ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ ಏನರ್ಥ ? ಅಸಲಿಗೇ ಸಂಚಕಾರ ?


Team Udayavani, Mar 11, 2019, 12:30 AM IST

sensex-headache-700.jpg

ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿ ಅಲ್ಲದೆ ಬೇರೇನೂ ಅಲ್ಲ ಎಂದು ಹಲವರು ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಇದು ನಿಜವೇ ಎಂಬ ಪ್ರಶ್ನೆ ಸಾಮಾನ್ಯ ಹೂಡಿಕೆದಾರರನ್ನು ಕಾಡುವುದು ಸಹಜವೇ !

ನಮ್ಮ ವಯಸ್ಸಿಗೂ ನಮ್ಮ ಹೂಡಿಕೆಗೆ ಇರುವ ನಿಕಟ ನಂಟಿನಲ್ಲಿ  ರಿಸ್ಕ್ ಫ್ಯಾಕ್ಟರ್‌ ಎನ್ನುವುದು ಪ್ರಧಾನ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಹೂಡಿಕೆಯಲ್ಲಿ ರಿಸ್ಕ್ ಫ್ಯಾಕ್ಟರ್‌ ಎಂದರೆ ನಮ್ಮ ಅಸಲು ಮೊತ್ತವನ್ನೇ ನಾವು ಕಳೆದುಕೊಳ್ಳುವ ಭೀತಿ ಅಲ್ಲದೆ ಬೇರೇನೂ ಅಲ್ಲ. ನಮ್ಮ ಹೂಡಿಕೆ ಮೇಲಿನ ಲಾಭ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಸಿಗುವುದನ್ನು ರಿಸ್ಕ್ ಎಂದು ಹೇಳಲಾಗುವುದಿಲ್ಲ. ರಿಸ್ಕ್ ಎಂದರೆ ನೇರವಾಗಿ ನಾವು ಹೂಡುವ ಅಸಲು ಮೊತ್ತಕ್ಕೇ ಬರುವ ಸಂಚಕಾರ ಎಂದೇ ತಿಳಿಯಬೇಕಾಗುತ್ತದೆ. 

ಉದ್ಯೋಗಕ್ಕೆ ತೊಡಗಿದಾಕ್ಷಣ ಸಿಗುವ ತಿಂಗಳ ಸಂಬಳದಲ್ಲಿ ಹೆಚ್ಚಿನ ಪ್ರಮಾಣವನ್ನು ಉಳಿತಾಯ ಮಾಡಲು ನಮಗೆ ಸಾಧ್ಯವಾಗುವುದು ನಮ್ಮ ವಯಸ್ಸಿನ ಕಾರಣಕ್ಕೆ. 25-30ರ ವಯೋ ವರ್ಗದಲ್ಲಿ  ಉದ್ಯೋಗ ಸಿಕ್ಕಿದಾಗ ಬದುಕಿನಲ್ಲಿ ಆಗಷ್ಟೇ ಸೆಟಲ್‌ ಆಗುವ ಹಂತದಲ್ಲಿ ನಾವಿರುವುದರಿಂದ ಹೆಚ್ಚಿನ ಪ್ರಮಾಣದ ಉಳಿತಾಯ ನಮಗೆ ಸಾಧ್ಯವಾಗುತ್ತದೆ.

 

ಈ ವಯೋ ವರ್ಗದಲ್ಲಿ ಹೆಚ್ಚಿನವರು ಇನ್ನೂ ಬ್ಯಾಚುಲರ್‌ ಆಗಿರುತ್ತಾರೆ; ಉದ್ಯೋಗ ರಂಗದಲ್ಲಿ ಮುಂದಿನ ಮೆಟ್ಟಲುಗಳನ್ನು ಏರುವ ತವಕ ಇರುತ್ತದೆ. ದೊಡ್ಡ ಹುದ್ದೆ, ದೊಡ್ಡ ಅಧಿಕಾರ, ಕೈತುಂಬ ಸಂಬಳ ಇತ್ಯಾದಿಗಳನ್ನು ಸಾಕ್ಷಾತ್ಕರಿಸುವ ಆಕಾಂಕ್ಷೆ, ಹಂಬಲ, ಗುರಿ ಇರುವುದು ಸಾಮಾನ್ಯ.

