ರೀಲ್; ಕೊರೊನಾ ಭವಿಷ್ಯ ಹೇಳಿದ್ದ 2011ರ “ಈ ಸಿನಿಮಾ” ವಿಶ್ವಾದ್ಯಂತ ಕುತೂಹಲ ಹುಟ್ಟಿಸಿದೆ!


ನಾಗೇಂದ್ರ ತ್ರಾಸಿ, Mar 14, 2020, 7:05 PM IST

ಕೊರೊನಾ ಭವಿಷ್ಯ ಹೇಳಿದ್ದ 2011ರ “ಈ ಸಿನಿಮಾ” ವಿಶ್ವಾದ್ಯಂತ ಕುತೂಹಲ ಹುಟ್ಟಿಸಿದೆ

ಕೋವಿಡ್-19(ಕೊರೊನಾ ವೈರಸ್) ವಿಶ್ವದ ನೂರಾರು ದೇಶಗಳ ಜನರಲ್ಲಿ ಜೀವ ಭಯ ಹುಟ್ಟಿಸಿದೆ. ವ್ಯಾಪಾರ, ವಹಿವಾಟು, ಹಾಲಿವುಡ್, ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್, ಶಾಲಾ, ಕಾಲೇಜು, ಕೋರ್ಟ್, ಕಚೇರಿ ಕಾರ್ಯಗಳು ಸ್ಥಗಿತಗೊಂಡಿದೆ. ಏತನ್ಮಧ್ಯೆ ಏಕಾಏಕಿ 2011ರಲ್ಲಿ ಹಾಲಿವುಡ್ ನಲ್ಲಿ ಬಿಡುಗಡೆಯಾಗಿದ್ದ ಸಿನಿಮಾವನ್ನು ಲಕ್ಷಾಂತರ ಮಂದಿ ಮತ್ತೆ ವೀಕ್ಷಿಸತೊಡಗಿದ್ದರು..ಅದರ ಹೆಸರು “Contagino”(ಕಂಟೇಜನ್)! ಈ ಸಿನಿಮಾವನ್ನು ನಿರ್ದೇಶಿಸಿದ್ದು ಸ್ಟೀವನ್ ಸೋಡೆರ್ ಬರ್ಗ್. ಸಿನಿಮಾ ಚಿತ್ರಕಥೆ ಸ್ಕಾಟ್ ಝಡ್ ಬರ್ನ್ಸ್ ಅವರದ್ದು.

ಚೀನಾದ ವುಹಾನ್ ನಲ್ಲಿ ಜನ್ಮತಳೆದ ಕೋವಿಡ್-19 ವೈರಸ್ ಗೆ ಜಗತ್ತೇ ತತ್ತರಿಸತೊಡಗಿದೆ. ಈ ಹಿಂದೆಯೂ ಕಾಲರಾ, ಪ್ಲೇಗ್ ಮಹಾಮಾರಿ ಕೂಡಾ ಊರಿಗೆ, ಊರನ್ನೇ ಆಪೋಶನ ತೆಗೆದುಕೊಂಡಿತ್ತು ಎಂಬುದನ್ನು ಕೇಳಿದ್ದೇವೆ. 1990ರ ದಶಕದಲ್ಲಿ ಆಫ್ರಿಕಾದ ಸಹರಾ ಮರುಭೂಮಿಯಲ್ಲಿ ಹುಟ್ಟಿಕೊಂಡ ಏಬೋಲಾ ಎಂಬ ಮಾರಣಾಂತಿಕ ವೈರಸ್ ಕೂಡಾ ಮಾನವ ಜನಾಂಗವನ್ನು ಅಲುಗಾಡಿಸಿತ್ತು. ಈ ವೈರಸ್ ಕೂಡಾ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತ್ತು. ಆದರೆ ಈ ವೈರಾಣು ಭಾರತವನ್ನು ಪ್ರವೇಶಿಸಿಲ್ಲ. ಏಬೋಲಾಕ್ಕೂ ಕೂಡಾ ಈವರೆಗೂ ಅಧಿಕೃತವಾಗಿ ಲಸಿಕೆ ಕಂಡು ಹಿಡಿದಿಲ್ಲ. ಈ ಎಲ್ಲಾ ವೈರಸ್ ಗಳ ಕುರಿತು ಬೆಳ್ಳಿಪರದೆಯಲ್ಲಿ ಸಿನಿಮಾವಾಗಿ ಪ್ರದರ್ಶನ ಕಂಡಿತ್ತು.!

