ಕಾಸ್ಟಿಂಗ್ ಕೌಚ್ ವಿರಾಟ್ ರೂಪ; ಇದು ಸಿನಿಲೋಕದ ಮೊದಲ sex ಸ್ಕ್ಯಾಂಡಲ್
Team Udayavani, Aug 9, 2018, 2:05 PM IST
ಇತ್ತೀಚೆಗೆ ಹೊಸದಾಗಿ ರೂಪದರ್ಶಿಯಾಗಿಯೋ ಅಥವಾ ಕಿರುಚಿತ್ರಗಳಲ್ಲಿ ನಟಿಸಿದ್ದವರಿಗೆ ಹೀಗೆ ಕರೆ ಮಾಡಿ ಸಿನಿಮಾಗಳಲ್ಲಿ ನಟಿಸುವ ಅವಕಾಶದ ಬಗ್ಗೆ ವಿಚಾರ ವಿನಿಮಯ ನಡೆಸುವುದು ಸಹಜ. ಹೀಗೆ ನನಗೆ ಒಂದು ಸಂಜೆ ಚೆನ್ನೈನ ಒಬ್ಬ ಏಜೆಂಟ್ ಕರೆ ಮಾಡಿದ್ದ.. ತಾನು ಕಾಸ್ಟಿಂಗ್ ಏಜೆನ್ಸಿ ಜೊತೆ ಮತ್ತು ಸ್ವಂತವಾಗಿ ಕಾರ್ಯನಿರ್ವಹಿಸುವುದಾಗಿ ಆತ ಹೇಳಿಕೊಂಡ..ತಾನು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ರೂಪದರ್ಶಿಗಳ ಜೊತೆ ಸಂಪರ್ಕದಲ್ಲಿರುವುದಾಗಿಯೂ ವಿವರಿಸಿದ್ದ. ನಿಮ್ಮ ಜೊತೆ ಕೆಲಸ ಮಾಡಲು ಇಚ್ಚಿಸುವುದಾಗಿ ಹೇಳಿದ. ಕಾಸ್ಟಿಂಗ್ ಏಜೆನ್ಸಿ ಮೂಲಕವಾದರು ಸರಿ ಅಥವಾ ತನ್ನ ಜೊತೆ ಇಂಡಿಪೆಂಡೆಂಟ್ ಆದರೂ ಕಾರ್ಯನಿರ್ವಹಿಸಬಹುದು ಎಂದ ಆತ ತನಗೆ ಸಿಗುವ ಕಮಿಷನ್, ಹೇಗೆ ಗೆಳೆತನ ಕೆಲಸ ಮಾಡುತ್ತದೆ..ಹೊಸ ರೂಪದರ್ಶಿಗಳಿಗೆ, ಕಿರುಚಿತ್ರಗಳಲ್ಲಿ ನಟಿಸಿದವರಿಗೆ ಸಣ್ಣ ಬಜೆಟ್ ನ ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ, ಫೋಟೋ ಶೂಟ್ ಗಳಲ್ಲಿ ಅವಕಾಶ ದೊರೆಯುವ ಬಗ್ಗೆ ವಿವರ ನೀಡಿದ.
ಈ ಎಲ್ಲಾ ವಿವರಗಳನ್ನು ಕೇಳಿದ ಮೇಲೆ ನನಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸಿತು. ನಾನು ನಟನೆಯನ್ನು ತುಂಬಾ ಪ್ರೀತಿಸುತ್ತಿದ್ದೆ, ಒಂದು ವೇಳೆ ಇದರಿಂದ ನನಗೆ ನಟಿಸುವ ಅವಕಾಶ ಸಿಕ್ಕರೆ ತುಂಬಾ ಖುಷಿ ಎಂದು ಆತನ ಬಳಿ ಆಫರ್ ಬಗ್ಗೆ ಮಾತನಾಡಲು ತೊಡಗಿದೆ. ಎಲ್ಲಾ ಕೇಳಿಸಿಕೊಂಡ ಮೇಲೆ ಆತ ತುಂಬಾ ಗಂಭೀರವಾಗಿ ಹೇಳಿದ, ಆದರೆ ಈ ಎಲ್ಲಾ ವಿಚಾರಕ್ಕೂ ಮುನ್ನ ನಾನು ನಿಮಗೆ ಸಿನಿಮಾ ಇಂಡಸ್ಟ್ರೀ ಮತ್ತು ಹೇಗೆ ಅದು ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಹೇಳಬೇಕು ಎಂದ..ನೋಡಿ ಈ ಇಂಡಸ್ಟ್ರೀಯಲ್ಲಿ ಎರಡು ವಿಧದ ಪ್ರೊಜೆಕ್ಟ್ ಗಳಿವೆ ಎಂದು ಹೇಳಲು ಶುರು ಮಾಡಿದ.. ಒಂದು ಕ್ಲೀನ್ ಪ್ರೊಜೆಕ್ಟ್ಸ್ ಮತ್ತೊಂದು ಕಾಂಪ್ರೋಮೈಸ್ ಪ್ರೊಜೆಕ್ಟ್ಸ್…ನೀವು ಎರಡನ್ನೂ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ನೀವು ಕೇವಲ ಕ್ಲೀನ್ ಪ್ರೊಜೆಕ್ಟ್ ಒಂದನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂದು ವಿವರಿಸಿದ.
