ಜಗತ್ತನ್ನೇ ಮೋಡಿ ಮಾಡಿದ “ಝೂಝೂ” ಹಿಂದಿನ ನಿಜವಾದ ಹೀರೋ ಯಾರು ಗೊತ್ತಾ?


ಮಿಥುನ್ ಪಿಜಿ, Dec 17, 2019, 6:00 PM IST

zoo-zoo

ಝೂಝೂ ಗಳನ್ನು ಯಾರು ತಾನೇ ಮರೆಯಲು ಸಾಧ್ಯ ! ಕೋಟ್ಯಾಂತರ ಜನರ ಮನಗೆದ್ದ ಈ ಜಾಹೀರಾತು ‘ಟೆಲಿವಿಷನ್ ಜಾಹೀರಾತುಗಳಿಗೆ’ ಹೊಸತನವನ್ನು ತಂದುಕೊಟ್ಟಿದ್ದನ್ನು ಕಾಣಬಹುದು.  ಗ್ರಾಹಕರನ್ನು ಆಕರ್ಷಿಸಲು ಝೂಝೂ ಎಂಬ ವಿನೂತನ ಪ್ರಯತ್ನಕ್ಕೆ ವೊಡಾಪೋನ್  ಸಂಸ್ಥೆ ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿತ್ತು. 2009ರ ಐಪಿಎಲ್‌ ನಲ್ಲಂತೂ ಈ ಜಾಹೀರಾತು ಬಹುಕೋಟಿ  ಜನರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಯಾಕೆಂದರೇ ಐಪಿಎಲ್ ಗಿಂತಲೂ ಝೂಝೂ ಗಳನ್ನು ನೋಡಲೆಂದೇ ಜನರು ಮುಗಿಬೀಳುತ್ತಿದ್ದರು. ಇಂತಹ ವೊಡಾಫೋನ್ ನ ಝೂಝೂ ಜಾಹೀರಾತುಗಳಿಗೆ ಈಗಲೂ ಜನಪ್ರಿಯತೆಯಿದೆ.

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದ್ದ ವೊಡಾಫೋನ್, ಇತರ ಟೆಲಿಕಾಂ ಕಂಪೆನಿಗಳಿಗಿಂತ ಭಿನ್ನವಾಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಝೂಝೂ ಗೂ ಮೊದಲು ಪುಟ್ಟ ನಾಯಿಮರಿಯನ್ನು ಜಾಹೀರಾತಿಗೆ ಬಳಸಿಕೊಂಡು ಹೊಸ ಭಾಷ್ಯ ಬರೆದಿತ್ತು. ಇದಾದ ಬಳಿಕ ಝೂಝೂ ಗಳ ಮೂಲಕವೇ ಹೆಚ್ಚು ಸದ್ದು ಮಾಡಿತ್ತು. ವೇಗವಾಗಿ ಮತ್ತು ಸರಳವಾಗಿ ಎಲ್ಲರಿಗೂ ಅರ್ಥವಾಗುವ ಈ ಜಾಹೀರಾತು ಎಷ್ಟು ಮೋಡಿ ಮಾಡಿತ್ತೆಂದರೇ ಮತ್ತೊಂದು ಜಾಹೀರಾತು ಬರುವುದನ್ನೇ ಜನರು ಕಾತರದಿಂದ ಕಾಯುತ್ತಿದ್ದರು.

ಕೇವಲ ಸಂಜ್ಞೆ, ಮೂಕಾಭಿನಯದಲ್ಲೇ 15-20 ಸೆಕೆಂಡುಗಳಲ್ಲಿ ಜನರನ್ನು ಹಿಡಿದಿಟ್ಟುಕೊಂಡ  ಈ ಝೂಝೂಗಳು ಒಂದು ರೀತಿಯ ಆಜಾತಶತ್ರುಗಳ ರೀತಿ.  ಪ್ರತಿಯೊಬ್ಬರು ಆ ಜಾಹೀರಾತುಗಳನ್ನು ಇಷ್ಟ ಪಡುತ್ತಿದ್ದರು. ಇದು ಇತರ ಟೆಲಿಕಾಂ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಹೊಡೆತವನ್ನೇ ನೀಡಿತ್ತು.

