ಯಾವ ವಿಶೇಷ ಫಲ ಹೊಂದಬಹುದು ಗೊತ್ತಾ…ಇದು ಶಾಲಗ್ರಾಮದ ಮಹಿಮೆ!


Team Udayavani, Jan 8, 2019, 8:19 AM IST

saligrama-1.jpg

ಸಾಮಾನ್ಯ ದೃಷ್ಟಿಗೆ ಕಪ್ಪು ಶಿಲೆಯಂತೆ ಕಾಣುವ, ನೇಪಾಳದ ಗಂಡಕೀ ನದಿಯಲ್ಲಿ ದೊರಕುವ, ಭಗವಂತನಾದ ನಾರಾಯಣನ ವಿಶೇಷ ಸನ್ನಿಧಾನವಿರುವ ಶಾಲಗ್ರಾಮವು ಬಹಳ ಪೂರ್ವ ಕಾಲದಿಂದಲೂ ಭರತ ದೇಶದಲ್ಲಿ ಭಗವದಾರಾಧನೆಯ ಒಂದು ಪ್ರತೀಕವಾಗಿದೆ.

           ಈ ಶಾಲಗ್ರಾಮದಲ್ಲಿ ಲಕ್ಷ್ಮೀನಾರಾಯಣ, ವಾಸುದೇವ, ನರಸಿಂಹ, ವಾಮನ, ಗೋಪಾಲಕೃಷ್ಣ, ರತ್ನಗರ್ಭ ಮುಂತಾದ ಹಲವಾರು ಪ್ರಬೇಧಗಳಿವೆ. ಇವೆಲ್ಲವುಗಳನ್ನು ಆಯಾ ಶಾಲಗ್ರಾಮ ಶಿಲೆಯು ಹೊಂದಿರುವ ಪ್ರತ್ಯೇಕ ಲಕ್ಷಣದಿಂದ ಗುರುತಿಸಬಹುದಾಗಿದೆ. ಲಕ್ಷ್ಮೀನಾರಾಯಣಾದಿ ಶಾಲಗ್ರಾಮಗಳನ್ನು ಪೂಜಿಸುವುದರಿಂದ ಆಯಾ ಶಾಲಗ್ರಾಮಕ್ಕೆ ಸಂಬಂಧ ಪಟ್ಟಂತಹ ವಿಶೇಷ ಫಲಗಳನ್ನು ಹೊಂದಲು ಅವಕಾಶಗಳಿರುತ್ತವೆ. ಸಾಮಾನ್ಯವಾಗಿ ಶಾಲಗ್ರಾಮ ಶಿಲೆಗಳು ಕೃಷ್ಣವರ್ಣದ್ದಾಗಿದ್ದು ಅದಕ್ಕೆ ಆಸನ, ವದನ, ಚಕ್ರ ಮುಂತಾದ ಹಲವಾರು ಕುರುಹುಗಳಿಂದ ಕೂಡಿರುತ್ತದೆ ಹಾಗೂ ಸ್ಪರ್ಶಿಸಲು ತಂಪಾದ ಅನುಭವವನ್ನೂ ಉಂಟುಮಾಡುತ್ತದೆ.

               ನಮ್ಮನ್ನು ಸೃಷ್ಟಿಮಾಡಿ ಎಲ್ಲಾ ವಿಧದಿಂದಲೂ ಸಲಹಿ ರಕ್ಷಿಸುತ್ತಿರುವ ಜಗನ್ನಿಯಾಮಕನಾದ ಭಗವಂತನನ್ನು ಪ್ರತಿದಿನವೂ ಆರಾಧಿಸಿ ಅವನ ಅನುಗ್ರಹವನ್ನು ಪಡೆಯುವುದು ಮನುಷ್ಯಜನ್ಮದ ಮುಖ್ಯ ಕರ್ತವ್ಯ. ಆದರೆ ಭಗವಂತನು ಅಪ್ರಬುದ್ಧರ ಸಾಮಾನ್ಯ ದೃಷ್ಟಿಗೆ ಅಗೋಚರನಾಗಿರುವುದರಿಂದ , ಋಷಿ-ಮುನಿಗಳು, ಪೃಥಿವೀ, ಆಪಃ (ಜಲ), ತೇಜಸ್ಸು (ಅಗ್ನಿ), ವಾಯು ,ಆಕಾಶ, ಆದಿತ್ಯ ,ಚಂದ್ರ, ಅಶ್ವತ್ಥಾದಿ ವೃಕ್ಷಗಳು, ಶಿಲಾ ಪ್ರತಿಮೆಗಳು, ಪಂಚಲೋಹದ ಪ್ರತಿಮೆಗಳು , ಸ್ವರ್ಣ-ರಜತಾದಿ ಪ್ರತಿಮೆಗಳು, ಮೃಣ್ಮಯ ಪ್ರತಿಮೆಗಳು, ಶಾಲಗ್ರಾಮ ಶಿಲೆಗಳು, ಹೀಗೆ ಹಲವಾರು ಪ್ರತೀಕಗಳಲ್ಲಿ ಭಗವಂತನನ್ನು ಉಪಾಸನೆ ಮಾಡಿ ಅವನ ಅನುಗ್ರಹವನ್ನು ಸಂಪಾದಿಸುವ ಮಾರ್ಗವನ್ನು ಕಂಡುಕೊಂಡಿದ್ದರು.

