ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ವಿಧೇಯಕದ ಬಗ್ಗೆ ಗೊತ್ತಾ?


ಸತೀಶ್ ಮಲ್ಯ, Mar 23, 2019, 1:46 PM IST

rupees-500-noes-700.jpg

ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲಾಗಿ ಕಾಣಿಸುವುದು ನಿರಖು ಠೇವಣಿಗಳು, ಎಂದರೆ ಫಿಕ್ಸ್ಡ್ ಡೆಪಾಸಿಟ್ ಗಳು.

ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ ಸಾಮಾನ್ಯರಲ್ಲಿದೆ. ಹಾಗಾಗಿ ಜನರು ಬ್ಯಾಂಕ್, ಸಹಕಾರಿ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಯೋಜನೆಗಳತ್ತ ಮುಖ ಮಾಡುತ್ತಾರೆ.

ನಿರಖು ಠೇವಣಿಗಳು ಸುಭದ್ರ, ಸುರಕ್ಷಿತ, ಆಕರ್ಷಕ ಎಂಬ ಮಾತಿನಲ್ಲಿ ಅತಿಶಯವೇನೂ ಇಲ್ಲ. ಆದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಜನರನ್ನು ತಮ್ಮತ್ತ ಸೆಳೆಯಲು ಬ್ಯಾಂಕ್, ಪೋಸ್ಟಲ್ ಗಿಂತ ಹೆಚ್ಚಿನ ಬಡ್ಡಿಯ ಆಮಿಷ ಒಡ್ಡುತ್ತವೆ. ಹಾಗೆಯೇ ಖಾಸಗಿ ಹಣಕಾಸು ಸಂಸ್ಥೆಗಳು, ಪೋಂಜಿ ಕಂಪೆನಿಗಳು, ಬ್ಲೇಡ್ ಸಂಸ್ಥೆಗಳು  ಜನರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ. ಹೆಚ್ಚಿನ ಬಡ್ಡಿಯ ಆಸೆಯಲ್ಲಿ ಜನರು ಈ ಬಗೆಯ ಸಂಸ್ಥೆಗಳ ಆಮಿಷಕ್ಕೆ ಒಳಗಾಗಿ ತಮ್ಮ ಕಷ್ಟದ ಸಂಪಾದನೆಯ ಉಳಿತಾಯವನ್ನು ಅವುಗಳಲ್ಲಿ ಠೇವಣಿ ಇಡುತ್ತಾರೆ.

ಹೀಗೆ ಠೇವಣಿ ಇಡುವ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ಜನರಿಗೆ ಮೋಸ ಮಾಡಿದ ಹಲವಾರು ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸಲೆಂದೇ ಕೇಂದ್ರ ಸರಕಾರ ಈಚೆಗೆ 2019ರ ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ.

ಈ ನಿಷೇಧಾಜ್ಞೆಯಿಂದಾಗಿ ಅನಿಯಂತ್ರಿತ ಠೇವಣಿ ಸಂಗ್ರಹಿಸುವ ಎಲ್ಲ ಹಣಕಾಸು, ಬ್ಯಾಂಕೇತರ ಹಣಕಾಸು, ಖಾಸಗಿ ಹಣಕಾಸು ಮತ್ತು ಸಹಕಾರಿ ಬ್ಯಾಂಕುಗಳಿಗೆ ಕೂಡ ಈಗ ಬಿಸಿ ಮುಟ್ಟಿದೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ಅನಿಯಂತ್ರಿತ ಠೇವಣಿ ಸಂಚಯನಕಾರರು ಈಗ ಬಿಗಿಯಾದ ಆರ್ ಬಿ ಐ ನೀತಿ ನಿಯಮಗಳಿಗೆ ಒಳಪಡುವಂತಾಗಿದೆ.