ಈ ಜಾಹೀರಾತು ನೋಡುವುದಕ್ಕೆ ಯಾವುದೋ ಅನ್ಯಗ್ರಹದಿಂದ ಬಂದಂತೆ ಕಾಣುವ ಜೀವಿಗಳ ಕಾರ್ಟೂನ್ ಅಥವಾ ಕಂಪ್ಯೂಟರ್ ಆ್ಯನಿಮೇಶನ್ ಗಳಿಂದ ನಿರ್ಮಾಣ ಮಾಡಿದ ಪಾತ್ರಗಳಂತೆ ಕಂಡರೂ ಇವು ಅ್ಯನಿಮೇಶನ್  ಪಾತ್ರವಲ್ಲ. ಬದಲಾಗಿ ಮುಖವಾಡ ಮತ್ತು ವೇಷ ಧರಿಸಿ ಅಭಿನಯ ಮಾಡಿದ ಮನುಷ್ಯರೇ ಈ ಜಾಹೀರಾತಿನ ಹೀರೋಗಳು. ಇಲ್ಲಿ ಯಾವುದೇ ಗ್ರಾಫಿಕ್ಸ್ ಇಲ್ಲಿ ಬಳಕೆಯಾಗಿಲ್ಲ ಎನ್ನುವುದೇ ವಿಶೇಷ.

ಝೂಝೂ ಗಳಿಗೆ ಬಲೂನ್ ಮಾದರಿಯ ದೇಹ, ಮೊಟ್ಟೆಯಾಕಾರದ ತಲೆಗಳಿದ್ದವು. ಚಿತ್ರಕಥೆಗಳಿಗನುಗುಣವಾಗಿ ಹಾಸ್ಯದ ಹಿನ್ನಲೆಯಲ್ಲಿ ಅಭಿನಯಗಳಿರುತ್ತಿತ್ತು. ಮಾತ್ರವಲ್ಲದೇ ಹಲವು ಪಾತ್ರಗಳು ಈ ಕಥೆಯಲ್ಲಿ ಮೂಡಿಬರುತ್ತಿದ್ದವು. ಈ ಜಾಹೀರಾತುಗಳನ್ನು Ogilvy &mather ಎಂಬ ಏಜೆನ್ಸಿ ನಿರ್ಮಾಣ ಮಾಡುತ್ತಿದ್ದವು. ಪ್ರಮುಖವಾಗಿ ಬೆಂಗಳೂರು ಮೂಲದ ನಿರ್ವಾಣ ಫಿಲಂಸ್, ದಕ್ಷಿಣ ಆಫ್ರಿಕಾದ ಕೆಪ್ ಟೌನ್ ನಲ್ಲಿ ಇದರ ಚಿತ್ರೀಕರಣ ಮಾಡುತ್ತಿತ್ತು. ಪ್ರಕಾಶ್ ವರ್ಮಾ ಎಂಬುವವರು ಇದರ ನಿರ್ದೇಶಕರಾಗಿದ್ದರು.

ಝೂಝೂ ಎಂಬ ಪರಿಕಲ್ಪನೆಯ ಹಿಂದೆ ರಾಜೀವ್ ರಾವ್ ಎಂಬ ವ್ಯಕ್ತಿಯಿದ್ದಾರೆ. ಇವರು ಚಿತ್ರಕಥೆಯನ್ನು ಕೂಡ ಬರೆಯುತ್ತಿದ್ದರು. 10-15 ಸೆಕೆಂಡ್ ಗಳು ಇರುವ ಈ ವಿಡಿಯೋದ ಚಿತ್ರೀಕರಣ ಬರೋಬ್ಬರಿ 10 ದಿನ ನಡೆಯುತ್ತಿದ್ದವು. ಮಾತ್ರವಲ್ಲದೆ ಒಂದು ತಿಂಗಳ ಕಾಲ  ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು. ಇದಕ್ಕೆ ತಗಲುತ್ತಿದ್ದ ವೆಚ್ಚ 3ಕೋಟಿ ರೂಪಾಯಿ !