           ಪ್ರತಿಮಾದಿ ಪ್ರತೀಕಗಳಲ್ಲಿ ಭಗವಂತನನ್ನು ಉಪಾಸನೆ ಮಾಡಲು ಹಲವಾರು ರೀತಿ-ರಿವಾಜುಗಳಿದ್ದು ದೇವಾಲಯದ ಗರ್ಭಗುಡಿಯಲ್ಲಿ ವಿಗ್ರಹವನ್ನು ಪ್ರತಿಷ್ಠೆಮಾಡುವ ಪೂರ್ವಭಾವಿಯಾಗಿ ಅಧಿವಾಸಾದಿ ಹಲವಾರು ಪ್ರಕ್ರಿಯೆಗಳನ್ನು ಪೂರೈಸಿ ವಿಗ್ರಹದ ಲಕ್ಷಣಕ್ಕೆ ಸರಿಯಾದ, ಧ್ಯಾನ ರೂಪಿಯಾದ ಭಗವಂತನನ್ನು ವಿಗ್ರಹದಲ್ಲಿ ಆವಾಹಿಸಿ, ನಿಗ್ರಹಾನುಗ್ರ ಶಕ್ತಿಯನ್ನು ಕೊಟ್ಟು ವಿಗ್ರಹವನ್ನು ಪ್ರತಿಷ್ಠಾಪಿಸಿ ನಂತರ ಆ ವಿಗ್ರಹದಲ್ಲಿ ದೇವರನ್ನು ಕಂಡು ಪೂಜಿಸುವುದು ಸಂಪ್ರದಾಯ . ಆದರೆ ಶಾಲಗ್ರಾಮ ಶಿಲೆಯಲ್ಲಿ ಪ್ರಾಕೃತಿಕವಾಗಿಯೇ ದೇವರ ಪೂರ್ಣ ಚೈತನ್ಯವಿರುವುದರಿಂದ ಪ್ರತಿಷ್ಠಾದಿ ಯಾವುದೇ ಕರ್ಮಗಳನ್ನು ನೆರವೇರಿಸದೆ ದೇವರನ್ನು ಪೂಜಿಸಬಹುದು.

