ಕಾಟ್ರೆಲ್ ನ ಸೆಲ್ಯೂಟ್, ಬಾಂಗ್ಲಾದ ನಾಗಿನ್ ಡಾನ್ಸ್ ; ಕ್ರಿಕೆಟ್ ನ ಅಪರೂಪದ ಸಂಭ್ರಮಾಚರಣೆಗಳು
Team Udayavani, Dec 9, 2019, 6:12 PM IST
ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ ನಿಮಗೆ ಕ್ರಿಕೆಟ್ ನಲ್ಲಿ ನ ಸಂಭ್ರಮಾಚರಣೆಗಳು ಹೇಗಿರುತ್ತವೆ ಎನ್ನುವ ಪರಿಚಯ ನಿಮಗಿರಬಹುದು. ಅದರಲ್ಲೂ ಕೆಲ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚಾಗಿ ವಿಭಿನ್ನ ಸಂಭ್ರಮಾಚರಣೆಗಳಿಂದ ಜಗತ್ತಿನ ಗಮನ ಸೆಳೆಯುತ್ತಾರೆ. ಅಂತಹ ಕೆಲವು ಸ್ವಾರಸ್ಯಕರ ಸಂಭ್ರಮಾಚರಣೆಗಳ ಬಗ್ಗೆ ಇಲ್ಲಿದೆ ಕಿರು ಮಾಹಿತಿ.
ಶೆಲ್ಡನ್ ಕಾಟ್ರೆಲ್ ನ ಸೆಲ್ಯೂಟ್
ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಮಿಂಚುತ್ತಿರುವ ವೇಗಿ. ಪ್ರತಿ ವಿಕೆಟ್ ಪಡೆದಾಗಲೂ ತನ್ನ ಹೊಸ ಬಗೆಯ ಸೆಲ್ಯೂಟ್ ಶೈಲಿಯ ಸಂಭ್ರಮಾಚರಣೆಯಿಂದ ಗಮನ ಸೆಳೆಯುತ್ತಿದ್ದಾರೆ.ಸ್ವತಃ ಯೋಧನಾಗಿರುವ ಕಾಟ್ರೆಲ್ ಅದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ವಿಕೆಟ್ ಬಿದ್ದ ಕೂಡಲೇ ನಿಂತಿದ್ದ ಸ್ಥಳದಿಂದ ನಾಲ್ಕು ಹೆಜ್ಜೆ ಮುಂದೆ ಬಂದು ಎದೆಯುಬ್ಬಿಸಿ ಸೆಲ್ಯೂಟ್ ಮಾಡುತ್ತಾರೆ. ವಿಶ್ವ ಕಪ್ ನ ಪಂದ್ಯದಲ್ಲಿ ಭಾರತದ ಶಮಿ ಕಾಟ್ರೆಲ್ ವಿಕೆಟ್ ಪಡೆದಾಗ ಸೆಲ್ಯೂಟ್ ಶೈಲಿಯಲ್ಲಿ ಅಣಕವಾಡಿದಾಗ ವಿಂಡೀಸ್ ವೇಗಿ ಸೆಲ್ಯೂಟ್ ಹಿಂದಿನ ಕಥೆ ಜಗಜ್ಜಾಹೀರು ಮಾಡಿದ್ದರು.ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೈನ್ ಕೂಡಾ ವಾಯುಪಡೆಯ ಯೋಧನಾದ ಕಾರಣ ಸೆಲ್ಯೂಟ್ ಸೆಲೆಬ್ರೇಶನ್ ಮಾಡುತ್ತಾರೆ.
ಬಾಂಗ್ಲಾದೇಶದ ನಾಗಿನ್ ಡಾನ್ಸ್
ಬಹುಶಃ ಅತೀ ಹೆಚ್ಚು ಟೀಕೆಗೆ ಒಳಗಾದ ಒಂದು ತಂಡದ ಸಂಭ್ರಮಾಚರಣೆಯಿದು. ನಿದಹಾಸ್ ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಆಟಗಾರರು ಆರಂಭಿಸಿದ ಈ ನಾಗಿನ್ ನೃತ್ಯ ನಂತರ ಅವರನ್ನೇ ಮುಜುಗರಕ್ಕೆ ದೂಡಿತು. ಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶದ ಆಟಗಾರರು ಎರಡೂ ಕೈ ಮೇಲಿತ್ತು ನಾಗಿನ್ ಡಾನ್ಸ್ ಮಾಡಿದ್ದರು. ಆದರೆ ಅವರ ಸಂಭ್ರಮಾಚರಣೆಯಿಂದ ಹೆಚ್ಚಾಗಿ ಎದುರಾಳಿಯನ್ನು ಅಣಕಿಸುವಂತಿತ್ತು.
