ಶೇರು ಹೂಡಿಕೆಯಿಂದ ಸಿರಿವಂತರಾಗಬೇಕೇ?ನೀವೂ ಬಫೆಟ್ ಬಗ್ಗೆ ತಿಳಿದುಕೊಳ್ಳಿ


Team Udayavani, Sep 17, 2018, 6:00 AM IST

warren-buffet2-600.jpg

ಶೇರು ಮಾರುಕಟ್ಟೆಯಲ್ಲಿ  ನೀವು ಎಷ್ಟು ಬೇಕಾದರೂ ಹಣ ಹೂಡಿ; ಆದರೆ ಎರಡು ನಿಯಮಗಳನ್ನು ಮಾತ್ರ ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ !

ಈ ಮಾತನ್ನು ಹೇಳಿದವರು ಯಾರೆಂಬುದು ಇಡಿಯ ಜಗತ್ತಿಗೇ ಗೊತ್ತಿದೆ. ಏಕೆಂದರೆ ಇದು ಅಷ್ಟು ಪ್ರಸಿದ್ಧವಾದ ಮಾತು. ಇದನ್ನು ಹೇಳಿದವರು ಜಾಗತಿಕ ಶೇರು ಮಾರುಕಟ್ಟೆಯ ದಂತ ಕಥೆ ಎನಿಸಿರುವ ವಿಶ್ವ ವಿಖ್ಯಾತ ಹೂಡಿಕೆದಾರರ ಗುರು, ವಿಶ್ವದ ಮೂರನೇ ಅತೀ ದೊಡ್ಡ ಸಿರಿವಂತ ವಾರನ್ ಬಫೆಟ್ ! 

ವಾರನ್ ಬಫೆಟ್ ಅವರು ನಿಜವಾದ ಅರ್ಥದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಗೌರವಾನ್ವಿತ ಗುರು ಎಂದೇ ಹೇಳಬೇಕು. ಬಫೆಟ್ ಅವರು ಈ ಬಗೆಯ ಅನೇಕ ಉಕ್ತಿಗಳು ಇಂದು ಹಿರಿಯ- ಕಿರಿಯ, ಎಲ್ಲ  ವಯೋವರ್ಗದ, ಎಲ್ಲ ಬಗೆಯ ಹೂಡಿಕೆದಾರರಿಗೆ, ಉದ್ಯಮಿಗಳಿಗೆ, ಸ್ಟಾರ್ಟ್ ಅಪ್ಗಳಿಗೆ ಮಾದರಿಯಾಗಿದ್ದಾರೆ; ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. 

ಹೂಡಿಕೆದಾರರಿಗೆ, ಉದ್ಯಮಿಗಳಿಗೆ, ಜನ ನಾಯಕರಿಗೆ ಮುಂತಾದ ಸಮಾಜದ ಸಕಲ ವರ್ಗದ ಜನರಿಗೆ ಬಫೆಟ್ ನುಡಿಮುತ್ತುಗಳು ಸದಾ ಉಲ್ಲೇಖನೀಯ. ಅವುಗಳಲ್ಲಿ ಕೆಲವು ಸ್ಯಾಂಪಲ್‌ ಗಳನ್ನು  ನಾವು ಈ ರೀತಿಯಾಗಿ ಇಲ್ಲಿ  ಉದಾಹರಿಸಬಹುದು :

1.  ನೀವೇನಾದರೂ ವಿಭಿನ್ನವಾದುದನ್ನು ಮಾಡಲು ಬಯಸಿದರೆ ನೆನಪಿನಲ್ಲಿಟ್ಟುಕೊಳ್ಳಿ : ಪ್ರತಿಷ್ಠೆ ನಿರ್ಮಾಣಕ್ಕೆ 20 ವರ್ಷಗಳು ಬೇಕು; ಆದರೆ ಅದನ್ನು ನಾಶ ಮಾಡುವುದಕ್ಕೆ ಕೇವಲ ಐದು ನಿಮಿಷಗಳು ಸಾಕು.