              ಶಾಲಗ್ರಾಮವನ್ನು ಮನೆಯಲ್ಲಿಟ್ಟು ನಿತ್ಯವೂ ಯಥಾವಿಧಿ ಪೂಜಿಸುವುದರಿಂದ, ಅದಕ್ಕೆ ನಮಸ್ಕರಿಸುವುದರಿಂದ ಪಾಪಗಳೆಲ್ಲವೂ ನಾಶವಾಗಿ ಸರ್ವಾಭೀಷ್ಟವು ಸಿದ್ಧಿಯಾಗುವುದು. ಶಾಲಗ್ರಾಮವನ್ನು ಪೂಜಿಸುವಾಗ ತುಳಸೀ ದಳವನ್ನು ಅಗತ್ಯವಾಗಿ ಉಪಯೋಗಿಸಬೇಕು. ಶಾಲಗ್ರಾಮಕ್ಕೆ ಅಭಿಷೇಕಮಾಡಿದ, ಮಂತ್ರದಿಂದ ಅಭಿಮಂತ್ರಿತವಾದ ತೀರ್ಥವನ್ನು ಪ್ರಾಶನ ಮಾಡುವುದರಿಂದ ದೇಹ ಶುದ್ದಿಯೂ, ಅಂತಃಕರಣ ಶುದ್ಧಿಯೂ ಉಂಟಾಗುವುದು. ಪಂಚಲೋಹಾದಿ ವಿಗ್ರಹಗಳನ್ನು  ಆರಾಧನೆ ಮಾಡುವ ದೇವಸ್ಥಾನಗಳಲ್ಲಿಯೂ ಶಾಲಗ್ರಾಮವನ್ನಿಟ್ಟು ಪೂಜಿಸುತ್ತಾರೆ. ಶ್ರಾದ್ಧ, ಮಹಾಲಯಾದಿ ಪಿತೃ ಕಾರ್ಯವನ್ನು ಮಾಡುವ ಸಮಯದಲ್ಲಿಯೂ ಶಾಲಗ್ರಾಮ ನಿರ್ಮಾಲ್ಯ ಹಾಗೂ ತೀರ್ಥಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.

           ಶಿಲಾದಿ ವಿಗ್ರಹಗಳು ಅಕಸ್ಮಾತಾಗಿ ಭಿನ್ನವಾದರೆ ಅಥವಾ ವಿಗ್ರಹದ ಮರ್ಮಸ್ಥಾನಕ್ಕೆ ಹೊಡೆತಬಿದ್ದು ತುಂಡಾದರೆ, ಆ ವಿಗ್ರಹವು ಆರಾಧನೆಗೆ ಯೋಗ್ಯವಲ್ಲ. ಅಂತಹ ವಿಗ್ರಹದ ಚೈತನ್ಯವನ್ನು ಸಂಕೋಚಮಾಡಿ, ಯೋಗ್ಯವಾದ ನೂತನ ವಿಗ್ರಹಕ್ಕೆ ಆ ಚೈತನ್ಯವನ್ನು ಕೊಟ್ಟು ಭಿನ್ನವಾದ ವಿಗ್ರಹವನ್ನು ಯಥಾವಿಧಿ ವಿಸರ್ಜಿಸಬೇಕು. ಆದರೆ ಶಾಲಗ್ರಾಮ ಶಿಲೆಯು ಬಿರುಕುಬಿಟ್ಟರೂ, ಬಿನ್ನವಾದರೂ, ತುಂಡಾದರೂ, ಅದರಲ್ಲಿ ಪೂರ್ಣ ಚೈತನ್ಯವಿರುವುದರಿಂದ ಅದನ್ನು ಯಥಾಪ್ರಕಾರ ಪೂಜಿಸಿಕೊಂಡು ಬರಬೇಕು. ಶಾಲಗ್ರಾಮವು ಭಿನ್ನವಾಗಿ ಎರಡು ಭಾಗವಾದರೆ ಆ ಎರಡೂ ತುಂಡುಗಳನ್ನು ಸುದರ್ಶನ ಶಾಲಗ್ರಾಮವೆಂದು ಪೂಜಿಸುತ್ತಾರೆ.

             ಇಂತಹ ವಿಶಿಷ್ಟ ಶಕ್ತಿಯುಳ್ಳ, ಪ್ರಾಕೃತಿಕವಾಗಿಯೇ ನಾರಾಯಣನ ಪೂರ್ಣ ಚೈತನ್ಯವಿರುವ ಶಾಲಗ್ರಾಮದಲ್ಲಿ ಭಗವಂತನ ಯಾವುದೇ ರೂಪವನ್ನು ಉಪಾಸನೆ ಮಾಡಿದರೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ, ಇಹ-ಪರ ಸುಖಗಳೂ ಸಿದ್ಧಿಸುವುದು.

ಪಲ್ಲವಿ

ಟಾಪ್ ನ್ಯೂಸ್

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Virat Kohli Birthday: Kohli blossomed in sand sculpture

Virat Kohli Birthday: ಮರಳುಶಿಲ್ಪದಲ್ಲಿ ಅರಳಿದ ಕೊಹ್ಲಿ

Court-1

Puttur: ರಸ್ತೆ ಅಪಘಾತದಲ್ಲಿ ಸಾವು; ಆರೋಪಿ ಚಾಲಕ ಖುಲಾಸೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.