ ಅದೆಷ್ಟೋ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಪಾಠವಾಗಲು ಆಕೆ ಆಸ್ಪತ್ರೆಯ ಬೆಡ್ ಮೇಲಿಂದ ಎದ್ದು ಬರಲೇಬೇಕಿತ್ತು. ಹಾಗಿರುವಾಗಲೇ ಆ ಯುವತಿ ಮತ್ತೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬರುತ್ತಾಳೆ. ಈ ಬಾರಿ ಆಕೆಯ ಮನಸ್ಸಿನಲ್ಲಿ ಸಾಯುವ ಆಲೋಚನೆ ಇರಲಿಲ್ಲ, ಆದರೆ ಅವಳ ಮುಂದೆ ಈಗ ಇನ್ನೊಂದು ಸವಾಲು ಭೂತಾಕಾರವಾಗಿ ನಿಂತಿತ್ತು. ಈಗವಳು ತನ್ನೊಳಗಿದ್ದ ಅಷ್ಟೂ ನೋವು ಮತ್ತು ನೆಗೆಟಿವ್ ಯೋಚನೆಗಳನ್ನು ಸಾಯಿಸಬೇಕಿತ್ತು.

ಒಂದು ವಾರಗಳ ಆಸ್ಪತ್ರೆಯ ವಾಸದ ನಂತರ ಹೊರಜಗತ್ತಿಗೆ ಕಾಲಿಟ್ಟವಳೇ ತನ್ನ ಹೊಸ ಬದುಕನ್ನು ರೂಪಿಸಿಕೊಳ್ಳಲು ಬೇಕಾಗಿದ್ದ ಆತ್ಮಸ್ಥೈರ್ಯ ಮತ್ತು ಮನೋಬಲವನ್ನು ಪಡೆದುಕೊಳ್ಳಲು ನಿರ್ಧರಿಸಿ ಅದಕ್ಕೆ ಅಗತ್ಯವಿದ್ದ ಕೌನ್ಸಿಲಿಂಗ್ ಅನ್ನು ಪಡೆದುಕೊಳ್ಳುತ್ತಾಳೆ ಹಾಗೂ ಮನೋವೈದ್ಯರು ನೀಡಿದ ಕೆಲವೊಂದು ಔಷಧಿಗಳೂ ಸಹ ಆಕೆಯ ಶೀಘ್ರ ಚೇತರಿಕೆಗೆ ಕಾರಣವಾಗುತ್ತದೆ.

ತನ್ನ ಆರೋಗ್ಯವೆಲ್ಲಾ ಒಂದು ಹಂತಕ್ಕೆ ಬಂದ ನಂತರ ಆಕೆ ಮಾಡಿದ ಮೊದಲ ಕೆಲಸವೆಂದರೆ ತನ್ನ ತಾಯಿಯನ್ನು ಕರೆದುಕೊಂಡು ಆ ಮನೆಯಿಂದ ಹೊರಬಂದದ್ದು. ಕಳೆದುಹೋದ ದಿನಗಳನ್ನು ಎಣಿಸಿ ಪಶ್ಚಾತ್ತಾಪ ಪಡುವುದೇನೂ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಬಳಿಕ ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸುತ್ತಾಳೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಳಿಕ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ.
ಈ ಯುವತಿಯ ಬಾಳಲ್ಲಿ ಈ ಘಟನೆಗಳೆಲ್ಲಾ ನಡೆದು ಇದೀಗ ಕೆಲವು ವರ್ಷಗಳೇ ಕಳೆದುಹೋಗಿದೆ. ಆದರೂ ಆ ದಿನಗಳನ್ನೊಮ್ಮೆ ನೆನೆದರೆ ಈಗಲೂ ಆಕೆಯ ಕಣ್ಣಲ್ಲಿ ಒಂದು ಅವ್ಯಕ್ತ ಭಯ ಇಣುಕುತ್ತದೆ.