ಸದ್ಯ ಕೊರೊನಾ ಸೋಂಕು ಬಗ್ಗೆ ಕೆಲವು ಕಪೋಲ ಕಲ್ಪಿತ ಸುದ್ದಿ ಹರಿದಾಡುತ್ತಿರುವ ನಡುವೆಯೇ 2011ರಲ್ಲಿ ಹಾಲಿವುಡ್ ನಲ್ಲಿ ಬಿಡುಗಡೆಯಾಗಿದ್ದ ಕಂಟೇಜನ್ ಸಿನಿಮಾ ಇದೀಗ ವಿಶ್ವಾದ್ಯಂತ ಅತೀ ಹೆಚ್ಚು ಜನ ವೀಕ್ಷಿಸಿದ ಸಿನಿಮಾಗಳಲ್ಲಿ ಒಂದಾಗಿದೆಯಂತೆ! ಇದೊಂದು ಸೈನ್ಸ್-ಮೆಡಿಕಲ್ ಥ್ರಿಲ್ಲರ್ ಚಿತ್ರ. 60ಮಿಲಿಯನ್ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 135 ಮಿಲಿಯನ್ ಗಳಿಕೆ ಕಂಡಿತ್ತು.

ಕಂಟೇಜನ್ ಸಿನಿಮಾದ ಭವಿಷ್ಯವಾಣಿ ಇಂದು ನಿಜವಾಗಿದೆ! ಈಗಾಗಲೇ ಕೊರೊನಾ ಸೋಂಕು ಕುರಿತು ಚೀನಾದಲ್ಲಿ 30ವರ್ಷಗಳ ಹಿಂದೆ ಕಾದಂಬರಿಯೊಂದು ಬಂದಿದ್ದು, ತರಂಗ ವಾರಪತ್ರಿಕೆಯಲ್ಲಿಯೂ 30 ವರ್ಷಗಳ ಹಿಂದೆ ಲೇಖನ ಪ್ರಕಟವಾಗಿರುವುದು ವೈರಲ್ ಆಗಿರುವ ನಡುವೆಯೇ “ಕೋವಿಡ್ 19” ಕುರಿತ ಕಂಟೇಜನ್ ಸಿನಿಮಾವನ್ನು ಸಿನಿ ಪ್ರಿಯರು ಮತ್ತೆ, ಮತ್ತೆ ವೀಕ್ಷಿಸುತ್ತಿದ್ದಾರೆ! ಕೊರೊನಾ ವೈರಸ್ ಬಗ್ಗೆ ಹೇಳಲಾಗುತ್ತಿರುವ ಸಂಕೇತಗಳೇ ಕಂಟೇಜನ್ ಸಿನಿಮಾ ಕಥೆಯಲ್ಲಿ ಯಥಾವತ್ತಾಗಿ ಇದ್ದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

2011ರಲ್ಲಿ ಕಂಟೇಜನ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಿಬಿಎಸ್ ನ್ಯೂಸ್ ಚಾನೆಲ್ ಸಿಡಿಸಿ ನಿರ್ದೇಶಕ ಥಾಮಸ್ ಫ್ರೈಡೆನ್ ಅವರನ್ನು ಮಾತನಾಡಿಸಿದ್ದು, ಈ ಕಂಟೇಜನ್ ವೈರಸ್ ನಿಜ ಜೀವನದಲ್ಲಿ ಸಂಭವಿಸಬಹುದೇ ಎಂದು ಪ್ರಶ್ನಿಸಿದ್ದರು! ಅಂದು ಕೇಳಿದ್ದ ಪ್ರಶ್ನೆಗೆ ಇಂದು ನಿಜವಾಗಿ ಸಂಭವಿಸಿದ ಪರಿಣಾಮವಾಗಿ ಜಗತ್ತೇ ಭೀತಿಯಲ್ಲಿ ನಲುಗುತ್ತಿದೆ.