Ogilvy &mather ಸಂಸ್ಥೆ ವೊಡಾಫೋನ್ ಜಾಹೀರಾತುಗಳ ನಿರ್ಮಾಣದ ಹೊಣೆ ಹೊತ್ತಿದ್ದರಿಂದ ಐಪಿಎಲ್ ಸೀಸನ್ 2ರ ವೇಳೆಗೆ 30 ಸರಣಿ ಜಾಹೀರಾತುಗಳನ್ನು ಚಿತ್ರಿಕರಿಸಿತ್ತು. ಜನರು ಐಪಿಎಲ್ ಗಿಂತಲೂ ಈ ಜಾಹೀರಾತಿನ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದರು ಎನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಮಾತ್ರವಲ್ಲದೆ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲೂ ಇದು ಜನಾಕರ್ಷಣೆಯಾಗಿದ್ದವು.

ಝೂಝೂ ಜಾಹೀರಾತು ಅಷ್ಟೇ ಅಲ್ಲ. ಝೂಝೂ ಕ್ಯಾಲೆಂಡರ್‌ ಸೇರಿದಂತೆ ಬೇರೆ ಬೇರೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಹೀಗಾಗಿ ಈ ಜಾಹಿರಾತನ್ನು ನಿರ್ಮಾಣ ಮಾಡಿದ ಓ&ಎಂ (O&M) ಕಂಪೆನಿಯೇ ಝೂಝೂ ಕ್ಯಾಲೆಂಡರ್‌ನ್ನು ಕೂಡ ಬಿಡುಗಡೆ ಮಾಡಿದೆ. ಮಾತ್ರವಲ್ಲದೆ ಇತ್ತೀಚಿನ ವರ್ಷಗಳಲ್ಲಿ ಝೂಝೂ ನಿಂಜಾ ಕೂಡ ಜನರ ಮೆಚ್ಚುಗೆ ಗಳಿಸಿತ್ತು. ಸಿಮ್ ಕಾರ್ಡ್ ಇಲ್ಲದ ಸ್ಮಾರ್ಟ್ ಫೋನ್ ಒಂದನ್ನು ಹುಡುಗನೋರ್ವ ಪ್ರಿಯತಮೆಗೆ ಗಿಫ್ಟ್ ಕೊಟ್ಟಾಗ, ಸಿಮ್ ಕಾರ್ಡ್ ಇಲ್ಲವೆಂದು ಆಕೆ ಕೋಪಗೊಳ್ಳುತ್ತಾಳೆ.  ಆಗ ಹುಡುಗನನ್ನು ಕಾಪಾಡಲು ಹೊರಟ ಝೂಝೂ ನಿಂಜಾ, ಅವರಿರುವ ಸ್ಥಳಕ್ಕೆ ಹೊಸ ಸಿಮ್ ಕಾರ್ಡ್ ಅನ್ನು ಕೊಂಡೊಯ್ಯುತ್ತದೆ. ಈ ಜಾಹೀರಾತು ಪ್ರಪಂಚದಾದ್ಯಂತ ಟ್ರೆಂಡ್ ಆಗಿತ್ತು.

ಕಾಲಕ್ರಮೇಣ ಈ ಝೂಝೂ ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯವಾದವು. ಕೆಲವು ವರುಷಗಳ ಹಿಂದೆ ಫೇಸ್ ಬುಕ್, ಟ್ಟಿಟ್ಟರ್, ಆರ್ಕುಟ್, ಯೂಟ್ಯೂಬ್ ಸೇರಿದಂತೆ ಸರಿಸುಮಾರು 200 ಪೇಜ್ ಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಹಿಟ್ಸ್ ಗಳನ್ನು ಪಡೆಯುತ್ತಿದ್ದವು. ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಈ ಜಾಹೀರಾತುಗಳು ಅಚ್ಚಳಿಯದೇ ಉಳಿದಿದೆ.

ಈ ಜಾಹೀರಾತು ಕಂಡು  ಪ್ರಪಂಚದಾದ್ಯಂತ ಹಲವು ಪ್ರಸಿದ್ದ ವ್ಯಕ್ತಿಗಳು ಮೂಕವಿಸ್ಮಿತರಾಗಿದ್ದಾರೆ .ಮಾತ್ರವಲ್ಲದೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “In a world where we seem focused on a recession, an election, and most things dull and boring, the Zoozoo’s are a breath of fresh air”ಎಂದಿದ್ದಾರೆ.

-ಮಿಥುನ್ ಮೊಗೇರ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.