2.  ನಾನು ಶ್ರೀಮಂತ ವ್ಯಕ್ತಿಯಾಗುವೆನೆಂದು ನನಗೆ ಯಾವತ್ತೂ ಚೆನ್ನಾಗಿ ಗೊತ್ತಿತ್ತು; ಅದನ್ನು ನಾನು ಒಂದು ಕ್ಷಣಕ್ಕಾದರೂ ಶಂಕಿಸಿರಲಿಲ್ಲ. 

3. ಬದುಕಿನಲ್ಲಿ ನೀವೇನು ಮಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಮಾತ್ರವೇ  ರಿಸ್ಕ್ (ಅಪಾಯ) ಎದುರಾಗುತ್ತದೆ.

4. ಔದ್ಯಮಿಕ ಜಗತ್ತಿನಲ್ಲಿ ಯಾವತ್ತೂ ಹಿಂಬದಿಯ ದೃಶ್ಯ ಕಾಣಿಸುವ ಕನ್ನಡಿ  ಸ್ಪಷ್ಟವಾಗಿರುತ್ತದೆ; ಆದರೆ ಎದುರುಗಡೆಯ ದೃಶ್ಯ ನೋಡುವ ವಿಂಡ್ ಸ್ಕ್ರೀನ್  ಅಸ್ಪಷ್ಟವಾಗಿರುತ್ತದೆ. 

5.  ನೀವೇನು ಪಾವತಿಸುವಿರೋ ಅದು ಬೆಲೆ; ನೀವೇನು ಪಡೆಯುವಿರೋ ಅದು ಮೌಲ್ಯ. 

6. ಇವತ್ತು ನೀವು ನೆರಳಲ್ಲಿ ಕೂತಿರುವ ಮರವನ್ನು  ಬಹಳ ಹಿಂದೆ ಯಾರೋ ಗಿಡವಾಗಿ ಅದನ್ನು  ನೆಟ್ಟಿದ್ದರು ಎನ್ನುವುದನ್ನು ನೆನಪಿಟ್ಟುಕೊಳ್ಳಿ.

7. ನಾನು ಬಹಳ ದುಬಾರಿ ಸೂಟ್ ಗಳನ್ನು ಖರೀದಿಸುತ್ತೇನೆ; ಆದರೆ ಧರಿಸಿದಾಕ್ಷಣ ಅವು ಬಹಳ ಅಗ್ಗವಾಗಿ ಕಾಣಿಸುತ್ತವೆ.

8. ಅಬ್ಬರದ ಆರ್ಥಿಕ ಅಲೆಗಳು ಹಿಂದೆ ಸರಿದಾಗಲೇ ಯಾರು ನಗ್ನರಾಗಿ ಈಜುತ್ತಿದ್ದರು ಎಂಬುದು ನಿಮಗೆ ಗೊತ್ತಾಗುತ್ತದೆ.

9.  ಇಂದು ಹೂಡಿಕೆ ಮಾಡುವವನು ನಿನ್ನೆಯ ಪ್ರಗತಿಯಿಂದ ಲಾಭ ಮಾಡಲಾರ.

10. ಎಲ್ಲಿಯ ವರೆಗೆ ನೀವು ಬಹಳಷ್ಟು ತಪ್ಪುಗಳನ್ನು ಮಾಡುವುದಿಲ್ಲವೋ ಅಲ್ಲಿಯ ವರೆಗೆ ನೀವು ಬದುಕಿನಲ್ಲಿ ಕೆಲವೇ ಕೆಲವು ಕೆಲಸಗಳನ್ನು ಮಾಡಿದರೆ ಸಾಕಾಗುತ್ತದೆ. 

ಇಂತಹ ಜಗತ್ ಪ್ರಸಿದ್ಧ ಸರಳವೂ ಗಂಭೀರವೂ ಆಳವಾದ ಚಿಂತನೆಯ ನುಡಿಗಳಿಗೆ ಹೆಸರುವಾಸಿಯಾಗಿರುವ, ವಿಶ್ವದ ಮೂರನೇ ಅತ್ಯಂತ ಸಿರಿವಂತ ಹೂಡಿಕೆದಾರ, ಉದ್ಯಮಿ ವಾರನ್ ಬಫೆಟ್ ಅವರು ಹುಟ್ಟಿದ್ದು 1930ರಲ್ಲಿ.