ಹಾಗಾಗಿ ಈ ವಯೋ ವರ್ಗದ ಹೆಚ್ಚಿನವರು ಬದುಕಿನಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಮನೋಸ್ಥಿತಿಯಲ್ಲಿರುತ್ತಾರೆ. ಹೂಡಿಕೆ ವಿಷಯದಲ್ಲೂ ಈ ರಿಸ್ಕ್ ಕೆಲಸ ಮಾಡುತ್ತದೆ. ಹೇಗೆಂದರೆ ಹೆಚ್ಚು ರಿಸ್ಕ್, ಹೆಚ್ಚು ಲಾಭ ವಿರುವ ಶೇರುಗಳಲ್ಲಿ ಹಣ ಹೂಡುವುದಕ್ಕೆ ಈ ವಯೋ ವರ್ಗದವರು ಮುನ್ನುಗ್ಗುತ್ತಾರೆ.

ಬದುಕಿನಲ್ಲಿ ಸ್ವಂತ ಮನೆ, ಕಾರು, ವಿವಾಹ ಇತ್ಯಾದಿ ಗುರಿಗಳನ್ನು ಸಾಧ್ಯವಿರುವಷ್ಟು ಬೇಗನೆ ಸಾಧಿಸಬೇಕೆಂದ ತವಕದಲ್ಲಿ ಹೆಚ್ಚು ರಿಸ್ಕ್ ಮತ್ತು ಹೆಚ್ಚು ಲಾಭ ವಿರುವ ಶೇರು ಹೂಡಿಕೆಯೇ ಉಳಿದೆಲ್ಲ ಬಗೆಯ ಹೂಡಿಕೆಗಳಿಗಿಂತ ಈ ವಯೋ ವರ್ಗದವರಿಗೆ ಆಕರ್ಷಕವಾಗಿ ಕಾಣುತ್ತದೆ ಎನ್ನುವುದು ಸಹಜ ಮತ್ತು ಸತ್ಯ. 

ಸಾಮಾನ್ಯವಾಗಿ 40ರಿಂದ 50ರ ಹರೆಯದೊಳಗೆ ಸ್ವಂತ ಮನೆ, ಕಾರು ಇತ್ಯಾದಿ ಕನಸುಗಳನ್ನು ಸಾಕಾರಗೊಳಿಸಬಲ್ಲವರು ಈ ವಯೋ ವರ್ಗದಲ್ಲಿ ತಮ್ಮ ಹೂಡಿಕೆಯನ್ನು ಮ್ಯೂಚುವಲ್‌ ಫ‌ಂಡ್‌, ಇಎಲ್‌ಎಸ್‌ಎಸ್‌ ಸ್ಕೀಮು, ಚಿನ್ನ ಖರೀದಿಯ ಗೋಲ್ಡ್‌ ಇಟಿಎಫ್ ಮೊದಲಾದ ಯೋಜನೆಗಳಲ್ಲಿ ಸಂತುಲನೆಯ ರೂಪದಲ್ಲಿ ಮಾಡುತ್ತಾರೆ.