ಇದನ್ನು ಕೇಳಿದ ಮೇಲೆ ನಾನು ತುಂಬಾ ಗೊಂದಲಕ್ಕೊಳಗಾದೆ..ಏನ್ ಕಚಡಾ ಇದು ಕಾಂಪ್ರೋಮೈಸ್ ಪ್ರಾಜೆಕ್ಟ್..ಈತ ಹೇಳೋದರಲ್ಲೇ ಎಲ್ಲೋ ಯಡವಟ್ಟು ಮಾಡಿಕೊಂಡಿದ್ದಾನೆ ಎಂದುಕೊಂಡು ಈ ಪ್ರಾಜೆಕ್ಟ್ ಬಗ್ಗೆ ಮತ್ತೊಮ್ಮೆ ಸರಿಯಾಗಿ ಹೇಳು ಎಂದೆ..ನೋಡಿ ಏನ್ ಬೇಕಾದ್ರೂ ಹೇಳಿ ಇದನ್ನು ಕಮಿಟ್ ಮೆಂಟ್, ಪಾರ್ಟಿ, ಸೆಕ್ಸ್, ಸಂಬಂಧ..ಹೀಗೆ ನೀವು ನಿರ್ಮಾಪಕ, ನಿರ್ದೇಶಕನ ಜೊತೆ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು ಅಷ್ಟೇ ಎಂದು ಹೇಳಿಬಿಟ್ಟ…ಇದು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ನಟಿಯಾಗಬೇಕೆಂದುಕೊಂಡಿದ್ದ ರೂಪದರ್ಶಿಯೊಬ್ಬಳ ಕಥೆ..ಇದನ್ನು ಇಲ್ಲಿ ನಾನು ರೂಪಕವಾಗಿ ಬಳಸಿಕೊಂಡಿದ್ದೇನೆ..
ಹೌದು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟ, ನಟಿಯರು ತಮ್ಮ ಅಭಿಪ್ರಾಯವನ್ನು ಹೊರಹಾಕಿರುವುದನ್ನು ಕೇಳಿದ್ದೀರಿ. ಇದು ಸಿನಿಮಾ ಕ್ಷೇತ್ರವನ್ನು ಮಾತ್ರ ಆವರಿಸಿಲ್ಲ. ರೂಪದರ್ಶಿಯಾಗಲು, ನಟಿಯಾಗಲು, ಉನ್ನತ ಹುದ್ದೆ ಪಡೆಯಲು, ಕಾರ್ಪೋರೇಟ್ ಹೀಗೆ ಬಹು ಕ್ಷೇತ್ರಗಳಲ್ಲಿ ಈ ಕಾಸ್ಟಿಂಗ್ ಕೌಚ್ ಆವರಿಸಿಕೊಂಡಿದೆ. 2006ರಲ್ಲಿ ಬಿಡುಗಡೆಯಾಗಿದ್ದ ಮಧುರ್ ಭಂಡಾರ್ಕರ್ ನಿರ್ದೇಶನದ ಕಾರ್ಪೋರೇಟ್ ಎಂಬ ಅದ್ಭುತ ಸಿನಿಮಾ ಕಾರ್ಪೋರೇಟ್ ಜಗತ್ತಿನೊಳಗಿನ ನಿಜರೂಪವನ್ನು ಅನಾವರಣಗೊಳಿಸಿತ್ತು.
ಈ ಕಾಸ್ಟಿಂಗ್ ಕೌಚ್ ಯಾವಾಗ ಆರಂಭವಾಯಿತು ಗೊತ್ತಾ?