ಈಗ 88ರ ಹರೆಯದಲ್ಲಿರುವ ಬಫೆಟ್  ಇಂದಿಗೂ ತಮ್ಮ ವಿಶ್ವ ಪ್ರಸಿದ್ಧ ಬರ್ಕ್ಶಯರ್ ಹ್ಯಾತ್ವೇ ಕಂಪೆನಿಯ ಸಿಇಓ ಆಗಿದ್ದಾರೆ. ಇವರ ಬದುಕಿನ ವೈಶಿಷ್ಟéವೆಂದರೆ ಚಿಕ್ಕಂದಿನಿಂದಲೂ ಇವರು ಅತ್ಯಂತ ಚುರುಕು, ಮೇಧಾವಿ, ಔದ್ಯಮಿಕ ಮನಸ್ಸಿನ ಚತುರ ಎನಿಸಿಕೊಂಡಿದ್ದರು. 

ವಾರನ್ ಬಫೆಟ್ ತನ್ನ 11ನೇ ವಯಸ್ಸಿನಿಂದಲೇ ಶೇರು ಹೂಡಿಕೆಯಲ್ಲಿ ತೊಡಗಿದ್ದರು ಎನ್ನುವುದು ಬಹಳ ಮುಖ್ಯ. ಅದೃಷ್ಟ ಮತ್ತು ಬುದ್ಧಿವಂತಿಕೆಯ ಅಪೂರ್ವ ಸಂಗಮ ಎನಿಸಿಕೊಂಡಿರುವ ಈ ಬಿಲಿಯಾಧಿಪತಿ ಹೂಡಿಕೆದಾರನ ಬದುಕೇ ರೋಚಕ; ಇಂದಿಗೂ ಜಗತ್ತಿನ ಯುವ ಹೂಡಿಕೆದಾರರಿಗೆ, ಉದ್ಯಮಿಗಳಿಗೆ ಇವರೇ ಆರಾಧ್ಯ ದೈವ. 

ವಾರನ್ ಬಫೆಟ್ “ಒರಾಕಲ್ ಆಫ್ ಒಮಾಹಾ’ ಎಂದೇ ಪ್ರಸಿದ್ಧರು.  1941ರಲ್ಲಿ ತನ್ನ 11ನೇ ವರ್ಷ ವಯಸ್ಸಿನಲ್ಲಿ ಬಫೆಟ್ “ಸಿಟೀಸ್ ಸರ್ವಿಸ್’ ಎಂಬ ತೈಲ ಸೇವಾ ಕಂಪೆನಿಯ ತಲಾ ಶೇರು 38 ಡಾಲರ್ ಬೆಲೆಗೆ ತನ್ನ ಬದುಕಿನ ಮೊದಲ ಈಕ್ವಿಟಿ ಶೇರುಗಳನ್ನು ಖರೀದಿಸಿದರು.

ಅಲ್ಲಿಂದ ಮೂರೇ ವರ್ಷದಲ್ಲಿ  ಶೇರು ಹೂಡಿಕೆಯ ಮೂಲಕ ಸಿರಿವಂತಿಕೆಯ ಒಂದೊಂದೇ ಮಜಲುಗಳನ್ನು ದಾಟಿ ತನ್ನ 14ನೇ ವರ್ಷ ಪ್ರಾಯದಲ್ಲಿ ತನ್ನ ಮೊದಲ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರು. ಅದಾಗಿ ತನ್ನ ಹೈಸ್ಕೂಲ್ ಶಿಕ್ಷಣ ಪೂರೈಸಿದ ಬಫೆಟ್ ಅಮೆರಿಕದ ನೆಬ್ರಾಸ್ಕಾದ ಒಮಾಹಾದಲ್ಲಿ 40 ಏಕರೆ ನಿವೇಶನವನ್ನು ಖರೀದಿಸಿದರು. 

ಶೇರು ಹೂಡಿಕೆಯ ಮೇಲೆಯೇ ತನ್ನ ಸಿರಿವಂತಿಕೆಯ ಸೌಧವನ್ನು ಕಟ್ಟುತ್ತಿದ್ದ ವಾರನ್ ಬಫೆಟ್  1962ರ ಡಿಸೆಂಬರ್ನಲ್ಲಿ,  ತನ್ನ 32ನೇ ವರ್ಷ ಪ್ರಾಯದಲ್ಲಿ  ಪ್ರಸಿದ್ಧ  ಬರ್ಕ್ಶಯರ್ ಹ್ಯಾತ್ವೇ ಕಂಪೆನಿಯ ಶೇರು ಖರೀದಿಸಲು ಆರಂಭಿಸಿದರು.