ಎಲ್ಲ ಹಣ್ಣುಗಳನ್ನು ಒಂದೇ ಬುಟ್ಟಿಯಲ್ಲಿ ಇರಿಸುವುದು ಅಪಾಯಕಾರಿ ಎಂಬ ಎಚ್ಚರಿಕೆಯ ನುಡಿಯನ್ನು ಈ ವಯೋವರ್ಗದಲ್ಲಿ ವಿವೇಕಯುತ ಹೂಡಿಕೆದಾರರು ಅನುಸರಿಸುತ್ತಾರೆ. ಇದರ ಅರ್ಥವೇನೆಂದರೆ ಶೇರುಗಳ ಮೇಲಿನ ರಿಸ್ಕೀ ಹೂಡಿಕೆಯನ್ನು ಅವರು ಕಡಿಮೆ ಮಾಡುತ್ತಾ ಬಂದಿರುತ್ತಾರೆ. ನಮಗೆ ಅಸಲು ಹೂಡಿಕೆ ಮೊತ್ತ ಭದ್ರವಿರಬೇಕು; ಆಕರ್ಷಕ ಲಾಭವೂ ಕೈಸೇರಬೇಕು ಎಂಬ ವಿವೇಕದಲ್ಲಿ 40-50ರ ವಯೋವರ್ಗದವರು ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಾರೆ. 

50ರಿಂದ 60ರ ವಯೋವರ್ಗದವರು ನಿವೃತ್ತಿಯ ಕಡೆಗೆ ಸಾಗುವ ಮಾರ್ಗದಲ್ಲಿರುತ್ತಾರೆ. ಹಾಗಾಗಿ ಹೂಡಿಕೆಯ ವಿಷಯದಲ್ಲಿ ಈ ವರ್ಗದವರು ರಿಸ್ಕ್ ಫ್ಯಾಕ್ಟರ್‌ ಶೂನ್ಯ ವಿರುವ ಹೂಡಿಕೆ ಮಾರ್ಗವನ್ನು ಅನುಸರಿಸುವುದು ಸಹಜವೇ.

ಈ ವಯೋಮಿತಿಯ ಹೆಚ್ಚಿನವರು ಈ ಹಂತದಲ್ಲಿ ಮ್ಯೂಚುವಲ್‌ ಫ‌ಂಡ್‌, ಸರಕಾರಿ ಬಾಂಡ್‌, ಬ್ಯಾಂಕ್‌ ನಿರಖು ಠೇವಣಿ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಕಾರಣ, ಈ ಸ್ಕೀಮುಗಳಲ್ಲಿ ಅಸಲು ಮೊತ್ತ ಭದ್ರವಾಗಿರುವುದರಿಂದ ನಿಶ್ಚಿಂತೆಯ ಹೂಡಿಕೆ ಎಂದು ಅವುಗಳನ್ನು ಈ ವರ್ಗದವರು ಪರಿಗಣಿಸುತ್ತಾರೆ. ಅದು ಸಹಜವೇ ಆಗಿರುತ್ತದೆ. 

ಈ ವಯೋ ವರ್ಗದವರಲ್ಲಿ  ಅತ್ಯಧಿಕ ಸಂಖ್ಯೆಯ ಜನರು ವಿಆರ್‌ಎಸ್‌ ತೆಗೆದುಕೊಂಡಿರುತ್ತಾರೆ ಎನ್ನುವುದು ಕೂಡ ನಿಜವೇ ಆಗಿರುತ್ತದೆ. ಆ ಪ್ರಕಾರ ತಮ್ಮ ಕೈಗೆ ದೊಡ್ಡ ಮೊತ್ತವಾಗಿ ಸಿಗುವ ಗ್ರ್ಯಾಚುಯಿಟಿ, ಭವಿಷ್ಯ ನಿಧಿ, ಲೀವ್‌ ಸ್ಯಾಲರಿ ಮುಂತಾದ ಬಗೆಯ ಹಣವನ್ನು ಎಲ್ಲಿ, ಹೇಗೆ, ನಿಶ್ಚಿಂತೆ ಮತ್ತು ಸುಭದ್ರತೆಯೊಂದಿಗೆ ಹೂಡಬಹುದು ಎಂಬ ಬೃಹದಾಕಾರದ ಪ್ರಶ್ನೆಯನ್ನು ಎದುರಿಸುತ್ತಾರೆ. ಹಾಗಿರುವಾಗ ಈ ವಯೋ ವರ್ಗದವರಿಗೆ ಎದ್ದು ಕಾಣುವ ಸುಭದ್ರ ಹೂಡಿಕೆಯ ಮಾಧ್ಯಮ ಭಾರತ ಸರಕಾರದ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಎನ್ನುವುದು ನಿರ್ವಿವಾದ. 