ಈ ಸುಗ್ರೀವಾಜ್ಞೆಯಡಿ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಠೇವಣಿಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. 1. ನಿಯಂತ್ರಿತ ಠೇವಣಿ, 2. ಅನಿಯಂತ್ರಿತ ಠೇವಣಿ. ಇದರಲ್ಲಿ ಎರಡನೇ ಬಗೆಯ ಅನಿಯಂತ್ರಿತ ಠೇವಣಿಗಳ ಸಂಚಯನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಮಾತ್ರವಲ್ಲದೆ ಅದು ಶಿಕ್ಷಾರ್ಹ ಅಪರಾಧವೆಂದೂ ಪರಿಗಣಿಸಲಾಗಿದೆ.

ಸೆಬಿಯಿಂದ ಅನುಮತಿ ಪಡೆದ, ರಿಸರ್ವ್ ಬ್ಯಾಂಕ್ ಅನುಮತಿ ಪಡೆದ ಬ್ಯಾಂಕ್ ಠೇವಣಿಗಳು, IRDA ಅನುಮತಿ ಪಡೆದ ವಿಮಾ ಸಂಸ್ಥೆಗಳ ಯೋಜನೆಗಳು, ರಾಜ್ಯಗಳ ಕಾಯಿದೆಯಡಿ ನೋಂದಾಯಿತವಾಗಿರುವ ಸಹಕಾರಿ ಸಂಸ್ಥೆಗಳು, ಚಿಟ್ ಫಂಡ್ ಸಂಸ್ಥೆಗಳು ಮುಂತಾಗಿ ಒಟ್ಟು 9 ರೀತಿಯ ನಿಯಂತ್ರಣ ಪ್ರಾಧಿಕಾರದಡಿ ಬರುವ ಠೇವಣಿ ಯೋಜನೆಗಳು ಮಾತ್ರವೇ ನಿಯಂತ್ರಿತ ಠೇವಣಿ ಯೋಜನೆಗಳೆಂದು ಪರಿಗಣಿತವಾಗಿವೆ.

ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡರೆ ಜನ ಸಾಮಾನ್ಯರ ನಿರಖು ಠೇವಣಿ ಹಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ  ಮತ್ತು ಅಂಚೆ ಇಲಾಖೆಯ ಠೇವಣಿ ಯೋಜನೆಗಳಲ್ಲಿ ಹೆಚ್ಚು ಸುಭದ್ರ ಮತ್ತು ಸುರಕ್ಷಿತ ಎಂದು ಖಚಿತವಾಗಿ ಹೇಳಬಹುದಾಗಿದೆ.

ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಅಸಲನ್ನೂ ಕಳೆದುಕೊಳ್ಳುವ ರಿಸ್ಕ್ ಖಂಡಿತ ಬೇಡ ಎನ್ನುವವರು ಸದಾ ಕಾಲ ಮುಂಚೂಣಿಯ ಸರಕಾರಿ ಬ್ಯಾಂಕುಗಳು ಮತ್ತು ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್ ಯೋಜನೆಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕ್ಷೇಮ.

ಹೂಡಿಕೆಯಲ್ಲಿ ಯಾವತ್ತೂ ನಾವು  ರಿಸ್ಕ್ ಫ್ಯಾಕ್ಟರ್ ಮರೆಯಬಾರದು ಎನ್ನುವುದು ಮುಖ್ಯ. ಹೂಡಿಕೆದಾರರು ಮತ್ತು ವಹಿವಾಟುದಾರರ ನಡುವೆ ಇರುವ ಅಂತರವೇ ರಿಸ್ಕ್ ತೆಗೆದುಕೊಳ್ಳುವಲ್ಲಿನ ಛಾತಿ. ಸಾಮಾನ್ಯವಾಗಿ  ವಹಿವಾಟುದಾರರನ್ನು ಹೂಡಿಕೆದಾರರೆಂದು ಪರಿಣತರು ಪರಿಗಣಿಸುವುದಿಲ್ಲ. ವಹಿವಾಟುದಾರರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ ಲಾಭ ಗಳಿಸುವುದೇ ಹೂಡಿಕೆಯ ಮೂಲ ಉದ್ದೇಶವಾಗಿರುತ್ತದೆ.