1965ರ ವೇಳೆಗೆ ಬಫೆಟ್ ಈ ಕಂಪೆನಿಯ ಎಷ್ಟು ಶೇರುಗಳನ್ನು ಖರೀದಿಸಿದ್ದರೆಂದರೆ  ಆ ಕಂಪೆನಿ ಮೇಲೆ ಆಡಳಿತ ನಿಯಂತ್ರಣ ಹೊಂದುವುದಕ್ಕೆ ಅವು ಸಾಕಾಗಿದ್ದವು . 1965ರ ನಡುವಿನಲ್ಲಿ ಬಫೆಟ್ ಬರ್ಕ್‌ ಶಯರ್‌ ಹ್ಯಾತ್‌ ವೇ ಕಂಪೆನಿಯನ್ನು ಖರೀದಿಸಿಯೇ  ಬಿಟ್ಟರು.  ಆಗ ಕಂಪೆನಿಯ ಉಪಾಧ್ಯಕ್ಷರಾಗಿದ್ದ  ಚಾರ್ಲಿ ಮುಂಗೆರ್ ಅವರನ್ನೇ ಬಫೆಟ್ ಬೆಂಬಲಿಸಿ ಮುಂದುವರಿಸಿದರು. 

1972ರಲ್ಲಿ ಬಫೆಟ್ ಅವರು 25 ದಶಲಕ್ಷ ಡಾಲರ್ಗೆ ಅಮೆರಿಕದ ಪ್ರಸಿದ್ಧ  ಕ್ಯಾಂಡಿ ಉತ್ಪಾದಕ ಮತ್ತು ವಿತರಕ ಸಂಸ್ಥೆಯಾದ ಸೀಸ್ ಕ್ಯಾಂಡೀಸ್ ಸಂಸ್ಥೆಯನ್ನು ಖರೀದಿಸಿದರು. ಬಫೆಟ್ಗೆ 43 ವರ್ಷ ತುಂಬಿದಾಗ ಅವರು 100 ದಶಲಕ್ಷ ಡಾಲರ್ ಸಂಪತ್ತಿನ ಒಡೆಯರಾಗದ್ದರು. 

ಬಫೆಟ್ಗೆ 52 ತುಂಬಿದಾಗ ಅವರು ಅಮೆರಿಕದ ಅತ್ಯಂತ ಸಿರಿವಂತ ವ್ಯಕ್ತಿ ಎಂದು ಫೋರ್ಬ್ಸ್ ಪಟ್ಟಿಗೆ ಮೊತ್ತ ಮೊದಲ ಬಾರಿಗೆ ಸೇರ್ಪಡೆಗೊಂಡರು. ಆಗಲೇ ಅವರ ಸಂಪತ್ತು 250 ದಶಲಕ್ಷ ಡಾಲರ್ ಮೌಲ್ಯ ದಾಟಿತ್ತು. ಅಲ್ಲಿಂದ ಮೂರೇ ವರ್ಷದ ಬಳಿಕ ಬಫೆಟ್ ಅವರ ಸಂಪತ್ತು ನಾಲ್ಕು ಪಟ್ಟು ಬೆಳೆದು ಅವರು ಬಿಲಿಯಾಧಿಪತಿ ಎನಿಸಿಕೊಂಡರು. 

1989ರಿಂದ 1999ರ ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಬಫೆಟ್ ಅವರ ಸಂಪತ್ತಿನ ನಿವ್ವಳ ಮೌಲ್ಯ ಹತ್ತು ಪಟ್ಟು ಹೆಚ್ಚಾಯಿತು. ಅವರಿಗೆ 69 ವರ್ಷ ತುಂಬಿದಾಗ (1997ರಲ್ಲಿ ) ಅವರ ಸಂಪತ್ತಿನ ನಿವ್ವಳ ಮೌಲ್ಯ 36 ಶತಕೋಟಿ ಡಾಲರ್ ಆಯಿತು. 