ಇದರಿಂದಾಗಿ ಕೆರಳಿದ್ದ ಲಂಕಾ ಆಟಗಾರರು ಭಾರತ- ಬಾಂಗ್ಲಾ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಿದ್ದರು. ಅಂತಿಮ ಓವರ್ ನಲ್ಲಿ ಬಾಂಗ್ಲಾ ಸೋತಾಗ ಲಂಕಾ ಬೆಂಬಲಿಗರು ಅದೇ ನಾಗಿನ್ ಡ್ಯಾನ್ಸ್ ಮಾಡಿದ್ದರು.
ಕೆಸ್ರಿಕ್ ವಿಲಿಯಮ್ಸ್ ನ ನೋಟ್ ಬುಕ್ ಸಂಭ್ರಮ
ಇತ್ತೀಚೆಗೆ ವಿರಾಟ್ ಕೊಹ್ಲಿ ನೋಟ್ ಬುಕ್ ಶೈಲಿಯ ಸಂಭ್ರಮಾಚರಣೆ ಮಾಡಿದ್ದು ನಿಮಗೆ ಗೊತ್ತಿರಬಹುದು. ಆದರೆ ಈ ಶೈಲಿಯನ್ನು ಮೊದಲು ಮಾಡಿದ್ದು ಕೆಸ್ರಿಕ್ ವಿಲಿಯಮ್ಸ್.
ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆಡ್ರಿಕ್ ವಾಲ್ಟನ್ ವಿಕೆಟ್ ಪಡೆದಾಗ ಕೆಸ್ರಿಕ್ ವಿಲಿಯಮ್ಸ್ ಅವರ ಎದುರಿಗೆ ಹೋಗಿ ಸಹಿ ಮಾಡುವಂತೆ ನಟಿಸಿದ್ದರು. ಮುಂದಿನ ಪಂದ್ಯದಲ್ಲಿ ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ವಾಲ್ಟನ್, ವಿಲಿಯಮ್ಸ್ ಅವರ ಒಂದೇ ಓವರ್ ನಲ್ಲಿ ಎರಡು ಬೌಂಡರಿ ಎರಡು ಸಿಕ್ಸರ್ ಬಾರಿಸಿದ್ದರು ಮತ್ತು ಪ್ರತೀ ಹೊಡೆತದ ನಂತರ ನೋಟ್ ಬುಕ್ ಶೈಲಿಯನ್ನು ಮಾಡಿ ಕಿಚಾಯಿಸಿದ್ದರು.
ಚಾಂಪಿಯನ್ ಡ್ಯಾನ್ಸ್
ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಡ್ಯಾನ್ಸ್ ಇದು. ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೇನ್ ಬ್ರಾವೋ ಅವರ ಆಲ್ಬಮ್ ಸಾಂಗ್ ‘ಚಾಂಪಿಯನ್ ‘ ಭಾರಿ ಜನಪ್ರೀಯತೆ ಪಡೆಯಿತು.
2016ರಲ್ಲಿ ಬಿಡುಗಡೆಯಾದ ಈ ಹಾಡಿನ ನೃತ್ಯವನ್ನು ಬ್ರಾವೋ ವಿಕೆಟ್ ಪಡೆದ ಪ್ರತಿ ಸಂದರ್ಭದಲ್ಲೂ ಮೈದಾನದಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಚಾಂಪಿಯನ್ ಹಾಡು ಮತ್ತು ನೃತ್ಯ ಬೇಗನೆ ಜನಪ್ರಿಯವಾಯಿತು.
2016ರ ಟಿ ಟ್ವೆಂಟಿ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಗೆದ್ದಾಗಿ ಇಡೀ ತಂಡ ಮೈದಾನದಲ್ಲಿ ಇದೇ ಹಾಡಿಗೆ ಕುಣಿದಿತ್ತು.
ಇಮ್ರಾನ್ ತಾಹೀರ್ ಒಟ
ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಸ್ಪೆಷಲಿಸ್ಟ್ ಇಮ್ರಾನ್ ತಾಹೀರ್ ರದ್ದು ಇನ್ನೊಂದು ಬಗೆಯ ಸಂಭ್ರಮಾಚರಣೆ. ಪ್ರತೀ ವಿಕೆಟ್ ಪಡೆದಾಗ ತಾಹೀರ್ ತನ್ನ ಎರಡೂ ಕೈ ಮೇಲೆತ್ತಿ ಮೈದಾನದ ತುಂಬೆಲ್ಲಾ ಓಡುತ್ತಾರೆ. ತಾಹೀರ್ ಓಟ ನೋಡಿ ಸಹ ಆಟಗಾರರು ಅವರನ್ನು ಬೆನ್ನತ್ತಿ ಹೋಗುತ್ತಾರೆ. ಮೈದಾನಕ್ಕೆ ಆಟ ನೋಡಲು ಬಂದ ಅಭಿಮಾನಿಗಳಿಗೆ ಈ ಓಟದ ಬಿಟ್ಟಿ ಮಜಾ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.