ಹೂಡಿಕೆದಾರರಿಗೆ ಆರರಿಂದ ಹನ್ನೆರಡು ತಿಂಗಳ ಅವಧಿಯೆಂದರೆ ಒಂದು ಯುಗ ! ಈ ಅವಧಿಯೊಳಗೆ ತಮ್ಮ ಹೂಡಿಕೆ ಮೊತ್ತವು ನಷ್ಟದ ಹಾದಿ ಹಿಡಿದರೆ ಅದನ್ನು ನಿರ್ದಯೆಯಿಂದ ಅವರು ಕೊನೆಗೊಳಿಸಿ ಕೈಗೆ ಬಂದಷ್ಟು ದುಡ್ಡನ್ನು ಬೇರೆ ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುತ್ತಾರೆ. ಈ ಯತ್ನದಲ್ಲಿ ತಾವು ಅಸಲಿನ ಭಾಗವನ್ನೇ ಕಳೆದುಕೊಂಡರೂ ಅವರು ಚಿಂತಿಸುವುದಿಲ್ಲ. ಗಾಯಗೊಂಡ ಹುಲಿ ತನ್ನ ದೇಹದ ಒಂದು ಕಡೆಯ ಮಾಂಸವನ್ನು ಕಿತ್ತು ಗಾಯದ ಭಾಗಕ್ಕೆ ಅಂಟಿಸುವ ಯತ್ನ ಮಾಡುವಂತೆ ವಹಿವಾಟುದಾರರು ನಿಷ್ಕರುಣೆಯಿಂದ ವ್ಯವಹಾರ ನಿರತವಾಗಿರುತ್ತಾರೆ.

ಆದರೆ ಹೂಡಿಕೆದಾರರು ಹಾಗಲ್ಲ. ಅವರು ತಮ್ಮ ಹೂಡಿಕೆಯನ್ನು ಸಟ್ಟಾ ವ್ಯವಹಾರ ಎಂದು ತಿಳಿಯುವುದಿಲ್ಲ. ಈಸ ಬೇಕು ಇದ್ದು ಜಯಿಸಬೇಕು ಎಂಬ ದಾಸವಾಣಿಯನ್ನು ಹೂಡಿಕೆದಾರರು ಯಥಾವತ್ ಪಾಲಿಸುತ್ತಾರೆ. ಹೂಡಿಕೆದಾರರು ಒಂದೆಡೆ ಹಣ ಹೂಡಿದರೆ ಅದು ಲಾಭ ದೊರಕಿಸಿಕೊಡುವ ತನಕ ನಿರ್ಗಮಿಸುವುದಿಲ್ಲ. ಅದು ಬೇಕಿದ್ದರೆ ಶೇರು, ಬಾಂಡ್, ಮ್ಯೂಚುವಲ್ ಫಂಡ್, ಇಟಿಎಫ್ ಮುಂತಾಗಿ ಯಾವುದೇ ಇರಲಿ; ಹೂಡಿದ ಮೊತ್ತ ಮಾಗುವ ತನಕವೂ ಕಾಯುತ್ತಾರೆ.