ಈ ಸಿನಿಮಾದ ಸಣ್ಣ ಎಳೆಯೊಂದನ್ನು ಉಲ್ಲೇಖಿಸುತ್ತೇನೆ..ನಂತರದ ಊಹೆ ನಿಮಗೆ ಬಿಟ್ಟಿದ್ದು. ಹಾಂಗ್ ಕಾಂಗ್ ನಿಂದ ಮಹಿಳಾ ಉದ್ಯಮಿ ಬೆಥ್ ಎಮೊಫ್ (ನಟಿ ಗ್ವಾನೆಥ್ ಪಾಲ್ಟ್ರೋ) ಊರಾದ ಮಿನ್ನೆಸೋಟಾಗೆ ವಾಪಸ್ ಆಗುತ್ತಾಳೆ. ಈ ಸಂದರ್ಭದಲ್ಲಿ ಜ್ವರ ಕಾಣಿಸಿಕೊಂಡ ಎರಡು ದಿನದಲ್ಲಿಯೇ ಪತಿಯ ಕಣ್ಣೆದುರೇ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ. ತಾಯಿಯನ್ನು ಹಿಡಿಯಲು ಪುಟ್ಟ ಮಗಳು ಓಡಲು ಮುಂದಾದಾಗ ತಂದೆ ಕೈ ಸನ್ನೆಯ ಮೂಲಕ ಬೇಡ ಎಂದು ಹೇಳಿದಾಗ. ಆ ಮಗು ಅಚ್ಚರಿ, ಆಘಾತದಿಂದ ಅಲ್ಲೇ ನಿಲ್ಲುತ್ತದೆ. ಇದೇ ಸೋಂಕು ಎಲ್ಲರಿಗೂ ಹಬ್ಬುತ್ತಾ ವಿಶ್ವಾದ್ಯಂತ ವ್ಯಾಪಿಸತೊಡಗುತ್ತದೆ….ಮುಂದೇನು…ಏನಾಗುತ್ತದೆ….ಆಕೆಗೆ ಸೋಂಕು ಹೇಗೆ ತಗುಲಿತು. ಅದರ ಮೂಲವೇನು ಎಂಬ ಬಗ್ಗೆ ನಿಮಗೆ ಕುತೂಹಲವಿದ್ದರೆ ನೆಟ್ ಫ್ಲಿಕ್ಸ್ ನಲ್ಲಿಯೋ ಅಥವಾ ಅಮೆಜಾನ್ ಫ್ರೈಮ್ ನಲ್ಲಿ ಕಂಟೇಜನ್ ಚಿತ್ರ ವೀಕ್ಷಿಸಿ!

ಸ್ವೀವನ್ ಸೋಡೆರ್ ಬರ್ಗ್ 1963ರ ಜನವರಿ 14ರಂದು ಅಟ್ಲಾಂಟದಲ್ಲಿ ಜನಿಸಿದ್ದರು. ಸ್ಟೀವನ್ ಬಾಲ್ಯದಲ್ಲಿಯೇ ಅವರ ಪೋಷಕರು ವರ್ಜಿನಿಯಾಕ್ಕೆ ವಲಸೆ ಬಂದಿದ್ದರು. ಚಿಕ್ಕಂದಿನಲ್ಲಿಯೇ ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸ್ಟೀವನ್ 1989ರಲ್ಲಿ ಮೊದಲ ಸಿನಿಮಾ ನಿರ್ದೇಶಿಸುವ ಮೂಲಕ 26ನೇ ವಯಸ್ಸಿಗೆ ಅತೀ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸ್ಟೀವನ್ ಅವರ ಕಂಟೇಜನ್ ಸಿನಿಮಾ ಸಮೂಹಪ್ರಜ್ಞೆ(ಕ್ರೌಡ್ ಸೈಕಾಲಜಿ) ಹಾಗೂ ಒಗ್ಗಟ್ಟಿನ ನಡವಳಿಕೆಯ ಮಾಸ್ ಹಿಸ್ಟರಿಯಾದ ಜತೆ, ಜತೆಗೆ ಸಾಮಾಜಿಕ ಕಳಕಳಿಯನ್ನೇ ಹೇಗೆ ಕಳೆದುಕೊಳ್ಳುತ್ತಾರೆ ಎಂಬ ಅಂಶ ಪ್ರಸ್ತುತಪಡಿಸಲಾಗಿದೆ. ವೈರಸ್ ನಿಂದ ಸಂಭವಿಸುವ ಪರಿಣಾಮ ಅದರ ಜತೆಗೆ ದಿಗ್ಭ್ರಮೆಗೊಳಿಸುವುದು, ಸೋಂಕು ಹರಡುವುದು, ಅಸಹಾಯಕತೆ, ಮಾಹಿತಿ ಕೊರತೆಯನ್ನು ಸುಳ್ಳು ಸುದ್ದಿಯನ್ನಾಗಿ ಹಬ್ಬಿಸುವ ಸಂಚು ಹೇಗೆ ಭಯಭೀತರನ್ನಾಗಿಸುತ್ತದೆ ಎಂಬುದನ್ನು ಸ್ಟೀವನ್ ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ!

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.