ಆದರೆ ಹೀಗೆ ಸಾವನ್ನು ಗೆದ್ದು ಬಂದ ಈಕೆಯ ಜೀವನ ಇದೀಗ ಚೆನ್ನಾಗಿದೆ ಮಾತ್ರವಲ್ಲ ಇತರರಿಗೆ ಮಾದರಿಯಾಗಿಯೂ ಇದೆ. ಸಮಾನ ಮನಸ್ಕರ ಜೊತೆಗೂಡಿ ತನ್ನದೇ ಆದ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿರುವ ಈಕೆ ವಿಶೇಷ ಸಂದರ್ಭಗಳಲ್ಲೆಲ್ಲಾ ಕರ್ತವ್ಯದಲ್ಲಿರುವ ಪೊಲೀಸರ ಬಳಿ ಹೋಗಿ ಅವರಿಗೆ ಚಹಾ ನೀಡುವ ವಿಭಿನ್ನ ಕಾರ್ಯವೊಂದನ್ನೂ ಸಹ ಮಾಡುತ್ತಿದ್ದಾಳೆ.

ತನ್ನ ಈ ಎಲ್ಲಾ ಕಥೆಯನ್ನು ‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಈ ಯುವತಿ ಆ ಬರಹದ ಜೊತೆಯಲ್ಲಿ ತನ್ನ ಫೊಟೋವನ್ನೂ ಸಹ ಹಾಕಿಕೊಂಡಿದ್ದಾಳೆ. ಆ ಫೊಟೋದಲ್ಲಿ ಆಕೆಯ ಆತ್ಮವಿಶ್ವಾಸದ ನಗುವನ್ನು ನೋಡಿದ ಯಾರೇ ಆದರೂ ಈಕೆಯ ಜೀವನದಲ್ಲಿ ಇಷ್ಟೆಲ್ಲಾ ಕಹಿ ಘಟನೆಗಳು ಆಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ.

ಆದರೆ, ಬದುಕೇ ಹಾಗೇ. ಯಾರಿಂದ ನಾವು ಪ್ರೀತಿ ವಿಶ್ವಾಸವನ್ನು ಬಯಸುತ್ತೇವೆಯೋ ಅವರಿಂದ ನಮಗೆ ಕಿಲುಬು ಕಾಸಿನ ಪ್ರೀತಿಯೂ ಸಿಕ್ಕಿರುವುದಿಲ್ಲ. ನಾವು ನಂಬಿದ ವ್ಯಕ್ತಿಗಳೇ ಅದೊಂದು ದಿನ ಸರೀಯಾಗಿ ಕೈ ಎತ್ತಿ ಹೋಗಿರುತ್ತಾರೆ. ಆದರೆ ಇವೆಲ್ಲದರ ನಡುವೆಯೂ ಎಲ್ಲೋ ಒಂದು ಕಡೆ ನಮಗೆ ಹೊಸ ಜೀವನ, ಹೊಸ ಸವಾಲುಗಳು ಕಾಯುತ್ತಿರುತ್ತವೆ. ಅವುಗಳನ್ನು ನಾವು ಗುರುತಿಸಿ, ಸ್ವೀಕರಿಸಿ ಮುನ್ನಡೆದಲ್ಲಿ ಮಾತ್ರವೇ ಆ ಸವಾಲುಗಳು ನಮ್ಮನ್ನು ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ.

ಜೀವನದಲ್ಲಿ ಎದುರಾದ ನೋವುಗಳನ್ನು ಚಾದರವನ್ನಾಗಿಸಿ ಮುಸುಕು ಹೊದ್ದುಕೊಂಡು ನರಳುವ ಬದಲು ಅದನ್ನೇ ಮಾಯಾ ಚಾದರವಾಗಿಸಿ ಅದರ ಮೇಲೇರಿ ಅವಕಾಶಗಳೆಂಬ ವಿಶಾಲ ಆಗಸದಲ್ಲಿ ನಾವು ತೇಲಾಡಬಹುದಲ್ಲವೇ? ಆದರೆ, ಆಯ್ಕೆ ನಮ್ಮದು!

ಈ ಯುವತಿಯ ಇಷ್ಟೂ ಕಥೆ ಕೇಳಿದ ಮೇಲೆ ನಮಗೆಲ್ಲಾ ಅನ್ನಿಸುವುದು ಇದೇ ತಾನೇ…?

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.