ಹೀಗೆ ಹೂಡಿಕೆಯಲ್ಲಿ ಸಹನೆ, ತಾಳ್ಮೆ, ಸಂಯಮ ತೋರುವ ಹೂಡಿಕೆದಾರರು ನಿಶ್ಚಿಂತೆ, ಸುಭದ್ರತೆಯನ್ನು ಬಯಸುವವರಾಗಿರುತ್ತಾರೆ. ಅವರು ನಿರ್ದಿಷ್ಟ ವರ್ಷಗಳ ಕಾಲಕ್ಕೆ ಹಣವನ್ನು ಹೂಡಿ ಅದು ಮಾಗುವ ವರೆಗೆ ಕಾಯುತ್ತಾರೆ. ಈ ಬಗೆಯ ಪ್ರವೃತ್ತಿದಾರರಿಗೆ ಅತ್ಯಂತ ಪ್ರಶಸ್ತವಾಗಿರುವ ಹೂಡಿಕೆ ಮಾಧ್ಯಮ ಎಂದರೆ ನಿರಖು ಠೇವಣಿ. ಇದನ್ನೇ ನಾವು ಫಿಕ್ಸ್ಡ್ ಡೆಪಾಸಿಟ್ ಎಂದು ಕರೆಯುವುದು.

ಒಂದು, ಎರಡು, ಮೂರು, ಐದು ವರ್ಷಗಳ ಅವಧಿಯ ಟರ್ಮ್ ಡೆಪಾಸಿಟ್ ಗಳು ಅಥವಾ ಅವಧಿ ನಿರಖು ಠೇವಣಿಗಳು ಸುಭದ್ರತೆ ಮತ್ತು ಸುರಕ್ಷೆಯ ದೃಷ್ಟಿಯಿಂದ ಪ್ರಶಸ್ತ; ಹಾಗಿದ್ದರೂ ಲಾಭದಾಯಕತೆ ನಿಶ್ಚಿತವಾಗಿರುವುದರಿಂದ ಮಧ್ಯಮ ವರ್ಗದ ಮಂದಿಯ ಮೊದಲ ಹೂಡಿಕೆಯ ಆಯ್ಕೆಯೇ ನಿರಖು ಠೇವಣಿ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ನಾನಾ ಅವಧಿಯ, ಆಕರ್ಷಕ ಬಡ್ಡಿಯ ನಿರಖು ಠೇವಣಿ ಯೋಜನೆಗಳನ್ನು ಪ್ರಚುರ ಪಡಿಸುತ್ತಲೇ ಇರುತ್ತವೆ.  ಹಾಗಿದ್ದರೂ ಜನರು ಸುಭದ್ರ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಅಂಚೆ ಕಚೇರಿಯ ಅವಧಿ ಠೇವಣಿಗಳ ಕಡೆಗೆ ಮುಖ ಮಾಡುವ ಜರೂರಿ ಇದೆ. ಟರ್ಮ್ ಡೆಪಾಸಿಟ್ ಎಂದು ಕರೆಯಲ್ಪಡುವ ಅಂಚೆ ಇಲಾಖೆಯ ನಿರಖು ಠೇವಣಿಗಳು ಈ ರೀತಿ ಇವೆ :

1. ಒಂದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ
2. ಎರಡು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ
3. ಮೂರು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7 ಬಡ್ಡಿ
4. ಐದು ವರ್ಷ ಅವಧಿಯ ಟರ್ಮ್ ಡೆಪಾಸಿಟ್ : ವಾರ್ಷಿಕ ಶೇ.7.8  ಬಡ್ಡಿ

ಈ ಟರ್ಮ್ ಡೆಪಾಸಿಟ್ ಮೇಲಿನ  ವಾರ್ಷಿಕ ಬಡ್ಡಿಯನ್ನು  ತ್ತೈಮಾಸಿಕ ನೆಲೆಯಲ್ಲಿ ಲೆಕ್ಕ ಹಾಕಲಾಗುತ್ತದೆ. ಕನಿಷ್ಠ 200 ಮತ್ತು ಅದರ ಗುಣಾಕಾರದಲ್ಲಿ, ಯಾವುದೇ ಗರಿಷ್ಠ ಮೊತ್ತದ ಮಿತಿಯಿಲ್ಲದ ಹಾಗೆ, ಯಾರೂ ಟರ್ಮ್ ಡೆಪಾಸಿಟ್ ಮಾಡಬಹುದಾಗಿದೆ.

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.