ವಾರನ್ ಬಫೆಟ್ ಅವರು  ಕಳೆದ ಹಲವು ದಶಕಗಳಿಂದ ತಮ್ಮ ಒಡೆತನದ ಬರ್ಕ್‌ ಶಯರ್‌ ಹ್ಯಾತ್‌ ವೇ ಕಂಪೆನಿಯಿಂದ ಪ್ರತೀ ತಿಂಗಳೂ ಒಂದು ಲಕ್ಷ ಡಾಲರ್ ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಯಾವುದೇ ಬೋನಸ್ ಅಥವಾ ಯಾವುದೇ ಬಗೆಯ ಇತರ ಭತ್ಯೆಗಳನ್ನು ಪಡೆಯುತ್ತಿಲ್ಲ. ವಿಶೇಷವೆಂದರೆ ಬಫೆಟ್ ಪಡೆಯುತ್ತಿರುವ ಈ ವೇತನವು ಅವರದ್ದೇ ಕಂಪೆನಿಯಲ್ಲಿ ದುಡಿಯುತ್ತಿರುವ ಕೆಲವು ವಿಶಿಷ್ಟ ನೌಕರರ ವೇತನಕ್ಕಿಂತ ಎರಡು ಪಟ್ಟ ಕಡಿಮೆ ಎನ್ನುವುದು ಕೂಡ ಗಮನಾರ್ಹ ! 

ಇಂದು ವಾರನ್ ಬಫೆಟ್ ಏನನ್ನಾದರೂ ಹೇಳಿದರೆ, ಯಾವುದೇ ಕಂಪೆನಿಯ ಶೇರನ್ನು ಖರೀದಿಸಿದರೆ, ಯಾವುದೇ ಶೇರನ್ನು ಮಾರಿದರೆ ಅದು ವಿಶ್ವದ ಬಹಳ ದೊಡ್ಡ ಸುದ್ದಿಯಾಗುತ್ತದೆ. ಏಕೆಂದರೆ ಅವರು ವಿಶ್ವದ ಮಹಾನ್ ಇನ್ವೆಸ್ಟ್ಮೆಂಟ್ ಗುರು ! 

ಹಾಗಿದ್ದರೂ ಇದೇ ಬಫೆಟ್ ಗೆ ಹಾರ್ವರ್ಡ್ ಬ್ಯುಸಿನೆಲ್ ಸ್ಕೂಲ್ಗೆ ಪ್ರವೇಶ ನಿರಾಕರಿಸಲ್ಪಟ್ಟಿತ್ತು.  ಸೀಟಿಗಾಗಿ ಕಾಲೇಜಿಗೆ ಸಂದರ್ಶನಕ್ಕೆ ಬಂದಿದ್ದ ಬಫೆಟ್ ಅವರನ್ನು  ಕಾಣುತ್ತಲೇ ಕಾಲೇಜಿನ ಸಿಬಂದಿಗಳು  “ನೀನಂತೂ ಹಾರ್ವರ್ಡ್ಗೆ ಹೋಗೋದಿಲ್ಲ; ಅದನ್ನು  ಮರೆತು ಬಿಡು’ ಎಂದು ಹೀಯಾಳಿಸಿದ್ದರು.  

ಅಂದ ಹಾಗೆ ಬಫೆಟ್ ಕೂಡ ತನ್ನ ಪಾಲಿನ ಇನ್ವೆಸ್ಟ್ಮೆಂಟ್ ಗುರುಗಳೆಂದು ಇಬ್ಬರನ್ನು ಪರಿಗಣಿಸಿದ್ದರು. ಅವರೆಂದರೆ ಬೆಂಜಮಿನ್ ಗ್ರಹಾಂ (ದಿ ಫಾದರ್ ಆಫ್ ವ್ಯಾಲ್ಯೂ ಇನ್ವೆಸ್ಟಿಂಗ್)  ಮತ್ತು ಡೇವಿಡ್ ಡೋಡ್. ಇವರಿಬ್ಬರೂ ಕೊಲಂಬಿಯಾ ಬ್ಯುಸಿನೆಸ್ ಸ್ಕೂಲ್‌ ನ ಪ್ರೊಫೆಸರ್‌ ಗಳು .

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.