ಆ ಪ್ರಕಾರ ನಾವಿಲ್ಲಿ ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌ ಸ್ಕೀಮುಗಳ ಬಗ್ಗೆ ದೃಷ್ಟಿ ಹರಿಸಬಹುದು. ಏಕೆಂದರೆ ಇವುಗಳಲ್ಲಿನ ಹೂಡಿಕೆಯು ಸುಭದ್ರ, ಆಕರ್ಷಕ ಮತ್ತು ನಿಶ್ಚಿಂತೆಯದ್ದಾಗಿರುತ್ತದೆ. 

ಪೋಸ್ಟ್‌ ಆಫೀಸ್‌ ಸೇವಿಂಗ್‌ ಸ್ಕೀಮುಗಳಲ್ಲಿನ ಹೂಡಿಕೆಯ ಕನಿಷ್ಠ ಶೇ.6.6ರಿಂದ ಶೇ.8.3ರ ವರೆಗಿನ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ ಎಂಬುದನ್ನು ನಾವು ಗಮನಿಸಬೇಕು. ಅಂತೆಯೇ ದೇಶಾದ್ಯಂತದ 1,55,000 ಅಂಚೆ ಕಚೇರಿಗಳ ಮೂಲಕ ಈ ಸೇವೆ ಗ್ರಾಹಕರಿಗೆ ಲಭ್ಯವಿರುತ್ತದೆ.

ಪೋಸ್ಟ್‌ ಆಫೀಸ್‌ ಸೇವಿಂಗ್‌ ಸ್ಕೀಮುಗಳನ್ನು ನಾವು ಒಂದೊಂದಾಗಿ ಅವಲೋಕಿಸುವ ಯತ್ನದಲ್ಲಿ ನಾವು ಮೂಲ ಉಳಿತಾಯ ಖಾತೆಯ ಸ್ವರೂಪವನ್ನು ಅರಿತಿರಿವುದು ಅಗತ್ಯ.

ಅಂಚೆ ಇಲಾಖೆಯ ಯಾವುದೇ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸುವ ಮುನ್ನ ಮೂಲತಃ ಒಂದು ಉಳಿತಾಯ ಖಾತೆಯನ್ನು, ಅಂದರೆ ಎಸ್‌ ಬಿ ಅಕೌಂಟ್‌ ತೆರೆಯುವುದು ಅಗತ್ಯ. ಕನಿಷ್ಠ 20 ರೂ. ನಗದು ಠೇವಣಿಯೊಂದಿಗೆ ಎಸ್‌ ಬಿ ಖಾತೆಯನ್ನು ತೆರೆಯುವುದಕ್ಕೆ ಅವಕಾಶ ಇರುತ್ತದೆ. ಉಳಿತಾಯ ಖಾತೆಯಲ್ಲಿ ಜಮೆ ಮಾಡುವ ಹಣದ ಮೇಲೆ ವಾರ್ಷಿಕ ಶೇ.4ರ ಬಡ್ಡಿ ಸಿಗುತ್ತದೆ. ಈ ಎಸ್‌ ಬಿ ಖಾತೆಯನ್ನು ಏಕ ವ್ಯಕ್ತಿ ಖಾತೆಯನ್ನಾಗಿ ಇಲ್ಲವೇ ಜಂಟಿ ಖಾತೆಯನ್ನಾಗಿ ತೆರೆಯಲು ಸಾಧ್ಯವಿದೆ. 

ಟಾಪ್ ನ್ಯೂಸ್

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.