ಕಾಸ್ಟಿಂಗ್ ಕೌಚ್ ಸಿಂಡ್ರೋಮ್ ಅಥವಾ ಕಾಸ್ಟಿಂಗ್ ಕೌಚ್ ಮನಸ್ಥಿತಿ ಎಂಬುದು ಅದು ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬೇಡಿಕೆ ಇಡೋದು,.ಅದನ್ನು ಆಮೀಷದ ಅಥವಾ ಬೇರೆ, ಬೇರೆ ರೀತಿಯಲ್ಲಿ ಕಾಸ್ಟಿಂಗ್ ಕೌಚ್ ಅನ್ನು ಬಳಸಿಕೊಳ್ಳಲಾಗುತ್ತದೆ. ಹಾಲಿವುಡ್ ನಲ್ಲಿ 1910ರ ಸುಮಾರಿಗೆ ಇಂತಹ ಘಟನೆಗಳು ನಡೆದಿರುವ ಬಗ್ಗೆ ಖ್ಯಾತ ನಟಿಯರೇ ತಮ್ಮ ಹಳೆಯ ಘಟನೆಗಳನ್ನು ಹೊರಹಾಕುವ ಮೂಲಕ ಜಗಜ್ಜಾಹೀರು ಮಾಡಿದ್ದರು.
ಅದು ಹಾಲಿವುಡ್ ನ ಮೊತ್ತ ಮೊದಲ ಸೆಕ್ಸ್ ಸ್ಕ್ಯಾಂಡಲ್!
ಹಾಲಿವುಡ್ ನಲ್ಲಿ 1921ರಲ್ಲಿ ಮೊತ್ತ ಮೊದಲ ಕಾಸ್ಟಿಂಗ್ ಕೌಚ್ ನ ವಿರಾಟ್ ರೂಪದ ರೇಪ್ ಪ್ರಕರಣ ನಡೆದಿತ್ತು. ಹಾಲಿವುಡ್ ನ ಮೊದಲ ಬಹು ಬೇಡಿಕೆಯ ನಟ ರೋಸ್ಕೋಯ್ ಫ್ಯಾಟೈ ಅರ್ಬಕ್ಲೆ ನಟಿ ವರ್ಜೀನಿಯಾ ರಾಪ್ಪ್ ಮೇಲೆ ಅತ್ಯಾಚಾರ ಎಸಗಿಬಿಟ್ಟಿದ್ದ. ಒಂದು ವಾರದ ಬಳಿಕ ನಟಿ ರಾಪ್ಟ್ ನಿಧನ ಹೊಂದಿದ್ದಳು. ಇದು ಹಾಲಿವುಡ್ ನಲ್ಲಿ ನಡೆದ ಮೊತ್ತ ಮೊದಲ ಸೆಕ್ಸ್ ಸ್ಕ್ಯಾಂಡಲ್. ಈ ಪ್ರಕರಣದಲ್ಲಿ ನಟ ಅರ್ಬಕ್ಲೆ ಮೂರು ವಿಚಾರಣೆಯ ಬಳಿಕ ಖುಲಾಸೆಗೊಂಡಿದ್ದ. ಅದೇ ರೀತಿ ಅಮೆರಿಕದ ಮಾಜಿ ಖ್ಯಾತ ನಿರ್ಮಾಪಕ ಹಾರ್ವೆ ವೆಯಿನ್ ಸ್ಟೈನ್ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಸಿನಿಮಾದಲ್ಲಿ ನಟಿಸುವ ಅವಕಾಶ ಕೇಳಿ ಬಂದ ನಟಿಯರಿಗೆ ಕಾಸ್ಟಿಂಗ್ ಕೌಚ್ ಬಿಸಿ ತಟ್ಟಿದ್ದವು. ಇಂತಹ ಘಟನೆ ಬಗ್ಗೆ ನಟ ಹಾಗೂ ನಟಿಯರು ತಮ್ಮ ಅನುಭವಗಳನ್ನು ಹೊರಹಾಕುತ್ತಾರೆ. ಆದರೆ ಆ ರೀತಿ ಕಿರುಕುಳ ಕೊಟ್ಟವರ ಹೆಸರನ್ನು ಹೇಳಲು ನಿರಾಕರಿಸುತ್ತಾರೆ..ಯಾಕೆಂದರೆ ಅಲ್ಲಿ ಭಯ ಇದ್ದಿರುತ್ತದೆ. ಇದರಿಂದ ಅವಕಾಶ ಕಳೆದುಕೊಳ್ಳುವ ಅಥವಾ ಬೆದರಿಕೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದ ಮೆಟ್ರೋ ಲೇಖನ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.